IND vs SL: ಬೆಂಗಳೂರಿನಲ್ಲಿ ಲಂಕಾ ದಹನ; ಟೆಸ್ಟ್ ಸರಣಿ ಕ್ಲೀನ್ ​ಸ್ವೀಪ್​ ಮಾಡಿದ ಟೀಂ ಇಂಡಿಯಾ

IND vs SL: ಏಕದಿನ, T20 ನಂತರ ರೋಹಿತ್ ಶರ್ಮಾ ನಾಯಕತ್ವವು ಟೆಸ್ಟ್ ಕ್ರಿಕೆಟ್‌ನಲ್ಲೂ ಅಮೋಘ ಆರಂಭವನ್ನು ಮಾಡಿದೆ. ರೋಹಿತ್ ನಾಯಕತ್ವದಲ್ಲಿ ಭಾರತ ತಂಡವು ಶ್ರೀಲಂಕಾವನ್ನು ಮೊದಲ ಟೆಸ್ಟ್ ಸರಣಿಯಲ್ಲೇ ಕ್ಲೀನ್ ಸ್ವಿಪ್ ಮಾಡಿದೆ.

IND vs SL: ಬೆಂಗಳೂರಿನಲ್ಲಿ ಲಂಕಾ ದಹನ; ಟೆಸ್ಟ್ ಸರಣಿ ಕ್ಲೀನ್ ​ಸ್ವೀಪ್​ ಮಾಡಿದ ಟೀಂ ಇಂಡಿಯಾ
ಟೀಂ ಇಂಡಿಯಾ
Follow us
TV9 Web
| Updated By: ಪೃಥ್ವಿಶಂಕರ

Updated on:Mar 14, 2022 | 7:51 PM

ಏಕದಿನ, T20 ನಂತರ ರೋಹಿತ್ ಶರ್ಮಾ (Rohit Sharma) ನಾಯಕತ್ವವು ಟೆಸ್ಟ್ ಕ್ರಿಕೆಟ್‌ನಲ್ಲೂ ಅಮೋಘ ಆರಂಭವನ್ನು ಮಾಡಿದೆ. ರೋಹಿತ್ ನಾಯಕತ್ವದಲ್ಲಿ ಭಾರತ ತಂಡವು ಶ್ರೀಲಂಕಾವನ್ನು ಮೊದಲ ಟೆಸ್ಟ್ ಸರಣಿಯಲ್ಲೇ ಕ್ಲೀನ್ ಸ್ವಿಪ್ ((India Clean Sweep Sri Lanka)) ಮಾಡಿದೆ. ಬೆಂಗಳೂರು ಟೆಸ್ಟ್‌ನ ಮೂರನೇ ದಿನದಂದು ಟೀಂ ಇಂಡಿಯಾ, ಶ್ರೀಲಂಕಾವನ್ನು ಸೋಲಿಸಿತು. ಇದರೊಂದಿಗೆ ಲಂಕಾ ತಂಡ 238 ರನ್‌ಗಳ ಬೃಹತ್ ಅಂತರದಿಂದ ಸರಣಿಯನ್ನು 2-0 ಅಂತರದಲ್ಲಿ ಕಳೆದುಕೊಂಡಿತು. ಶ್ರೀಲಂಕಾದ ನಾಯಕ ದಿಮುತ್ ಕರುಣಾರತ್ನೆ ಉತ್ತಮ ಶತಕ ಗಳಿಸಿದರು, ಆದರೆ 447 ರನ್‌ಗಳ ಗುರಿಯನ್ನು ಸಾಧಿಸುವುದು ಈ ತಂಡಕ್ಕೆ ಸಾಧ್ಯವಾಗಲಿಲ್ಲ. ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ತಮ್ಮ ಬೌಲಿಂಗ್​ನಿಂದ ಶ್ರೀಲಂಕಾದ ನಾಯಕ ಸೇರಿದಂತೆ ಇಡೀ ತಂಡದ ಹೋರಾಟವನ್ನು ಮುರಿದು ಕೇವಲ 208 ರನ್‌ಗಳಿಗೆ ಆಲ್​ಔಟ್ ಮಾಡಿದರು. ಇದರೊಂದಿಗೆ ಭಾರತ 28 ವರ್ಷಗಳ ನಂತರ ಶ್ರೀಲಂಕಾವನ್ನು ಕ್ಲೀನ್ ಸ್ವೀಪ್ ಮಾಡಿದೆ.

