ನ್ಯೂಜಿಲೆಂಡ್​ಗೆ ಮೊಟ್ಟಮೊದಲ ಟೆಸ್ಟ್ ಗೆದ್ದುಕೊಟ್ಟ ಜಾನ್ ರೀಡ್ ಇನ್ನಿಲ್ಲ

|

Updated on: Oct 14, 2020 | 10:33 PM

1956ರಲ್ಲಿ ನ್ಯೂಜಿಲೆಂಡ್​ಗೆ ಪ್ರಪ್ರಥಮ ಟೆಸ್ಟ್ ಗೆಲುವು ದೊರಕಿಸಿಕೊಟ್ಟ ಮತ್ತು ಆ ದೇಶದ ಶ್ರೇಷ್ಠ ಕ್ರಿಕೆಟರ್​ಗಳಲ್ಲಿ ಒಬ್ಬರೆನಿಸಿಕೊಂಡಿದ್ದ ಜಾನ್ ರೀಡ್ ತಮ್ಮ 92ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಸುದೀರ್ಘ ಅವಧಿಯಿಂದ ಅವರು ದೊಡ್ಡ  ಕರುಳಿನ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ತಾವಾಡಿದ 58 ಟೆಸ್ಟ್ ಪಂದ್ಯಗಳ ಪೈಕಿ 34 ರಲ್ಲಿ ನಾಯಕತ್ವ ವಹಿಸಿದ್ದ ರೀಡ್ 1959ರಲ್ಲಿ ವಿಸ್ಡನ್ ಕ್ರಿಕೆಟರ್ ಆಫ್ ದಿ ಈಯರ್ ಗೌರವಕ್ಕೆ ಪಾತ್ರರಾಗಿದ್ದರು. ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ 26 ವರ್ಷಗಳ ನಂತರ ತನ್ನ ಮೊದಲ ಟೆಸ್ಟ್ […]

ನ್ಯೂಜಿಲೆಂಡ್​ಗೆ ಮೊಟ್ಟಮೊದಲ ಟೆಸ್ಟ್ ಗೆದ್ದುಕೊಟ್ಟ ಜಾನ್ ರೀಡ್ ಇನ್ನಿಲ್ಲ
Follow us on

1956ರಲ್ಲಿ ನ್ಯೂಜಿಲೆಂಡ್​ಗೆ ಪ್ರಪ್ರಥಮ ಟೆಸ್ಟ್ ಗೆಲುವು ದೊರಕಿಸಿಕೊಟ್ಟ ಮತ್ತು ಆ ದೇಶದ ಶ್ರೇಷ್ಠ ಕ್ರಿಕೆಟರ್​ಗಳಲ್ಲಿ ಒಬ್ಬರೆನಿಸಿಕೊಂಡಿದ್ದ ಜಾನ್ ರೀಡ್ ತಮ್ಮ 92ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಸುದೀರ್ಘ ಅವಧಿಯಿಂದ ಅವರು ದೊಡ್ಡ  ಕರುಳಿನ ಕ್ಯಾನ್ಸರ್​ನಿಂದ ಬಳಲುತ್ತಿದ್ದರು.

ತಾವಾಡಿದ 58 ಟೆಸ್ಟ್ ಪಂದ್ಯಗಳ ಪೈಕಿ 34 ರಲ್ಲಿ ನಾಯಕತ್ವ ವಹಿಸಿದ್ದ ರೀಡ್ 1959ರಲ್ಲಿ ವಿಸ್ಡನ್ ಕ್ರಿಕೆಟರ್ ಆಫ್ ದಿ ಈಯರ್ ಗೌರವಕ್ಕೆ ಪಾತ್ರರಾಗಿದ್ದರು. ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ 26 ವರ್ಷಗಳ ನಂತರ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ರೀಡ್ ನಾಯಕತ್ವದಲ್ಲಿ ಗೆದ್ದಿತ್ತು.

ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಹೊಡೆತಗಳ ಆಟಗಾರನಾಗಿದ್ದ ರೀಡ್ 1959ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. 1965ರವರೆಗೆ ಅವರು ತಮ್ಮ ದೇಶವನ್ನು 58 ಬಾರಿ ಪ್ರತಿನಿಧಿಸಿ, 6 ಶತಕಗಳೊಂದಿಗೆ 33.28 ಸರಾಸರಿಯಲ್ಲಿ 3,428 ರನ್ ಗಳಿಸಿದರು. ಮಧ್ಯಮ ವೇಗದ ಬೌಲರ್ ಸಹ ಆಗಿದ್ದ ಅವರು 85 ವಿಕೆಟ್​ಗಳನ್ನು ಪಡೆದಿದ್ದರು.

ರೀಡ್ ನಾಯಕತ್ವ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ 1965 ರಲ್ಲಿ ಅವರನ್ನು ಇಂಗ್ಲೆಂಡ್ ವಿರುದ್ಧ ಎರಡು ಪಂದ್ಯಗಳನ್ನಾಡಿದ ಇತರ ವಿಶ್ವ ತಂಡಕ್ಕೆ ನಾಯಕನನ್ನಾಗಿ ಮಾಡಲಾಗಿತ್ತು. ನ್ಯೂಜಿಲೆಂಡ್ ಕ್ರಿಕೆಟ್ ಸಂಸ್ಥೆ ಅವರ ಸ್ಮರಣಾರ್ಥ ಪಂದ್ಯವೊಂದನ್ನು ಆಯೋಜಿಸಲು ನಿಶ್ಚಯಿಸಿದೆ.