PBKS vs DC, IPL 2021 Match 29 Result: ಶಿಖರ್ ಧವನ್ ಬೊಂಬಾಟ್ ಆಟ; ಗೆಲುವಿನ ಓಟ ಮುಂದುವರಿಸಿದ ಡೆಲ್ಲಿ!
PBKS vs DC Scorecard: ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 29ನೇ ಪಂದ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಹಮದಾಬಾದ್: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ವಿಕೆಟ್ಗಳ ಗೆಲುವು ದಾಖಲಿಸಿದೆ. ಡೆಲ್ಲಿ ಪರ ಶಿಖರ್ ಧವನ್ ಮತ್ತೆ ಮಿಂಚಿದ್ದಾರೆ. ಧವನ್ 47 ಬಾಲ್ಗೆ 69 ರನ್ ಗಳಿಸಿ ತಂಡದ ಸುಲಭ ಗೆಲುವಿಗೆ ಕಾರಣರಾಗಿದ್ದಾರೆ. ಆರಂಭಿಕ ಆಟಗಾರ ಪೃಥ್ವಿ ಶಾ 39 ರನ್ ಪೇರಿಸಿ ಉತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ. ಹೆಟ್ಮಿಯರ್ ಕೊನೆಯಲ್ಲಿ ಅಬ್ಬರಿಸಿದ್ದಾರೆ. 4 ಬಾಲ್ಗೆ 16 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದಾರೆ. ಪಂಜಾಬ್ ಬೌಲರ್ಗಳು ಡೆಲ್ಲಿ ಬ್ಯಾಟ್ಸ್ಮನ್ಗಳ ವಿಕೆಟ್ ಉರುಳಿಸುವಲ್ಲಿ ವಿಫಲರಾಗಿದ್ದಾರೆ. ಹರ್ಪ್ರೀತ್ ಬ್ರರ್ ಮತ್ತು ಮೆರೆಡಿತ್ ಹೊರತುಪಡಿಸಿ ಉಳಿದ ಬೌಲರ್ಗಳು ಹೇರಳವಾಗಿ ರನ್ ಬಿಟ್ಟುಕೊಟ್ಟಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 166 ರನ್ ದಾಖಲಿಸಿತ್ತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ಗೆ ಗೆಲ್ಲಲು 167 ರನ್ ಗುರಿ ನೀಡಿತ್ತು. ಪಂಜಾಬ್ ಪರ ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ ನಡೆಸಿ ತಂಡದ ಮೊತ್ತ ಹೆಚ್ಚಿಸುವ ಆಟವಾಡಿದ್ದರು. ಮಯಾಂಕ್ ಅಗರ್ವಾಲ್ 58 ಬಾಲ್ಗೆ 99 ರನ್ ಗಳಿಸಿ ಮಿಂಚಿದ್ದರು. ಕೇವಲ 1 ರನ್ನಿಂದ ಶತಕ ವಂಚಿತರಾಗಿದ್ದರು. ಡೇವಿಡ್ ಮಲನ್ 26 ರನ್ ದಾಖಲಿಸಿದ್ದರು. ಉಳಿದ ಆಟಗಾರರು ಅಷ್ಟೊಂದು ಉತ್ತಮ ಪ್ರದರ್ಶನ ತೋರಿರಲಿಲ್ಲ. ಡೆಲ್ಲಿ ಪರ ಅವೇಶ್ ಖಾನ್ ಹಾಗೂ ಅಕ್ಸರ್ ಪಟೇಲ್ ಉತ್ತಮ ದಾಳಿ ಸಂಘಟಿಸಿದ್ದರು. ಕಡಿಮೆ ರನ್ ಬಿಟ್ಟುಕೊಟ್ಟಿದ್ದರು. ರಬಾಡ 3 ವಿಕೆಟ್ ಪಡೆದು ಮಿಂಚಿದ್ದರು.
ಪಂದ್ಯದ ಸಂಪೂರ್ಣ ಮಾಹಿತಿ ಈ ಕೆಳಗೆ ಲಭ್ಯವಿದೆ.
