ಬ್ರಿಸ್ಬೇನ್ನಲ್ಲಿ ಇಂದು ಐತಿಹಾಸಿಕ ಮತ್ತು ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ಸಾಧನೆ ಮಾಡಿದ ಭಾರತೀಯ ಕ್ರಿಕೆಟ್ ಟೀಮನ್ನು ಅಭಿನಂದಿಸಿರುವ ಕೋಟ್ಯಾಂತರ ಭಾರತೀಯರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ ಒಬ್ಬರಾಗಿದ್ದಾರೆ.
ತಮ್ಮ ಟ್ವೀಟ್ನಲ್ಲಿ ಪ್ರಧಾನಿ ಮೋದಿಯವರು, ‘ಭಾರತದ ಕ್ರಿಕೆಟ್ ಟೀಮ್ ಆಸ್ಟ್ರೇಲಿಯಾದಲ್ಲಿ ಸಾಧಿಸಿರುವ ಗೆಲುವಿನಿಂದ ನಾವೆಲ್ಲ ಅನಂದತುಂದಿಲರಾಗಿದ್ದೇವೆ. ಅಸಾಧಾರಣ ಉತ್ಸಾಹ ಮತ್ತು ಕ್ರೀಡೆಯೆಡೆಗಿನ ವ್ಯಾಮೋಹ ಸರಣಿಯುದ್ದಕ್ಕೂ ಗೋಚರವಾಯಿತು. ಅದೇ ರೀತಿಯಲ್ಲಿ ಅವರ ವಿಚಲಿತಗೊಳ್ಳದ ಮನಸ್ಥೈರ್ಯ, ದಿಟ್ಟತನ ಮತ್ತು ರಾಜಿಮಾಡಿಕೊಳ್ಳದ ಸಂಕಲ್ಪ ನಮ್ಮೆಲ್ಲರ ಗಮನ ಸೆಳೆದವು. ತಂಡದ ಎಲ್ಲ ಸದಸ್ಯರಿಗೆ ಅಭಿನಂದನೆಗಳು ಮತ್ತು ಮುಂಬರುವ ಸರಣಿಗಳಿಗೆ ಶುಭ ಹಾರೈಕೆಗಳು’ ಎಂದು ಹೇಳಿದ್ದಾರೆ.
We are all overjoyed at the success of the Indian Cricket Team in Australia. Their remarkable energy and passion was visible throughout. So was their stellar intent, remarkable grit and determination. Congratulations to the team! Best wishes for your future endeavours.
— Narendra Modi (@narendramodi) January 19, 2021
ಸರಣಿಯ ಮಧ್ಯಭಾಗದಲ್ಲೇ ಪಿತೃತ್ವದ ರಜೆ ಪಡೆದು ಭಾರತಕ್ಕೆ ವಾಪಸ್ಸಾದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮೂಲಕ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.
‘ಎಂಥ ಗೆಲುವಿದು!!! Yessssss. ಆಡಿಲೇಡ್ ಪಂದ್ಯದ ನಂತರ ನಮ್ಮನ್ನು ಟೀಕಿದವರೆಲ್ಲ ಈ ಸಾಧನೆಯನ್ನು ಗಮನಿಸಿ. ಇದು ಅಭೂತಪೂರ್ವ ಪ್ರದರ್ಶನ. ಇಡೀ ದಿನ ಟೀಮಿನ ಸದಸ್ಯರು ತೋರಿದ ಸಂಕಲ್ಪ ಮತ್ತು ಧೈರ್ಯ ಅದ್ವಿತೀಯವಾಗಿತ್ತು. ಟೀಮಿನ ಎಲ್ಲ ಸದಸ್ಯರು ಮತ್ತು ಮ್ಯಾನೇಜ್ಮೆಂಟ್ ಚೆನ್ನಾಗಿ ಕಾರ್ಯನಿರ್ವಹಿಸಿತು. ಈ ಐತಿಹಾಸಿಕ ಕ್ಷಣವನ್ನು ಎಂಜಾಯ್ ಮಾಡಿ, ಚಿಯರ್ಸ್’ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.