ಪಂದ್ಯದ ಎರಡನೇ ದಿನ ಶ್ರೀಲಂಕಾ ತಂಡವನ್ನು ಭಾರತ ಪಂದ್ಯದಿಂದ ಹೊರದಬ್ಬಿತ್ತು. ಮೊದಲು ಶ್ರೀಲಂಕಾದ ಮೊದಲ ಇನಿಂಗ್ಸ್ ಕೇವಲ 109 ರನ್‌ಗಳಿಗೆ ಆಲೌಟ್ ಮಾಡಿ 144 ರನ್ ಮುನ್ನಡೆ ಸಾಧಿಸಿತು. ನಂತರ ರಿಷಬ್ ಪಂತ್ ದಾಖಲೆಯ ವೇಗದ (ಭಾರತೀಯ) ಅರ್ಧ -ಶತಕ ಮತ್ತು ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅವರ ಎರಡನೇ ಅರ್ಧಶತಕದ ನೆರವಿನಿಂದ ಭಾರತ 303 ರನ್‌ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಶ್ರೀಲಂಕಾಕ್ಕೆ 447 ರನ್‌ಗಳ ದೊಡ್ಡ ಗುರಿಯನ್ನು ನೀಡಿತು. ಇದಕ್ಕೆ ಉತ್ತರವಾಗಿ, ಶ್ರೀಲಂಕಾ ಪ್ರಬಲ ಹೋರಾಟವನ್ನು ತೋರಿಸಿತು, ಆದರೆ ನಾಯಕನ ಹೋರಾಟದ ಹೊರತು ಬೇರೆ ಯಾವ ಆಟಗಾರನಿಂದಲೂ ಬೆಂಬಲ ಸಿಗಲಿಲ್ಲ.

ಸೋಮವಾರ, ಮಾರ್ಚ್ 14, ಪಂದ್ಯದ ಮೂರನೇ ದಿನದಂದು, ಶ್ರೀಲಂಕಾ ಒಂದು ವಿಕೆಟ್‌ಗೆ 28 ​​ರನ್ ಗಳಿಸಿ ತನ್ನ ದಿನದಾಟವನ್ನು ಆರಂಭಿಸಿತು. ಎಲ್ಲರ ನಿರೀಕ್ಷೆಗೆ ವಿರುದ್ಧವಾಗಿ, ಕರುಣಾರತ್ನೆ ಕುಸಾಲ್ ಮೆಂಡಿಸ್‌ನೊಂದಿಗೆ ಉತ್ತಮ ಜೊತೆಯಾಟ ನಡೆಸಿದರು. ಮೊದಲ ಸೆಶನ್‌ನಲ್ಲಿ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಮೊದಲ ಕಾಲು ಗಂಟೆಯ ಕಾಲ ಭಾರತವನ್ನು ಸರಿಯಾಗಿ ದಂಡಿಸಿದರು. ಇದರಲ್ಲಿ ಮೆಂಡಿಸ್ ಕೂಡ ಅರ್ಧಶತಕವನ್ನು ಪೂರೈಸಿದರು. ಮೆಂಡಿಸ್ ಮತ್ತು ಕರುಣಾರತ್ನೆ ನಡುವೆ 97 ರನ್ ಜೊತೆಯಾಟವಿತ್ತು. ನಂತರ ಮೆಂಡಿಸ್ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿ ಅಶ್ವಿನ್ ಎಸೆತದಲ್ಲಿ ಔಟಾದರು. ಶೀಘ್ರದಲ್ಲೇ ಏಂಜೆಲೊ ಮ್ಯಾಥ್ಯೂಸ್ ಮತ್ತು ಧನಂಜಯ ಡಿ ಸಿಲ್ವಾ ಕೂಡ ಪೆವಿಲಿಯನ್‌ಗೆ ಮರಳಿದರು. ರವೀಂದ್ರ ಜಡೇಜಾ ಎಸೆತದಲ್ಲಿ ಮ್ಯಾಥ್ಯೂಸ್ ಬೌಲ್ಡ್ ಆದರು, ಅಶ್ವಿನ್ ಡಿ’ಸಿಲ್ವಾ ಅವರನ್ನು ಬಲಿಪಶು ಮಾಡಿದರು.