LIVE NEWS & UPDATES
-
ಡೆಲ್ಲಿ ತಂಡಕ್ಕೆ 7 ವಿಕೆಟ್ ಜಯ
ಪಂಜಾಬ್ ಕಿಂಗ್ಸ್ ವಿರುದ್ಧದ 29ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
The gloves were off tonight as we conquered the #NorthernDerby in #IPL2021 ?#YehHaiNayiDilli #PBKSvDC pic.twitter.com/2idtciUADq
— Delhi Capitals (Stay Home. Wear Double Masks?) (@DelhiCapitals) May 2, 2021
Match 29. It’s all over! Delhi Capitals won by 7 wickets https://t.co/Rm0jfZtn6l #PBKSvDC #VIVOIPL #IPL2021
— IndianPremierLeague (@IPL) May 2, 2021
-
ರಿಷಭ್ ಪಂತ್ ಔಟ್
11 ಬಾಲ್ಗೆ 14 ರನ್ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಔಟ್ ಆಗಿದ್ದಾರೆ. ಕ್ರಿಸ್ ಜೋರ್ಡನ್ ಬೌಲಿಂಗ್ಗೆ ಮಯಾಂಕ್ ಅಗರ್ವಾಲ್ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ದಾರೆ. ಶಿಖರ್ ಧವನ್ ಹಾಗೂ ಶಿಮ್ರನ್ ಹೆಟ್ಮಿಯರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ತಂಡ ಗೆಲ್ಲಲು 18 ಬಾಲ್ಗೆ 19 ರನ್ ಬೇಕಿದೆ. ತಂಡದ ಮೊತ್ತ 17 ಓವರ್ಗೆ 148/3 ಆಗಿದೆ.
-
ಪಂಜಾಬ್ ಗೆಲ್ಲಲು 24 ಬಾಲ್ಗೆ 23 ರನ್ ಬೇಕು
ಪಂಜಾಬ್ ಕಿಂಗ್ಸ್ ಗೆಲುವಿಗೆ 24 ಬಾಲ್ಗೆ 23 ರನ್ ಬೇಕಾಗಿದೆ. ತಂಡ ಉತ್ತಮ ಆಟ ಪ್ರದರ್ಶಿಸಿ ಗೆಲುವಿನ ಸನಿಹಕ್ಕೆ ತಲುಪಿದೆ. ಮೆರೆಡಿತ್ ಹಾಗೂ ಹರ್ಪ್ರೀತ್ ಬ್ರರ್ ಹೊರತುಪಡಿಸಿ ಇತರ ಬೌಲರ್ಗಳು ಉತ್ತಮ ಪ್ರದರ್ಶನ ತೋರಿಲ್ಲ. ಮುಖ್ಯವಾಗಿ ಡೆಲ್ಲಿ ವಿಕೆಟ್ ಪಡೆಯುವಲ್ಲಿ ಪಂಜಾಬ್ ವಿಫಲವಾಗಿದೆ.
ಪಂಜಾಬ್ ಕಿಂಗ್ಸ್ 139/2 (15 ಓವರ್)
ಪಂಜಾಬ್ ಕಿಂಗ್ಸ್ ತಂಡ 15 ಓವರ್ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 139 ರನ್ ದಾಖಲಿಸಿದೆ. ತಂಡದ ಪರವಾಗಿ ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಶಿಖರ್ ಧವನ್ 40 ಬಾಲ್ಗೆ 62 ರನ್ ದಾಖಲಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮತ್ತೊಂದು ಕಡೆಯಲ್ಲಿ ನಾಯಕ ರಿಷಭ್ ಪಂತ್ ಬ್ಯಾಟಿಂಗ್ನಲ್ಲಿದ್ದಾರೆ.