WHAT A WIN!!! Yessssss. To everyone who doubted us after Adelaide, stand up and take notice. Exemplary performance but the grit and determination was the standout for us the whole way. Well done to all the boys and the management. Enjoy this historic feat lads. Cheers ???? @BCCI pic.twitter.com/CgWElgOOO1
— Virat Kohli (@imVkohli) January 19, 2021
ಗಾಯಗೊಂಡು ಸರಣಿಯಿಂದ ಹೊರಬಿದ್ದ ಕೆ.ಎಲ್.ರಾಹುಲ್, ‘ಬಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದು ಶ್ರೇಷ್ಠ ಪ್ರದರ್ಶನ ಮತ್ತು ಗೆಲುವಾಗಿ ದಾಖಲಾಗಲಿದೆ. ಏರಿಳಿತಗಳು ಎದುರಾಗಿದ್ದು ನಿಜವಾದರೂ, ಹುಡುಗರು ಯಾವತ್ತೂ ಸೋಲೊಪ್ಪಿಕೊಳ್ಳಲಿಲ್ಲ. ಮನೆಯಿಂದ ಬಹಳ ದೂರವಿದ್ದು, ಅಸಂಖ್ಯಾತ ಗಾಯಗಳ ಹೊರತಾಗಿಯೂ ನಮಲ್ಲಿನ ಹೋರಾಟದ ಮನೋಭಾವ ಒಂದಿನಿತೂ ಕ್ಷೀಣಿಸಲಿಲ್ಲ. ವೆಲ್ ಡನ್ ಬಾಯ್ಸ್, ನಿಮ್ಮ ಸಾಧನೆ ನಮ್ಮೆಲ್ಲರಲ್ಲಿ ಹೆಮ್ಮೆ ಮೂಡಿಸಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ತಮ್ಮ ಹಾಸ್ಯಭರಿತ ಟ್ವೀಟ್ಗಳ ಮೂಲಕ ಸದಾ ಸುದ್ದಿಯಲ್ಲಿರುವ ಮಾಜಿ ಆರಂಭ ಆಟಗಾರ ವಿರೇಂದ್ರ ಸೆಹ್ವಾಗ್, ‘ಖುಷಿಯಿಂದ ಹುಚ್ಚನಂತಾಗಿದ್ದೇನೆ. ಹೊಸ ಇಂಡಿಯಾವೆಂದರೆ ಇದು. ಮನೆಯೊಳಗೆ ನುಗ್ಗಿ ಹೊಡೆಯುತ್ತೇವೆ. ಅಡಿಲೇಡ್ನಿಂದ ಇಲ್ಲಿಯವರೆಗೆ ನೆನೆಪಿಸಿಕೊಂಡೆರೆ ಈ ಹುಡುಗರು ಇಡೀ ಜೀವಮಾನಕ್ಕಾಗುವವಷ್ಟು ಸಂತೋಷವನ್ನು ನೀಡಿದ್ದಾರೆ. ನಾವು ವಿಶ್ವಕಪ್ ಗೆದ್ದಿರುವುದು ನಿಜ ಆದರಿದು ಸ್ಪೆಷಲ್. ಪಂತ್ ಎಕ್ಸ್ಟ್ರಾ ಸ್ಪೆಷಲ್ ಅಗಿರುವುದಕ್ಕೂ ಕಾರಣವಿದೆ’ ಎಂದಿದ್ದಾರೆ.
Khushi ke maare pagal. This is the new India. Ghar mein ghuskar maarta hai.
From what happened in Adelaide to this, these young guys have given us a joy of a lifetime. There have been World Cup wins but this is special.
And yes,there is a reason Pant is extra special . pic.twitter.com/3CAQIkAuwq— Virender Sehwag (@virendersehwag) January 19, 2021
ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ತಮ್ಮ ಟ್ವೀಟ್ನಲ್ಲಿ ಯುವ ಆಟಗಾರರ ಸಾಧನೆಯನ್ನು ಮನಸಾರೆ ಹೊಗಳಿದ್ದಾರೆ.
‘ಟೀಮ್ ಇಂಡಿಯಾಗಿದು ಐತಿಹಾಸಿಕ ಜಯ. ಗಿಲ್ ಮತ್ತು ಪಂತ್ ಮುಂಚೂಣಿಯಲ್ಲಿದ್ದ ಯುವಕರ ಪಡೆ ತನ್ನ ಸಾಮರ್ಥ್ಯವನ್ನು ಸೂಕ್ತವಾದ ಸಮಯದಲ್ಲಿ ಪ್ರದರ್ಶಿತು. ಟೀಮಿನ ಪ್ರದರ್ಶನದಲ್ಲಾದ ಅಮೂಲಾಗ್ರ ಬದಲಾವಣೆಗೆ ಕಾರಣರಾದ ರವಿ ಶಾಸ್ತ್ರೀ ಮತ್ತು ಇತರ ಸಪೋರ್ಟ್ ಸ್ಟಾಫ್ಗೂ ಅಭಿನಂದನೆಗಳು. ಈ ಟೀಮಿನ ಬಗ್ಗೆ ಅತೀವ ಹೆಮ್ಮೆಯೆನಿಸುತ್ತಿದೆ, ದಶಕಗಳವರೆಗೆ ನೆನಪಿನಲ್ಲುಳಿವ ಸಾಧನೆ ಇದು’ ಎಂದು ಲಕ್ಷಣ್ ಹೇಳಿದ್ದಾರೆ.
