PV Sindhu: ಕೊಟ್ಟ ಮಾತಿನಂತೆ ಪಿವಿ ಸಿಂಧು ಜೊತೆ ಐಸ್​ಕ್ರೀಂ ಸವಿದ ಪ್ರಧಾನಿ ನರೇಂದ್ರ ಮೋದಿ

| Updated By: Digi Tech Desk

Updated on: Aug 16, 2021 | 1:12 PM

ಒಲಿಂಪಿಕ್ಸ್​ ಸ್ಪರ್ಧೆಗೆ ತೆರಳುವ ಮುನ್ನ ಪಿವಿ ಸಿಂಧು ಜೊತೆ ಮಾತನಾಡಿದ್ದ ಪ್ರಧಾನಿ ಮೋದಿ ಟೋಕಿಯೋದಿಂದ ವಾಪಾಸಾದ ಬಳಿಕ ಆಕೆಯೊಂದಿಗೆ ಐಸ್​ಕ್ರೀಂ ತಿನ್ನುವುದಾಗಿ ಹೇಳಿದ್ದರು. ಆ ಮಾತಿನಂತೆ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಔತಣ ಕೂಟದಲ್ಲಿ ಒಲಿಂಪಿಕ್ಸ್​ ಪದಕ ವಿಜೇತೆ ಪಿವಿ ಸಿಂಧು ಜೊತೆ ಪ್ರಧಾನಿ ಐಸ್​ಕ್ರೀಂ ಸವಿದಿದ್ದಾರೆ.

PV Sindhu: ಕೊಟ್ಟ ಮಾತಿನಂತೆ ಪಿವಿ ಸಿಂಧು ಜೊತೆ ಐಸ್​ಕ್ರೀಂ ಸವಿದ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ಮೋದಿಯೊಂದಿಗೆ ಐಸ್​ಕ್ರೀಂ ಸವಿದ ಪಿವಿ ಸಿಂಧು
Follow us on

ನವದೆಹಲಿ: ಈ ಬಾರಿಯ ಟೋಕಿಯೊ ಒಲಿಂಪಿಕ್ಸ್​ (Tokyo Olympics) ಕ್ರೀಡಾಕೂಟದಿಂದ ವಾಪಾಸ್ ಬಂದ ಬಳಿಕ ನಿಮ್ಮ ಜೊತೆ ಐಸ್​ ಕ್ರೀಂ ತಿನ್ನುವುದಾಗಿ ಪಿ.ವಿ. ಸಿಂಧುಗೆ (PV Sindhu) ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಹೇಳಿದ್ದರು. ಆ ಮಾತನ್ನು ಅವರು ಸುಮ್ಮನೆ ಹೇಳಿರಲಿಲ್ಲ. ಒಲಿಂಪಿಕ್ಸ್​ ಸ್ಪರ್ಧೆಗೂ ಮೊದಲು ಪಿ.ವಿ. ಸಿಂಧುಗೆ ಹೇಳಿದಂತೆ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ. ಸಿಂಧು ಜೊತೆಗೆ ಪ್ರಧಾನಿ ಮೋದಿ ಐಸ್​ ಕ್ರೀಂ ಸೇವಿಸಿದ್ದಾರೆ. ತಮ್ಮ ನಿವಾಸದಲ್ಲಿ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳಿಗೆ ಔತಣಕೂಡ ಏರ್ಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈ ವೇಳೆ ಪಿ.ವಿ. ಸಿಂಧು ಜೊತೆಗೆ ಐಸ್​ಕ್ರೀಂ ಸೇವಿಸಿದ್ದಾರೆ.

ಟೋಕಿಯೊ ಒಲಂಪಿಕ್ಸ್​ಗೂ ಮೊದಲು ಕ್ರೀಡಾಪಪುಟಗಳನ್ನು ಹುರಿದುಂಬಿಸಲು ಟೋಕಿಯೋಗೆ ತೆರಳುವ ಮೊದಲು ಪ್ರಧಾನಿ ಮೋದಿ ಭಾರತದ ಕ್ರೀಡಾಪಟುಗಳ ಜೊತೆ ವಿಡಿಯೋ ಕಾನ್ಫರೆನ್ಸ್​ ನಡೆಸಿದ್ದರು. ಆಗ ಪಿ.ವಿ. ಸಿಂಧು ಬಳಿ ಅವರ ಡಯೆಟ್ ಬಗ್ಗೆ ಕೇಳಿದ್ದರು. ಆಗ ತನ್ನ ಡಯಟ್ ಬಗ್ಗೆ ಮಾಹಿತಿ ನೀಡಿದ್ದ ಪಿವಿ ಸಿಂಧು, ಕಠಿಣ ಅಭ್ಯಾಸ, ಡಯಟ್ ಕಾರಣ ನಾನು ನನ್ನ ಇಷ್ಟದ ಐಸ್‌ಕ್ರೀಂ ತಿನ್ನುತ್ತಿಲ್ಲ. ಐಸ್‌ಕ್ರೀಂ ತಿನ್ನುವುದನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದರು. ಅದನ್ನು ಕೇಳಿದ್ದ ಪ್ರಧಾನಿ ನರೇಂದ್ರ ಮೋದಿ, ಒಲಿಂಪಿಕ್ಸ್​ನಲ್ಲಿ ಮರಳಿದ ನಂತರ ನಾವಿಬ್ಬರೂ ಒಟ್ಟಿಗೇ ಐಸ್​ಕ್ರೀಂ ತಿನ್ನೋಣ ಎಂದಿದ್ದರು.

