SAFF Championship: 8ನೇ ಬಾರಿ ಸ್ಯಾಫ್ ಪ್ರಶಸ್ತಿ ಗೆದ್ದ ಭಾರತ: ಮೆಸ್ಸಿ ದಾಖಲೆ ಸರಿಗಟ್ಟಿದ ಛೇಟ್ರಿ

Sunil Chhetri: ಸ್ಯಾಫ್ ಕಪ್ ಚಾಂಪಿಯನ್​ಶಿಪ್​ನಲ್ಲಿ 12 ಬಾರಿ ಫೈನಲ್ ತಲುಪಿದ್ದ ಭಾರತೀಯ ತಂಡ, ಈ ಬಾರಿಯೂ ಸೇರಿದಂತೆ ಎಂಟು ಬಾರಿ ಟೈಟಲ್ ತನ್ನದಾಗಿಸಿಕೊಂಡಿದೆ.

SAFF Championship: 8ನೇ ಬಾರಿ ಸ್ಯಾಫ್ ಪ್ರಶಸ್ತಿ ಗೆದ್ದ ಭಾರತ: ಮೆಸ್ಸಿ ದಾಖಲೆ ಸರಿಗಟ್ಟಿದ ಛೇಟ್ರಿ
India SAFF Championship title

ಭಾರತ ಫುಟ್‌ಬಾಲ್ ತಂಡ 8ನೇ ಬಾರಿಗೆ ದಕ್ಷಿಣ ಏಷ್ಯಾ ಫುಟ್‌ಬಾಲ್ ಫೆಡರೇಷನ್ (SAFF Championship) ಟ್ರೋಫಿ ಗೆದ್ದ ಸಾಧನೆ ಮಾಡಿದೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿದ ಭಾರತದ ಫುಟ್ಬಾಲ್ ತಂಡ (Indian Football Team) ಸ್ಯಾಫ್ ಚಾಂಪಿಯನ್ ಶಿಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಮಳೆಯ ನಡುವೆಯೂ ಆರಂಭಗೊಂಡ ಹಣಾಹಣಿಯಲ್ಲಿ ಉಭಯ ತಂಡಗಳು ಆರಂಭಿಕ ನಿಮಿಷಗಳಲ್ಲಿ ಸಮಬಲದ ಹೋರಾಟ ನಡೆಸಿದವು. ಪಂದ್ಯ 21ನೇ ನಿಮಿಷದಲ್ಲಿ ನೇಪಾಳ ತಂಡಕ್ಕೆ (India vs Nepal) ಗೋಲುಗಳಿಸುವ ಅವಕಾಶ ಲಭಿಸಿದರೂ ಸೂಕ್ತವಾಗಿ ಬಳಸಿಕೊಳ್ಳಲು ವಿಲವಾಯಿತು. ಮೊದಲಾರ್ಧದ ಅಂತ್ಯಕ್ಕೆ ಉಭಯ ತಂಡಗಳು ಗೋಲುರಹಿತ ಸಮಬಲ ಸಾಧಿಸಿದವು.

ದ್ವಿತೀಯಾರ್ಧದ ಆರಂಭಗೊಂಡ ಕೆಲ ಹೊತ್ತಿನಲ್ಲೇ ನಾಯಕ ಸುನಿಲ್ ಛೇಟ್ರಿ 49ನೇ ನಿಮಿಷದಲ್ಲಿ ಭಾರತದ ಖಾತೆ ತೆರೆದರು. ಸುರೇಶ್ ಸಿಂಗ್ 50ನೇ ನಿಮಿಷದಲ್ಲಿ, ಸಹಲ್ ಅಬ್ದುಲ್ ಸಮದ್ 90ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಪಂದ್ಯದಲ್ಲಿ ನೇಪಾಳ ಕನಿಷ್ಠ ಒಂದು ಗೋಲೂ ದಾಖಲಿಸಲು ವಿಫಲವಾಯಿತು.

 

ಸ್ಯಾಫ್ ಕಪ್ ಚಾಂಪಿಯನ್​ಶಿಪ್​ನಲ್ಲಿ 12 ಬಾರಿ ಫೈನಲ್ ತಲುಪಿದ್ದ ಭಾರತೀಯ ತಂಡ, ಈ ಬಾರಿಯೂ ಸೇರಿದಂತೆ ಎಂಟು ಬಾರಿ ಟೈಟಲ್ ತನ್ನದಾಗಿಸಿಕೊಂಡಿದೆ. ಐದು ಬಾರಿ ರನ್ನರ್ ಅಪ್ ಆಗಿದ್ದು, ಇದಕ್ಕೂ 2018ರಲ್ಲಿ ಮಾಲ್ಡೀವ್ ವಿರುದ್ಧ ಫೈನಲ್​ನಲ್ಲಿ ಸೋಲು ಕಂಡಿತ್ತು. ಭಾರತವು ಈ ಹಿಂದೆ 1993, 1997, 1999, 2005, 2009, 2011, 2015ರಲ್ಲಿ ಸ್ಯಾಫ್ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಜಯಿಸಿತ್ತು.

ಇನ್ನು ಖ್ಯಾತ ಫುಟ್ಬಾಲ್ ಆಟಗಾರ, ಅರ್ಜೆಂಟೀನಾದ ಲಿಯೋನೆಲ್​ ಮೆಸ್ಸಿ ಅಂತರಾರಾಷ್ಟ್ರೀಯ ಪಂದ್ಯಗಳಲ್ಲಿ 80ನೇ ಗಳಿಸಿದ್ದು, ನೇಪಾಳ ವಿರುದ್ಧದ ಪಂದ್ಯದಲ್ಲಿ ಒಂದು ಗೋಲು ಗಳಿಸುವ ಮೂಲಕ ಸುನಿಲ್ ಛೇಟ್ರಿ ತಮ್ಮ ಅಂತರರಾಷ್ಟ್ರೀಯ ಗೋಲುಗಳ ಸಂಖ್ಯೆಯನ್ನು 80ಕ್ಕೆ ಏರಿಸಿಕೊಂಡಿದ್ದಾರೆ. ಈ ಮೂಲಕ ಮೆಸ್ಸಿ ಸಾಧನೆ ಸರಿಗಟ್ಟಿದರು.

ಈಗ ಅಂತರರಾಷ್ಟೀಯ ಫುಟ್​ಬಾಲ್​ನಲ್ಲಿ ಸಕ್ರಿಯರಾಗಿರುವ ಆಟಗಾರರಲ್ಲಿ ಎರಡನೇ ಅತಿ ಹೆಚ್ಚು ಗೋಲು ಬಾರಿಸಿದ ದಾಖಲೆ ಲಿಯೋನೆಲ್ ಮೆಸ್ಸಿ ಹೆಸರಲ್ಲಿದ್ದು, ಛೇಟ್ರಿ ಕೂಡಾ ಆ ದಾಖಲೆಯಲ್ಲಿ ಪಾಲುದಾರರಾಗಿದ್ದಾರೆ.

T20 World Cup 2021: ಟಿ20 ವಿಶ್ವಕಪ್ ಕಾವು ಶುರು: ಅರ್ಹಾತಾ ಸುತ್ತಿನಲ್ಲಿಂದು ಎರಡು ಪಂದ್ಯ: ಸೂಪರ್ 12ಗಾಗಿ ಹೋರಾಟ

(Sunil Chhetri equalled the iconic Lionel Messi record India blanked Nepal 3-0 SAFF Championship title)

Click on your DTH Provider to Add TV9 Kannada