ಡೆಲ್ಲಿ ಶತಕ ಪೂರ್ಣ
ಇಂದು ರವಿ ಬಿಷ್ಣೋಯ್ ಅವರ ಆಟ ಉತ್ತಮವಾಗಿಲ್ಲ. ದೆಹಲಿ ಬ್ಯಾಟ್ಸ್‌ಮನ್‌ಗಳು ತಮ್ಮ ಪ್ರತಿ ಓವರ್‌ನಲ್ಲಿ ಸುಲಭವಾಗಿ ರನ್ ಗಳಿಸಲು ಸಮರ್ಥರಾಗಿದ್ದಾರೆ. ಈ ಬಾರಿ ಧವನ್ ಸ್ಲಾಗ್ನಲ್ಲಿ ಹೊಡೆದರು ಮತ್ತು ಡೀಪ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು. ಇದರೊಂದಿಗೆ ದೆಹಲಿಯ 100 ರನ್ ಕೂಡ ಪೂರ್ಣಗೊಂಡಿತು.
ಪಂಜಾಬ್ ಕಿಂಗ್ಸ್ 166/6 (20 ಓವರ್)
ಮಯಾಂಕ್ ಅಗರ್ವಾಲ್ ಭರ್ಜರಿ ಬ್ಯಾಟಿಂಗ್ ಸಹಾಯದಿಂದಾಗಿ ಪಂಜಾಬ್ ಕಿಂಗ್ಸ್ 20 ಓವರ್ಗಳ ಅಂತ್ಯಕ್ಕೆ 166 ರನ್ ಗಳಿಸಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಲು 167 ರನ್ ಟಾರ್ಗೆಟ್ ನೀಡಿದೆ. ಮಯಾಂಕ್ ಅಗರ್ವಾಲ್ 99 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. ಈ ಮೂಲಕ ಇನ್ನಿಂಗ್ಸ್ ಕಟ್ಟಲು ನೆರವಾಗಿದ್ದಾರೆ. ಆದರೆ, 1 ರನ್ನಿಂದ ಶತಕವಂಚಿತರಾಗಿದ್ದಾರೆ.
Mank-uuuuuuuu beaudy! ????
99* for Captain Mayank ??#SaddaPunjab #PunjabKings #IPL2021 #PBKSvDC
— Punjab Kings (@PunjabKingsIPL) May 2, 2021
ಮತ್ತೊಂದು ವಿಕೆಟ್ ಪತನ
ರಬಾಡ ಬೌಲಿಂಗ್ಗೆ ಲಲಿತ್ ಯಾದವ್ಗೆ ಕ್ಯಾಚ್ ನೀಡಿ 3 ಬಾಲ್ಗೆ 2 ರನ್ ಗಳಿಸಿದ್ದ ಜೋರ್ಡನ್ ಔಟ್ ಆಗಿದ್ದಾರೆ. ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ ಮುಂದುವರಿದಿದೆ. 19 ಓವರ್ಗೆ ಪಂಜಾಬ್ ಸ್ಕೋರ್ 143/6 ಆಗಿದೆ.
ಶಾರುಖ್ ಖಾನ್ ಔಟ್
5 ಬಾಲ್ಗೆ 4 ರನ್ ಗಳಿಸಿ ಶಾರುಖ್ ಖಾನ್ ವಿಕೆಟ್ ಒಪ್ಪಿಸಿದ್ದಾರೆ. ಅವೇಶ್ ಖಾನ್ ಬೌಲಿಂಗ್ಗೆ ಹೆಟ್ಮಿಯರ್ ಕ್ಯಾಚ್ ಪಡೆದು ಶಾರುಖ್ ವಿಕೆಟ್ ಕಬಳಿಸಿದ್ದಾರೆ. ತಂಡದ ಮೊತ್ತ 18 ಓವರ್ಗೆ 5 ವಿಕೆಟ್ ಕಳೆದುಕೊಂಡು 132 ರನ್ ಆಗಿದೆ. ನಾಯಕ ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ ಮುಂದುವರಿಸಿದ್ದಾರೆ. ಅವರಿಗೆ ಕ್ರಿಸ್ ಜೋರ್ಡಾನ್ ಜೊತೆಯಾಗಿದ್ದಾರೆ.