ಭಾರತದ ಲೆಜೆಂಡರಿ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಇದೊಂದು ಅಪ್ರತಿಮ ಗೆಲುವು ಎಂದು ಹೇಳುತ್ತಾ ಟೀಮ್ ಇಂಡಿಯಾದ ಸದಸ್ಯರನ್ನು ಅಭಿನಂದಿಸಿದ್ದಾರೆ.
EVERY SESSION WE DISCOVERED A NEW HERO.
Every time we got hit, we stayed put & stood taller. We pushed boundaries of belief to play fearless but not careless cricket. Injuries & uncertainties were countered with poise & confidence. One of the greatest series wins!
Congrats India. pic.twitter.com/ZtCChUURLV— Sachin Tendulkar (@sachin_rt) January 19, 2021
‘ಪ್ರತಿಯೊಂದು ಸೆಷನ್ನಲ್ಲಿಯೂ ನಮಗೊಬ್ಬ ಹೀರೊ ಇಂದು ದೊರಕಿದ. ಪೆಟ್ಟು ತಿಂದಾಗಲೆಲ್ಲ ನಾವು ಮೈಕೊಡವಿಕೊಂಡೆದ್ದು ಸವಾಲುಗಳನ್ನು ಎದುರಿಸಿದೆವು. ನಮ್ಮ ನಂಬುಗೆಯ ಸೀಮೆಯನ್ನು ವಿಸ್ತರಿಸುತ್ತಾ ಕೇರ್ಲೆಸ್ ಕ್ರಿಕೆಟ್ ಆಡದೆ ಫಿಯರ್ಲೆಸ್ ಕ್ರಿಕೆಟ್ ಆಡಿದೆವು, ಗಾಯ ಮತ್ತು ಅನಿಶ್ಚಿತತೆಯ ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದೆವು. ಇದು ಭಾರತದ ಶ್ರೇಷ್ಠ ಸರಣಿ ಗೆಲುವುಗಳಲ್ಲೊಂದು. ಭಾರತಕ್ಕೆ ಅಭಿನಂದನೆಗಳು’ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
ಆರ್ಸಿಬಿಗೆ ಆಡುವ ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್, ರಿಷಭ್ ಪಂತ್ ಬ್ಯಾಟಿಂಗನ್ನು ಶ್ಲಾಘಿಸಿದ್ದಾರೆ. ‘ಎಂಥ ಟೆಸ್ಟ್ ಮ್ಯಾಚ್! ಭಾರತ ಟೀಮಿನ ಬ್ಯಾಟಿಂಗ್ ಅಳ ಭೀತಿ ಹುಟ್ಟಿಸುವಂತಿದೆ.@RishabhPant17, 17 ನೇ ನಂಬರ್ ಬಹಳ ಸೊಗಸಾಗಿದೆ. ವಲ್ ಪ್ಲೇಯ್ಡ್ ಯಂಗ್ ಮ್ಯಾನ್, #testcricket at its very best, ಅಂತ ಎಬಿಡಿ ಟ್ವೀಟ್ ಮಾಡಿದ್ದಾರೆ
ಇಂಗ್ಲಿಷ್ ಪ್ರಿಮೀಯರ್ ಲೀಗಿನಲ್ಲಾಡುವ ಟಾಟೆನ್ಹ್ಯಾಮ್ ಹಾಟ್ಸ್ಪುರ್ ಕ್ಲಬ್ನ ಸ್ತ್ರೈಕರ್ ಹ್ಯಾರಿ ಕೇನ್ ತಮ್ಮ ಟ್ವೀಟ್ನಲ್ಲಿ ‘@BCCI ನಂಬಲಸಾಧ್ಯವೆನಿಸುವ ರೀತಿಯಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿದೆ. ಪ್ರತಿಯೊಂದು ಟೆಸ್ಟ್ ಪಂದ್ಯ ರೋಮಾಂಚಕಾರಿಯಾಗಿತ್ತು’ ಅಂತ ಹೇಳಿದ್ದಾರೆ.
Unbelievable test series win by @BCCI ! Every test match was exciting to watch! #IndiavsAustralia
— Harry Kane (@HKane) January 19, 2021
India vs Australia Test series | ಆಸ್ಟ್ರೇಲಿಯಾದಲ್ಲಿ ಹೊಸ ಇಂಡಿಯಾ ಸಾಧಿಸಿತು ದಿಗ್ವಿಜಯ!
Published On - 7:47 pm, Tue, 19 January 21