Tokyo Paralympics: ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಗ್ರೆಟ್ ಬ್ರಿಟನ್ ದಂಪತಿ

ನೈಲ್ ಮತ್ತು ಪೈಲಟ್ ಮ್ಯಾಟ್ ಜೋಡಿ ಪುರುಷರ ಸೈಕ್ಲಿಂಗ್​ನ B 1000m ಅನ್ನು 58.038 ಸೆಕೆಂಡ್​ನಲ್ಲಿ ಮುಟ್ಟು ದಾಖಲೆ ಬರೆದರೆ, ಲೋರಾ ಮತ್ತು ಹಾಲ್ ಜೋಡಿ ಐರ್ಲೆಂಡ್ ಜೋಡಿಯನ್ನು B 3000m ನಲ್ಲಿ 3:19.560 ಸಮಯದಲ್ಲಿ ಮುಟ್ಟಿ ನೂತನ ಸಾಧನೆ ಮಾಡಿದರು.

Tokyo Paralympics: ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಗ್ರೆಟ್ ಬ್ರಿಟನ್ ದಂಪತಿ
Neil and Lora Fachie
Follow us
TV9 Web
| Updated By: Vinay Bhat

Updated on: Aug 28, 2021 | 12:52 PM

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ (Tokyo Paralympics) ಚೀನಾದ ಹೋ ಕ್ಸಿಯಾ ಮಹಿಳೆಯರ 100 ಮೀ. ಓಟದಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನಕ್ಕೆ ಮುತ್ತಿಟ್ಟ ಬೆನ್ನಲ್ಲೆ ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ಸೈಕ್ಲಿಂಗ್​ನಲ್ಲಿ ಗ್ರೇಟ್ ಬ್ರಿಟನ್​ನ ನೈಲ್ ಮತ್ತು ಲೋರಾ ಫಾಚೀ ದಂಪತಿ ವಿಶ್ವ ದಾಖಲೆ ಬರೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ನೈಲ್ ಮತ್ತು ಪೈಲಟ್ ಮ್ಯಾಟ್ ಜೋಡಿ ಪುರುಷರ ಸೈಕ್ಲಿಂಗ್​ನ B 1000m ಅನ್ನು 58.038 ಸೆಕೆಂಡ್​ನಲ್ಲಿ ಮುಟ್ಟು ದಾಖಲೆ ಬರೆದರೆ, ಲೋರಾ ಮತ್ತು ಹಾಲ್ ಜೋಡಿ ಐರ್ಲೆಂಡ್ ಜೋಡಿಯನ್ನು B 3000m ನಲ್ಲಿ 3:19.560 ಸಮಯದಲ್ಲಿ ಮುಟ್ಟಿ ನೂತನ ಸಾಧನೆ ಮಾಡಿದರು.

ಚೀನಾದ ಹೋ ಕ್ಸಿಯಾ ಮಹಿಳೆಯರ 100 ಮೀ. ಓಟದಲ್ಲಿ 13 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರು. ಆಸ್ಟ್ರೇಲಿಯಾದ ಇಸಿಸ್ ಹೋಲ್ಟ್ ಬೆಳ್ಳಿ (13.13 ಸೆ.) ಮತ್ತು ಗ್ರೇಟ್ ಬ್ರಿಟನ್ನ ಮರಿಯಾ ಲಿಲಿ (14.8 ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.

ಈ ಬಾರಿಯ ಪ್ಯಾರಾಲಿಂಪಿಕ್ಸ್​ನಲ್ಲಿ ಮೊದಲ ಚಿನ್ನ ಗೆದ್ದ ಶ್ರೇಯವನ್ನು ಬ್ರೆಜಿಲ್ ತನ್ನದಾಗಿಸಿಕೊಂಡಿತು. ಬ್ರೆಜಿಲ್​ನ ಯೆಲ್ಸಿನ್ ಜಾಕ್ಸ್ ಟೋಕಿಯೊ ಕೂಟದ ಟ್ರ್ಯಾಕ್ ಮತ್ತು ಫೀಲ್ಡ್​ನಲ್ಲಿ ಚಿನ್ನ ಗೆದ್ದ ಮೊದಲ ಅಥ್ಲೀಟ್ ಎನಿಸಿಕೊಂಡರು.

