- Kannada News Photo gallery Cricket photos RCB will be next seen in action when they will take on LSG in their next game on Monday 1st Kannada News
LSG vs RCB: ಆರ್ಸಿಬಿ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?: ಇಲ್ಲಿದೆ ಸಂಪೂರ್ಣ ಮಾಹಿತಿ
Royal Challengers Bangalore: ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮುಂದಿನ ಪಂದ್ಯವನ್ನು ಮೇ. 01 ರಂದು ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೇಂಟ್ಸ್ ವಿರುದ್ಧ ಆಡಲಿದೆ. ಲಖನೌದ ಎಖಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ.
Updated on:Apr 28, 2023 | 10:40 AM

16ನ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಪಾಯಿಂಟ್ ಟೇಬಲ್ನಲ್ಲಿ ಮೇಲಕ್ಕೇರಲು ಹಾಗೂ ರನ್ರೇಟ್ ಹೆಚ್ಚಿಸಲು ಎಲ್ಲ ತಂಡಗಳು ಸರ್ಕಸ್ ನಡೆಸುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

ಆರ್ಸಿಬಿ ಈ ಬಾರಿ ಆಡಿದ ಎಂಟು ಪಂದ್ಯಗಳ ಪೈಕಿ ನಾಲ್ಕರಲ್ಲಿ ಸೋಲು ಕಂಡು, ನಾಲ್ಕರಲ್ಲಿ ಜಯ ಸಾಧಿಸಿ ಒಟ್ಟು ಎಂಟು ಅಂಕ ಸಂಪಾದಿಸಿದೆ. ಆದರೆ, -0.139 ರನ್ರೇಟ್ ಹೊಂದಿದೆ. ರನ್ರೇಟ್ ಅಭಿವೃದ್ದಿ ಪಡಿಸಲು ಹಾಗೂ ಪಾಯಿಂಟ್ ಟೇಬಲ್ನಲ್ಲಿ ಮೇಲಕ್ಕೇರಲು ಬೆಂಗಳೂರಿಗೆ ಮುಂದಿನ ಪಂದ್ಯ ಬಹುಮುಖ್ಯವಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮುಂದಿನ ಪಂದ್ಯವನ್ನು ಮೇ. 01 ರಂದು ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೇಂಟ್ಸ್ ವಿರುದ್ಧ ಆಡಲಿದೆ. ಲಖನೌದ ಭಾರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಎಖಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ.

ಆರ್ಸಿಬಿ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಅಗತ್ಯ. ಯಾಕೆಂದರೆ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಫಾಫ್ ಡುಪ್ಲೆಸಿಸ್ ಬಿಟ್ಟರೆ ಆರ್ಸಿಬಿ ಪರ ಮತ್ಯಾವ ಬ್ಯಾಟರ್ಗಳು ಕೂಡ ಮಿಂಚುತ್ತಿಲ್ಲ. ಈ ಮೂವರ ಮೇಲೆ ಆರ್ಸಿಬಿ ಸಂಪೂರ್ಣ ಅವಲಂಬಿತವಾಗಿದೆ.

ಕೊಹ್ಲಿ, ಫಾಫ್, ಮ್ಯಾಕ್ಸಿ ಬೇಗನೆ ಔಟಾದರೆ ತಂಡದ ಮೊತ್ತ 100ರ ಗಟಿ ದಾಟುವುದು ಅನುಮಾನ. ಹೀಗಾಗಿ ಬ್ಯಾಟಿಂಗ್ನಲ್ಲಿ ಓರ್ವ ಪ್ಲೇಯರ್ ಬರಬೇಕಿದೆ. ಐಪಿಎಲ್ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯದಲ್ಲಿ ಮಿಂಚಿದ್ದ ಮಿಚೆಲ್ ಬ್ರೇಸ್ವೆಲ್ಗೆ ಅವಕಾಶ ಸಿಗುತ್ತಾ ನೋಡಬೇಕಿದೆ.

ಬೌಲಿಂಗ್ನಲ್ಲಿ ಆರ್ಸಿಬಿ ಮಾರಕವಾಗಿ ಗೋಚರಿಸುತ್ತಿಲ್ಲ. ಪರ್ಪಲ್ ಕ್ಯಾಪ್ ತೊಟ್ಟಿರುವ ಮೊಹಮ್ಮದ್ ಸಿರಾಜ್ ಮಾತ್ರ ಅಪಾಯಕಾರಿ ಆಗಿದ್ದಾರೆ. ಹರ್ಷಲ್ ಪಟೇಲ್ ಪದೇ ಪದೇ ದುಬಾರಿ ಆಗುತ್ತಿದ್ದಾರೆ. ಜೋಶ್ ಹ್ಯಾಜ್ಲೆವುಡ್ ಪ್ಲೇಯಿಂಗ್ ಇಲೆವೆನ್ಗೆ ಬಂದರೆ ಬೌಲಿಂಗ್ ವಿಭಾಗಕ್ಕೆ ಬಲ ಬರಬಹುದು.

ಲಖನೌ ವಿರುದ್ಧದ ಬಳಿಕ ಆರ್ಸಿಬಿ ಮೇ. 6 ರಂದು ಡೆಲ್ಲಿ ವಿರುದ್ಧ, ಮೇ. 9ಕ್ಕೆ ಮುಂಬೈ ವಿರುದ್ಧ ಆಡಲಿದೆ. ಬಳಿಕ ಮೇ. 14, ಮೇ. 18 ಹಾಗೂ ಮೇ. 21 ರಂದು ಕ್ರಮವಾಗಿ ಆರ್ಆರ್, ಎಸ್ಆರ್ಹೆಚ್ ಮತ್ತು ಗುಜರಾತ್ ವಿರುದ್ಧ ಆಡಲಿದೆ.
Published On - 10:39 am, Fri, 28 April 23
