PBKS vs DC, IPL 2021 Match 29 Result: ಶಿಖರ್ ಧವನ್ ಬೊಂಬಾಟ್ ಆಟ; ಗೆಲುವಿನ ಓಟ ಮುಂದುವರಿಸಿದ ಡೆಲ್ಲಿ!

| Updated By: ganapathi bhat

Updated on: Aug 23, 2021 | 12:52 PM

PBKS vs DC Scorecard: ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 29ನೇ ಪಂದ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ.

PBKS vs DC, IPL 2021 Match 29 Result: ಶಿಖರ್ ಧವನ್ ಬೊಂಬಾಟ್ ಆಟ; ಗೆಲುವಿನ ಓಟ ಮುಂದುವರಿಸಿದ ಡೆಲ್ಲಿ!
ಶಿಖರ್ ಧವನ್

ಅಹಮದಾಬಾದ್: ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ವಿಕೆಟ್​ಗಳ ಗೆಲುವು ದಾಖಲಿಸಿದೆ. ಡೆಲ್ಲಿ ಪರ ಶಿಖರ್ ಧವನ್ ಮತ್ತೆ ಮಿಂಚಿದ್ದಾರೆ. ಧವನ್ 47 ಬಾಲ್​ಗೆ 69 ರನ್ ಗಳಿಸಿ ತಂಡದ ಸುಲಭ ಗೆಲುವಿಗೆ ಕಾರಣರಾಗಿದ್ದಾರೆ. ಆರಂಭಿಕ ಆಟಗಾರ ಪೃಥ್ವಿ ಶಾ 39 ರನ್ ಪೇರಿಸಿ ಉತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ. ಹೆಟ್ಮಿಯರ್ ಕೊನೆಯಲ್ಲಿ ಅಬ್ಬರಿಸಿದ್ದಾರೆ. 4 ಬಾಲ್​ಗೆ 16 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದಾರೆ. ಪಂಜಾಬ್ ಬೌಲರ್​ಗಳು ಡೆಲ್ಲಿ ಬ್ಯಾಟ್ಸ್​ಮನ್​​ಗಳ ವಿಕೆಟ್ ಉರುಳಿಸುವಲ್ಲಿ ವಿಫಲರಾಗಿದ್ದಾರೆ. ಹರ್​ಪ್ರೀತ್ ಬ್ರರ್ ಮತ್ತು ಮೆರೆಡಿತ್ ಹೊರತುಪಡಿಸಿ ಉಳಿದ ಬೌಲರ್​ಗಳು ಹೇರಳವಾಗಿ ರನ್ ಬಿಟ್ಟುಕೊಟ್ಟಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್​ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 166 ರನ್ ದಾಖಲಿಸಿತ್ತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ಗೆ ಗೆಲ್ಲಲು 167 ರನ್ ಗುರಿ ನೀಡಿತ್ತು. ಪಂಜಾಬ್ ಪರ ಮಯಾಂಕ್ ಅಗರ್​ವಾಲ್ ಏಕಾಂಗಿ ಹೋರಾಟ ನಡೆಸಿ ತಂಡದ ಮೊತ್ತ ಹೆಚ್ಚಿಸುವ ಆಟವಾಡಿದ್ದರು. ಮಯಾಂಕ್ ಅಗರ್​ವಾಲ್ 58 ಬಾಲ್​ಗೆ 99 ರನ್ ಗಳಿಸಿ ಮಿಂಚಿದ್ದರು. ಕೇವಲ 1 ರನ್​ನಿಂದ ಶತಕ ವಂಚಿತರಾಗಿದ್ದರು. ಡೇವಿಡ್ ಮಲನ್ 26 ರನ್ ದಾಖಲಿಸಿದ್ದರು. ಉಳಿದ ಆಟಗಾರರು ಅಷ್ಟೊಂದು ಉತ್ತಮ ಪ್ರದರ್ಶನ ತೋರಿರಲಿಲ್ಲ. ಡೆಲ್ಲಿ ಪರ ಅವೇಶ್ ಖಾನ್ ಹಾಗೂ ಅಕ್ಸರ್ ಪಟೇಲ್ ಉತ್ತಮ ದಾಳಿ ಸಂಘಟಿಸಿದ್ದರು. ಕಡಿಮೆ ರನ್ ಬಿಟ್ಟುಕೊಟ್ಟಿದ್ದರು. ರಬಾಡ 3 ವಿಕೆಟ್ ಪಡೆದು ಮಿಂಚಿದ್ದರು.

