ಟೋಕಿಯೊ ಪ್ಯಾರಾಲಿಂಪಿಕ್ಸ್ -2020ಗೆ (Tokyo Paralympics 2020) ವೇದಿಕೆ ಸಿದ್ದವಾಗಿದೆ. ಆಗಸ್ಟ್ 24 ರಿಂದ ಶುರುವಾಗಲಿರುವ ಈ ಕ್ರೀಡಾಕೂಟಕ್ಕೆ ಭಾರತದಿಂದ ತೆರಳಿದ ಎಲ್ಲಾ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ವರ್ಚುವಲ್ ವಿಡಿಯೋ ಸಂವಾದದ ಮೂಲಕ ಬೀಳ್ಕೊಡುಗೆ ನೀಡಿದರು. ಈ ಕ್ರೀಡಾಕೂಟದಲ್ಲಿ ಭಾರತದ 54 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಹೀಗೆ ದೇಶಕ್ಕಾಗಿ ಸ್ಪರ್ಧಿಸುವ ಪ್ರತಿಯೊಬ್ಬ ಸ್ಪರ್ಧಿಗಳದ್ದು ಒಂದೊಂದು ಕಥೆ. ಅದರಲ್ಲೂ ಈಗಾಗಲೇ ಭಾರತಕ್ಕಾಗಿ ಎರಡು ಚಿನ್ನದ ಪದಕ ಗೆದ್ದು ಕೊಟ್ಟಿರುವ ದೇವೇಂದ್ರ ಜಜಾರಿಯಾ (devendra jhajharia) ಅವರದ್ದು ಇನ್ನೊಂದು ಕಥೆ. ಹೌದು, ಈ ಬಾರಿ ಕೂಡ ದೇವೇಂದ್ರ ಜಜಾರಿಯಾ ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
2004 ರಲ್ಲಿ ಅಥೆನ್ಸ್ ಪ್ಯಾರಾಲಿಂಪಿಕ್ಸ್ನಲ್ಲಿ ಎಫ್-46 ಜಾವೆಲಿನ್ ಥ್ರೋ ವಿಭಾಗದಲ್ಲಿ ದೇವೇಂದ್ರ ಜಜಾರಿಯಾ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿದ್ದರು. ಆದರೆ ಆ ಬಳಿಕ 2008 ಮತ್ತು 2012 ರ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ಇರಲಿಲ್ಲ. ಹೀಗಾಗಿ ಕ್ರೀಡೆಯಲ್ಲಿ ಭವಿಷ್ಯವಿಲ್ಲ ಎಂದು ನಿರ್ಧರಿಸಿ ನಿವೃತ್ತಿಗೆ ಮುಂದಾಗಿದ್ದರು. ಇದೇ ವೇಳೆ ಜಜಾರಿಯಾ ಮನವೊಲಿಸುವಲ್ಲಿ ಪತ್ನಿ ಯಶಸ್ವಿಯಾದರು. ಮುಂದಿನ ಪ್ಯಾರಾಲಿಂಪಿಕ್ಸ್ವರೆಗೂ ಅಭ್ಯಾಸ ನಡೆಸಿ ಆ ಬಳಿಕ ಅವಕಾಶ ಇಲ್ಲದಿದ್ದರೆ ನಿವೃತ್ತಿ ನೀಡಿ ಎಂದಿದ್ದರು.
ದೇವೇಂದ್ರ ಜಜಾರಿಯಾ ಅವರ ಪರಿಶ್ರಮಕ್ಕೆ ಫಲ ಎಂಬಂತೆ 12 ವರ್ಷಗಳ ಬಳಿಕ 2016 ರ ರಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಮತ್ತೆ ಜಾವೆಲಿನ್ ಥ್ರೋಗೆ ಅವಕಾಶ ನೀಡಲಾಯಿತು. ಈ ಅವಕಾಶವನ್ನು ಬಳಸಿಕೊಂಡ ಭಾರತೀಯ ಅಲ್ಲೂ ಕೂಡ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಇದೀಗ ಹ್ಯಾಟ್ರಿಕ್ ಪದಕ ಗೆಲ್ಲುವ ವಿಶ್ವಾಸದೊಂದಿಗೆ ಟೋಕಿಯೊದತ್ತ ಪ್ರಯಾಣ ಬೆಳೆಸಿದ್ದಾರೆ.
ದೇವೇಂದ್ರ ಜಜಾರಿಯಾ ಅವರು ಬಾಲ್ಯದಲ್ಲಿ ಕೈ ಹೊಂದಿದ್ದರು. ಒಂಬತ್ತು ವರ್ಷವಿದ್ದಾಗ ಅವರ ವಿದ್ಯುತ್ ಅವಘಡದಿಂದ ತಮ್ಮ ಕೈಯನ್ನು ಕಳೆದುಕೊಂಡಿದ್ದರು. ಈ ಸಮಯದಲ್ಲಿ ಮನೆಯಿಂದ ಹೊರಬರುವುದು ಕೂಡ ದೊಡ್ಡ ಸವಾಲಾಗಿತ್ತು. ನಾನು ನನ್ನ ಶಾಲೆಯಲ್ಲಿ ಜಾವೆಲಿನ್ ಎಸೆಯಲು ಆರಂಭಿಸಿದಾಗ, ನಾನು ಜನರ ಹೀಯಾಳಿಸಿದ್ದರು. ನಾನು ಹೇಗೆ ಜಾವೆಲಿನ್ ಅನ್ನು ಎಸೆಯುತ್ತೇನೆ ಎಂದು ಜನರು ಗೇಲಿ ಮಾಡುತ್ತಿದ್ದರು. ನಿನಗೆ ಕ್ರೀಡೆಯಲ್ಲಿ ಸ್ಥಾನವಿಲ್ಲ. ಚೆನ್ನಾಗಿ ಓದಿ ಉತ್ತಮ ಉದ್ಯೋಗ ಪಡೆಯಲು ಪ್ರಯತ್ನಿಸು ಎನ್ನುತ್ತಿದ್ದರು. ಈ ಎಲ್ಲಾ ಅವಹೇಳನವನ್ನು ಸಹಿಸಿಕೊಂಡು ನಾನು ಸತತ ಪರಿಶ್ರಮಪಟ್ಟೆ. ಕಠಿಣ ಅಭ್ಯಾಸದ ಬಳಿಕ ಇದೀಗ ಪ್ಯಾರಾಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಜತೆಗಿನ ಸಂವಾದದಲ್ಲಿ ದೇವೇಂದ್ರ ಜಜಾರಿಯಾ ತಮ್ಮ ನೋವಿನ ಕಥೆಯನ್ನು ಬಿಚ್ಚಿದ್ದಾರೆ.
ಇದನ್ನೂ ಓದಿ: T20 World Cup: ಕೊಹ್ಲಿ ಹುಟ್ಟುಹಬ್ಬದಂದು ಟಿ20 ವಿಶ್ವಕಪ್‌ನಲ್ಲಿ ಭಾರತದ ಎದುರಾಳಿ ಯಾರು?
ಇದನ್ನೂ ಓದಿ: WTC Points Table: 12 ಅಂಕಗಳಿಸಿದ ತಂಡಕ್ಕೆ ಅಗ್ರಸ್ಥಾನ: 14 ಅಂಕ ಪಡೆದರೂ ಟೀಮ್ ಇಂಡಿಯಾಗಿಲ್ಲ ಪ್ರಥಮ ಸ್ಥಾನ
ಇದನ್ನೂ ಓದಿ: T20 World Cup 2021: ಟಿ20 ವಿಶ್ವಕಪ್ಗೆ ಅಫ್ಘಾನಿಸ್ತಾನ್ ತಂಡ ಅನುಮಾನ
(tokyo paralympics 2020: devendra jhajharia Shared his struggle with pm narendra modi)