ಕ್ರಿಕೆಟ್ ವಿಶೇಷ: ಹೊಟ್ಟೆ ನೋವು, ನೋ ಬಾಲ್.. ಒಂದೇ ಓವರ್​ನಲ್ಲಿ 3 ಬೌಲರ್​ಗಳನ್ನು ಬದಲಿಸಿದ್ದ ಘಟನೆ ಬಗ್ಗೆ ನಿಮಗೆಷ್ಟು ಗೊತ್ತು?

ಕ್ರಿಕೆಟ್ ವಿಶೇಷ: ಹೊಟ್ಟೆ ನೋವು, ನೋ ಬಾಲ್.. ಒಂದೇ ಓವರ್​ನಲ್ಲಿ 3 ಬೌಲರ್​ಗಳನ್ನು ಬದಲಿಸಿದ್ದ ಘಟನೆ ಬಗ್ಗೆ ನಿಮಗೆಷ್ಟು ಗೊತ್ತು?
ಮರ್ವಿನ್ ಡಿಲ್ಲನ್‌

ಓವರ್ ಪೂರ್ಣಗೊಳಿಸಲು ಒಬ್ಬರು, ಇಬ್ಬರು ಅಲ್ಲ, ಮೂರು ಬೌಲರ್‌ಗಳು ಬೇಕಾದ ಸಂಗತಿಯ ಬಗ್ಗೆ ನಿಮಗೆ ಗೊತ್ತಾ? ಈ ಓವರ್ ಎಸೆದ ಬೌಲರ್‌ಗಳಲ್ಲಿ ಒಬ್ಬರಾದ ಮರ್ವಿನ್ ಡಿಲ್ಲನ್‌ರ ಜನ್ಮದಿನ ಇಂದು.

pruthvi Shankar

|

Jun 05, 2021 | 6:54 PM

ಕ್ರಿಕೆಟ್ ಎನ್ನುವುದು ನೂರಾರು ವರ್ಷಗಳಷ್ಟು ಹಳೆಯದಾದ ಆಟವಾಗಿದೆ. ಆರಂಭದಲ್ಲಿ, ಕ್ರಿಕೆಟ್‌ನಲ್ಲಿ ಓವರ್‌ನಲ್ಲಿ 6 ಎಸೆತಗಳಲ್ಲ, ಬದಲಿಗೆ 8 ಎಸೆತಗಳಿದ್ದವು. ಆದರೆ, ನಾವು ಈಗ ಆ ವಿಚಾರದ ಬಗ್ಗೆ ಚರ್ಚಿಸುವುದಿಲ್ಲ. ಇಂದು ನಾವು ನಿಮಗೆ ವಿಚಿತ್ರವಾದ ಘಟನೆಯ ಬಗ್ಗೆ ಹೇಳುತ್ತಿದ್ದೇವೆ. ಓವರ್ ಪೂರ್ಣಗೊಳಿಸಲು ಒಬ್ಬರು, ಇಬ್ಬರು ಅಲ್ಲ, ಮೂರು ಬೌಲರ್‌ಗಳು ಬೇಕಾದ ಸಂಗತಿಯ ಬಗ್ಗೆ ನಿಮಗೆ ಗೊತ್ತಾ? ಈ ಓವರ್ ಎಸೆದ ಬೌಲರ್‌ಗಳಲ್ಲಿ ಒಬ್ಬರಾದ ಮರ್ವಿನ್ ಡಿಲ್ಲನ್‌ರ ಜನ್ಮದಿನ ಇಂದು. ಅವರ ಜನ್ಮ ದಿನದ ಅಂಗವಾಗಿ ಈ ಅಪರೂಪದ ಘಟನೆಯನ್ನು ವಿವರಿಸುತ್ತಿದ್ದೇವೆ.