ಪಂದ್ಯದ ಸಂಪೂರ್ಣ ಮಾಹಿತಿ ಈ ಕೆಳಗೆ ಲಭ್ಯವಿದೆ.

LIVE NEWS & UPDATES

The liveblog has ended.
  • 02 May 2021 11:04 PM (IST)

    ಡೆಲ್ಲಿ ತಂಡಕ್ಕೆ 7 ವಿಕೆಟ್ ಜಯ

    ಪಂಜಾಬ್ ಕಿಂಗ್ಸ್ ವಿರುದ್ಧದ 29ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

  • 02 May 2021 10:51 PM (IST)

    ರಿಷಭ್ ಪಂತ್ ಔಟ್

    11 ಬಾಲ್​ಗೆ 14 ರನ್ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಔಟ್ ಆಗಿದ್ದಾರೆ. ಕ್ರಿಸ್ ಜೋರ್ಡನ್ ಬೌಲಿಂಗ್​ಗೆ ಮಯಾಂಕ್ ಅಗರ್​ವಾಲ್​ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ದಾರೆ. ಶಿಖರ್ ಧವನ್ ಹಾಗೂ ಶಿಮ್ರನ್ ಹೆಟ್ಮಿಯರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ತಂಡ ಗೆಲ್ಲಲು 18 ಬಾಲ್​ಗೆ 19 ರನ್ ಬೇಕಿದೆ. ತಂಡದ ಮೊತ್ತ 17 ಓವರ್​ಗೆ 148/3 ಆಗಿದೆ.


  • 02 May 2021 10:48 PM (IST)

    ಪಂಜಾಬ್ ಗೆಲ್ಲಲು 24 ಬಾಲ್​ಗೆ 23 ರನ್ ಬೇಕು

    ಪಂಜಾಬ್ ಕಿಂಗ್ಸ್ ಗೆಲುವಿಗೆ 24 ಬಾಲ್​ಗೆ 23 ರನ್ ಬೇಕಾಗಿದೆ. ತಂಡ ಉತ್ತಮ ಆಟ ಪ್ರದರ್ಶಿಸಿ ಗೆಲುವಿನ ಸನಿಹಕ್ಕೆ ತಲುಪಿದೆ. ಮೆರೆಡಿತ್ ಹಾಗೂ ಹರ್​ಪ್ರೀತ್ ಬ್ರರ್ ಹೊರತುಪಡಿಸಿ ಇತರ ಬೌಲರ್​ಗಳು ಉತ್ತಮ ಪ್ರದರ್ಶನ ತೋರಿಲ್ಲ. ಮುಖ್ಯವಾಗಿ ಡೆಲ್ಲಿ ವಿಕೆಟ್ ಪಡೆಯುವಲ್ಲಿ ಪಂಜಾಬ್ ವಿಫಲವಾಗಿದೆ.

  • 02 May 2021 10:46 PM (IST)

    ಪಂಜಾಬ್ ಕಿಂಗ್ಸ್ 139/2 (15 ಓವರ್)

    ಪಂಜಾಬ್ ಕಿಂಗ್ಸ್ ತಂಡ 15 ಓವರ್​ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 139 ರನ್ ದಾಖಲಿಸಿದೆ. ತಂಡದ ಪರವಾಗಿ ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಶಿಖರ್ ಧವನ್ 40 ಬಾಲ್​ಗೆ 62 ರನ್ ದಾಖಲಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮತ್ತೊಂದು ಕಡೆಯಲ್ಲಿ ನಾಯಕ ರಿಷಭ್ ಪಂತ್ ಬ್ಯಾಟಿಂಗ್​ನಲ್ಲಿದ್ದಾರೆ.

  • 02 May 2021 10:34 PM (IST)

    ಡೆಲ್ಲಿ ಶತಕ ಪೂರ್ಣ

    ಇಂದು ರವಿ ಬಿಷ್ಣೋಯ್ ಅವರ ಆಟ ಉತ್ತಮವಾಗಿಲ್ಲ. ದೆಹಲಿ ಬ್ಯಾಟ್ಸ್‌ಮನ್‌ಗಳು ತಮ್ಮ ಪ್ರತಿ ಓವರ್‌ನಲ್ಲಿ ಸುಲಭವಾಗಿ ರನ್ ಗಳಿಸಲು ಸಮರ್ಥರಾಗಿದ್ದಾರೆ. ಈ ಬಾರಿ ಧವನ್ ಸ್ಲಾಗ್​ನಲ್ಲಿ ಹೊಡೆದರು ಮತ್ತು ಡೀಪ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು. ಇದರೊಂದಿಗೆ ದೆಹಲಿಯ 100 ರನ್ ಕೂಡ ಪೂರ್ಣಗೊಂಡಿತು.

  • 02 May 2021 09:12 PM (IST)

    ಪಂಜಾಬ್ ಕಿಂಗ್ಸ್ 166/6 (20 ಓವರ್)

    ಮಯಾಂಕ್ ಅಗರ್​ವಾಲ್ ಭರ್ಜರಿ ಬ್ಯಾಟಿಂಗ್​ ಸಹಾಯದಿಂದಾಗಿ ಪಂಜಾಬ್ ಕಿಂಗ್ಸ್ 20 ಓವರ್​ಗಳ ಅಂತ್ಯಕ್ಕೆ 166 ರನ್ ಗಳಿಸಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಲು 167 ರನ್ ಟಾರ್ಗೆಟ್ ನೀಡಿದೆ. ಮಯಾಂಕ್ ಅಗರ್​ವಾಲ್ 99 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. ಈ ಮೂಲಕ ಇನ್ನಿಂಗ್ಸ್ ಕಟ್ಟಲು ನೆರವಾಗಿದ್ದಾರೆ. ಆದರೆ, 1 ರನ್​ನಿಂದ ಶತಕವಂಚಿತರಾಗಿದ್ದಾರೆ.

  • 02 May 2021 09:07 PM (IST)

    ಮತ್ತೊಂದು ವಿಕೆಟ್ ಪತನ

    ರಬಾಡ ಬೌಲಿಂಗ್​ಗೆ ಲಲಿತ್ ಯಾದವ್​ಗೆ ಕ್ಯಾಚ್ ನೀಡಿ 3 ಬಾಲ್​ಗೆ 2 ರನ್ ಗಳಿಸಿದ್ದ ಜೋರ್ಡನ್ ಔಟ್ ಆಗಿದ್ದಾರೆ. ಮಯಾಂಕ್ ಅಗರ್​ವಾಲ್ ಏಕಾಂಗಿ ಹೋರಾಟ ಮುಂದುವರಿದಿದೆ. 19 ಓವರ್​ಗೆ ಪಂಜಾಬ್ ಸ್ಕೋರ್ 143/6 ಆಗಿದೆ.

  • 02 May 2021 09:00 PM (IST)

    ಶಾರುಖ್ ಖಾನ್ ಔಟ್

    5 ಬಾಲ್​ಗೆ 4 ರನ್ ಗಳಿಸಿ ಶಾರುಖ್ ಖಾನ್ ವಿಕೆಟ್ ಒಪ್ಪಿಸಿದ್ದಾರೆ. ಅವೇಶ್ ಖಾನ್ ಬೌಲಿಂಗ್​ಗೆ ಹೆಟ್ಮಿಯರ್ ಕ್ಯಾಚ್ ಪಡೆದು ಶಾರುಖ್ ವಿಕೆಟ್ ಕಬಳಿಸಿದ್ದಾರೆ. ತಂಡದ ಮೊತ್ತ 18 ಓವರ್​ಗೆ 5 ವಿಕೆಟ್ ಕಳೆದುಕೊಂಡು 132 ರನ್ ಆಗಿದೆ. ನಾಯಕ ಮಯಾಂಕ್ ಅಗರ್​ವಾಲ್ ಏಕಾಂಗಿ ಹೋರಾಟ ಮುಂದುವರಿಸಿದ್ದಾರೆ. ಅವರಿಗೆ ಕ್ರಿಸ್ ಜೋರ್ಡಾನ್ ಜೊತೆಯಾಗಿದ್ದಾರೆ.

