2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಮತ್ತೊಂದು ನಿರಾಸೆ ಅನುಭವಿಸಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಈ ಬಾರಿ ಪದಕದಿಂದ ವಂಚಿತರಾಗಿದ್ದಾರೆ. ಆಗಸ್ಟ್ 7ರ ಬುಧವಾರ ರಾತ್ರಿ ನಡೆದ 49 ಕೆಜಿ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಒಟ್ಟು 199 ಕೆಜಿ ಭಾರ ಎತ್ತುವ ಮೂಲಕ ನಾಲ್ಕನೇ ಸ್ಥಾನ ಪಡೆದು ಪದಕದ ಸ್ಪರ್ಧೆಯಿಂದ ಹೊರಬಿದ್ದರು. ಇದಕ್ಕಿಂತ ದೊಡ್ಡ ನಿರಾಶೆಯೆಂದರೆ ಮೀರಾಬಾಯಿ ಚಾನು ಕೇವಲ ಒಂದು ಕೆ.ಜಿ ಅಂತರದಲ್ಲಿ ಮೂರನೇ ಸ್ಥಾನವನ್ನು ಕಳೆದುಕೊಂಡರು ಎಂಬುದು. ಈ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದ ಥಾಯ್ಲೆಂಡ್‌ನ ಲಿಫ್ಟರ್ ಒಟ್ಟು 200 ಕೆಜಿ ತೂಕವನ್ನು ಎತ್ತಿದರೆ, ಚೀನಾದ ಜಿಹುಯಿ ಹೌ 206 ಕೆಜಿ ತೂಕ ಎತ್ತಿ ಮತ್ತೊಮ್ಮೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಉಳಿದಂತೆ ರೊಮೇನಿಯಾದ ಮಿಹೇಲಾ ವೆಲೆಂಟಿನಾ 205 ಕೆಜಿ ತೂಕ ಎತ್ತಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಇನ್ನು ಪದಕ ಕೈತಪ್ಪಿದ್ದಕ್ಕೆ ವಿಷಾದ ವ್ಯಕ್ತಪಡಿಸಿರುವ ಮೀರಾಬಾಯಿ ಚಾನು, ಮುಂದಿನ ಬಾರಿ ಖಂಡಿತವಾಗಿಯೂ ಪದಕ ಗೆಲ್ಲುವ ಭರವಸೆ ನೀಡಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಪದಕದ ರೇಸ್ನಿಂದ ಹೊರಬಿದ್ದ ಬಳಿಕ ಮಾತನಾಡಿರುವ ಮೀರಾಬಾಯಿ ಚಾನು, ‘ವೇಟ್ ಲಿಫ್ಟಿಂಗ್ ವೇಳೆ ಮುಟ್ಟಿನ ನೋವಿನಿಂದ ಬಳಲುತ್ತಿದ್ದೆ. ಇದು ನನ್ನ ಮೂರನೇ ದಿನವಾಗಿತ್ತು. ಹೀಗಾಗಿ ಇದು ನನ್ನ ಆಟದ ಮೇಲೆ ಪರಿಣಾಮ ಬೀರಿತು ಎಂದಿದ್ದಾರೆ. ಮುಂದವರೆದು ಮಾತನಾಡಿದ ಅವರು, ಆಟಗಾರ್ತಿಯರಿಗೆ ಏನಾದರೊಂದು ಸಮಸ್ಯೆ ಕಾಡುತ್ತಲೇ ಇರುತ್ತದೆ. ಕೆಲವೊಮ್ಮೆ ಗಾಯಗಳಿಂದ ಸಮಸ್ಯೆ ಎದುರಾದರೆ, ಇನ್ನು ಕೆಲವೊಮ್ಮೆ ಮಹಿಳೆಯರ ವೈಯಕ್ತಿಕ ಸಮಸ್ಯೆಗಳು ಕಾರಣವಾಗುತ್ತವೆ. ನಾನು ಮೊದಲ ಬಾರಿಗೆ ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದೆ. ಅಲ್ಲೂ ಪದಕ ನನ್ನ ಕೈಯಿಂದ ಜಾರಿತ್ತು.
