AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ISSF World Cup: ISSF ಶೂಟಿಂಗ್ ವಿಶ್ವಕಪ್: ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಕನ್ನಡತಿ ದಿವ್ಯಾ

ಐಎಸ್​ಎಸ್​ಎಫ್​ ಶೂಟಿಂಗ್ ವಿಶ್ವಕಪ್ 2023 ರಲ್ಲಿ ದಿವ್ಯಾ ಹಾಗೂ ಸರಬ್​​ಜೋತ್​ ಸಿಂಗ್​​​​​ ಜೋಡಿ ಬಂಗಾರಕ್ಕೆ ಮುತ್ತಿಕ್ಕಿದ್ದಾರೆ. ಇವರು ಸರ್ಬಿಯಾದ ದಮಿರ್​​, ಜೊರಾನಾ ವಿರುದ್ಧ 16-14 ಅಂಕಗಳ ಅಂತರದ ರೋಚಕ ಗೆಲುವು ಸಾಧಿಸಿದರು.

ISSF World Cup: ISSF ಶೂಟಿಂಗ್ ವಿಶ್ವಕಪ್: ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಕನ್ನಡತಿ ದಿವ್ಯಾ
DIVYA AND SARABJOT
Vinay Bhat
|

Updated on: May 12, 2023 | 7:31 AM

Share

ಅಜರ್​​ಬೈಜಾನ್​​ನ ಬಾಕುನಲ್ಲಿ ನಡೆಯುತ್ತಿರುವ ಐಎಸ್​ಎಸ್​ಎಫ್​ ಶೂಟಿಂಗ್ ವಿಶ್ವಕಪ್ 2023 ರಲ್ಲಿ (ISSF World Cup) ಭಾರತ ಮೊದಲ ಚಿನ್ನ ಪದಕ ಗೆದ್ದಿದೆ. 10 ಮೀ. ಏರ್​ ಪಿಸ್ತೂಲ್​ ಮಿಶ್ರ ತಂಡ ವಿಭಾಗದ ಫೈನಲ್​ನಲ್ಲಿ ದಿವ್ಯಾ ಟಿಎಸ್ (Divya TS) ಹಾಗೂ ಸರಬ್​​ಜೋತ್​ ಸಿಂಗ್​ (Sarabjot Singh)​​​​ ಜೋಡಿ ಬಂಗಾರಕ್ಕೆ ಮುತ್ತಿಕ್ಕಿದ್ದಾರೆ. ಇವರು ಸರ್ಬಿಯಾದ ದಮಿರ್​​, ಜೊರಾನಾ ವಿರುದ್ಧ 16-14 ಅಂಕಗಳ ಅಂತರದ ರೋಚಕ ಗೆಲುವು ಸಾಧಿಸಿದರು. ಈ ಮೂಲಕ ಭಾರತಕ್ಕೆ ಮೊದಲ ಚಿನ್ನ ತಂದು ಕೊಟ್ಟರು. ದಿವ್ಯಾ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ನಿವಾಸಿಯಾಗಿದ್ದಾರೆ. ಇವರಿಗೆ ಇದು ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಮೊದಲ ಪದಕ.

ಚಿನ್ನದ ಪದಕಕ್ಕಾಗಿ ನಡೆದ ಪೈಪೋಟಿಯಲ್ಲಿ ಭಾರತ ಮತ್ತು ಸರ್ಬಿಯದ ಜೋಡಿ 14-14 ರಲ್ಲಿ ಸಮಬಲ ಸಾಧಿಸಿತ್ತು. ತಮ್ಮ ಕೊನೆಯ ಪ್ರಯತ್ನದಲ್ಲಿ ಸರಬ್ಜೋತ್‌ 10.6 ಮತ್ತು ದಿವ್ಯಾ 9.9 ಪಾಯಿಂಟ್ಸ್‌ ಗಳಿಸಿದರು. ಸರ್ಬಿಯದ ದಾಮಿರ್‌ 10.3 ಪಾಯಿಂಟ್ಸ್‌ ಗಳಿಸಿದರೂ, ಜೊರಾನಾ ನಿಖರ ಗುರಿ ಹಿಡಿಯುವಲ್ಲಿ ವಿಫಲರಾಗಿ 8.6 ಪಾಯಿಂಟ್ಸ್‌ ಮಾತ್ರ ಗಳಿಸಿದರು. ಇದರಿಂದ ಭಾರತದ ಜೋಡಿಗೆ ಚಿನ್ನ ಒಲಿಯಿತು. ಈ ಹಿಂದೆ ಮಾರ್ಚ್‌ನಲ್ಲಿ ಭೋಪಾಲ್‌ನಲ್ಲಿ ನಡೆದಿದ್ದ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಗೆದ್ದಿದ್ದ ಸರಬ್​​ಜೋತ್​ ಸಿಂಗ್​ಗೆ ಇದು ಎರಡನೇ ISSF ವಿಶ್ವಕಪ್ ಚಿನ್ನವಾಗಿದೆ.