  • 02 May 2021 08:52 PM (IST)

    ಅರ್ಧಶತಕ ದಾಖಲಿಸಿದ ಮಯಾಂಕ್

    ಪಂಜಾಬ್ ಕಿಂಗ್ಸ್ ಪರ ಮಯಾಂಕ್ ಅಗರ್​ವಾಲ್ ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. 38 ಬಾಲ್​ಗೆ 4 ಬೌಂಡರಿ, 1 ಸಿಕ್ಸರ್ ಸಹಿತ 52 ರನ್ ದಾಖಲಿಸಿ ಅರ್ಧಶತಕ ಪೂರೈಸಿದ್ದಾರೆ. 16 ಓವರ್​ನ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡದ ಸ್ಕೋರ್ 117/4 ಆಗಿದೆ. ಬೌಂಡರಿ ಬಾರಿಸಿ ಅರ್ಧಶತಕ ದಾಖಲಿಸಿದ ಮಯಾಂಕ್, ಒಂದು ಸಿಕ್ಸರ್ ಕೂಡ ಸಿಡಿಸಿದ್ದಾರೆ.

  • 02 May 2021 08:47 PM (IST)

    ಶತಕ ಪೂರೈಸಿದ ಪಂಜಾಬ್

    ಪಂಜಾಬ್ ಕಿಂಗ್ಸ್ ತಂಡ 15 ಓವರ್​ಗಳ ಅಂತ್ಯಕ್ಕೆ 102 ರನ್ ದಾಖಲಿಸಿದೆ. 4 ವಿಕೆಟ್ ಕಳೆದುಕೊಂಡಿದೆ. ಮಯಾಂಕ್ ಅಗರ್​ವಾಲ್ 47 ರನ್ ಗಳಿಸಿ ಅರ್ಧಶತಕದ ಅಂಚಿನಲ್ಲಿದ್ದಾರೆ. ಜವಾಬ್ದಾರಿಯುತ ಆಟ ಆಡುತ್ತಿದ್ದಾರೆ.

  • 02 May 2021 08:40 PM (IST)

    ಪಂಜಾಬ್​ಗೆ ಮತ್ತೆ ಆಘಾತ; ಹೂಡಾ ರನೌಟ್

    ಮಲನ್ ಬಳಿಕ ಕ್ರೀಸ್​ಗೆ ಆಗಮಿಸಿದ ದೀಪಕ್ ಹೂಡಾ 1 ಬಾಲ್​ಗೆ 1 ರನ್ ಗಳಿಸುವಷ್ಟರಲ್ಲಿ ಔಟ್ ಆಗಿದ್ದಾರೆ. ರನ್ ಔಟ್ ಆಗಿ ನಿರ್ಗಮಿಸಿದ್ದಾರೆ. ಪಂಜಾಬ್ ಆತಂಕದ ಸ್ಥಿತಿಯಲ್ಲಿದೆ. ನಾಯಕ ಮಯಾಂಕ್ ಅಗರ್​ವಾಲ್ ಏಕಾಂಗಿ ಹೋರಾಟಕ್ಕೆ ಮುಂದಾದಂತಿದೆ. 14 ಓವರ್​ಗೆ ಪಂಜಾಬ್ ಕಿಂಗ್ಸ್ 90 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ. ಇನ್ನೂ 6 ಓವರ್​ಗಳು ಬಾಕಿ ಉಳಿದಿವೆ.

