AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Impact: ಖೇಲೋ ಇಂಡಿಯಾಗೆ ಆಯ್ಕೆ ಆಗಿದ್ದ ಪವಿತ್ರಾ ಕುರ್ತಕೋಟಿಗೆ 4.95 ಲಕ್ಷ ರೂ. ಮೌಲ್ಯದ ಸೈಕಲ್ ಕೊಡುಗೆ

TV9 Kannada Impact: ಶುಕ್ರವಾರ ಬೆಂಗಳೂರಿನ ಬ್ಯಾಂಕ್ವೆಟ್ ಹಾಲಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪವಿತ್ರಾಗೆ ಸೈಕಲ್ ವಿತರಣೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಗದಗ ಕ್ರೀಡಾ ಇಲಾಖೆ ಉಪನಿರ್ದೇಶ ವಿಶ್ವನಾಥ್​ರಿಂದ ಮಾಹಿತಿ ಲಭ್ಯವಾಗಿದೆ.

TV9 Impact: ಖೇಲೋ ಇಂಡಿಯಾಗೆ ಆಯ್ಕೆ ಆಗಿದ್ದ ಪವಿತ್ರಾ ಕುರ್ತಕೋಟಿಗೆ 4.95 ಲಕ್ಷ ರೂ. ಮೌಲ್ಯದ ಸೈಕಲ್ ಕೊಡುಗೆ
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
TV9 Web
| Edited By: |

Updated on:Sep 15, 2021 | 6:23 PM

Share

ಬೆಂಗಳೂರು: ಖೇಲೋ ಇಂಡಿಯಾಗೆ ಆಯ್ಕೆ ಆಗಿದ್ದ ಯುವತಿ, ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಎಂಬವರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಸೈಕಲ್ ನೀಡಲಾಗಿದೆ. ಗದಗ ಕ್ರೀಡಾ ವಸತಿ ನಿಲಯದ ಕ್ರೀಡಾಪಟುವಾಗಿದ್ದ ಪವಿತ್ರಾ ಕುರ್ತಕೋಟಿ ಖೇಲೋ ಇಂಡಿಯಾಗೆ ಆಯ್ಕೆ ಆಗಿದ್ದರು. ಅವರಿಗೆ 4.95 ಲಕ್ಷ ರೂಪಾಯಿ ಮೌಲ್ಯದ ಸೈಕಲ್ ಖರೀದಿಗೆ ಇಲಾಖೆ ಆದೇಶ ನೀಡಿದೆ.

ಈ ಮೊದಲು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಿವಿ9 ಸ್ಟುಡಿಯೋದಲ್ಲಿ ಬಾಲಕಿಗೆ ಭರವಸೆ ನೀಡಿದ್ದರು. ಸಿಎಂ ಸ್ಪೀಕಿಂಗ್​ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಪವಿತ್ರಾಗೆ ಸೈಕಲ್​ ಕೊಡಿಸುವ ಭರವಸೆ ನೀಡಿದ್ದರು. ಕ್ರೀಡಾ ಇಲಾಖೆ ಜೊತೆ ಚರ್ಚಿಸಿ ಹಣಕಾಸು ನೆರವು ಹಾಗು ಸೈಕಲ್ ಮಾತ್ರವಲ್ಲ, ಎಲ್ಲ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದರು.

ಇದೀಗ 4.95 ಲಕ್ಷ ಮೌಲ್ಯದ ಸೈಕಲ್ ಖರೀದಿಗೆ ಕ್ರೀಡಾ ಇಲಾಖೆ ಆದೇಶ ನೀಡಿದೆ. ಸೈಕಲ್ ಸರಬರಾಜು ಮಾಡುವಂತೆ ಕ್ರೀಡಾ ಇಲಾಖೆ ವ್ಹೀಲ್ ಸ್ಪೋರ್ಟ್ಸ್ ಏಜೆನ್ಸಿಗೆ ಪತ್ರ ಬರೆದಿದೆ. ಆ್ಯರಗಾನ್-18 ಸೈಕಲ್ ಸರಬರಾಜು ಮಾಡುವಂತೆ ಕ್ರೀಡಾ ಇಲಾಖೆ ಆದೇಶಿಸಿದೆ. ಬಡತನದಲ್ಲಿ ಅರಳಿದ ಸೈಕ್ಲಿಸ್ಟ್ ಪವಿತ್ರಾ ಸೈಕಲ್​ಗಾಗಿ ಪರದಾಡ ಪಡುತ್ತಿದ್ದರು. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಪವಿತ್ರಾ ಕುರ್ತಕೋಟಿ ಕುರಿತು ಸಿಎಂ ಸ್ಪಿಕಿಂಗ್ ಕಾರ್ಯಕ್ರಮದಲ್ಲಿ ವಿವರಿಸಲಾಗಿತ್ತು.