ಡಿಲ್ಲನ್‌, ಕೋಲಿನ್, ಕ್ರಿಸ್ ಗೇಲ್ ಇದು ನವೆಂಬರ್ 21, 2001 ರಂದು ನಡೆದ ಘಟನೆಯಾಗಿದೆ. ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಈ ಘಟನೆ ಜರುಗಿತ್ತು. ವೆಸ್ಟ್ ಇಂಡೀಸ್ ಬೌಲರ್ ಮಾರ್ವಾನ್ ಡಿಲ್ಲನ್ ಬೌಲಿಂಗ್ ಮಾಡಲು ಆರಂಭಿಸಿದರು. ಆದರೆ ಇದ್ದಕ್ಕಿದ್ದಂತೆ ಅವರಿಗೆ ಹೊಟ್ಟೆ ನೋವು ಶುರುವಾಯಿತು. ಎರಡು ಎಸೆತಗಳನ್ನು ಎಸೆದ ನಂತರ, ಅವರಿಗೆ ಹೊಟ್ಟೆ ನೋವು ಹೆಚ್ಚಾಯಿತು. ಹೀಗಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪೆವಿಲಿಯನ್‌ಗೆ ಕಳುಹಿಸಲಾಯಿತು. ಆದ್ದರಿಂದ ಅವರ ಉಳಿದ ಓವರ್ ಅನ್ನು ಕಾಲಿನ್ ಸ್ಟುವರ್ಟ್‌ಗೆ ಮಾಡಲು ಹೇಳಲಾಯಿತು.

ಕೋಲಿನ್ ಮೂರನೇ ಎಸೆತವನ್ನು ಎಸೆದರು. ಆದರೆ ನಂತರ ಅವರು ಎರಡು ಪೂರ್ಣ ಟಾಸ್ ಎಸೆತಗಳನ್ನು ಎಸೆದರು. ಹೀಗಾಗಿ ಎರಡು ಸತತ ಎರಡು ನೋ ಬಾಲ್ ಎಸೆದುದರಿಂದ ಅವರು ಬೌಲಿಂಗ್ ಮಾಡುವುದನ್ನು ತಡೆಹಿಡಿಯಲಾಯಿತು. ಆದ್ದರಿಂದ ಉಳಿದ ಓವರ್ ಅನ್ನು ಕ್ರಿಸ್ ಗೇಲ್ ಅವರಿಗೆ ನೀಡಲಾಯಿತು. 3ನೇ ಬೌಲರ್​ ಆಗಿ ಬಂದ ಗೇಲ್ ಓವರ್ ಪೂರ್ಣಗೊಳಿಸಿದರು. ಹೀಗಾಗಿ, ಒಂದು ಓವರ್ ಬೌಲಿಂಗ್ ಮಾಡಲು ಮೂರು ಬೌಲರ್‌ಗಳು ಬೇಕಾಯಿತು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದು ಏಕೈಕ ಓವರ್ ಆಗಿದೆ.

ಮಾರ್ವಿನ್ ಡಿಲ್ಲನ್ ಅವರ ವೃತ್ತಿಜೀವನ ಡಿಲ್ಲನ್ ಜೂನ್ 5, 1974 ರಂದು ಟ್ರಿನಿಡಾಡ್ನಲ್ಲಿ ಜನಿಸಿದರು. ವೆಸ್ಟ್ ಇಂಡೀಸ್‌ನ ಪ್ರಮುಖ ಬೌಲರ್ ಡಿಲ್ಲನ್ 131 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರ ಅತ್ಯುತ್ತಮ ದಾಖಲೆ ಇನಿಂಗ್ಸ್‌ನಲ್ಲಿ 71 ರನ್‌ಗಳಿಗೆ ಐದು ವಿಕೆಟ್ ಪಡೆದಿರುವುದಾಗಿದೆ. ಅವರ ಅತ್ಯುತ್ತಮ ದಾಖಲೆಯು ಇಡೀ ಪಂದ್ಯದಲ್ಲಿ 123 ರನ್ ನೀಡಿ 8 ವಿಕೆಟ್ ಪಡೆದಿರುವುದಾಗಿದೆ. ಅವರು 108 ಏಕದಿನ ಪಂದ್ಯಗಳಲ್ಲಿ 130 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ 29 ರನ್‌ಗಳಿಗೆ ಐದು ವಿಕೆಟ್‌ಗಳು ಪಡೆದಿರುವುದು ಅವರ ಅತ್ಯುತ್ತಮ ದಾಖಲೆಯಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada