PAK vs AUS: ಕಾಂಗರೂಗಳ ಬೃಹತ್ ಟಾರ್ಗೆಟ್​ಗೆ ಬೆದರಿದ ಪಾಕಿಸ್ತಾನ 148 ರನ್​ಗಳಿಗೆ ಆಲ್​ಔಟ್! ಆಸೀಸ್​ಗೆ ಭಾರೀ ಮುನ್ನಡೆ

PAK vs AUS: ಕರಾಚಿ ಟೆಸ್ಟ್‌ನ ಮೂರನೇ ದಿನವಾದ ಸೋಮವಾರದಂದು, ಆಸ್ಟ್ರೇಲಿಯಾ 556 ರನ್‌ಗಳ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟ್ ನಷ್ಟಕ್ಕೆ 81 ರನ್ ಗಳಿಸುವ ಮೂಲಕ ದಿನದಾಟವನ್ನು ಕೊನೆಗೊಳಿಸಿತು. ಈ ಮಧ್ಯೆ ಪಾಕಿಸ್ತಾನದ ಮೊದಲ ಇನಿಂಗ್ಸ್ ಕೇವಲ 148 ರನ್‌ಗಳಿಗೆ ಆಲ್​ಔಟ್ ಆಯಿತು.

PAK vs AUS: ಕಾಂಗರೂಗಳ ಬೃಹತ್ ಟಾರ್ಗೆಟ್​ಗೆ ಬೆದರಿದ ಪಾಕಿಸ್ತಾನ 148 ರನ್​ಗಳಿಗೆ ಆಲ್​ಔಟ್! ಆಸೀಸ್​ಗೆ ಭಾರೀ ಮುನ್ನಡೆ
ಪಾಕ್ ಹಾಗೂ ಆಸೀಸ್ ಆಟಗಾರರು
Follow us
TV9 Web
| Updated By: ಪೃಥ್ವಿಶಂಕರ

Updated on: Mar 14, 2022 | 10:07 PM

24 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಆಸ್ಟ್ರೇಲಿಯಾ ಪಾಕಿಸ್ತಾನಕ್ಕೆ ಭೇಟಿ ನೀಡುವುದರೊಂದಿಗೆ ಪಾಕಿಸ್ತಾನಿ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಉತ್ಸಾಹ ಕಂಡುಬಂದಿದೆ. ಈ ಐತಿಹಾಸಿಕ ಸರಣಿಗಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದು, ಎರಡು ಬಲಿಷ್ಠ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್‌ನ ನೀರಸ ಡ್ರಾ ಪಾಕ್ ಕ್ರಿಕೆಟ್ ಮಂಡಳಿಯನ್ನು ತೀವ್ರ ಅಸಮಾಧಾನಗೊಳಿಸಿತು. ಇದಾದ ನಂತರ ಕರಾಚಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಎರಡು ದಿನಗಳಿಗಿಂತ ಹೆಚ್ಚು ಕಾಲ ಬ್ಯಾಟಿಂಗ್ ಮಾಡಿದಾಗಲೂ ಅದೇ ಪರಿಸ್ಥಿತಿ ಕಂಡುಬಂದಿದೆ. ಆದರೆ ಪಾಕ್ ತಂಡದ ಬ್ಯಾಟಿಂಗ್ ಬಂದಾಗ ಈ ಬಾರಿ ಬ್ಯಾಟ್ಸ್​ಮನ್​ಗಳ ಪ್ರದರ್ಶನ ಎಲ್ಲರಲ್ಲೂ ನಿರಾಸೆ ಮೂಡಿಸಿದೆ. ಕರಾಚಿ ಟೆಸ್ಟ್‌ನ ಮೂರನೇ ದಿನದಂದು ಆಸ್ಟ್ರೇಲಿಯದ 556 ರನ್‌ಗಳಿಗೆ ಉತ್ತರವಾಗಿ, ಆತಿಥೇಯ ಪಾಕಿಸ್ತಾನ ಕೇವಲ 53 ಓವರ್‌ಗಳಲ್ಲಿ 148 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಆಸ್ಟ್ರೇಲಿಯಾ 408 ರನ್‌ಗಳ ಮುನ್ನಡೆ ಸಾಧಿಸಿದ್ದು ಎರಡನೇ ಇನ್ನಿಂಗ್ಸ್‌ನಲ್ಲಿ 81 ರನ್ ಗಳಿಸಿದೆ.

