Neeraj Chopra: ನಮ್ಮ ಅಥ್ಲೀಟ್‌ಗಳು ಬೀದಿಗಿಳಿದಿರುವುದು ನೋವುಂಟು ಮಾಡಿದೆ: ಕುಸ್ತಿಪಟುಗಳಿಗೆ ಕಪಿಲ್ ದೇವ್, ನೀರಜ್ ಚೋಪ್ರಾ ಸಾಥ್

|

Updated on: Apr 28, 2023 | 11:51 AM

ಭೂಷಣ್ ಶರಣ್ ಸಿಂಗ್ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ ಪೈಲ್ವಾನರು ಅವರನ್ನು ಲೈಂಗಿಕ ಶೋಷಣೆಯ ಆರೋಪಗಳಲ್ಲಿ ಬಂಧಿಸದ ಹೊರತು ಪ್ರತಿಭಟನೆಯಿಂದ ಹಿಂತೆಗೆಯುವುದಿಲ್ಲ ಎಂದು ಸಂಕಲ್ಪ ಮಾಡಿದ್ದಾರೆ.

Neeraj Chopra: ನಮ್ಮ ಅಥ್ಲೀಟ್‌ಗಳು ಬೀದಿಗಿಳಿದಿರುವುದು ನೋವುಂಟು ಮಾಡಿದೆ: ಕುಸ್ತಿಪಟುಗಳಿಗೆ ಕಪಿಲ್ ದೇವ್, ನೀರಜ್ ಚೋಪ್ರಾ ಸಾಥ್
Neeraj Chopra and Kapil Dev
Follow us on

ಭಾರತದ ಕುಸ್ತಿ ಫೆಡರೇಶನ್ (WFI) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧ ಪ್ರಕರಣ ದಾಖಲಿಸುವಂತೆ ಪುನಃ ಆರಂಭವಾಗಿರುವ ಪ್ರತಿಭಟನೆಯಲ್ಲಿ ಪ್ರಮುಖ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪುನಿಯಾ ಹಾಗೂ ಸಾಕ್ಷಿ ಮಲಿಕ್ ಕೂಡ ಭಾಗವಹಿಸಿದ್ದಾರೆ. ಇದೀಗ ಇವರಿಗೆ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ (Neeraj Chopra), ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ಸಾಥ್ ನೀಡಿದ್ದಾರೆ.

”ನಮ್ಮ ಅಥ್ಲೀಟ್‌ಗಳು ನ್ಯಾಯಕ್ಕಾಗಿ ಬೀದಿಗಿಳಿದಿರುವುದು ತುಂಬಾ ನೋವನ್ನುಂಟು ಮಾಡಿದೆ. ಅವರು ನಮ್ಮ ಮಹಾನ್ ರಾಷ್ಟ್ರವನ್ನು ಪ್ರತಿನಿಧಿಸಲು ಮತ್ತು ನಮಗೆ ಹೆಮ್ಮೆ ತರಲು ಶ್ರಮಿಸಿದ್ದಾರೆ. ರಾಷ್ಟ್ರವಾಗಿ, ಪ್ರತಿಯೊಬ್ಬ ವ್ಯಕ್ತಿಯ ಸಮಗ್ರತೆ ಮತ್ತು ಘನತೆಯನ್ನು ಕಾಪಾಡುವ ಜವಾಬ್ದಾರರು, ಇದು ಎಂದಿಗೂ ಸಂಭವಿಸಬಾರದು. ಇದೊಂದು ಸೂಕ್ಷ್ಮ ವಿಷಯವಾಗಿದ್ದು ನಿಷ್ಪಕ್ಷಪಾತ ಮತ್ತು ಪಾರದರ್ಶಕ ರೀತಿಯಲ್ಲಿ ನಿರ್ವಹಿಸಬೇಕಿದೆ. ನ್ಯಾಯವನ್ನು ಒದಗಿಸುವುದನ್ನು ಖಾತ್ರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು,” ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದು ಅಭಿಪ್ರಾಯ ಹೊರ ಹಾಕಿದ್ದಾರೆ.

PBKS vs LSG, IPL 2023: ಐಪಿಎಲ್​ನಲ್ಲಿಂದು ಪಂಜಾಬ್-ಲಖನೌ ಮುಖಾಮುಖಿ: ಅಗ್ರಸ್ಥಾನದ ಮೇಲೆ ರಾಹುಲ್ ಕಣ್ಣು

ಇದನ್ನೂ ಓದಿ
Badminton Asia C’ships: ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್​ಶಿಪ್​ನಲ್ಲಿಂದು ಕ್ವಾರ್ಟರ್ ಫೈನಲ್: ಪಿವಿ ಸಿಂಧು ಮೇಲೆ ಎಲ್ಲರ ಕಣ್ಣು
LSG vs RCB: ಆರ್​ಸಿಬಿ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?: ಇಲ್ಲಿದೆ ಸಂಪೂರ್ಣ ಮಾಹಿತಿ
IPL 2023 Points Table: ಅಗ್ರಸ್ಥಾನಕ್ಕೇರಿದ ಸಂಜು ಸ್ಯಾಮ್ಸನ್ ಪಡೆ: ಆರ್​ಸಿಬಿ ಪ್ಲೇಯರ್ಸ್ ಕೈಯಲ್ಲಿದೆ ಆರೆಂಜ್-ಪರ್ಪಲ್ ಕ್ಯಾಪ್
MS Dhoni Angry: ಪಂದ್ಯದ ಮಧ್ಯೆ ತಾಳ್ಮೆ ಕಳೆದುಕೊಂಡ ಧೋನಿ: ಎಂಎಸ್​ಡಿ ಕೋಪಕಂಡು ತಬ್ಬಿಬ್ಬಾದ ಸಿಎಸ್​ಕೆ ಬೌಲರ್

ಇನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಕೂಡ ಇನ್​ಸ್ಟಾಗ್ರಾಮ್​ನಲ್ಲಿ ಸ್ಟೇಟಸ್ ಹಾಕಿ ಬೆಂಬಲ ಸೂಚಿಸಿದ್ದಾರೆ. “ಇವರಿಗೆ ಯಾವಾಗ ನ್ಯಾಯ ಸಿಗುತ್ತದೆಯೇ?” ಎಂದು ಬರೆದು ಬಜರಂಗ್ ಮತ್ತು ವಿನೇಶ್ ಸೇರಿದಂತೆ ಇತರರನ್ನು ಒಳಗೊಂಡ ಪತ್ರಿಕಾಗೋಷ್ಠಿಯ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅಂತೆಯೆ ಕುಸ್ತಿಪಟು ರವಿ ದಹಿಯಾ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಹೋದ್ಯೋಗಿಗಳ ಬೆಂಬಲಕ್ಕೆ ನಿಂತಿದ್ದಾರೆ. “ಒಬ್ಬ ಸೇನಾಧಿಕಾರಿ ಮತ್ತು ಕ್ರೀಡಾಪಟು ಪ್ರತಿ ರಾಷ್ಟ್ರದ ಹೆಮ್ಮೆ. ಅವರನ್ನು ಗೌರವಿಸುವುದು ರಾಷ್ಟ್ರದ ಕರ್ತವ್ಯ” ಎಂದು ಬರೆದಿದ್ದಾರೆ.

ಭೂಷಣ್ ಶರಣ್ ಸಿಂಗ್ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ ಪೈಲ್ವಾನರು ಅವರನ್ನು ಲೈಂಗಿಕ ಶೋಷಣೆಯ ಆರೋಪಗಳಲ್ಲಿ ಬಂಧಿಸದ ಹೊರತು ಪ್ರತಿಭಟನೆಯಿಂದ ಹಿಂತೆಗೆಯುವುದಿಲ್ಲ ಎಂದು ಸಂಕಲ್ಪ ಮಾಡಿದ್ದಾರೆ. 2012 ರಿಂದ ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ 7 ಮಹಿಳಾ ಕುಸ್ತಿಪಟುಗಳು ಈ ಹಿಂದೆ ಸೆಂಟ್ರಲ್ ದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದರು.

ಆದರೆ, ಈ ಪ್ರಕರಣದಲ್ಲಿ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇತ್ತ ಪೊಲೀಸರು ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸುವವರೆಗೆ ಹೋರಾಟ ಮುಂದುವರಿಸುವುದಾಗಿ ವಿನೇಶ್ ಫೋಗಟ್, ಬಜರಂಗ್ ಪೂನಿಯಾ ಸೇರಿದಂತೆ ಭಾರತೀಯ ಕುಸ್ತಿಪಟುಗಳು ಪ್ರತಿಭಟನೆಗೆ ಇಳಿದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:51 am, Fri, 28 April 23