ಕರುಣರತ್ನೆ ಅತ್ಯುತ್ತಮ ಶತಕ ಆದರೆ ಇನ್ನೊಂದು ಕಡೆಯಿಂದ ಶ್ರೀಲಂಕಾದ ನಾಯಕ ಕರುಣಾರತ್ನೆ ಹೋರಾಟ ನಡೆಸಿ ಮೊದಲು ಅರ್ಧಶತಕ ಪೂರೈಸಿದರು. ನಂತರ ಎರಡನೇ ಸೆಷನ್‌ನಲ್ಲಿ ಕರುಣರತ್ನೆ ತಮ್ಮ ಟೆಸ್ಟ್ ವೃತ್ತಿಜೀವನದ 14ನೇ ಹಾಗೂ ಭಾರತದ ವಿರುದ್ಧ ಎರಡನೇ ಶತಕ ಬಾರಿಸಿದರು. ಕರುಣಾರತ್ನೆ ಇನ್ನಿಂಗ್ಸ್ ನೆರವಿನಿಂದ ಶ್ರೀಲಂಕಾ ಸರಣಿಯಲ್ಲಿ ಮೊದಲ ಬಾರಿಗೆ 200ರ ಗಡಿ ದಾಟಿತು. ಮತ್ತೊಂದೆಡೆ ನಿರೋಶನ್ ಡಿಕ್ವೆಲ್ಲಾ ಮತ್ತು ಚರಿತ್ ಅಸಲಂಕಾ ಕೆಲಕಾಲ ಕ್ರೀಸ್‌ನಲ್ಲಿ ನಿಂತು ನಾಯಕನಿಗೆ ನೆರವಾದರು. ಆದರೆ ಇಬ್ಬರನ್ನೂ ಅಕ್ಷರ್ ಪಟೇಲ್ ಔಟ್ ಮಾಡಿ ಲಂಕಾಗೆ ಸಂಕಷ್ಟ ಹೆಚ್ಚಿಸಿದರು.

ಅಶ್ವಿನ್-ಬುಮ್ರಾ ಅದ್ಭುತ ಪ್ರದರ್ಶನ ಜಸ್ಪ್ರೀತ್ ಬುಮ್ರಾ ಅವರು ಕರುಣಾರತ್ನೆ ಅವರನ್ನು ಬೌಲ್ಡ್ ಮಾಡಿದ ನಂತರದ 3 ಓವರ್‌ಗಳಲ್ಲಿ ಉಳಿದ ಮೂರು ವಿಕೆಟ್‌ಗಳು ಕೂಡ ಪತನಗೊಂಡವು.ಕರುಣಾರತ್ನೆ 174 ಎಸೆತಗಳಲ್ಲಿ 15 ಬೌಂಡರಿ ಸೇರಿದಂತೆ 107 ರನ್ ಗಳಿಸಿದರು. ಇವರ ನಂತರ ಬುಮ್ರಾ ತಮ್ಮ ಕೊನೆಯ ಟೆಸ್ಟ್‌ ಆಡುತ್ತಿದ್ದ ಸುರಂಗ ಲಕ್ಮಲ್ ಅವರನ್ನು ಬೌಲ್ಡ್ ಮಾಡಿದರು. ಲಸಿತ್ ಅಂಬಲ್ಡೆನಿಯಾ ಮತ್ತು ವಿಶ್ವ ಫೆರ್ನಾಂಡೊ ಅವರನ್ನು ಔಟ್ ಮಾಡುವ ಮೂಲಕ ಅಶ್ವಿನ್ ಭಾರತಕ್ಕೆ ಸುಲಭ ಜಯ ತಂದುಕೊಟ್ಟರು. ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಅತ್ಯಧಿಕ 4 ವಿಕೆಟ್ ಪಡೆದರೆ, ಬುಮ್ರಾ ಸಹ 3 ವಿಕೆಟ್ ಪಡೆದರು. ಅಕ್ಷರ್ ಎರಡು ಮತ್ತು ಜಡೇಜಾ ಒಂದು ವಿಕೆಟ್ ಪಡೆದರು. ಒಟ್ಟಾರೆ ಪಂದ್ಯದಲ್ಲಿ ಬುಮ್ರಾ 8 ವಿಕೆಟ್ ಪಡೆದರು. ಅದೇ ಸಮಯದಲ್ಲಿ, ಎರಡೂ ಇನ್ನಿಂಗ್ಸ್‌ಗಳಲ್ಲಿ ಅತ್ಯುತ್ತಮ ಅರ್ಧಶತಕಗಳನ್ನು ಗಳಿಸಿದ ಶ್ರೇಯಸ್ ಅಯ್ಯರ್ ಪಂದ್ಯ ಶ್ರೇಷ್ಠರಾದರೆ, ರಿಷಬ್ ಪಂತ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ:IND vs SL: ಪಂತ್ ಬ್ಯಾಟಿಂಗ್ ಅಬ್ಬರಕ್ಕೆ ಕಪಿಲ್ ದೇವ್ ಅವರ 40 ವರ್ಷದ ಹಳೆಯ ದಾಖಲೆ ಉಡೀಸ್..!

Published On - 5:55 pm, Mon, 14 March 22

ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