Sandeep Nangal: ಸ್ಟಾರ್ ಕಬಡ್ಡಿ ಪ್ಲೇಯರ್ ಸಂದೀಪ್ ನಂಗಲ್​ಗೆ ಗುಂಡಿಕ್ಕಿ ಬರ್ಬರ ಹತ್ಯೆಗೈದ ದುಷ್ಕರ್ಮಿಗಳು

Sandeep Nangal SHOT DEAD: ಜಲಂಧರ್‌ನ ಮಾಲಿಯನ್ ಗ್ರಾಮದಲ್ಲಿ ಸುಮಾರು ಸಂಜೆ 6 ಗಂಟೆ ಹೊತ್ತಿಗೆ ಕಬಡ್ಡಿ ಕಪ್ ನಡೆಯುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಸಂದೀಪ್ ನಂಗಲ್​ ಅವರನ್ನು ಹತ್ಯೆ ಮಾಡಿದ್ದಾರೆ. ದಾಳಿಯಲ್ಲಿ ಮತ್ತೊಬ್ಬ ಯುವಕನ ಕಾಲಿಗೂ ಗುಂಡು ತಗುಲಿದೆ.

Sandeep Nangal: ಸ್ಟಾರ್ ಕಬಡ್ಡಿ ಪ್ಲೇಯರ್ ಸಂದೀಪ್ ನಂಗಲ್​ಗೆ ಗುಂಡಿಕ್ಕಿ ಬರ್ಬರ ಹತ್ಯೆಗೈದ ದುಷ್ಕರ್ಮಿಗಳು
Sandeep Nangal
Follow us
TV9 Web
| Updated By: Vinay Bhat

Updated on: Mar 15, 2022 | 7:28 AM

ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ನಂಗಲ್ (Sandeep Nangal) ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ಪಂಜಾಬ್‌ನ (Punjab) ಜಲಂಧರ್‌ನ ಮಲಿಯನ್ ಎಂಬ ಹಳ್ಳಿಯಲ್ಲಿ ನಡೆದಿದೆ. ಇವರ ತಲೆ ಮತ್ತು ಎದೆಯ ಮೇಲೆ ಸುಮಾರು 20 ಸುತ್ತು ಗುಂಡು ಹಾರಿಸಲಾಗಿದೆ ಎಂದು ತಿಳಿದು ಬಂದಿದೆ. ಜಲಂಧರ್‌ನ ಮಾಲಿಯನ್ ಗ್ರಾಮದಲ್ಲಿ ಸುಮಾರು ಸಂಜೆ 6 ಗಂಟೆ ಹೊತ್ತಿಗೆ ಕಬಡ್ಡಿ ಕಪ್ ನಡೆಯುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಅವರನ್ನು ಹತ್ಯೆ ಮಾಡಿದ್ದಾರೆ. ದಾಳಿಯಲ್ಲಿ ಮತ್ತೊಬ್ಬ ಯುವಕನ ಕಾಲಿಗೂ ಗುಂಡು ತಗುಲಿದೆ. ದೂರದಿಂದ ಸರಣಿ ಬುಲೆಟ್‌ಗಳನ್ನು ಹಾರುತ್ತಿಸುತ್ತಿರುವ ಭಯಾನಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿದೆ. ಪಂದ್ಯಾವಳಿಯಲ್ಲಿದ್ದ ಪ್ರೇಕ್ಷಕರು ಸ್ಥಳದಿಂದ ಓಡಿಹೋಗುತ್ತಿರುವ ದೃಶ್ಯವನ್ನೂ ವಿಡಿಯೋದಲ್ಲಿ ಕಾಣಬಹುದಾಗಿದೆ.

ಸಂದೀಪ್​​ ವೃತ್ತಿಪರ ಕಬಡ್ಡಿ ಆಟಗಾರರಾಗಿದ್ದು, ಸ್ಟಾಪರ್ ಸ್ಥಾನದಲ್ಲಿ ಆಡಿದ್ದಾರೆ. ಅವರು ರಾಜ್ಯ ಮಟ್ಟದ ಪಂದ್ಯಗಳನ್ನು ಆಡುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅಭಿಮಾನಿಗಳಿಂದ ‘ಗ್ಲಾಡಿಯೇಟರ್’ ಎಂದು ಕರೆಯಲ್ಪಟ್ಟಿದ್ದಾರೆ. ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಕಬಡ್ಡಿ ಜಗತ್ತನ್ನು ಆಳಿದ್ದಾರೆ.

