Avani Lekhara: ಚಿನ್ನದ ಹುಡುಗಿ ಅವನಿಗೆ 3 ಕೋಟಿ ಬಹುಮಾನ ಘೋಷಣೆ; ಮಹೀಂದ್ರಾದಿಂದ ವಿಶೇಷ ಉಡುಗೊರೆ

| Updated By: Vinay Bhat

Updated on: Aug 31, 2021 | 7:09 AM

Tokyo Paralympics 2020: ಭಾರತೀಯ ಶೂಟರ್ ಅವನಿ ಲೇಖರಾ ಸೋಮವಾರ ನಡೆದ ಮಹಿಳಾ ಆರ್2 - 10 ಮೀ. ಏರ್ ರೈಫಲ್ ಸ್ಟ್ಯಾಂಡ್ ಎಸ್ ಎಚ್ 1 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು.

Avani Lekhara: ಚಿನ್ನದ ಹುಡುಗಿ ಅವನಿಗೆ 3 ಕೋಟಿ ಬಹುಮಾನ ಘೋಷಣೆ; ಮಹೀಂದ್ರಾದಿಂದ ವಿಶೇಷ ಉಡುಗೊರೆ
Avani Lekhara
Follow us on

ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ (Tokyo Paralympics) ಚಿನ್ನದ ಪದಕ ಗೆಲ್ಲುವ ಮೂಲಕ ಅವನಿ ಲೇಖರಾ (Avani Lekhara) ಹೊಸ ದಾಖಲೆ ಬರೆದಿದ್ದಾರೆ. ಏರ್​ ರೈಫಲ್​ ಸ್ಟ್ಯಾಂಡಿಂಗ್​ ಎಸ್​ಎಚ್​1 (Air Rifle Standing SH1) ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿರುವ ಇವರ ಸಾಧನೆಗೆ ದೇಶಾದ್ಯಂತ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಇದರ ನಡುವೆ ಮಹೀಂದ್ರಾ ಗ್ರೂಪ್​ ಚೇರ್​ಮನ್​​​ ಆನಂದ್​ ಮಹೀಂದ್ರಾ ಅವನಿ ಲೇಖಾರಾಗೆ ಮೊದಲ ಕಸ್ಟಮೈಸಡ್​​ ಎಸ್​ಯುವಿ ನೀಡೋದಾಗಿ ಟ್ವಿಟರ್​ನಲ್ಲಿ ಘೋಷಣೆ ಮಾಡಿದ್ದಾರೆ.

ಈ ರೀತಿಯ ವಾಹನವನ್ನು ನಿರ್ಮಾಣ ಮಾಡುವ ಪರಿಕಲ್ಪನೆಯನ್ನು ಭಾರತದ ಪ್ಯಾರಾಲಿಂಪಿಕ್​ ಕಮಿಟಿಯ ಅಧ್ಯಕ್ಷೆ ದೀಪಾ ಮಲಿಕ್​ ನೀಡಿದ್ದಾರೆ ಎಂದು ಹೇಳಿರುವ ಆನಂದ್, ಈ ವಿಶೇಷ ಕಾರು ದಿವ್ಯಾಂಗರು ಕೂಡ ಅನಾಯಾಸವಾಗಿ ರಸ್ತೆಯಲ್ಲಿ ಡ್ರೈವ್​ ಮಾಡಿಕೊಂಡು ಹೋಗುವ ರೀತಿಯಲ್ಲಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.

 

ಇನ್ನೂ ಟೋಕಿಯೋ ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭರ್ಜರಿ ಬಹುಮಾನ ಘೋಷಿಸಿದ್ದಾರೆ. ಚಿನ್ನದ ಪದಕ ವಿಜೇತರಿಗೆ 3 ಕೋಟಿ ರೂ., ಬೆಳ್ಳಿ ಪದಕ ವಿಜೇತರಿಗೆ 2 ಕೋಟಿ ರೂ. ಹಾಗೂ ಕಂಚು ಪದಕ ವಿಜೇತರಿಗೆ 1 ಕೋಟಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಚಿನ್ನದ ಪದಕ ಗೆದ್ದಿದ್ದಕ್ಕೆ ಅವನಿ ಲೇಖರಾಗೆ 3 ಕೋಟಿ ಬಹುಮಾನ, ಬೆಳ್ಳಿ ಗೆದ್ದಿರುವ ದೇವೇಂದ್ರ ಜಜಾರಿಯಾ ಅವರಿಗೆ 2 ಕೋಟಿ ಹಾಗೂ ಕಂಚಿನ ಪದಕ ಗೆದ್ದಿರುವ ಸುಂದರ್ ಸಿಂಗ್ ಅವರಿಗೆ 1 ಕೋಟಿ ಬಹುಮಾನ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ.

ಭಾರತೀಯ ಶೂಟರ್ ಅವನಿ ಲೇಖರಾ ಸೋಮವಾರ ನಡೆದ ಮಹಿಳಾ ಆರ್2 – 10 ಮೀ. ಏರ್ ರೈಫಲ್ ಸ್ಟ್ಯಾಂಡ್ ಎಸ್ ಎಚ್ 1 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು. 19 ವರ್ಷದ ಅವನಿ, ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

IND vs ENG: 4ನೇ ಟೆಸ್ಟ್​ನಲ್ಲಿ ಸೂರ್ಯಕುಮಾರ್ ಯಾದವ್ ಆಡುವುದಿಲ್ಲ! ಅಶ್ವಿನ್​ಗೆ ಅವಕಾಶ ಖಚಿತ; ಆಕಾಶವಾಣಿ

Tokyo Paralympics: 8 ನೇ ವಯಸ್ಸಿಗೆ ಪಾರ್ಶ್ವವಾಯು.. ಕೋಚ್ ಇಲ್ಲದೆ ಪ್ಯಾರಾಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದ ಯೋಗೀಶ್ ಜೀವನಗಾಥೆಯಿದು

(Tokyo Paralympics 2020 Anand Mahindras Gift For Avani Lekhara As She Wins Historic Gold At Tokyo Paralympics)