ಇತ್ತ ಭಾರತಕ್ಕೂ ಚಿನ್ನ ಗೆಲ್ಲುವ ಉತ್ತಮ ಅವಕಾಶ ಒದಗಿಬಂದಿದೆ. ಮಹಿಳಾ ಟೇಬಲ್ ಟೆನಿಸ್​ನಲ್ಲಿ ಭಾರತದ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಐತಿಹಾಸಿಕ ದಾಖಲೆ ಮಾಡಿದ್ದಾರೆ. ಕ್ಲಾಸ್ -4 ರ ಕ್ವಾರ್ಟರ್ ಫೈನಲ್​ನಲ್ಲಿ ಗೆದ್ದು ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದ್ದ ಭಾವಿನಾ ಸೆಮೀಸ್​ನಲ್ಲಿ ರೋಚಕ ಗೆಲುವು ದಾಖಲಿಸಿ ಫೈನಲ್​ಗೆ ಪ್ರವೇಶ ಪಡೆದಿದ್ದಾರೆ.

ಇಂದು ನಡೆದ ಪಂದ್ಯದಲ್ಲಿ 2016ರ ರಿಯೋ ಒಲಿಂಪಿಕ್ ಪದಕ ವಿಜೇತೆ ಚೀನಾದ ಮಿಯಾ ಝಂಗ್ ಅವರನ್ನು ಭಾವಿನಾ 3-2 ಅಂಕಗಳ ಅಂತರದಿಂದ ಸೋಲಿಸಿ ಚಿನ್ನದ ಪದಕದ ಭರವಸೆ ಮೂಡಿಸಿದ್ದಾರೆ. ಮೊದಲ ಸೆಟ್​ನಲ್ಲಿ ಭಾವಿನಾ 7-11ರ ಹಿನ್ನಡೆ ಅನುಭವಿಸಿದರೆ, ನಂತರ ಭರ್ಜರಿ ಕಮ್​ಬ್ಯಾಕ್ ಮಾಡಿದರು. ಎರಡನೇ ಸೆಟ್​ನಲ್ಲಿ 11-7, 11-4, 9-11 ಮತ್ತು ಅಂತಿಮ ಸೆಟ್​ನಲ್ಲಿ 11-8 ಅಂತರದಲ್ಲಿ ಗೆದ್ದು ಫೈನಲ್​ಗೆ ಪ್ರವೇಶ ಪಡೆದಿದ್ದಾರೆ.

ಈ ಮೂಲಕ ಭಾವಿನಾ ಐತಿಹಾಸಿಕ ದಾಖಲೆ ಮಾಡಿದ್ದು, ಪ್ಯಾರಾಲಿಂಪಿಕ್ಸ್​ನಲ್ಲಿ ಫೈನಲ್​ಗೆ ಲಗ್ಗೆಯಿಟ್ಟ ಮೊಟ್ಟ ಮೊದಲ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಸಾಧನೆ ಮಾಡಿದ್ದಾರೆ.

Tokyo Paralympics: ಟೇಬಲ್ ಟೆನಿಸ್​ನಲ್ಲಿ ಐತಿಹಾಸಿಕ ಸಾಧನೆ: ಫೈನಲ್​ಗೆ ಲಗ್ಗೆಯಿಟ್ಟ ಭಾರತದ ಭಾವಿನಾ

Neeraj Chopra Stadium: ಪುಣೆಯ ಆರ್ಮಿ ಕ್ರೀಡಾಂಗಣಕ್ಕೆ ಚಿನ್ನದ ಹುಡುಗ ನೀರಜ್ ಚೋಪ್ರಾ ಹೆಸರು

(Tokyo Paralympics Golden para-cyclist couple Neil and Lora Fachie claim Paralympic wins in Tokyo)