ಕರಾಚಿ ಟೆಸ್ಟ್‌ನ ಮೂರನೇ ದಿನವಾದ ಸೋಮವಾರದಂದು, ಆಸ್ಟ್ರೇಲಿಯಾ 556 ರನ್‌ಗಳ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟ್ ನಷ್ಟಕ್ಕೆ 81 ರನ್ ಗಳಿಸುವ ಮೂಲಕ ದಿನದಾಟವನ್ನು ಕೊನೆಗೊಳಿಸಿತು. ಈ ಮಧ್ಯೆ ಪಾಕಿಸ್ತಾನದ ಮೊದಲ ಇನಿಂಗ್ಸ್ ಕೇವಲ 148 ರನ್‌ಗಳಿಗೆ ಆಲ್​ಔಟ್ ಆಯಿತು. ಮೊದಲ ಇನಿಂಗ್ಸ್ ಸ್ಕೋರ್ ಆಧಾರದ ಮೇಲೆ ಆಸ್ಟ್ರೇಲಿಯಾ 408 ರನ್​ಗಳ ಬೃಹತ್ ಮುನ್ನಡೆ ಸಾಧಿಸಿತ್ತು, ಆದರೆ ಫಾಲೋ ಆನ್ ನೀಡುವ ಬದಲು ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಈ ಬಾರಿ ಆಸ್ಟ್ರೇಲಿಯ ಡೇವಿಡ್ ವಾರ್ನರ್ ಅವರ ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತು. ಆದರೆ ಉಸ್ಮಾನ್ ಖವಾಜಾ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿದರು. ಮಾರ್ನಸ್ ಲ್ಯಾಬುಸ್ಚಾಗ್ನೆ ಕೂಡ ಬೇಗನೆ ಪೆವಿಲಿಯನ್ ಸೇರಿದರು. ಇದೀಗ ಆಸ್ಟ್ರೇಲಿಯಾ 489 ರನ್‌ಗಳ ಮುನ್ನಡೆ ಸಾಧಿಸಿದೆ.

ಸ್ಟಾರ್ಕ್ ಸೂಪರ್ ಬೌಲಿಂಗ್ ಮೂರನೇ ದಿನದ ಮೊದಲ ಸೆಷನ್‌ನಲ್ಲಿ ಆಸ್ಟ್ರೇಲಿಯಾ 51 ರನ್ ಸೇರಿಸಿ ಒಂದು ವಿಕೆಟ್ ಕಳೆದುಕೊಂಡಿತು. ಈ ಮೂಲಕ ತಂಡ 9 ವಿಕೆಟ್ ನಷ್ಟಕ್ಕೆ 556 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದಾದ ಬಳಿಕ ಪಾಕಿಸ್ತಾನದ ಮೊದಲ ಇನ್ನಿಂಗ್ಸ್ ಆರಂಭವಾಯಿತು. ಆಸ್ಟ್ರೇಲಿಯದ ಬ್ಯಾಟಿಂಗ್ ನೋಡಿದಾಗ ಪಾಕಿಸ್ತಾನ ಕೂಡ ಸುಲಭವಾಗಿ ರನ್ ಗಳಿಸುತ್ತದೆ ಎಂದು ಅನಿಸಿದರೂ ಆ ನಿರೀಕ್ಷೆಗಿಂತ ಆಸ್ಟ್ರೇಲಿಯದ ಬೌಲರ್‌ಗಳು ಮತ್ತು ಪಾಕಿಸ್ತಾನಿ ಬ್ಯಾಟ್ಸ್‌ಮನ್‌ಗಳ ಉದ್ದೇಶ ಸಂಪೂರ್ಣ ಭಿನ್ನವಾಗಿತ್ತು. ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ (24ಕ್ಕೆ 3) ಅವರ ಮಾರಕ ಬೌಲಿಂಗ್ ಮತ್ತು ಪಾಕಿಸ್ತಾನಿ ಬ್ಯಾಟ್ಸ್‌ಮನ್‌ಗಳ ಕಳಪೆ ಶಾಟ್-ಕಳಪೆ ಓಟದಿಂದಾಗಿ ತಂಡವು ಕೊನೆಯ ಸೆಷನ್​ನಲ್ಲಿ ಆಲೌಟ್ ಆಗಿತ್ತು.