ಅರ್ಧಶತಕ ದಾಖಲಿಸಿದ ಮಯಾಂಕ್
ಪಂಜಾಬ್ ಕಿಂಗ್ಸ್ ಪರ ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. 38 ಬಾಲ್ಗೆ 4 ಬೌಂಡರಿ, 1 ಸಿಕ್ಸರ್ ಸಹಿತ 52 ರನ್ ದಾಖಲಿಸಿ ಅರ್ಧಶತಕ ಪೂರೈಸಿದ್ದಾರೆ. 16 ಓವರ್ನ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡದ ಸ್ಕೋರ್ 117/4 ಆಗಿದೆ. ಬೌಂಡರಿ ಬಾರಿಸಿ ಅರ್ಧಶತಕ ದಾಖಲಿಸಿದ ಮಯಾಂಕ್, ಒಂದು ಸಿಕ್ಸರ್ ಕೂಡ ಸಿಡಿಸಿದ್ದಾರೆ.
FIFTY??
In his first match as @PunjabKingsIPL's captain, @mayankcricket scores a fifty off 37 balls. https://t.co/Rm0jfZKXXT #PBKSvDC #VIVOIPL #IPL2021 pic.twitter.com/a89sAfT6dn
— IndianPremierLeague (@IPL) May 2, 2021
ಶತಕ ಪೂರೈಸಿದ ಪಂಜಾಬ್
ಪಂಜಾಬ್ ಕಿಂಗ್ಸ್ ತಂಡ 15 ಓವರ್ಗಳ ಅಂತ್ಯಕ್ಕೆ 102 ರನ್ ದಾಖಲಿಸಿದೆ. 4 ವಿಕೆಟ್ ಕಳೆದುಕೊಂಡಿದೆ. ಮಯಾಂಕ್ ಅಗರ್ವಾಲ್ 47 ರನ್ ಗಳಿಸಿ ಅರ್ಧಶತಕದ ಅಂಚಿನಲ್ಲಿದ್ದಾರೆ. ಜವಾಬ್ದಾರಿಯುತ ಆಟ ಆಡುತ್ತಿದ್ದಾರೆ.
Mayank's closing in on a fighting fifty ?
With 5 overs to go, how much will we end up with?#PBKS – 102/4 (15)#SaddaPunjab #PunjabKings #IPL2021 #PBKSvDC
— Punjab Kings (@PunjabKingsIPL) May 2, 2021
ಪಂಜಾಬ್ಗೆ ಮತ್ತೆ ಆಘಾತ; ಹೂಡಾ ರನೌಟ್
ಮಲನ್ ಬಳಿಕ ಕ್ರೀಸ್ಗೆ ಆಗಮಿಸಿದ ದೀಪಕ್ ಹೂಡಾ 1 ಬಾಲ್ಗೆ 1 ರನ್ ಗಳಿಸುವಷ್ಟರಲ್ಲಿ ಔಟ್ ಆಗಿದ್ದಾರೆ. ರನ್ ಔಟ್ ಆಗಿ ನಿರ್ಗಮಿಸಿದ್ದಾರೆ. ಪಂಜಾಬ್ ಆತಂಕದ ಸ್ಥಿತಿಯಲ್ಲಿದೆ. ನಾಯಕ ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟಕ್ಕೆ ಮುಂದಾದಂತಿದೆ. 14 ಓವರ್ಗೆ ಪಂಜಾಬ್ ಕಿಂಗ್ಸ್ 90 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ. ಇನ್ನೂ 6 ಓವರ್ಗಳು ಬಾಕಿ ಉಳಿದಿವೆ.
ಡೇವಿಡ್ ಮಲನ್ ಔಟ್
26 ಬಾಲ್ಗೆ 26 ರನ್ ಗಳಿಸಿದ್ದ ಡೇವಿಡ್ ಮಲನ್ ಅಕ್ಸರ್ ಪಟೇಲ್ ಬೌಲಿಂಗ್ಗೆ ಬೌಲ್ಡ್ ಆಗಿದ್ದಾರೆ. ಈ ಮೂಲಕ ಪಂಜಾಬ್ ಕಿಂಗ್ಸ್ ತನ್ನ 3 ವಿಕೆಟ್ ಕಳೆದುಕೊಂಡಿದೆ. ನಾಯಕ ಮಯಾಂಕ್ ಅಗರ್ವಾಲ್ 29 ಬಾಲ್ಗೆ 35 ರನ್ ಗಳಿಸಿ ಆಡುತ್ತಿದ್ದಾರೆ. ದೀಪಕ್ ಹೂಡಾ ಕ್ರೀಸ್ಗೆ ಇಳಿದಿದ್ದಾರೆ.