ಮೂಲಗಳ ಪ್ರಕಾರ, ನಾಲ್ಕೈದು ದುಷ್ಕರ್ಮಿಗಳು ಸಂದೀಪ್ ನಂಗಲ್ ಮೇಲೆ ಹೊಂಚು ಹಾಕಿ ಗುಂಡಿನ ದಾಳಿ ನಡೆಸಿದ್ದಾರೆ. ತಲೆ ಮತ್ತು ಎದೆಯ ಮೇಲೆ ಸುಮಾರು 20 ಸುತ್ತು ಗುಂಡು ಹಾರಿಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಘಟನೆಯ ಕುರಿತು ಪೊಲೀಸರು ಹೆಚ್ಚಿನ ವಿವರಗಳನ್ನು ನೀಡದಿದ್ದರೂ, ಸಂದೀಪ್​​ ಪ್ರಮುಖ ಲೀಗ್ ಕಬಡ್ಡಿ ಫೆಡರೇಶನ್ ಅನ್ನು ನೋಡಿಕೊಳ್ಳುತ್ತಿದ್ದರು. ಅವರ ಮತ್ತು ಫೆಡರೇಶನ್ ನಡುವೆ ಅಥವಾ ಬಹುಶಃ ಕ್ಲಬ್‌ಗಳ ನಡುವೆ ಬಿರುಕು ಇರಬಹುದೆಂದು ಅವರ ಬಗ್ಗೆ ಚೆನ್ನಾಗಿ ಗೊತ್ತಿರುವವರು ಶಂಕಿಸುತ್ತಿದ್ದಾರೆ.

ಸಂದೀಪ್ ಒಂದು ದಶಕಕ್ಕೂ ಹೆಚ್ಚು ಕಾಲ ಕಬಡ್ಡಿ ಜಗತ್ತಿನಲ್ಲಿ ಮಿಂಚಿದ್ದರು. ಪಂಜಾಬ್ ಹೊರತುಪಡಿಸಿ ಕೆನಡಾ, ಯುಎಸ್‌ಎ, ಯುಕೆಗಳಲ್ಲಿ ಉತ್ತಮವಾಗಿ ಆಡಿದರು. ಅವರು ಭಾರತೀಯ ಕಬ್ಬಡಿ ಸ್ಪರ್ಧಿಯಾಗಿದ್ದು, ಅವರ ವಿಜಯಗಳ ಖಾತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಖ್ಯಾತಿಯನ್ನು ಗಳಿಸಿದರು. ಮರಗಳು ಮತ್ತು ವಾಹನಗಳ ಎಡೆಯಲ್ಲಿ ನಿಂತ ಹಂತಕರು ಸಂದೀಪ್‌ ಅವರತ್ತ ಗುಂಡಿನ ಮಳೆಗರೆದಿದ್ದಾರೆ. ಅದರ ಪೈಕಿ ಎಂಟು ಗುಂಡುಗಳು ಅವರ ಹಣೆ ಮತ್ತು ತೋಳಿಗೆ ತಾಗಿವೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಲ್ಲಿ ತಲುಪುವಷ್ಟರಲ್ಲಿ ಅವರು ಕೊನೆಯುಸಿರೆಳಿದಿದ್ದಾರೆ. ಹಂತಕರು ನಾಲ್ಕರಿಂದ ಐದು ಮಂದಿ ಇದ್ದರು ಎಂದು ಶಂಕಿಸಲಾಗಿದೆ.

ಕಬಡ್ಡಿ ಮೇಲಿನ ಅತೀವ ಆಸಕ್ತಿಯಿಂದ ಸಂದೀಪ್ ನಂಗಲ್ ಈಗಲೂ ತನ್ನ ಹುಟ್ಟೂರಿನ ಎಲ್ಲಾ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಾರೆ. ಇದೇ ರೀತಿ ಜಲಂಧರ್‌ನಲ್ಲಿ ಆಯೋಜಿಸಿದ ಕಬಡ್ಡಿ ಕಪ್ ಟೂರ್ನಿಗಾಗಿ ವಿಶೇಷ ತಯಾರಿ ಮಾಡಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಆದರೆ ದುಷ್ಕರ್ಮಿಗಳು ನಂಗಲ್ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ. ಸಂದೀಪ್ ನಂಗಲ್ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದರು. ಕಬಡ್ಡಿ ಟೂರ್ನಿಗಾಗಿ ಭಾರತಕ್ಕೆ ಬಂದು ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದರು. ಇದೀಗ ನಂಗಲ್ ಸಾವು ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಆಘಾತ ತಂದಿದೆ.

PAK vs AUS: ಕಾಂಗರೂಗಳ ಬೃಹತ್ ಟಾರ್ಗೆಟ್​ಗೆ ಬೆದರಿದ ಪಾಕಿಸ್ತಾನ 148 ರನ್​ಗಳಿಗೆ ಆಲ್​ಔಟ್! ಆಸೀಸ್​ಗೆ ಭಾರೀ ಮುನ್ನಡೆ

Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು