IND vs SL: 28 ವರ್ಷಗಳ ನಂತರ ಶ್ರೀಲಂಕಾವನ್ನು ಕ್ಲೀನ್ ಸ್ವೀಪ್ ಮಾಡಿದ ಭಾರತ! ಸರಣಿ ಗೆಲುವಿಗೆ 5 ಕಾರಣಗಳಿವು

IND vs SL: ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಬಾರಿಸಿದ ಶ್ರೇಯಸ್ ಅಯ್ಯರ್ ಅವರು ಬೆಂಗಳೂರು ಟೆಸ್ಟ್‌ನಲ್ಲಿ ಭಾರತದ ಗೆಲುವಿನ ಹೀರೋ ಆಗಿದ್ದರು. ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ರಿಷಭ್ ಪಂತ್ ಪಡೆದರು.

IND vs SL: 28 ವರ್ಷಗಳ ನಂತರ ಶ್ರೀಲಂಕಾವನ್ನು ಕ್ಲೀನ್ ಸ್ವೀಪ್ ಮಾಡಿದ ಭಾರತ! ಸರಣಿ ಗೆಲುವಿಗೆ 5 ಕಾರಣಗಳಿವು
ಟೀಂ ಇಂಡಿಯಾ
Follow us
TV9 Web
| Updated By: ಪೃಥ್ವಿಶಂಕರ

Updated on: Mar 14, 2022 | 7:22 PM

ಬೆಂಗಳೂರು ಟೆಸ್ಟ್‌ನಲ್ಲಿ, ಟೀಂ ಇಂಡಿಯಾ ಶ್ರೀಲಂಕಾವನ್ನು (India vs Sri Lanka, 2nd Test) ಮೂರನೇ ದಿನದಲ್ಲಿಯೇ ಮಂಡಿಯೂರುವಂತೆ ಮಾಡಿತು. ಭಾರತ ನೀಡಿದ 447 ರನ್‌ಗಳ ಗುರಿಗೆ ಉತ್ತರವಾಗಿ ಶ್ರೀಲಂಕಾ ತಂಡವು 208 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah) 3 ಮತ್ತು ಅಶ್ವಿನ್ 4 ವಿಕೆಟ್ ಪಡೆದರು. ಅಕ್ಷರ್ ಪಟೇಲ್ 2 ಮತ್ತು ಜಡೇಜಾ 1 ವಿಕೆಟ್ ಪಡೆದರು. ಮೊಹಾಲಿ ಟೆಸ್ಟ್ ಅನ್ನು 222 ರನ್‌ಗಳಿಂದ ಗೆದ್ದಿದ್ದ ಭಾರತ, ಬೆಂಗಳೂರು ಟೆಸ್ಟ್ ಗೆದ್ದು ಟೆಸ್ಟ್ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿತು. ಈ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ 12 ಅಂಕಗಳನ್ನು ಗಳಿಸಿದೆ.

ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಬಾರಿಸಿದ ಶ್ರೇಯಸ್ ಅಯ್ಯರ್ ಅವರು ಬೆಂಗಳೂರು ಟೆಸ್ಟ್‌ನಲ್ಲಿ ಭಾರತದ ಗೆಲುವಿನ ಹೀರೋ ಆಗಿದ್ದರು. ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ರಿಷಭ್ ಪಂತ್ ಪಡೆದರು. 60ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್ ಗಳಿಸಿದ್ದಲ್ಲದೆ, 8 ವಿಕೆಟ್‌ಗಳನ್ನು ಉರುಳಿಸುವಲ್ಲಿ ಪಂತ್ ಯಶಸ್ವಿಯಾಗಿದ್ದರು. 28 ವರ್ಷಗಳ ನಂತರ ಭಾರತ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾವನ್ನು ಕ್ಲೀನ್ ಸ್ವೀಪ್ ಮಾಡಿದೆ. ಭಾರತದ ಈ ಸರಣಿ ಗೆಲುವಿಗೆ ಕಾರಣವೇನು ಎಂಬುದರ ಬಗ್ಗೆ ಇಲ್ಲಿದೆ ವಿವರ.

ಅತ್ಯುತ್ತಮ ಬೌಲಿಂಗ್ ದಾಳಿ ಭಾರತದ ಗೆಲುವಿಗೆ ಬಹುದೊಡ್ಡ ಕಾರಣವೆಂದರೆ ತಂಡದ ಅತ್ಯುತ್ತಮ ಬೌಲಿಂಗ್ ಘಟಕ.ಜಸ್ಪ್ರೀತ್ ಬುಮ್ರಾ, ಆರ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ಅವರ ಅತ್ಯುತ್ತಮ ಬೌಲಿಂಗ್ ಶ್ರೀಲಂಕಾದ ಬ್ಯಾಟಿಂಗ್ ಬೆನ್ನೇಲುಬನ್ನು ಮುರಿಯಿತು. ಬುಮ್ರಾ ಮತ್ತು ಜಡೇಜಾ ಎರಡು ಇನ್ನಿಂಗ್ಸ್​ಗಳಿಂದ ತಲಾ 10 ವಿಕೆಟ್ ಪಡೆದರು.