#WATCH #ParisOlympics2024 भारतीय वेटलिफ्टर मीराबाई चानू ने कहा, “मैंने देश के लिए पदक जीतने की पूरी कोशिश की लेकिन आज मैं चूक गई…हम सभी कभी जीतते हैं और कभी हारते हैं…अगली बार मैं देश के लिए पदक जीतने के लिए पूरी कोशिश करूंगी…”
(वीडियो सोर्स: भारतीय ओलंपिक संघ (IOA)) pic.twitter.com/ka5ZCBH7iF
— ANI_HindiNews (@AHindinews) August 7, 2024
ಪ್ರತಿಯೊಬ್ಬ ಆಟಗಾರನ ಅದೃಷ್ಟ ಕೆಲವೊಮ್ಮೆ ಒಳ್ಳೆಯದ್ದಾಗಿದ್ದರೆ ಇನ್ನು ಕೆಲವೊಮ್ಮೆ ಕೆಟ್ಟದ್ದಾಗಿರುತ್ತದೆ. ನನ್ನ ವಿಷಯದಲ್ಲೂ ಅದೇ ಸಂಭವಿಸಿದೆ. ರಿಯೊದಲ್ಲಿ ಪದಕ ಗೆಲ್ಲುವಲ್ಲಿ ವಿಫಲಳಾಗಿದ್ದೆ. ಆ ನಂತರ ನಾನು ವಿಶ್ವ ಚಾಂಪಿಯನ್ ಆದೆ. 2020 ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದೆ. ಈ ಬಾರಿಯೂ ನನ್ನ ಕೈಲಾದ ಪ್ರಯತ್ನ ಮಾಡಿದ್ದೇನೆ. ನನ್ನ ಅತ್ಯುತ್ತಮ ಪ್ರದರ್ಶನ ನೀಡಿದ್ದೇನೆ. ದೇಶಕ್ಕಾಗಿ ಪದಕ ಗೆಲ್ಲಬೇಕೆಂಬ ಆಸೆಯಿತ್ತು. ಆದರೆ ಏಷ್ಯನ್ ಗೇಮ್ಸ್‌ನಲ್ಲಿಯೇ ನನಗೆ ದೊಡ್ಡ ಗಾಯವಾಗಿತ್ತು. ಚೇತರಿಸಿಕೊಳ್ಳಲು ನನಗೆ 4 ರಿಂದ 5 ತಿಂಗಳು ಬೇಕಾಯಿತು. ಹೀಗಾಗಿ ಒಲಿಂಪಿಕ್ಸ್‌ಗೆ ತಯಾರಿ ಮಾಡಿಕೊಳ್ಳಲು ನನಗೆ ಬಹಳ ಕಡಿಮೆ ಸಮಯವಿತ್ತು ಎಂದಿದ್ದಾರೆ.
ಇನ್ನು ಪದಕ ಗೆಲ್ಲದಿದ್ದಕ್ಕೆ ಭಾರತೀಯರ ಕ್ಷಮೆಯಾಚಿಸಿರುವ ಮೀರಾಬಾಯಿ ಚಾನು, ‘ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ ಆದರೆ ನನ್ನ ಅದೃಷ್ಟ ಸರಿ ಇರಲಿಲ್ಲ. ನನಗೆ ಪಿರಿಯಡ್ ಸಮಸ್ಯೆ ಇತ್ತು. ಇದು ನನ್ನ ಮೂರನೇ ದಿನ. ಇದರಿಂದ ದೇಹದ ಮೇಲೂ ಸ್ವಲ್ಪ ವ್ಯತ್ಯಾಸವಾಗುತ್ತದೆ. ಪದಕ ಗೆಲ್ಲಲು ಇದು ನನ್ನ ಅತ್ಯುತ್ತಮ ಪ್ರಯತ್ನವಾಗಿತ್ತು. ಆದರೆ ಸೋಲು-ಗೆಲುವು ಅದೃಷ್ಟದ ಭಾಗ. ಮುಂದಿನ ಬಾರಿ ದೇಶಕ್ಕಾಗಿ ಪದಕ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಈ ಬಾರಿ ಪದಕ ನೀಡಲು ಸಾಧ್ಯವಾಗಲಿಲ್ಲ ಹಾಗಾಗಿ ಕ್ಷಮೆಯಾಚಿಸುತ್ತೇನೆ. ನಾನು ಇನ್ನೂ ಹೆಚ್ಚು ಪ್ರಯತ್ನಿಸುತ್ತೇನೆ ಮತ್ತು ಮುಂಬರುವ ಎಲ್ಲಾ ಸ್ಪರ್ಧೆಗಳಲ್ಲಿ ನನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತೇನೆ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:12 pm, Thu, 8 August 24