ಮಲನ್ ಸಿಕ್ಸರ್, ಬೌಂಡರಿ
ಪಂಜಾಬ್ ಕಿಂಗ್ಸ್ ತಂಡ 12ನೇ ಓವರ್ನ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 78 ರನ್ ದಾಖಲಿಸಿದೆ. ಇಶಾಂತ್ ಶರ್ಮಾ ಬೌಲಿಂಗ್ಗೆ ಮಲನ್ ಒಂದು ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದ್ದಾರೆ.
ಪಂಜಾಬ್ ಕಿಂಗ್ಸ್ ಶಿಸ್ತುಬದ್ಧ ಆಟ
2 ವಿಕೆಟ್ಗಳನ್ನು ಕಳೆದುಕೊಂಡ ಬಳಿಕ ಪಂಜಾಬ್ ಕಿಂಗ್ಸ್ ಶಿಸ್ತುಬದ್ಧ ಆಟಕ್ಕೆ ಮುಂದಾಗಿದೆ. ನಾಯಕ ಮಯಾಂಕ್ ಅಗರ್ವಾಲ್ 21 ಬಾಲ್ಗೆ 27 ಮತ್ತು ಡೇವಿಡ್ ಮಲನ್ 14 ಬಾಲ್ಗೆ 10 ರನ್ ಗಳಿಸಿದ್ದಾರೆ. ತಂಡದ ಮೊತ್ತ 10 ಓವರ್ಗೆ 2 ವಿಕೆಟ್ ಕಳೆದುಕೊಂಡು 63 ಆಗಿದೆ. ಇಶಾಂತ್ ಶರ್ಮಾ ಹಾಗೂ ಅಕ್ಸರ್ ಪಟೇಲ್ ಕಡಿಮೆ ರನ್ ನೀಡಿ ಉತ್ತಮ ದಾಳಿ ನಡೆಸಿದ್ದಾರೆ.
ಪಂಜಾಬ್ ಕಿಂಗ್ಸ್ 53/2 (8 ಓವರ್)
ಪಂಜಾಬ್ ಕಿಂಗ್ಸ್ ತಂಡ 8 ಓವರ್ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 53 ರನ್ ದಾಖಲಿಸಿದೆ. ತಂಡದ ಪರವಾಗಿ ಮಯಾಂಕ್ ಅಗರ್ವಾಲ್ 23 (17) ಹಾಗೂ ಡೇವಿಡ್ ಮಲನ್ 7 (7) ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ದೀಪಕ್ ಹೂಡಾ, ಶಾರುಖ್ ಖಾನ್, ಹರ್ಪ್ರೀತ್ ಬ್ರರ್ ಬ್ಯಾಟಿಂಗ್ ಮಾಡಲು ಬಾಕಿ ಇದ್ದಾರೆ.
ಗೈಲ್ ಔಟ್
ಪಂಜಾಬ್ ಕಿಂಗ್ಸ್ ತನ್ನ ಮುಖ್ಯ 2 ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತ ಎದುರಿಸಿದೆ. ಪವರ್ಪ್ಲೇ ಅಂತ್ಯಕ್ಕೆ ಕೇವಲ 39 ರನ್ ಗಳಿಸಿರುವ ಪಂಜಾಬ್ 2 ವಿಕೆಟ್ ಕಳೆದುಕೊಂಡಿದೆ. ಕ್ರಿಸ್ ಗೈಲ್ 9 ಬಾಲ್ಗೆ 13 ರನ್ ಗಳಿಸಿ ರಬಾಡ ಬೌಲಿಂಗ್ಗೆ ಬೌಲ್ಡ್ ಆಗಿದ್ದಾರೆ. ಮಯಾಂಕ್ ಅಗರ್ವಾಲ್ ಹಾಗೂ ಡೇವಿಡ್ ಮಲನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
We are placed at 39/2 at the end of the powerplay…
Malan joins Mayank in the middle ??
