All England Championships: ಲಕ್ಷ್ಯ ಸೇನ್‍ಗೆ ಅಚ್ಚರಿಯ ಜಯ: ಟೂರ್ನಿಯಿಂದ ಹೊರಬಿದ್ದ ಸೈನಾ, ಸಿಂಧು

ಮಹಿಳಾ ಸಿಂಗಲ್ಸ್ ನಲ್ಲಿ ‌ಭಾರತದ ಪಿ.ವಿ.ಸಿಂಧು, ಜಪಾನ್‍ನ ತಕಹಶಿ ವಿರುದ್ಧ ಎರಡನೇ ಸುತ್ತಿನ ಪಂದ್ಯದಲ್ಲಿ 19-21, 21-16, 17-21ರಿಂದ ಸೋತು ಟೂರ್ನಿಯಿಂದ ನಿರ್ಗಮಿಸಿದರು.

All England Championships: ಲಕ್ಷ್ಯ ಸೇನ್‍ಗೆ ಅಚ್ಚರಿಯ ಜಯ: ಟೂರ್ನಿಯಿಂದ ಹೊರಬಿದ್ದ ಸೈನಾ, ಸಿಂಧು
Lakshya Sen
Follow us
TV9 Web
| Updated By: Vinay Bhat

Updated on: Mar 18, 2022 | 11:01 AM

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ (All England Championships) ಭಾರತದ ಭರವಸೆಯ ಆಟಗಾರ ಲಕ್ಷ್ಯ ಸೇನ್‌ (Lakshya Sen) ದೊಡ್ಡ ಬೇಟೆಯೊಂದನ್ನಾಡಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಟೂರ್ನಿಯ ಎರಡನೇ ಸುತ್ತಿನಲ್ಲಿ ವಿಶ್ವದ ಮೂರನೇ ನಂಬರ್ ಆಟಗಾರ ಆಂಡ್ರಸ್ ಅಂಟೋನ್ಸೆನ್ (Anders Antonsen) ಅವರನ್ನು ಬಗ್ಗುಬಡಿದಿದ್ದಾರೆ. ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆದ ಟೂರ್ನಿಯ ಎರಡನೇ ಸುತ್ತಿನಲ್ಲಿ ಸೇನ್ ಅವರು, 21-16, 21-18 ನೇರ ಗೇಮ್‍ಗಳಿಂದ ಸೋಲಿಸಿ ಎಂಟರ ಘಟ್ಟಕ್ಕೆ ಮುನ್ನಡೆದರು. 2019ರ ಬಾಸೆಲ್ ಹಾಗೂ 2021ರ ಹುಲ್ವಾ ವಿಶ್ವಚಾಂಪಿಯನ್‍ಶಿಪ್‍ನಲ್ಲಿ ಪದಕ ಗಳಿಸಿದ ಆಂಟೋನ್ಸೆನ್, ಲಕ್ಷ್ಮಸೇನ್ ಅವರ ನಿಖರ ಆಟಕ್ಕೆ ಸುಲಭವಾಗಿ ಮಣಿದರು. ಇವರಿಬ್ಬರು ಮುಖಾಮುಖಿ ಆದದ್ದು ಇದೇ ಮೊದಲು. ಸೇನ್‌ ಆವರಿನ್ನು ಚೀನದ ಲು ಗುವಾಂಗ್‌ ಜು ಅವರನ್ನು ಎದುರಿಸಲಿದ್ದಾರೆ.

