Tokyo Paralympics 2020: ಕ್ವಾರ್ಟರ್ ಫೈನಲ್ನಲ್ಲಿ ಭಾವಿನಾ-ಸೋನಲ್ ಜೋಡಿಗೆ ಸೋಲು
ಮೊದಲ ಸೆಟ್ನಲ್ಲಿ ಚೀನಾ 2-11ರ ಅಂಕದಿಂದ ಗೆದ್ದರೆ, ಎರಡನೇ ಸೆಟ್ನಲ್ಲಿ 4-11 ಮತ್ತು ಮೂರನೇ ಸೆಟ್ನಲ್ಲಿ 2-11 ಅಂಕದಿಂದ ಗೆದ್ದು ಕ್ಲೀನ್ಸ್ವೀಪ್ ಮಾಡಿಕೊಂಡಿತು.
ಟೋಕಿಯೊ ಪ್ಯಾರಾಲಿಂಪಿಕ್ಸ್ನ (Tokyo Paralympics 2020) ಮಹಿಳೆಯರ ಡಬಲ್ ಕ್ಲಾಸ್ 4-5 ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಜೋಡಿ ಭಾವಿನಾ ಪಟೇಲ್ (Bhavina Patel) ಹಾಗೂ ಸೋನಲ್ ಪಟೇಲ್ (Sonal Ptel) ಸೋಲು ಕಂಡಿದ್ದಾರೆ. ಚೀನಾದ ಜು ಯಿಂಗ್ ಮತ್ತು ಜ್ಯಾಂಗ್ ಬಿಯಾನ್ ಜೋಡಿಯಾ ಆಕ್ರಮಣ ಆಟಕ್ಕೆ ತಲೆಬಾಗಿದ ಭಾವಿನಾ-ಸೋನಲ್ 0-3 ಅಂತರದಿಂದ ಸೋಲು ಕಂಡರು.
ಮೊದಲ ಸೆಟ್ನಲ್ಲಿ ಚೀನಾ 2-11ರ ಅಂಕದಿಂದ ಗೆದ್ದರೆ, ಎರಡನೇ ಸೆಟ್ನಲ್ಲಿ 4-11 ಮತ್ತು ಮೂರನೇ ಸೆಟ್ನಲ್ಲಿ 2-11 ಅಂಕದಿಂದ ಗೆದ್ದು ಕ್ಲೀನ್ಸ್ವೀಪ್ ಮಾಡಿಕೊಂಡಿತು.
ಭಾರತಕ್ಕೆ ಚೊಚ್ಚಲ ಪದಕ ದಕ್ಕಿದ್ದು ಟೇಬಲ್ ಟೆನಿಸ್ನಲ್ಲಿ. ಭಾರತದ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಅವರು ಬೆಳ್ಳೆ ಪದಕಕ್ಕೆ ಕೊರಳೊಡ್ಡಿದರು.
Bhavina Patel and Sonal Patel go down 2-11, 4-11, 2-11 to Chinese pair Zhou Ying and Zhang Bian, in the #TableTennis Women’s Doubles Class 4-5 Quarterfinal.
— Doordarshan Sports (@ddsportschannel) August 31, 2021
ಟೇಬಲ್ ಟೆನಿಸ್ನ ಫೈನಲ್ ಪಂದ್ಯದಲ್ಲಿ ಚೀನಾದ ಝೋ ಯಿಂಗ್ ವಿರುದ್ಧ 0-3 ಅಂತರದಿಂದ ಸೋಲು ಕಾಣುವ ಮೂಲಕ ಭಾವಿನಾ ಬೆಳ್ಳಿಗೆ ತೃಪ್ತಪಟ್ಟರು. ಆದರೆ, ಪ್ಯಾರಾಲಿಂಪಿಕ್ಸ್ನ ಟೇಬಲ್ ಟೆನಿಸ್ನಲ್ಲಿ ಭಾರತ ಈವರೆಗೆ ಫೈನಲ್ಗೆ ಲಗ್ಗೆಯಿಟ್ಟಿದ್ದೇ ಇಲ್ಲ. ಇದೇ ಮೊದಲ ಬಾರಿಗೆ ಫೈನಲ್ಗೆ ತಲುಪಿ ಪದಕ ಗೆದ್ದಿರುವುದು ಐತಿಹಾಸಿಕ ಸಾಧನೆಯಾಗಿದೆ.
ಟೋಕಿಯೊ ಪ್ಯಾರಾಲಿಂಪಿಕ್ಸ್ 2020 ರಲ್ಲಿ ಭಾರತ ಉತ್ತಮ ಪ್ರದರ್ಶನ ತೋರುತ್ತಿದೆ. ಈವರೆಗೆ ಒಟ್ಟು ಎರಡು ಚಿನ್ನ ಗೆದ್ದಿದ್ದು, ನಾಲ್ಕು ಬೆಳ್ಳಿ ಮತ್ತು ಒಂದು ಕಂಚು ತಮ್ಮದಾಗಿಸಿದೆ. ಈ ಮೂಲಕ ಒಟ್ಟು ಏಳು ಪದಕವನ್ನು ಮುಡಿಗೇರಿಸಿಕೊಂಡಿದೆ.
Tokyo Paralympics: ಇತಿಹಾಸ ನಿರ್ಮಿಸಿದ ಭಾವಿನಾ ಪತಿ ಭಾರತದ ವಿಶ್ವಕಪ್ ತಂಡದ ಸದಸ್ಯ ಎಂಬುದು ನಿಮಗೆ ಗೊತ್ತೇ?
Avani Lekhara: ಚಿನ್ನದ ಹುಡುಗಿ ಅವನಿಗೆ 3 ಕೋಟಿ ಬಹುಮಾನ ಘೋಷಣೆ; ಮಹೀಂದ್ರಾದಿಂದ ವಿಶೇಷ ಉಡುಗೊರೆ
(Tokyo Paralympics 2020 China clinches the Womens Class 4-5 Quarterfinal match against India with a 3-0 win)