All the updates from #PBKSvDC: https://t.co/z4Xb1JHChW#SaddaPunjab #PunjabKings #IPL2021
— Punjab Kings (@PunjabKingsIPL) May 2, 2021
ಪಂಜಾಬ್ ಕಿಂಗ್ಸ್ ಮೊದಲ ವಿಕೆಟ್ ಪತನ
ಪಂಜಾಬ್ ಕಿಂಗ್ಸ್ ತನ್ನ ಮೊದಲ ವಿಕೆಟ್ ಕಳೆದುಕೊಂಡಿದೆ. ಪ್ರಭ್ಸಿಮ್ರನ್ ಸಿಂಗ್ 16 ಬಾಲ್ಗೆ 12 ರನ್ ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ ಕಿಂಗ್ಸ್ 4 ಓವರ್ಗೆ 18 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ಮಯಾಂಕ್ ಅಗರ್ವಾಲ್ ಹಾಗೂ ಕ್ರಿಸ್ ಗೈಲ್ ಆಡುತ್ತಿದ್ದಾರೆ.
ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್ ತಂಡ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದೆ. ತಂಡದ ಪರವಾಗಿ ಪ್ರಭ್ಸಿಮ್ರನ್ ಸಿಂಗ್ ಮತ್ತು ಮಯಾಂಕ್ ಅಗರ್ವಾಲ್ ಕ್ರೀಸ್ ಕಾಯ್ದುಕೊಂಡಿದ್ದಾರೆ. 2 ಓವರ್ಗಳ ಅಂತ್ಯಕ್ಕೆ ಪಂಜಾಬ್ ತಂಡದ ಮೊತ್ತ ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿದೆ. ಪಂಜಾಬ್ ನಿಧಾನಗತಿಯ ಆಟಕ್ಕೆ ಮುಂದಾಗಿದೆ. ಇಶಾಂತ್ ಶರ್ಮಾ ಹಾಗೂ ಸ್ಟೋಯಿನಿಸ್ ಮೊದಲೆರಡು ಓವರ್ ಬೌಲಿಂಗ್ ಮಾಡಿದ್ದಾರೆ.
ಕೆ.ಎಲ್. ರಾಹುಲ್ ಅಲಭ್ಯ
ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್. ರಾಹುಲ್ ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಆರೋಗ್ಯ ಸಮಸ್ಯೆ ಕಂಡುಬಂದ ಕಾರಣ ಅವರಿಂದು ಆಡುತ್ತಿಲ್ಲ. ರಾಹುಲ್ ಬದಲಾಗಿ ಮಯಾಂಕ್ ಅಗರ್ವಾಲ್ ನಾಯಕತ್ವ ವಹಿಸಿಕೊಂಡಿದ್ದಾರೆ.
Praying for KL Rahul’s health and speedy recovery ?❤️#SaddaPunjab #PunjabKings #IPL2021 pic.twitter.com/q81OtUz297
— Punjab Kings (@PunjabKingsIPL) May 2, 2021
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಯಿಂಗ್ ಇಲೆವೆನ್ ಈ ರೀತಿ ಇದೆ..
We now head to @GCAMotera where the second match of the day will start soon. #DC have won the toss and opted to bowl first. https://t.co/Rm0jfZKXXT #PBKSvDC #VIVOIPL pic.twitter.com/JBHP3P029s
— IndianPremierLeague (@IPL) May 2, 2021
ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ವಿನ್
ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಲಿದೆ.
Match 29. Delhi Capitals win the toss and elect to field https://t.co/Rm0jfZtn6l #PBKSvDC #VIVOIPL #IPL2021
— IndianPremierLeague (@IPL) May 2, 2021
Published On - May 02,2021 11:05 PM