ಟಿವಿ9 ವರದಿಗೆ ಸ್ಪಂದಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ತಕ್ಷಣ ಆದೇಶ ಹೊರಡಿಸಿದ್ದರು. ಈ ಶುಕ್ರವಾರ ಬೆಂಗಳೂರಿನ ಬ್ಯಾಂಕ್ವೆಟ್ ಹಾಲಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪವಿತ್ರಾಗೆ ಸೈಕಲ್ ವಿತರಣೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಗದಗ ಕ್ರೀಡಾ ಇಲಾಖೆ ಉಪನಿರ್ದೇಶ ವಿಶ್ವನಾಥ್​ರಿಂದ ಮಾಹಿತಿ ಲಭ್ಯವಾಗಿದೆ.

ಟಿವಿ9ಗೆ ಸೈಕ್ಲಿಂಗ್ ಕ್ರೀಡಾಪಟು ಪವಿತ್ರಾ ಕುರ್ತಕೋಟಿ ಸಹಾಯಕ್ಕಾಗಿ ಮನವಿ ಮಾಡಿದ್ದರು. ಸಾಧನೆ ಶಿಖರವೇರಲು ಹೊರಟ ಛಲಗಾರ್ತಿಗೆ ಬಡತನ ಅಡ್ಡಿಯಾಗಿದ್ದು, ಸೈಕಲ್ ಕೊಡಿಸಿ ಎಂದು ಆಕೆ ಮನವಿ ಮಾಡಿದ್ದರು. ಹಳ್ಳಿಗಾಡಲ್ಲಿ ಅರಳಿದ ಹೂವಿಗೆ ಸರ್ಕಾರ ನೆರವಿನ ಭರವಸೆ ನೀಡಿದೆ. ಬಾಲಕಿಗೆ ಉತ್ತಮ ಮೌಲ್ಯದ ಸೈಕಲ್ ಕೊಡಿಸುವ ಭರವಸೆಯನ್ನು ಸಿಎಂ ಬೊಮ್ಮಾಯಿ ನೀಡಿದ್ದರು. ಕ್ರೀಡಾ ಇಲಾಖೆ ಜತೆ ಚರ್ಚಿಸಿ ಹಣಕಾಸು ನೆರವು ನೀಡುತ್ತೇವೆ ಎಂದು ತಿಳಿಸಿದ್ದ ಬೊಮ್ಮಾಯಿ, ಕೇವಲ ಸೈಕಲ್ ಮಾತ್ರವಲ್ಲ, ಎಲ್ಲ ಸೌಲಭ್ಯ ಒದಗಿಸುತ್ತೇವೆ ಎಂದು ಭರವಸೆ ನೀಡಿದ್ದರು. ಕಾರ್ಯಕ್ರಮದ ನಂತರ ಜಿಲ್ಲಾಧಿಕಾರಿ ಕೂಡ ಟಿವಿ9 ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜಿಲ್ಲಾಡಳಿತದ ವತಿಯಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದರು.

ಇದನ್ನೂ ಓದಿ: ನನ್ನನ್ನು ಇಂಜಿನಿಯರ್ ಬೊಮ್ಮಾಯಿ ಅಂದ್ರೆ ಖುಷಿಯಾಗುತ್ತೆ; ಸಿಎಂ ಬಸವರಾಜ ಬೊಮ್ಮಾಯಿ

ಇದನ್ನೂ ಓದಿ: ಅವಸರದಿಂದ ದೇವಸ್ಥಾನ ಒಡೆಯಬೇಡಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ

Published On - 6:06 pm, Wed, 15 September 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