AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಪ್ ಆರ್ಡರ್ ಕ್ಲಿಕ್ಕಾದರೆ ಮಾತ್ರ ರಾಯಲ್ಸ್​ಗೆ ಇಂದು ಗೆಲ್ಲುವುದು ಸಾಧ್ಯ

ಇಂಡಿಯನ್ ಪ್ರಿಮೀಯರ್ ಎರಡನೇ ಸುತ್ತಿನ ಪಂದ್ಯಗಳು ಸಹ ರೋಚಕ ಅಂತ್ಯ ಕಾಣುತ್ತಿವೆ. ಮೊದಲ ಸುತ್ತಿನಲ್ಲಿ ಹೆಚ್ಚು ಗೇಮ್​ಗಳನ್ನು ಸೋತು ಕಂಗೆಟ್ಟಿದ್ದ ಟೀಮುಗಳು ಎರಡನೆ ಸುತ್ತಿನಲ್ಲಿ ಹಳೆಯ ತಪ್ಪುಗಳನ್ನು ತಿದ್ದಿಕೊಂಡು ಸುಧಾರಿತ ಪ್ರದರ್ಶನಗಳ ಮೂಲಕ ಗೆಲುವು ಸಾಧಿಸಿ ಪ್ಲೇ ಆಫ್ ಹಂತ ತಲುಪುವ ಪ್ರಯತ್ನಗಳನ್ನು ಮಾಡುತ್ತಿವೆ. 13ನೇ ಆವೃತಿಯ 30 ನೇ ಪಂದ್ಯ ಇವತ್ತು ರಾಜಸ್ತಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ದುಬೈ ಇಂಟರ್​ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. [yop_poll id=”12″] ಆಡಿರುವ 7 ಪಂದ್ಯಗಳಲ್ಲಿ 5 ರಲ್ಲಿ […]

ಟಾಪ್ ಆರ್ಡರ್ ಕ್ಲಿಕ್ಕಾದರೆ ಮಾತ್ರ ರಾಯಲ್ಸ್​ಗೆ ಇಂದು ಗೆಲ್ಲುವುದು ಸಾಧ್ಯ
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on:Oct 14, 2020 | 5:03 PM

Share

ಇಂಡಿಯನ್ ಪ್ರಿಮೀಯರ್ ಎರಡನೇ ಸುತ್ತಿನ ಪಂದ್ಯಗಳು ಸಹ ರೋಚಕ ಅಂತ್ಯ ಕಾಣುತ್ತಿವೆ. ಮೊದಲ ಸುತ್ತಿನಲ್ಲಿ ಹೆಚ್ಚು ಗೇಮ್​ಗಳನ್ನು ಸೋತು ಕಂಗೆಟ್ಟಿದ್ದ ಟೀಮುಗಳು ಎರಡನೆ ಸುತ್ತಿನಲ್ಲಿ ಹಳೆಯ ತಪ್ಪುಗಳನ್ನು ತಿದ್ದಿಕೊಂಡು ಸುಧಾರಿತ ಪ್ರದರ್ಶನಗಳ ಮೂಲಕ ಗೆಲುವು ಸಾಧಿಸಿ ಪ್ಲೇ ಆಫ್ ಹಂತ ತಲುಪುವ ಪ್ರಯತ್ನಗಳನ್ನು ಮಾಡುತ್ತಿವೆ. 13ನೇ ಆವೃತಿಯ 30 ನೇ ಪಂದ್ಯ ಇವತ್ತು ರಾಜಸ್ತಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ದುಬೈ ಇಂಟರ್​ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. [yop_poll id=”12″]

ಆಡಿರುವ 7 ಪಂದ್ಯಗಳಲ್ಲಿ 5 ರಲ್ಲಿ ಜಯ ಸಾಧಿಸಿ 2 ಸೋತಿರುವ ಶ್ರೇಯಸ್ ಅಯ್ಯರ್ ಅವರ ಡೆಲ್ಲಿ ಟೀಮು 10 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ ಎರಡನೆ ಸ್ಥಾನದಲ್ಲಿದೆ. ಇದಕ್ಕೆ ತದ್ವಿರುದ್ಧವಾಗಿ, ಆಡಿರುವ 7 ಪಂದ್ಯಗಳಲ್ಲಿ 5 ಸೋತು ಕೇವಲ 2ರಲ್ಲಿ ಗೆದ್ದಿರುವ ಸ್ಟಿವೆನ್ ಸ್ಮಿತ್ ಅವರ ರಾಯಲ್ಸ್ 7ನೇ ಸ್ಥಾನದಲ್ಲಿದೆ.

