Vinesh Phogat: ವಿನೇಶ್ ಫೋಗಟ್ ಪದಕ ಭರವಸೆ ಇನ್ನೂ ಜೀವಂತ..! ಮನವಿ ಸ್ವೀಕರಿಸಿದ CAS
Paris Olympics 2024: ಒಲಿಂಪಿಕ್ಸ್ ಸ್ಪರ್ಧೆಯಿಂದ ಅನರ್ಹಗೊಂಡ ಬಳಿಕ ವಿನೇಶ್ ಫೋಗಟ್ ಅವರು ತನಗೆ ಕನಿಷ್ಠ ಬೆಳ್ಳಿ ಪದಕವನ್ನಾದರೂ ನೀಡಬೇಕು ಎಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (CSA) ಮನವಿ ಮಾಡಿದ್ದರು. ಇದೀಗ CSA ವಿನೇಶ್ ಅವರ ಮನವಿಯನ್ನು ಸ್ವೀಕರಿಸಿದ್ದು ವಿಚಾರಣೆ ನಡೆಸಲು ಮುಂದಾಗಿದೆ. ಈ ಪ್ರಕರಣದ ಕುರಿತು ಅಂತಿಮ ನಿರ್ಧಾರ ಇನ್ನಷ್ಟೇ ಬರಬೇಕಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳಾ ಕುಸ್ತಿಯ 53 ಕೆಜಿ ವಿಭಾಗದ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ತೂಕ ಪರೀಕ್ಷೆಯಲ್ಲಿ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ನಿಗದಿಗಿಂತ ಹೆಚ್ಚಿನ ತೂಕ ಹೊಂದಿದಕ್ಕಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲು ವಿಫಲರಾಗಿದ್ದರು. ಇದರಿಂದಾಗಿ ಅವರ ಚೊಚ್ಚಲ ಒಲಿಂಪಿಕ್ಸ್ ಚಿನ್ನದ ಪದಕದ ಕನಸು ಕೂಡ ಭಗ್ನವಾಗಿತ್ತು. ಆ ಬಳಿಕ ಕೊಂಚ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಬಳಿಕ ವಿನೇಶ್ ಆವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ನಡುವೆ ಪದಕ ಕೈತಪ್ಪಿದ ಹತಾಶೆಯಲ್ಲಿದ್ದ ವಿನೇಶ್ ಕುಸ್ತಿಗೆ ವಿದಾಯವನ್ನು ಘೋಷಿಸಿದ್ದರು. ಆದರೀಗ ಒಲಿಂಪಿಕ್ಸ್ನಿಂದ ಶುಭ ಸುದ್ದಿಯೊಂದು ಹೊರಬಿದ್ದಿದ್ದು, ವಿನೇಶ್ಗೆ ಬೆಳ್ಳಿ ಪದಕ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮನವಿ ಸ್ವೀಕರಿಸಿದ CSA
ವಾಸ್ತವವಾಗಿ ಒಲಿಂಪಿಕ್ಸ್ ಸ್ಪರ್ಧೆಯಿಂದ ಅನರ್ಹಗೊಂಡ ಬಳಿಕ ವಿನೇಶ್ ಫೋಗಟ್ ಅವರು ತನಗೆ ಕನಿಷ್ಠ ಬೆಳ್ಳಿ ಪದಕವನ್ನಾದರೂ ನೀಡಬೇಕು ಎಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (CSA) ಮನವಿ ಮಾಡಿದ್ದರು. ಇದೀಗ CSA ವಿನೇಶ್ ಅವರ ಮನವಿಯನ್ನು ಸ್ವೀಕರಿಸಿದ್ದು ವಿಚಾರಣೆ ನಡೆಸಲು ಮುಂದಾಗಿದೆ. ಈ ಪ್ರಕರಣದ ಕುರಿತು ಅಂತಿಮ ನಿರ್ಧಾರ ಇನ್ನಷ್ಟೇ ಬರಬೇಕಿದೆ. ಹೀಗಾಗಿ ವಿನೇಶ್ ತಮ್ಮ ಚೊಚ್ಚಲ ಒಲಿಂಪಿಕ್ ಪದಕ ಪಡೆಯುವ ಭರವಸೆಗೆ ಮತ್ತೊಮ್ಮೆ ಜೀವ ಬಂದಿದೆ.
ವರದಿ ಪ್ರಕಾರ, ವಿನೇಶ್ ಅವರ ಮನವಿಯ ವಿಚಾರಣೆ 5.30 ಕ್ಕೆ ಆರಂಭವಾಗಲಿದ್ದು, ಸಿಎಎಸ್ ವಿಚಾರಣೆಯಲ್ಲಿ ವಿನೇಶ್ ಪರ ಜೊಯೆಲ್ ಮೊನ್ಲೂಯಿಸ್, ಎಸ್ಟೆಲ್ಲೆ ಇವನೊವಾ, ಹಬ್ಬೈನ್ ಎಸ್ಟೆಲ್ಲೆ ಕಿಮ್ ಮತ್ತು ಚಾರ್ಲ್ಸ್ ಆಮ್ಸನ್ ವಾದ ಮಂಡಿಸಲಿದ್ದಾರೆ.
MASSIVE BREAKING 🇮🇳🚨
CAS has accepted the protest appeal against disqualification from Vinesh Phogat
The hearing will start at 5:30 PM ⚡
Joelle Monlouis and Estelle Ivanova are lawyers for #VineshPhogat
Hopes are alive, pray for the best to GIVE VINESH SILVER 🥈🫶 pic.twitter.com/GnWjuZrypu
— Amockxi FC (@Amockx2022) August 8, 2024
ಒಲಿಂಪಿಕ್ಸ್‌ನಲ್ಲಿ ವಿನೇಶ್ ಸಾಧನೆ
ಈ ಒಲಿಂಪಿಕ್ಸ್‌ನಲ್ಲಿ ವಿನೇಶ್ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ… ತನ್ನ ಮೊದಲ ಪಂದ್ಯದಲ್ಲಿ ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಯುಯಿ ಸುಸಾಕಿ ಅವರನ್ನು 3-2 ರಿಂದ ಸೋಲಿಸಿದ ವಿನೇಶ್, ಎರಡನೇ ಪಂದ್ಯದಲ್ಲಿ ಉಕ್ರೇನ್‌ನ ಒಕ್ಸಾನಾ ಲಿವಾಚ್ ಅವರನ್ನು 7-5 ರಿಂದ ಸೋಲಿಸಿ ಸೆಮಿಫೈನಲ್ ತಲುಪಿದ್ದರು. ಆ ಬಳಿಕ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಕುಸ್ತಿಪಟುವನ್ನು 5-0 ಅಂತರದಿಂದ ಏಕಪಕ್ಷೀಯವಾಗಿ ಸೋಲಿಸಿ ಫೈನಲ್ ತಲುಪಿದ್ದರು. ಆದರೆ ಸೆಮಿಫೈನಲ್ ಪಂದ್ಯದ ನಂತರ ಕೇವಲ ಹನ್ನೆರಡು ಗಂಟೆಗಳಲ್ಲಿ ಎಲ್ಲವನ್ನೂ ಬದಲಾಗಿತ್ತು. ಫೈನಲ್ವರೆಗೂ ಹುಲಿಯಂತೆ ಹೋರಾಡಿದ್ದ ವಿನೇಶ್ ಫೋಗಟ್ ಕೇವಲ 100 ಗ್ರಾಂ ಅಧಿಕ ತೂಕ ಹೊಂದಿದ್ದರಿಂದ ಅನರ್ಹಗೊಂಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:37 pm, Thu, 8 August 24