ಇನ್ನು ಮಹಿಳಾ ಸಿಂಗಲ್ಸ್ ನಲ್ಲಿ ‌ಭಾರತದ ಪಿ.ವಿ.ಸಿಂಧು, ಜಪಾನ್‍ನ ತಕಹಶಿ ವಿರುದ್ಧ ಎರಡನೇ ಸುತ್ತಿನ ಪಂದ್ಯದಲ್ಲಿ 19-21, 21-16, 17-21ರಿಂದ ಸೋತು ಟೂರ್ನಿಯಿಂದ ನಿರ್ಗಮಿಸಿದರು. ಮೊದಲ ಸೆಟ್ ಕಳೆದುಕೊಂಡ ಸಿಂಧು ಬೇಗನೇ ಚೇತರಿಸಿಕೊಂಡು ಎರಡನೇ ಸೆಟ್ ಗೆದ್ದುಕೊಂಡರು. ಆದರೆ ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಸಯಾಕಾ ತಕಹಶಿ ಮೇಲುಗೈ ಸಾಧಿಸಿದರು. ಇದರೊಂದಿಗೆ ಸಿಂಧು ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಸಿಂಧು ಸತತ 2ನೇ ಟೂರ್ನಮೆಂಟ್​ನಲ್ಲಿ 2ನೇ ಸುತ್ತಿನಲ್ಲಿ ನಿರ್ಗಮಿಸಿದಂತಾಗಿದೆ. ಕಳೆದ ವಾರ ಜರ್ಮನ್​ ಓಪನ್​ನಲ್ಲಿ ಚೀನಾದ ಜಾಂಗ್ ಯಿ ಮನ್​ ವಿರುದ್ಧ 14-21, 21-15, 14-21ರಲ್ಲಿ ಸೋಲು ಕಂಡಿದ್ದರು.

ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಹಿರಿಯ ಶಟ್ಲರ್ ಸೈನಾ ನೆಹ್ವಾಲ್ 2ನೇ ಶ್ರೇಯಾಂಕದ ಜಪಾನ್​ನ ಅಕಾನೆ ಯಮಗುಚಿ ವಿರುದ್ಧ 14-21, 21-17,17-21ರಲ್ಲಿ ಸೋಲು ಕಂಡಿದ್ದರು. ಇವರಿಬ್ಬರ ಸೋಲಿನೊಂದಿಗೆ ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ಭಾರತೀಯರ ಸವಾಲು ಅಂತ್ಯವಾಗಿದೆ. ಅಲ್ಲದೆ ಪುರುಷರ ಸಿಂಗಲ್ಸ್‌ನಲ್ಲಿ ಬಿ. ಸಾಯಿ ಪ್ರಣೀತ್‌ ಒಲಿಂಪಿಕ್ಸ್‌ ಚಾಂಪಿಯನ್‌ ವಿಕ್ಟರ್‌ ಅಕ್ಸೆಲ್ಸೆನ್‌ ವಿರುದ್ಧ 20-22, 11-21ರಿಂದ ಪರಾಭವಗೊಂಡರು. ಎಚ್‌.ಎಸ್‌. ಪ್ರಣಯ್‌ ಅವರನ್ನು ಥಾಯ್ಲೆಂಡ್‌ನ‌ ಕುನ್ಲವುತ್‌ ವಿತಿದ್ಸರಣ್‌ 21-15, 24-22ರಿಂದ ಹಿಮ್ಮೆಟ್ಟಿಸಿದರು. ಸಮೀರ್‌ ವರ್ಮ ಕೂಡ ಸೋಲಿನ ಸುಳಿಗೆ ಸಿಲುಕಿದರು. ಅವರನ್ನು ನೆದರ್ಲೆಂಡ್ಸ್‌ನ ಮಾರ್ಕ್‌ ಕಾಲ್ಜೂ 21-18, 21-11ರಿಂದ ಕೆಡವಿದರು.

ಪುರುಷರ ಡಬಲ್ಸ್‌ನಲ್ಲಿ 5ನೇ ಶ್ರೇಯಾಂಕದ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಅವರು ಸ್ಕಾಟ್ಲೆಂಡ್‌ನ‌ ಅಲೆಕ್ಸಾಂಡರ್‌ ಡುನ್‌-ಆಯಡಂ ಹಾಲ್‌ ಕೈಯಲ್ಲಿ 21-17, 21-19 ಅಂತರದ ಸೋಲನುಭವಿಸಿದರು.

IPL 2022: ಸದ್ದಿಲ್ಲದೆ ಐಪಿಎಲ್ 2022ಕ್ಕೆ ಎಂಟ್ರಿ ಕೊಟ್ಟ ಅಪಾಯಕಾರಿ ಆಟಗಾರ: ಯಾರು ಗೊತ್ತೇ?

IPL 2022: ಅಬ್ಬರಿಸಲು ತಯಾರಾಗಿದ್ದಾರೆ ಐಪಿಎಲ್​ನಲ್ಲಿ ನೀವು ನೋಡಿರದ ಈ ಹೊಸ ಮುಖಗಳು

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