IPL 2023: ಕೊಂಚ ತಾಳ್ಮೆ ಇರಲಿ..ನಮ್ಮವರೂ ಕೂಡ ಅಬ್ಬರಿಸುತ್ತಾರೆ: RCB ಕೋಚ್ ಸಂಜಯ್ ಬಂಗಾರ್

ಇದನ್ನೂ ಓದಿ
Image
Yashasvi Jaiswal: ರಾಹುಲ್ ದಾಖಲೆ ಉಡೀಸ್: ಯಶಸ್ವಿ ಜೈಸ್ವಾಲ್ ಸ್ಪೋಟಕ ಅರ್ಧಶತಕ
Image
IPL 2023: 7 ಪಂದ್ಯಗಳು 19 ರನ್​: ಇದು RCB ಬ್ಯಾಟ್ಸ್​ಮನ್​ಗಳ ವೈಫಲ್ಯದ ಕಥೆ..!
Image
Yuzvendra Chahal: ಹಳೆಯ ದಾಖಲೆಗಳೆಲ್ಲಾ ಉಡೀಸ್: ಐಪಿಎಲ್​ನಲ್ಲಿ ಹೊಸ ಇತಿಹಾಸ ಬರೆದ ಚಹಾಲ್
Image
IPL 2023: 3 ಪಂದ್ಯಗಳು ಬಾಕಿ: RCBಯ 6 ಆಟಗಾರರು ವೇಟಿಂಗ್

ಇದಕ್ಕೂ ಮುನ್ನ ನಡೆದಿದ್ದ ಅರ್ಹತಾ ಸುತ್ತಿನಲ್ಲಿ ದಿವ್ಯಾ ಮತ್ತು ಸರಬ್​​ಜೋತ್​ ಅವರು 581 ಪಾಯಿಂಟ್ಸ್‌ಗಳನ್ನು ಕಲೆಹಾಕುವ ಮೂಲಕ ಕಣದಲ್ಲಿದ್ದ 55 ತಂಡಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಇಶಾ ಸಿಂಗ್‌ ಮತ್ತು ವರುಣ್‌ ತೋಮರ್‌ ಪದಕ ಸುತ್ತು ತಲುಪಲು ವಿಫಲರಾದರು. ಅವರು ಅರ್ಹತಾ ಹಂತದಲ್ಲಿ 578 ಪಾಯಿಂಟ್ಸ್‌ಗಳೊಂದಿಗೆ ಐದನೇ ಸ್ಥಾನ ಪಡೆದರು. ಇನ್ನು ಭಾರತದ ರಿಧಮ್ ಸಂಗ್ವಾನ್ ಅವರು ಐಎಸ್‍ಎಸ್‍ಎಫ್ ವಿಶ್ವಕಪ್ (ಪಿಸ್ತೂಲ್ ಮತ್ತು ರೈಫಲ್) ಶೂಟಿಂಗ್ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಟರ್ಕಿಯ ಸಿಮಲ್ ಯಿಲ್ಮಾಜ್ ಮತ್ತು ಇಸ್ಮಾಯಿಲ್ ಕೆಲೆಸ್ ಅವರು ಇಟಲಿಯ ಸಾರಾ ಕೊಸ್ಟಾಂಟಿನೊ ಮತ್ತು ಪಾವೊಲೊ ಮೊನ್ನಾ ಅವರನ್ನು 17-9 ರಿಂದ ಸೋಲಿಸಿ ಕಂಚಿನ ಪದಕ ಗೆದ್ದರು. ಭಾರತದ ವರುಣ್ ತೋಮರ್ ಮತ್ತು ಇಶಾ ಸಿಂಗ್ 578 ಸ್ಕೋರ್ ಗಳಿಸಿ 6ನೇ ಸ್ಥಾನ ಗಳಿಸಿದರು ಮತ್ತು ಪದಕ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. ಅರ್ಹತಾ ಸುತ್ತಿನಲ್ಲಿ ಒಟ್ಟು 55 ಜೋಡಿಗಳು ಸ್ಪರ್ಧಿಸಿದ್ದವು. ಸದ್ಯ ಭಾರತ ಒಂದು ಚಿನ್ನ ಮತ್ತು ಕಂಚಿನ ಪದಕದೊಂದಿಗೆ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದುವರೆಗೆ ಒಂದು ಚಿನ್ನ ಮತ್ತು ಬೆಳ್ಳಿಯೊಂದಿಗೆ ಚೀನಾ ಅಗ್ರಸ್ಥಾನ ಕಾಯ್ದುಕೊಂಡಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