  • 02 May 2021 08:38 PM (IST)

    ಡೇವಿಡ್ ಮಲನ್ ಔಟ್

    26 ಬಾಲ್​ಗೆ 26 ರನ್ ಗಳಿಸಿದ್ದ ಡೇವಿಡ್ ಮಲನ್ ಅಕ್ಸರ್ ಪಟೇಲ್ ಬೌಲಿಂಗ್​ಗೆ ಬೌಲ್ಡ್ ಆಗಿದ್ದಾರೆ. ಈ ಮೂಲಕ ಪಂಜಾಬ್ ಕಿಂಗ್ಸ್ ತನ್ನ 3 ವಿಕೆಟ್ ಕಳೆದುಕೊಂಡಿದೆ. ನಾಯಕ ಮಯಾಂಕ್ ಅಗರ್​ವಾಲ್ 29 ಬಾಲ್​ಗೆ 35 ರನ್ ಗಳಿಸಿ ಆಡುತ್ತಿದ್ದಾರೆ. ದೀಪಕ್ ಹೂಡಾ ಕ್ರೀಸ್​ಗೆ ಇಳಿದಿದ್ದಾರೆ.

  • 02 May 2021 08:32 PM (IST)

    ಮಲನ್ ಸಿಕ್ಸರ್, ಬೌಂಡರಿ

    ಪಂಜಾಬ್ ಕಿಂಗ್ಸ್ ತಂಡ 12ನೇ ಓವರ್​ನ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 78 ರನ್ ದಾಖಲಿಸಿದೆ. ಇಶಾಂತ್ ಶರ್ಮಾ ಬೌಲಿಂಗ್​ಗೆ ಮಲನ್ ಒಂದು ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದ್ದಾರೆ.

  • 02 May 2021 08:21 PM (IST)

    ಪಂಜಾಬ್ ಕಿಂಗ್ಸ್ ಶಿಸ್ತುಬದ್ಧ ಆಟ

    2 ವಿಕೆಟ್​ಗಳನ್ನು ಕಳೆದುಕೊಂಡ ಬಳಿಕ ಪಂಜಾಬ್ ಕಿಂಗ್ಸ್ ಶಿಸ್ತುಬದ್ಧ ಆಟಕ್ಕೆ ಮುಂದಾಗಿದೆ. ನಾಯಕ ಮಯಾಂಕ್ ಅಗರ್​ವಾಲ್ 21 ಬಾಲ್​ಗೆ 27 ಮತ್ತು ಡೇವಿಡ್ ಮಲನ್ 14 ಬಾಲ್​ಗೆ 10 ರನ್ ಗಳಿಸಿದ್ದಾರೆ. ತಂಡದ ಮೊತ್ತ 10 ಓವರ್​ಗೆ 2 ವಿಕೆಟ್ ಕಳೆದುಕೊಂಡು 63 ಆಗಿದೆ. ಇಶಾಂತ್ ಶರ್ಮಾ ಹಾಗೂ ಅಕ್ಸರ್ ಪಟೇಲ್ ಕಡಿಮೆ ರನ್ ನೀಡಿ ಉತ್ತಮ ದಾಳಿ ನಡೆಸಿದ್ದಾರೆ.

  • 02 May 2021 08:10 PM (IST)

    ಪಂಜಾಬ್ ಕಿಂಗ್ಸ್ 53/2 (8 ಓವರ್)

    ಪಂಜಾಬ್ ಕಿಂಗ್ಸ್ ತಂಡ 8 ಓವರ್​ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 53 ರನ್ ದಾಖಲಿಸಿದೆ. ತಂಡದ ಪರವಾಗಿ ಮಯಾಂಕ್ ಅಗರ್​ವಾಲ್ 23 (17) ಹಾಗೂ ಡೇವಿಡ್ ಮಲನ್ 7 (7) ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ. ದೀಪಕ್ ಹೂಡಾ, ಶಾರುಖ್ ಖಾನ್, ಹರ್​ಪ್ರೀತ್ ಬ್ರರ್ ಬ್ಯಾಟಿಂಗ್​ ಮಾಡಲು ಬಾಕಿ ಇದ್ದಾರೆ.