ಮೊದಲ ಸೆಷನ್​ನಲ್ಲೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ಊಟಕ್ಕೂ ಮುನ್ನ ಆಘಾತ ಅನುಭವಿಸಿತು. ಆರಂಭಿಕ ಆಟಗಾರ ಅಬ್ದುಲ್ಲಾ ಶಫೀಕ್ (13 ರನ್) ರನ್ ಔಟ್ ಆದರು. ಇದರಿಂದಾಗಿ ಊಟದ ಹೊತ್ತಿಗೆ ಪಾಕಿಸ್ತಾನದ ಸ್ಕೋರ್ ಒಂದು ವಿಕೆಟ್‌ಗೆ 38 ಆಗಿತ್ತು. ನಂತರ ಎರಡನೇ ಸೆಷನ್​ನಲ್ಲಿ, ಪಾಕಿಸ್ತಾನವು 6 ವಿಕೆಟ್‌ಗಳನ್ನು ಕಳೆದುಕೊಂಡಿತು, ಇದರಿಂದಾಗಿ ತಂಡವು ಕೇವಲ 62 ರನ್‌ಗಳನ್ನು ಸೇರಿಸಲು ಸಾಧ್ಯವಾಯಿತು.

ಭೋಜನದ ನಂತರ ನಾಥನ್ ಲಿಯಾನ್ ಪಾಕ್ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಲು ಪ್ರಾರಂಭಿಸಿದರು. ಅವರು ಇಮಾಮ್-ಉಲ್-ಹಕ್ ಅವರನ್ನು ಬಲಿ ಪಡೆದರು. ಇದಾದ ಬಳಿಕ ಸ್ಟಾರ್ಕ್ ಮಧ್ಯಮ ಕ್ರಮಾಂಕವನ್ನೇ ಗುರಿಯಾಗಿಸಿಕೊಂಡರು. ಸ್ಟಾರ್ಕ್ ಸತತ ಎಸೆತಗಳಲ್ಲಿ ಅಜರ್ ಅಲಿ (14) ಮತ್ತು ಫವಾದ್ ಆಲಂ (0) ಅವರನ್ನು ಔಟ್ ಮಾಡಿದರು. ನಂತರ ಸ್ವಲ್ಪ ಸಮಯದ ನಂತರ ಸಾಜಿದ್ ಖಾನ್ (5) ವಿಕೆಟ್ ಕೂಡ ಪಡೆದರು. ಇದೇ ವೇಳೆ ನಾಯಕ ಪ್ಯಾಟ್ ಕಮಿನ್ಸ್ ಮೊಹಮ್ಮದ್ ರಿಜ್ವಾನ್ (6)ಗೆ ಪೆವಿಲಿಯನ್ ದಾರಿ ತೋರಿಸಿದರೆ, ಕ್ಯಾಮರೂನ್ ಗ್ರೀನ್ ಫಹೀಮ್ ಅಶ್ರಫ್ (5)ಗೆ ಪೆವಿಲಿಯನ್ ದಾರಿ ತೋರಿಸಿದರು.

ಬಾಬರ ಹೋರಾಟವೂ ಫಲಿಸಲಿಲ್ಲ ಪಾಕಿಸ್ತಾನದ ನಾಯಕ ಬಾಬರ್ ಅಜಮ್ (36) ಸುದೀರ್ಘ ಕಾಲ ಏಕಾಂಗಿಯಾಗಿ ಹೋರಾಡಿ ಟಿ-ಬ್ರೇಕ್ ತನಕ ಉಳಿದರು. ಆದರೆ ಮೂರನೇ ಸೆಷನ್‌ನಲ್ಲಿ ಹಸನ್ ಅಲಿ ಕಳಪೆ ರನ್‌ನಿಂದ ರನೌಟ್ ಆದರು. ನಂತರ ಬಾಬರ್ ಕೂಡ ಮಿಚೆಲ್ ಸ್ವೆಪ್ಸನ್‌ಗೆ ತಮ್ಮ ಮೊದಲ ಟೆಸ್ಟ್ ವಿಕೆಟ್ ನೀಡಿದರು. ಅಂತಿಮವಾಗಿ ನೌಮನ್ ಅಲಿ (ಔಟಾಗದೆ 20) ಮತ್ತು ಶಾಹೀನ್ ಅಫ್ರಿದಿ (19) 30 ರನ್ ಕಲೆ ಹಾಕಿದರು. ಸ್ಟಾರ್ಕ್ ಹೊರತಾಗಿ ಸ್ವೆಪ್ಸನ್ 2 ವಿಕೆಟ್ ಪಡೆದರು.

ಇದನ್ನೂ ಓದಿ:PAK vs AUS: 24 ವರ್ಷಗಳ ಬಳಿಕ ಪಾಕ್ ನೆಲಕ್ಕೆ ಕಾಲಿಟ್ಟ ಕಾಂಗರೂಗಳಿಗೆ ಬಾಂಬ್ ದಾಳಿಯ ಸ್ವಾಗತ; ಆಸೀಸ್ ನಿಲುವೇನು?

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