ಗಮನಿಸಬೇಕಾದ ಅಂಶವೆಂದರೆ, ಡೆಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ಗೆ ಸೋತಿತ್ತು. ಆದರೆ, ಸತತ ನಾಲ್ಕು ಸೋಲುಗಳ ನಂತರ ರಾಯಲ್ಸ್ 7ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ 5 ವಿಕೆಟ್​ಗಳ ಜಯ ಸಾಧಿಸಿದ್ದು ಸಹಜವಾಗಿಯೇ ರಾಯಲ್ಸ್ ತಂಡದ ಆತ್ಮವಿಶ್ವಾಸವನ್ನು ವೃದ್ಧಿಸಿದೆ. ಆದರೆ ರಾಯಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಡೆಲ್ಲಿಗೆ 46 ರನ್​ಗಳಿಂದ ಸುಲಭವಾಗಿ ಶರಣಾಗಿತ್ತು.

ಟೀಮಿನ ಕೆಲ ಪ್ರಮುಖ ಆಟಗಾರರು ಗಾಯಗೊಂಡಿರುವುದು, ಡೆಲ್ಲಿಯ ಚಿಂತೆಯನ್ನು ಹೆಚ್ಚಿಸಿದೆ. ರಿಷಭ್ ಪಂತ್, ತೊಡೆಸಂದಿ ನೋವಿಗೆ ಗುರಿಯಾಗಿದ್ದು ಒಂದು ವಾರದ ಮಟ್ಟಿಗೆ ಅವರು ಲಭ್ಯರಿಲ್ಲ. ರಿಟರ್ನ್ ಕ್ಯಾಚ್ ಹಿಡಿಯುವ ಭರದಲ್ಲಿ ಬಲಗೈ ಉಂಗುರದ ಬೇರಳಿಗೆ ಗಾಯ ಮಾಡಿಕೊಂಡ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಈಗಾಗಲೇ ಈ ಸೀಸನ್​ನಿಂದ ಹೊರಬಿದ್ದಿದ್ದಾರೆ. ಹಾಗೆಯೇ, ಸದರಿ ಸೀಸನ್​ನಲ್ಲಿ ಕೇವಲ ಒಂದು ಗೇಮ್ ಮಾತ್ರ ಆಡಿದ್ದ ಇಶಾಂತ್ ಶರ್ಮ ಸಹ ಪಕ್ಕೆಲುಬಿನ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಪಂತ್ ಜಾಗದಲ್ಲಿ ಅಲೆಕ್ಸ್ ಕೇರಿ ಆಡುತ್ತಿದ್ದಾರೆ ಮತ್ತು ಅಜಿಂಕ್ಯಾ ರಹಾನೆಯನ್ನು ಆಡುವ ಇಲೆವೆನ್​ನಲ್ಲಿ ತರುವ ಮೂಲಕ ಡೆಲ್ಲಿ ಬ್ಯಾಟಿಂಗನ್ನು ಸುಭದ್ರಗೊಳಿಸಿಕೊಂಡಿದೆ. ಟೀಮಿನ ಟಾಪ್ ಆರ್ಡರ್ ರನ್ ಗಳಿಸುತ್ತಿರುವುದರಿಂದ ಬ್ಯಾಟಿಂಗ್​ನಲ್ಲಿ ಅಂಥ ಆತಂಕಗಳಿಲ್ಲ. ಮಾರ್ಕಸ್ ಸ್ಟಾಯ್ನಿಸ್ ಟೀಮಿಗೆ ಅತ್ಯುತ್ತಮವಾದ ಬ್ಯಾಲೆನ್ಸ್ ಒದಗಿಸುತ್ತಿದ್ದಾರೆ. ಮಿಶ್ರಾ ಮತ್ತು ಇಶಾಂತ್ ಅವರ ಅನುಪಸ್ಥಿತಿ ಹೊರತಾಗಿಯೂ ಡೆಲ್ಲಿಯ ಬೌಲಿಂಗ್ ದಾಳಿ ಸಶಕ್ತ ಮತ್ತು ಪರಿಣಾಮಕಾರಿಯಾಗಿದೆ.

17 ವಿಕೆಟ್ ಪಡೆದು ನೇರಳೆ ಬಣ್ಣದ ಕ್ಯಾಪನ್ನು ತಲೆಗೇರಿಸಿಕೊಂಡಿರುವ ಕಗಿಸೊ ರಬಾಡಾ ಎದುರಾಳಿ ಬ್ಯಾಟ್ಸ್​ಮನ್​ಗಳಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ. ತಮ್ಮ ದೇಶದವರೇ ಆದ ಌನ್ರಿಕ್ ನೊರೆಯಿಂದ ರಬಾಡಾಗೆ ಉತ್ತಮ ಬೆಂಬಲ ದೊರೆಯುತ್ತಿದೆ. ರವಿಚಂದ್ರನ್ ಅಶ್ವಿನ್ ಮತ್ತು ಅಕ್ಸರ್ ಪಟೇಲ್ ಹೆಚ್ಚು ರನ್ ಸೋರಿಸದೆ ವಿಕೆಟ್​ಗಳನ್ನು ಸಹ ಪಡೆಯುತ್ತಿದ್ದಾರೆ.

ರವಿವಾರದಂದು ಹೈದರಾಬಾದ್ ಟೀಮನ್ನು 5 ವಿಕೆಟ್ಗಳಿಂದ ಸೋಲಿಸಿದ ರಾಯಲ್ಸ್​ಗೆ ಸ್ಟಾರ್ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಅವರ ಸೇವೆ ಲಭ್ಯವಾಗಿರುವುದರಿಂದ ಖಂಡಿತವಾಗಿಯೂ ಬಲ ವೃಧ್ಧಿಸಿದೆ. ತಾನಾಡಿದ ಮೊದಲ ಪಂದ್ಯದಲ್ಲಿ ಅವರಿಂದ ತಂಡಕ್ಕೆ ಯಾವುದೆ ಕೊಡುಗೆ ಸಿಗಲಿಲ್ಲವಾದರೂ, ಟೀಮಿನಲ್ಲಿ ಅವರ ಉಪಸ್ಥಿತಿಯೇ ಎದುರಾಳಿಗಳ ಮನೋಬಲವನ್ನು ಕುಗ್ಗಿಸಬಲ್ಲದು.

ಟಾಪ್ ಆರ್ಡರ್ ಸತತವಾಗಿ ಫೇಲಾಗುತ್ತಿರುವುದು ರಾಯಲ್ಸ್​ನ ಅತಿದೊಡ್ಡ ಸಮಸ್ಯೆ. ಕೇವಲ ಜೊಸ್ ಬಟ್ಲರ್ ಮಾತ್ರ ರನ್ ಗಳಿಸುತ್ತಿದ್ದಾರೆ. ಮೊದಲಿನೆರಡು ಪಂದ್ಯಗಳಲ್ಲಿ ಅಬ್ಬರಿಸಿದ ಸಂಜು ಸ್ಯಾಮ್ಸನ್ ನಂತರ ಆಡಿರುವ ಎಲ್ಲ 5 ಪಂದ್ಯಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ಇದೇ ಮಾತು ನಾಯಕ್ ಸ್ಮಿತ್​ಗೂ ಅನ್ವಯಿಸುತ್ತದೆ. ರಾಬಿನ್ ಉತ್ತಪ್ಪಗೆ ಅವಕಾಶಗಳು ಹೇರಳವಾಗಿ ಸಿಗುತ್ತಿವೆ ಆದರೆ ಕನ್ನಡಿಗ ಅವುಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿಲ್ಲ. ವೈಫಲ್ಯಗಳ ಹೊರತಾಗಿಯೂ ಅವರನ್ನು ಆಡಿಸುತ್ತಿರುವುದು ಆಶ್ಚರ್ಯ ಹುಟಿಸುತ್ತಿದೆ.

ರಾಯಲ್ಸ್​ಗೆ ಜೊಫ್ರಾ ಆರ್ಚರ್, ಜಯದೇವ್ ಉನಾಡ್ಕಟ್, ಕಾರ್ತಿಕ್ ತ್ಯಾಗಿ ಮತ್ತು ಸ್ಟೋಕ್ಸ್ ವೇಗದ ದಾಳಿಯನ್ನು ನಿಭಾಯಿಸಿದರೆ, ತೆವಾಟಿಯಾ, ಗೋಪಾಲ್ ಮತ್ತು ಪರಾಗ್ ಸ್ಪಿನ್ ವಿಭಾಗವನ್ನು ನೋಡಿಕೊಳ್ಳುತ್ತಾರೆ.

Published On - 4:45 pm, Wed, 14 October 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