- Kannada News Photo gallery Cricket photos IPL 2023: 'No School Until RCB Wins IPL' Poster Goes Viral
IPL 2023: RCB ಕಪ್ ಗೆಲ್ಲೋ ತನಕ ಸ್ಕೂಲ್ಗೆ ಸೇರಲ್ಲ: ಆಗಿದ್ರೆ ಈ ಜನ್ಮದಲ್ಲಿ ಶಾಲೆಗೆ ಹೋಗಲ್ಲ ಎಂದು ಕಿಚಾಯಿಸಿದ ನೆಟ್ಟಿಗರು
IPL 2023 Kannada: ಆರ್ಸಿಬಿ ತನ್ನ ಮುಂದಿನ ಪಂದ್ಯವನ್ನು ಮೇ 1 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದ್ದು, ಈ ಪಂದವು ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆಯಲಿದೆ.
Updated on: Apr 27, 2023 | 11:12 PM

IPL 2023: ಐಪಿಎಲ್ ಪಂದ್ಯದ ವೇಳೆ ನಾನಾ ರೀತಿಯ ಪ್ಲಕಾರ್ಡ್ ಕಾಣ ಸಿಗುತ್ತದೆ. ಅದರಲ್ಲೂ ಆರ್ಸಿಬಿ ಪಂದ್ಯದ ವೇಳೆ "ಕಪ್ ಗೆಲ್ಲೋ ತನಕ..." ಎಂದು ಶುರುವಾಗುವ ಫಲಕಗಳು ಕಾಣ ಸಿಗುವುದು ಸಾಮಾನ್ಯ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪುಟ್ಟ ಆರ್ಸಿಬಿ ಅಭಿಮಾನಿಯ ಪೋಸ್ಟರ್ವೊಂದು ವೈರಲ್ ಆಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕೆಕೆಆರ್ ಹಾಗೂ ಆರ್ಸಿಬಿ ನಡುವಣ ಪಂದ್ಯದ ವೇಳೆ ಪುಟ್ಟ ಅಭಿಮಾನಿ ಆರ್ಸಿಬಿ ಕಪ್ ಗೆಲ್ಲೋ ತನಕ ಶಾಲೆಗೆ ಸೇರಲ್ಲ ಎಂಬ ಪೋಸ್ಟರ್ ಹಿಡಿದುಕೊಂಡು ಪೋಸ್ ನೀಡಿದ್ದ. ಇದೀಗ ಆರ್ಸಿಬಿಯ ಪುಟ್ಟ ಫ್ಯಾನ್ನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇತ್ತ ಆರ್ಸಿಬಿ ಅಭಿಮಾನಿಯ ಆಸೆ ಅಭಿಲಾಷೆಯನ್ನು ವ್ಯಕ್ತಪಡಿಸುವ ಪೋಸ್ಟರ್ ಇದಾಗಿದ್ದರೂ, ಇದೀಗ ಇದನ್ನೇ ಮುಂದಿಟ್ಟು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಇಲ್ಲಿ ಪುಟ್ಟ ಪುಟಾಣಿ ಕಪ್ ಗೆಲ್ಲುವವರೆಗೂ ಶಾಲೆಗೆ ಸೇರಲ್ಲ ಎಂದಿರುವ ಕಾರಣ, ಆಗಿದ್ರೆ ಈ ಜನ್ಮದಲ್ಲಿ ನಿನಗೆ ಶಾಲೆಗೆ ಹೋಗುವ ಉಸಾಬರಿಯೇ ಇರುವುದಿಲ್ಲ ಎಂದು ಕೆಲವರು ಕಿಚಾಯಿಸಿದ್ದಾರೆ.

ಒಟ್ಟಿನಲ್ಲಿ ಈ ಸಲ ಕಪ್ ನಮ್ದೆ ಎಂಬ ಘೋಷವಾಕ್ಯದೊಂದಿಗೆ ಆರಂಭವಾದ ಆರ್ಸಿಬಿ ತಂಡದ ಅಭಿಯಾನ ಮೊದಲಾರ್ಧದಲ್ಲೇ ನಿರಾಶಾದಾಯಕವಾಗಿದೆ. ಏಕೆಂದರೆ ಆಡಿರುವ 8 ಪಂದ್ಯಗಳಲ್ಲಿ 4 ರಲ್ಲಿ ಮಾತ್ರ ಜಯ ಸಾಧಿಸಿದ್ದು, ಇದೀಗ ದ್ವಿತಿಯಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಆರ್ಸಿಬಿ ಟಾಪ್-4 ನಲ್ಲಿ ಕಾಣಿಸಿಕೊಳ್ಳುವ ಇರಾದೆಯಲ್ಲಿದೆ.

ಆರ್ಸಿಬಿ ತನ್ನ ಮುಂದಿನ ಪಂದ್ಯವನ್ನು ಮೇ 1 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದ್ದು, ಈ ಪಂದವು ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆಯಲಿದೆ.



















