IPL 2023: ಟಿ20 ಕ್ರಿಕೆಟ್​​ನಲ್ಲಿ ಅಪರೂಪದ ದಾಖಲೆ ಬರೆದ ರವೀಂದ್ರ ಜಡೇಜಾ..!

IPL 2023: ರವೀಂದ್ರ ಜಡೇಜಾ ಭಾರತದ ಪರ 300 ಟಿ20 ಪಂದ್ಯಗಳನ್ನು ಆಡಿದ 8 ನೇ ಆಟಗಾರ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಭಾರತ ಪರ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ್ದು, ಎರಡನೇ ಸ್ಥಾನದಲ್ಲಿ ದಿನೇಶ್ ಕಾರ್ತಿಕ್ ಇದ್ದಾರೆ.

ಪೃಥ್ವಿಶಂಕರ
|

Updated on: Apr 28, 2023 | 4:11 PM

2022 ರಲ್ಲಿ ಐಪಿಎಲ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ 2023 ರಲ್ಲಿ ಅದ್ಭುತ ಪುನರಾಗಮನ ಮಾಡಿದೆ. ಈ ಸೀಸನ್​ನಲ್ಲಿ 8 ಪಂದ್ಯಗಳನ್ನಾಡಿರುವ ಚೆನ್ನೈ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

1 / 5
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 32 ರನ್​ಗಳಿಂದ ಸೋಲನುಭವಿಸಿದ ಚೆನ್ನೈ. ಸದ್ಯ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ಈ ಸೋಲಿನ ನಡುವೆಯೂ ತಂಡದ ಸ್ಟಾರ್ ಆಲ್ ರೌಂಡರ್ ಜಡೇಜಾ ತ್ರಿಶತಕ ಪೂರೈಸಿದ್ದಾರೆ.  ಇದರೊಂದಿಗೆ ಈ ಸಾಧನೆ ಮಾಡಿದ ಭಾರತದ 8ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

2 / 5
ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಶಿಖರ್ ಧವನ್, ಆರ್. ಅಶ್ವಿನ್ ನಂತರ ರವೀಂದ್ರ ಜಡೇಜಾ ಭಾರತದ ಪರ 300 ಟಿ20 ಪಂದ್ಯಗಳನ್ನು ಆಡಿದ 8 ನೇ ಆಟಗಾರ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಭಾರತ ಪರ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ್ದು,  ಎರಡನೇ ಸ್ಥಾನದಲ್ಲಿ ದಿನೇಶ್ ಕಾರ್ತಿಕ್ ಇದ್ದಾರೆ.

3 / 5
ರಾಜಸ್ಥಾನ್ ರಾಯಲ್ಸ್ ವಿರುದ್ಧ 300ನೇ ಟಿ20 ಪಂದ್ಯವನ್ನಾಡಿದ ಜಡೇಜಾ, 2007ರಲ್ಲಿ ಟಿ20 ಕ್ರಿಕೆಟ್ ಜೀವನ ಆರಂಭಿಸಿ ಇದರಲ್ಲಿ 3226 ರನ್ ಬಾರಿಸಿದ್ದಾರೆ.  ಈ ಮಾದರಿಯಲ್ಲಿ 204 ವಿಕೆಟ್‌ಗಳನ್ನು ಪಡೆದಿರುವ ಜಡೇಜಾ, 16 ರನ್‌ಗಳಿಗೆ 5 ವಿಕೆಟ್‌ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.

4 / 5
ಚೆನ್ನೈ ಸೂಪರ್ ಕಿಂಗ್ಸ್ ಪರ ಜಡೇಜಾ 164 ಪಂದ್ಯಗಳನ್ನು ಆಡಿದ್ದು, ತಂಡದ ಪರ 150ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ನಾಯಕ ಧೋನಿ ಚೆನ್ನೈ ಪರ ಅತಿ ಹೆಚ್ಚು 235 ಪಂದ್ಯಗಳನ್ನು ಆಡಿದ್ದು, ಸುರೇಶ್ ರೈನಾ 200 ಪಂದ್ಯಗಳನ್ನು ಆಡಿದ್ದಾರೆ. ಜಡೇಜಾ ಭಾರತ ಪರ 64 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

5 / 5
Follow us