  • 02 May 2021 08:00 PM (IST)

    ಗೈಲ್ ಔಟ್

    ಪಂಜಾಬ್ ಕಿಂಗ್ಸ್ ತನ್ನ ಮುಖ್ಯ 2 ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತ ಎದುರಿಸಿದೆ. ಪವರ್​ಪ್ಲೇ ಅಂತ್ಯಕ್ಕೆ ಕೇವಲ 39 ರನ್ ಗಳಿಸಿರುವ ಪಂಜಾಬ್ 2 ವಿಕೆಟ್ ಕಳೆದುಕೊಂಡಿದೆ. ಕ್ರಿಸ್ ಗೈಲ್ 9 ಬಾಲ್​ಗೆ 13 ರನ್ ಗಳಿಸಿ ರಬಾಡ ಬೌಲಿಂಗ್​ಗೆ ಬೌಲ್ಡ್ ಆಗಿದ್ದಾರೆ. ಮಯಾಂಕ್ ಅಗರ್​ವಾಲ್ ಹಾಗೂ ಡೇವಿಡ್ ಮಲನ್ ಬ್ಯಾಟಿಂಗ್​ ಮಾಡುತ್ತಿದ್ದಾರೆ.

  • 02 May 2021 07:52 PM (IST)

    ಪಂಜಾಬ್ ಕಿಂಗ್ಸ್ ಮೊದಲ ವಿಕೆಟ್ ಪತನ

    ಪಂಜಾಬ್ ಕಿಂಗ್ಸ್ ತನ್ನ ಮೊದಲ ವಿಕೆಟ್ ಕಳೆದುಕೊಂಡಿದೆ. ಪ್ರಭ್​ಸಿಮ್ರನ್ ಸಿಂಗ್ 16 ಬಾಲ್​ಗೆ 12 ರನ್ ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ ಕಿಂಗ್ಸ್ 4 ಓವರ್​ಗೆ 18 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ಮಯಾಂಕ್ ಅಗರ್​ವಾಲ್ ಹಾಗೂ ಕ್ರಿಸ್ ಗೈಲ್ ಆಡುತ್ತಿದ್ದಾರೆ.

  • 02 May 2021 07:40 PM (IST)

    ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಕಿಂಗ್ಸ್

    ಪಂಜಾಬ್ ಕಿಂಗ್ಸ್ ತಂಡ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದೆ. ತಂಡದ ಪರವಾಗಿ ಪ್ರಭ್​ಸಿಮ್ರನ್ ಸಿಂಗ್ ಮತ್ತು ಮಯಾಂಕ್ ಅಗರ್​ವಾಲ್ ಕ್ರೀಸ್ ಕಾಯ್ದುಕೊಂಡಿದ್ದಾರೆ. 2 ಓವರ್​ಗಳ ಅಂತ್ಯಕ್ಕೆ ಪಂಜಾಬ್ ತಂಡದ ಮೊತ್ತ ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿದೆ. ಪಂಜಾಬ್ ನಿಧಾನಗತಿಯ ಆಟಕ್ಕೆ ಮುಂದಾಗಿದೆ. ಇಶಾಂತ್ ಶರ್ಮಾ ಹಾಗೂ ಸ್ಟೋಯಿನಿಸ್ ಮೊದಲೆರಡು ಓವರ್ ಬೌಲಿಂಗ್ ಮಾಡಿದ್ದಾರೆ.

  • 02 May 2021 07:37 PM (IST)

    ಕೆ.ಎಲ್. ರಾಹುಲ್ ಅಲಭ್ಯ

    ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್. ರಾಹುಲ್ ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಆರೋಗ್ಯ ಸಮಸ್ಯೆ ಕಂಡುಬಂದ ಕಾರಣ ಅವರಿಂದು ಆಡುತ್ತಿಲ್ಲ. ರಾಹುಲ್ ಬದಲಾಗಿ ಮಯಾಂಕ್ ಅಗರ್​ವಾಲ್ ನಾಯಕತ್ವ ವಹಿಸಿಕೊಂಡಿದ್ದಾರೆ.

  • 02 May 2021 07:32 PM (IST)

    ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

    ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಯಿಂಗ್ ಇಲೆವೆನ್ ಈ ರೀತಿ ಇದೆ..

  • 02 May 2021 07:09 PM (IST)

    ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ವಿನ್

    ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಲಿದೆ.

Published On - 11:05 pm, Sun, 2 May 21

Follow us on