ಆ ಮಾತನ್ನು ಉಳಿಸಿಕೊಂಡಿರುವ ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ಪಿವಿ ಸಿಂಧು ಅವರೊಂದಿಗೆ ಐಸ್​ಕ್ರೀಂ ತಿಂದಿದ್ದಾರೆ. ಎರಡು ಬಾರಿ ಒಲಿಂಪಿಕ್ಸ್​ ಪದಕ ಪಡೆದಿರುವ ಪಿವಿ ಸಿಂಧು ಪ್ರಧಾನಿಯೊಂದಿಗೆ ಐಸ್​ಕ್ರೀಂ ಸೇವಿಸಿರುವ ಫೋಟೋ ಭಾರೀ ವೈರಲ್ ಆಗಿದೆ.

ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದ ಪ್ರಧಾನಿ ನರೇಂದ್ರ ಮೋದಿ ದೇಶದ ಗೌರವ ಹೆಚ್ಚಿಸಿದ್ದಕ್ಕೆ ವೈಯಕ್ತಿಕವಾಗಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಚಿನ್ನದ ಪದಕ ವಿಜೇತರಾದ ನೀರಜ್ ಚೋಪ್ರಾ ಅವರೊಂದಿಗೆ ವಿಶೇಷ ಮಾತುಕತೆ ನಡೆಸಿದ್ದಾರೆ. ಹಾಗೇ, ನೀರಜ್ ಚೋಪ್ರಾ ಅವರ ಫೇವರೆಟ್ ಚೂರ್ಮಾ ಮಾಡಿಸಿ, ಪಿವಿ ಸಿಂಧು ಫೇವರೆಟ್ ಐಸ್​ಕ್ರೀಂ ತರಿಸಿ ಅವರೊಂದಿಗೆ ಊಟ ಮಾಡಿದ್ದಾರೆ.

ನಮ್ಮ ದೇಶಕ್ಕೆ ಹೆಮ್ಮೆ ತಂದಿರುವ ಅಥ್ಲೀಟ್​ಗಳು ಇಂದು ನಮ್ಮೊಂದಿಗೆ ಇದ್ದಾರೆ. ಒಂದು ಕಾಲದಲ್ಲಿ ಕ್ರೀಡೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಯಾವಾಗಲೂ ಆಟವಾಡುತ್ತಿದ್ದರೆ ಅದು ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತದೆ ಎಂದು ಪೋಷಕರು ಸದಾ ಬೈಯುತ್ತಿದ್ದರು. ಆದರೀಗ ಕ್ರೀಡೆ ಮತ್ತು ಫಿಟ್​ನೆಸ್ ಬಗ್ಗೆ ಜನರ ಅಭಿಪ್ರಾಯಗಳು ಬದಲಾಗಿವೆ. ಆ ಕಾರಣದಿಂದಲೇ ಭಾರತ ಈ ಬಾರಿ ಒಲಿಂಪಿಕ್ಸ್​ನಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಕ್ರೀಡಾಪಟುಗಳು ಪದಕ ಗೆದ್ದು ನಮ್ಮ ಹೃದಯ ಗೆದ್ದಿದ್ದು ಮಾತ್ರವಲ್ಲದೆ ಮುಂದಿನ ಪೀಳಿಗೆಗೆ ಸ್ಫೂರ್ತಿ ತುಂಬಿದ್ದಾರೆ ಎಂದು ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Olympics: 1896ರ ಒಲಿಂಪಿಕ್ಸ್​​ನಲ್ಲೇ ಚಿನ್ನ ಗೆದ್ದಿದ್ದ ಭಾರತೀಯ: ಆದರೆ ಅದು ಭಾರತಕ್ಕೆ ಸೇರಿದ್ದಲ್ಲ, ಯಾಕೆ ಗೊತ್ತೇ?

PV Sindhu: ಕೋರ್ಟ್ ಮೆಟ್ಟಿಲೇರಲು ಪಿವಿ ಸಿಂಧೂ ನಿರ್ಧಾರ: ಬ್ಯಾಡ್ಮಿಂಟನ್ ಕೋರ್ಟ್ ಅಲ್ಲ!

(Prime Minister Narendra Modi Fulfills His Promise Eat Ice Cream with Tokyo Olympics Medalist PV Sindhu)

Published On - 1:02 pm, Mon, 16 August 21