IPL 2021: ಐಪಿಎಲ್​ನಲ್ಲಿ ಚೊಚ್ಚಲ ಶತಕ ಬಾರಿಸಿದ ಜೋಸ್ ಬಟ್ಲರ್! ರಾಜಸ್ಥಾನ್ ಪರ ಶತಕ ಸಿಡಿಸಿದ 6ನೇ ಬ್ಯಾಟ್ಸ್​ಮನ್

IPL 2021: ಐಪಿಎಲ್ 2021 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 56 ಎಸೆತಗಳಲ್ಲಿ 10 ಬೌಂಡರಿ ಮತ್ತು ಐದು ಸಿಕ್ಸರ್‌ಗಳೊಂದಿಗೆ ಶತಕ ಗಳಿಸಿದ್ದಾರೆ.

IPL 2021: ಐಪಿಎಲ್​ನಲ್ಲಿ ಚೊಚ್ಚಲ ಶತಕ ಬಾರಿಸಿದ ಜೋಸ್ ಬಟ್ಲರ್! ರಾಜಸ್ಥಾನ್ ಪರ ಶತಕ ಸಿಡಿಸಿದ 6ನೇ ಬ್ಯಾಟ್ಸ್​ಮನ್
* ಜೋಸ್ ಬಟ್ಲರ್ (ರಾಜಸ್ಥಾನ್ ರಾಯಲ್ಸ್)
Follow us
ಪೃಥ್ವಿಶಂಕರ
|

Updated on: May 02, 2021 | 7:06 PM

ರಾಜಸ್ಥಾನ್ ರಾಯಲ್ಸ್ ಓಪನರ್ ಜೋಸ್ ಬಟ್ಲರ್ ಐಪಿಎಲ್ 2021 ರಲ್ಲಿ ಶತಕ ಬಾರಿಸಿದ್ದಾರೆ. ಐಪಿಎಲ್ 2021 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 56 ಎಸೆತಗಳಲ್ಲಿ 10 ಬೌಂಡರಿ ಮತ್ತು ಐದು ಸಿಕ್ಸರ್‌ಗಳೊಂದಿಗೆ ಶತಕ ಗಳಿಸಿದ್ದಾರೆ. ಐಪಿಎಲ್ ಜೊತೆ ಟಿ 20 ಕ್ರಿಕೆಟ್‌ನಲ್ಲಿ ಇದು ಅವರ ಮೊದಲ ಶತಕ. ಜೋಸ್ ಬಟ್ಲರ್ 282 ನೇ ಟಿ 20 ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. 64 ಎಸೆತಗಳಲ್ಲಿ 124 ರನ್ ಗಳಿಸಿದ ನಂತರ ಅವರು ಔಟ್ ಆದರು. ಈ ಅವಧಿಯಲ್ಲಿ ಅವರು ಒಟ್ಟು 11 ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳನ್ನು ಹೊಡೆದರು. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಗಳಿಸಿದ ಗರಿಷ್ಠ ಸ್ಕೋರ್ ಇದಾಗಿದೆ. ಅಲ್ಲದೆ, ಇದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎರಡನೇ ಅತಿದೊಡ್ಡ ಇನ್ನಿಂಗ್ಸ್ ಆಗಿದೆ.

27 ಎಸೆತಗಳಲ್ಲಿ 82 ರನ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಬಟ್ಲರ್ 37 ಎಸೆತಗಳಲ್ಲಿ 42 ರನ್ ಬಾರಿಸಿದ್ದರು. ಇದರ ನಂತರ ಅವರು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದರು ಮತ್ತು ಮುಂದಿನ 27 ಎಸೆತಗಳಲ್ಲಿ 82 ರನ್ ಗಳಿಸಿದರು. ಅದೇ ಸಮಯದಲ್ಲಿ, ಇದು ರಾಜಸ್ಥಾನ್ ರಾಯಲ್ಸ್ನಿಂದ ಒಂಬತ್ತನೇ ಐಪಿಎಲ್ ಶತಕವಾಗಿದೆ. ಬಟ್ಲರ್ ಈ ತಂಡದಿಂದ ಶತಕ ಗಳಿಸಿದ ಆರನೇ ಬ್ಯಾಟ್ಸ್‌ಮನ್. ರಾಜಸ್ಥಾನಕ್ಕೆ ಸಂಬಂಧಿಸಿದಂತೆ, ಐಸಿಎಲ್ 2010 ರಲ್ಲಿ ಯೂಸುಫ್ ಪಠಾಣ್ ಮೊದಲ ಶತಕ ಗಳಿಸಿದರು. ಇದರ ನಂತರ ಅಜಿಂಕ್ಯ ರಹಾನೆ, ಶೇನ್ ವ್ಯಾಟ್ಸನ್ ಮತ್ತು ಸಂಜು ಸ್ಯಾಮ್ಸನ್ ತಲಾ ಎರಡು ಶತಕ ಗಳಿಸಿದರೆ, ಬೆನ್ ಸ್ಟೋಕ್ಸ್ ಐಪಿಎಲ್ 2020 ರಲ್ಲಿ ಶತಕ ಬಾರಿಸಿದರು.

ರಾಜಸ್ಥಾನ್ ರಾಯಲ್ಸ್ ಆಟಗಾರರ ಶತಕಗಳು ಯೂಸುಫ್ ಪಠಾಣ್ vs ಮುಂಬೈ ಇಂಡಿಯನ್ಸ್ (2010) ಅಜಿಂಕ್ಯ ರಹಾನೆ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (2012) ಶೇನ್ ವ್ಯಾಟ್ಸನ್ Vs ಚೆನ್ನೈ ಸೂಪರ್ ಕಿಂಗ್ಸ್ (2013) ಶೇನ್ ವ್ಯಾಟ್ಸನ್ vs ಕೋಲ್ಕತಾ ನೈಟ್ ರೈಡರ್ಸ್ (2015) ಸಂಜು ಸ್ಯಾಮ್ಸನ್ vs ಸನ್‌ರೈಸರ್ಸ್ ಹೈದರಾಬಾದ್ (2019) ಅಜಿಂಕ್ಯ ರಹಾನೆ vs ದೆಹಲಿ ಕ್ಯಾಪಿಟಲ್ಸ್ (2019) ಬೆನ್ ಸ್ಟೋಕ್ಸ್ Vs ಮುಂಬೈ ಇಂಡಿಯನ್ಸ್ (2020) ಸಂಜು ಸ್ಯಾಮ್ಸನ್ Vs ಪಂಜಾಬ್ ಕಿಂಗ್ಸ್ (2021) ಜೋಸ್ ಬಟ್ಲರ್ vs ಸನ್‌ರೈಸರ್ಸ್ ಹೈದರಾಬಾದ್ (2021)

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