Olympics: 1896ರ ಒಲಿಂಪಿಕ್ಸ್​​ನಲ್ಲೇ ಚಿನ್ನ ಗೆದ್ದಿದ್ದ ಭಾರತೀಯ: ಆದರೆ ಅದು ಭಾರತಕ್ಕೆ ಸೇರಿದ್ದಲ್ಲ, ಯಾಕೆ ಗೊತ್ತೇ?

ಲೂಂಸೆಸ್ಟನ್ 1896ರ ಚೊಚ್ಚಲ ಒಲಿಂಪಿಕ್ಸ್​ನಲ್ಲಿ ವೈಟ್​ಲಿಫ್ಟಿಂಗ್ ವಿಭಾಗದಲ್ಲಿ ಭಾಗವಹಿಸಿ ಚಿನ್ನ ಗೆದ್ದಿದ್ದರು. ಮೂಲತಃ ಇವರು ಭಾರತದವರು. ಇವರು ಹುಟ್ಟಿದ್ದು 1874 ರಂದು ಕರ್ನಾಟಕ ರಾಜ್ಯದ ಬಾಗಲಕೋಟೆಯಲ್ಲಿನ ಕಲಡ್ಗಿ ಎಂಬ ಗ್ರಾಮದಲ್ಲಿ.

Olympics: 1896ರ ಒಲಿಂಪಿಕ್ಸ್​​ನಲ್ಲೇ ಚಿನ್ನ ಗೆದ್ದಿದ್ದ ಭಾರತೀಯ: ಆದರೆ ಅದು ಭಾರತಕ್ಕೆ ಸೇರಿದ್ದಲ್ಲ, ಯಾಕೆ ಗೊತ್ತೇ?
Launceston Elliot
Follow us
TV9 Web
| Updated By: Vinay Bhat

Updated on: Aug 15, 2021 | 12:06 PM

ಒಲಿಂಪಿಕ್ (Olympics) ಕ್ರೀಡಾಕೂಟ ಪ್ರಾರಂಭವಾಗಿದ್ದು 1896ರಲ್ಲಿ. ಈ ಚೊಚ್ಚಲ ಒಲಿಂಪಿಕ್​ನಲ್ಲೇ ಭಾರತೀಯ ವೈಟ್​ಲಿಫ್ಟಿಂಗ್​ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟದ್ದರು. ಈ ವಿಚಾರ ಅನೇಕರಿಗೆ ತಿಳಿದೇ ಇಲ್ಲ. ಆದರೆ, ಆ ಪದಕ ಭಾರತಕ್ಕೆ ಸಿಕ್ಕಿಲ್ಲ. ಯಾಕಂದ್ರೆ ಈ ಚಿನ್ನದ ಪದಕ ಗೆದ್ದಿದ್ದು ಭಾರತೀಯ ಮೂಲದ ಬ್ರಿಟನ್​ನ ಲೂಂಸೆಸ್ಟನ್ ಎಲಿಯಟ್ (Launceston Elliot).

ಹೌದು, ಲೂಂಸೆಸ್ಟನ್ 1896ರ ಚೊಚ್ಚಲ ಒಲಿಂಪಿಕ್ಸ್​ನಲ್ಲಿ ವೈಟ್​ಲಿಫ್ಟಿಂಗ್ ವಿಭಾಗದಲ್ಲಿ ಭಾಗವಹಿಸಿ ಚಿನ್ನ ಗೆದ್ದಿದ್ದರು. ಮೂಲತಃ ಇವರು ಭಾರತದವರು. ಇವರು ಹುಟ್ಟಿದ್ದು 1874 ರಂದು ಕರ್ನಾಟಕ ರಾಜ್ಯದ ಬಾಗಲಕೋಟೆಯಲ್ಲಿನ ಕಲಡ್ಗಿ ಎಂಬ ಗ್ರಾಮದಲ್ಲಿ.

ಈ ಸಂದರ್ಭ ಇವರ ತಂದೆ ಭಾರತೀಯ ನಾಗರಿಕ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 1887 ರಲ್ಲಿ ಲೂಂಸೆಸ್ಟನ್ ತಂದೆ ಆ ಹುದ್ದೆಯನ್ನು ತ್ಯಜಿಸಿ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಿದರು. ಆಗ ಇವರಿಗೆ 13 ವರ್ಷ ವಯಸ್ಸಾಗಿತ್ತು.

ಬಳಿಕ ಇಂಗ್ಲೆಂಡ್​ನಲ್ಲಿ ವೈಟ್​ಲಿಫ್ಟಿಂಗ್​ನಲ್ಲಿ ಸಾಕಷ್ಟು ತರಬೇತಿ ಪಡೆದು 1896ರ ಮೊದಲ ಒಲಿಂಪಿಕ್ಸ್​ನಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಗೆದ್ದು ಚಿನ್ನದ ಪದಕ ಪಡೆದುಕೊಳ್ಳುತ್ತಾರೆ. ಈ ವಿಚಾರವನ್ನು ಬ್ರಿಟಿಶ್ ಒಲಿಂಪಿಕ್ ಅಸೋಸಿಯೇಶನ್ ನೆನಪಿಸಿಕೊಂಡಿದೆ.

Mohammed Siraj: ವಿಕೆಟ್ ಕಿತ್ತಾಗ ತುಟಿಗಳ ಮೇಲೆ ಬೆರಳಿಟ್ಟು ಸಂಭ್ರಮಾಚರಣೆ: ಇದರ ಹಿಂದಿದೆ ಖಡಕ್ ಕಾರಣ

India vs England: ರೋಚಕ ಘಟ್ಟದತ್ತ ಭಾರತ-ಇಂಗ್ಲೆಂಡ್ 2ನೇ ಟೆಸ್ಟ್: ತಿರುಗಿನಿಲ್ಲುತ್ತಾ ಕೊಹ್ಲಿ ಪಡೆ?

(Launceston Elliot The first Indian born to win Gold medal in Olympics)