ಪಂತ್-ಅಯ್ಯರ್ ಉತ್ತಮ ಬ್ಯಾಟಿಂಗ್ ಭಾರತದ ಇಬ್ಬರು ಯುವ ಬ್ಯಾಟ್ಸ್‌ಮನ್‌ಗಳಾದ ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರು. ಮೊಹಾಲಿ ನಂತರ ಬೆಂಗಳೂರಿನ ಕಠಿಣ ಪಿಚ್‌ನಲ್ಲಿಯೂ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಅದ್ಭುತವಾಗಿ ಬ್ಯಾಟ್ ಮಾಡಿದರು. ಅಯ್ಯರ್ 62ರ ಸರಾಸರಿಯಲ್ಲಿ 186 ರನ್ ಮತ್ತು ಪಂತ್ 61.66 ಸರಾಸರಿಯಲ್ಲಿ 185 ರನ್ ಗಳಿಸಿದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ತಲಾ 2 ಅರ್ಧಶತಕಗಳನ್ನು ಬಾರಿಸಿದರು.

‘ರಾಕ್‌ಸ್ಟಾರ್’ ಜಡೇಜಾ ರವೀಂದ್ರ ಜಡೇಜಾ ಲಂಕಾ ಬ್ಯಾಟಿಂಗ್ ವಿಭಾಗಕ್ಕೆ ಮುಳುವಾದರು. ಜಡೇಜಾ ಮೊಹಾಲಿ ಟೆಸ್ಟ್​ನಲ್ಲಿ ಆಲ್​ರೌಂಡರ್ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣಕರ್ತರಾಗಿದ್ದರು. ಮೊದಲು ಔಟಾಗದೆ 175 ರನ್ ಗಳಿಸಿದ ಜಡೇಜಾ ನಂತರ 10 ವಿಕೆಟ್ಗಳನ್ನು ಪಡೆದರು. ಈ ಪಂದ್ಯದಲ್ಲಿ ಜಡೇಜಾ ಅವರ ಬ್ಯಾಟಿಂಗ್ ಸರಾಸರಿ ಸರಣಿಯಲ್ಲಿ 100 ಕ್ಕಿಂತ ಹೆಚ್ಚಿತ್ತು.

ಆಟಗಾರರ ಇಂಜುರಿ ಲಂಕಾಗೆ ಹೊಡೆತ ನೀಡಿತು ಅನಾನುಭವಿಗಳನ್ನು ಹೆಚ್ಚಾಗಿ ಹೊಂದಿದ್ದ ಲಂಕಾ ತಂಡಕ್ಕೆ ಹೊಡೆತವೆಂಬಂತೆ ಸರಣಿಯ ಸಮಯದಲ್ಲಿ ಕೆಲವು ಪ್ರಮುಖ ಆಟಗಾರರು ಗಾಯದಿಂದ ಆಡಲು ಸಾಧ್ಯವಾಗಲಿಲ್ಲ. ಶ್ರೀಲಂಕಾದ ಬ್ಯಾಟ್ಸ್‌ಮನ್ ನಿಶಾಂಕ ಗಾಯದ ಕಾರಣ ಎರಡನೇ ಟೆಸ್ಟ್ ಆಡಲಿಲ್ಲ. ದುಷ್ಮಂತ ಚಮೀರಾ ಇಡೀ ಸರಣಿಯಲ್ಲಿ ಆಡಲು ಸಾಧ್ಯವಾಗಲಿಲ್ಲ. ಕುಸಾಲ್ ಮೆಂಡಿಸ್ ಕೂಡ ಮೊದಲ ಟೆಸ್ಟ್ ಆಡಿರಲಿಲ್ಲ. ನಂತರ ತಂಡದ ವೇಗದ ಬೌಲರ್ ಕುಮಾರ ಕೂಡ ಇಂಜುರಿಯಿಂದ ಆಡಲಾಗಲಿಲ್ಲ. ಇದು ಲಂಕಾ ತಂಡದ ಹೀನಾಯ ಪ್ರದರ್ಶನಕ್ಕೆ ಕಾರಣವಾಗಿತ್ತು.

ಶ್ರೀಲಂಕಾದ ಕಳಪೆ ಪ್ರದರ್ಶನ ನಾಯಕ ದಿಮುತ್ ಕರುಣಾರತ್ನೆ ಬಿಟ್ಟರೆ ಶ್ರೀಲಂಕಾದ ಬೇರಾವ ಬ್ಯಾಟರ್​ಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಸರಣಿಯಲ್ಲಿ ಕರುಣರತ್ನೆ ಮಾತ್ರ 100ಕ್ಕೂ ಹೆಚ್ಚು ರನ್ ಗಳಿಸಿದ್ದರು. ಬೌಲಿಂಗ್​ನಲ್ಲೂ ಶ್ರೀಲಂಕಾದ ಪ್ರದರ್ಶನ ಸರಾಸರಿಯಾಗಿತ್ತು.

ಇದನ್ನೂ ಓದಿ:IND vs SL: ಧೋನಿ ತನ್ನ ವೃತ್ತಿಜೀವನದುದ್ದಕ್ಕೂ ಅನುಭವಿಸಿದ ನೋವಿಗೆ ಸಮ ಪಾಲುದಾರರಾದ ಪಂತ್..!

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