‘ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್’ (Khelo India) ಎರಡನೇ ಆವೃತ್ತಿಯ ಆಯೋಜನೆ ಕರ್ನಾಟಕಕ್ಕೆ ಸಿಕ್ಕಿರುವುದು ಹೆಮ್ಮೆಯ ವಿಷಯ ಎಂದು ಕ್ರೀಡಾ ಸಚಿವ ನಾರಾಯಣ ಗೌಡ ನುಡಿದಿದ್ದಾರೆ. ವಿಧಾನಸೌಧದಲ್ಲಿ ನಡೆದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಏಪ್ರಿಲ್ 24 ರಿಂದ ಮೇ 3 ವರೆಗೆ ಕ್ರೀಡಾಕೂಟ ನಡೆಯಲಿದೆ. ಈ ಕ್ರೀಡಾ ಕೂಟದಲ್ಲಿ ದೇಶದ 200ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ 8 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು, ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ. ಜೈನ್ ವಿ.ವಿ ಕ್ಯಾಂಪಸ್, ಕಂಠೀರವ ಕ್ರೀಡಾಂಗಣದಲ್ಲಿ ಗೇಮ್ಸ್‌ಗಳು ನಡೆಯಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಏಪ್ರಿಲ್ 1 ರಂದು ಕ್ರೀಡಾಕೂಟದ ಲೋಗೋ, ಥೀಮ್ ಸಾಂಗ್, ಜೆರ್ಸಿ, ಮೊಬೈಲ್ ಆ್ಯಪ್ ಅನ್ನು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವ ನಾರಾಯಣ ಗೌಡ ಮಾಹಿತಿ ನೀಡಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜ್ಯ ಸಚಿವ ನಿಶಿತ್ ಪ್ರಾಮಾಣಿಕ್, ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಏಪ್ರಿಲ್ 24 ರಂದು ‘ಖೇಲೊ ಇಂಡಿಯಾ ಯೂನಿವರ್ಸಿಟಿ ಗೇಮ್ಸ್’ ಉದ್ಘಾಟನೆಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗಮಿಸಲಿದ್ದಾರೆ. 10 ದಿನಗಳ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಜೂಡೋ, ವಾಲಿಬಾಲ್, ಕಬಡ್ಡಿ, ಬಾಸ್ಕೆಟ್ ಬಾಲ್ , ಕರಾಟೆ ಸೇರಿದಂತೆ 20 ಕ್ರೀಡಾ ಸ್ಪರ್ಧೆಗಳು ನಡೆಯಲಿವೆ.
‘‘ಈ ಕ್ರೀಡಾಕೂಟವನ್ನು ಅದ್ದೂರಿಯಾಗಿ ಆಯೋಜಿಸಲು ಆರು ತಿಂಗಳಿನಿಂದ ಸಿದ್ದತೆ ನಡೆಸುತ್ತಿದ್ದು, ಕಳೆದ ಎರಡು ತಿಂಗಳಿಂದ ಪ್ರತಿನಿತ್ಯ ವಿಶೇಷ ನಿಗಾವಹಿಸಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಕ್ರೀಡೆ ಜೊತೆಯಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವುದು ಸರಕಾರದ ಉದ್ದೇಶ. ಈ ಕಾರಣಕ್ಕಾಗಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಅನ್ನು ಹಸಿರು ಕ್ರೀಡಾಕೂಟ, ಗ್ರೀನ್ ಗೇಮ್ಸ್ ಎಂದು ಘೋಷಣೆ ಮಾಡಲಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಾಧನೆ ಕುರಿತ ಕಾರ್ಯಪಥ ಪುಸ್ತಕವನ್ನು ಅನುರಾಗ್ ಠಾಕೂರ್ ಬಿಡುಗಡೆಗೊಳಿಸಲಿದ್ದಾರೆ’’ ಎಂದು ಸಚಿವ ನಾರಾಯಣ ಗೌಡ ಮಾಹಿತಿ ನೀಡಿದ್ದಾರೆ.
Just 2 more days to go! ?
Khelo India University Games launch event! How exciting ?#KIUG2021@kheloindia @sai_bengaluru @Media_SAI @YASMinistry @JAINUNIVERSITY pic.twitter.com/PUIwrucE1p— Department of Youth Empowerment and Sports (@dyesdept) March 30, 2022
ಖೇಲೋ ಇಂಡಿಯಾ ಯೋಜನೆಯಡಿ ವಿವಿಧ ರಾಜ್ಯಗಳ 9 ಶಾಲೆ ಮತ್ತು 28 ಸೇನಾ ಬಾಲಕರ ಕ್ರೀಡಾ ಘಟಕಗಳನ್ನು ರಾಜ್ಯಮಟ್ಟದ ಖೇಲೋ ಇಂಡಿಯಾ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವಾಲಯ ಇತ್ತೀಚೆಗಷ್ಟೇ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ:
Devon Conway: ‘ನಿಮ್ಮ ನಾಯಕತ್ವದಲ್ಲಿ ನಾನು ಆಡಬೇಕು’; ಕಿವೀಸ್ ಆಟಗಾರನ ಕೋರಿಕೆಗೆ ಧೋನಿ ಉತ್ತರ ಏನಿತ್ತು?
Published On - 2:58 pm, Wed, 30 March 22