Bengaluru Bulls: ಭರ್ಜರಿ ಜಯದೊಂದಿಗೆ ಸೆಮಿಫೈನಲ್​ಗೆ ನುಗ್ಗಿದ ಬೆಂಗಳೂರು ಬುಲ್ಸ್

| Updated By: ಝಾಹಿರ್ ಯೂಸುಫ್

Updated on: Feb 21, 2022 | 9:57 PM

Pro Kabaddi League 2022: ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಶೆಹ್ರಾವತ್ 11 ಪಾಯಿಂಟ್ ಕಲೆಹಾಕಿದರೆ, ಚಂದ್ರನ್ ರಂಜಿತ್ 7 ರೈಡಿಂಗ್ ಪಾಯಿಂಟ್ ಪಡೆದುಕೊಂಡರು.

Bengaluru Bulls: ಭರ್ಜರಿ ಜಯದೊಂದಿಗೆ ಸೆಮಿಫೈನಲ್​ಗೆ ನುಗ್ಗಿದ ಬೆಂಗಳೂರು ಬುಲ್ಸ್
Bengaluru Bulls
Follow us on

ಪ್ರೋ ಕಬಡ್ಡಿ ಲೀಗ್​ನ ಎಲಿಮಿನೇಟರ್​ ಪಂದ್ಯಗಳು ಮುಗಿದಿವೆ. ಪುಣೇರಿ ಪಲ್ಟನ್ ವಿರುದ್ದ ಯುಪಿ ಯೋಧಾ ಗೆದ್ದರೆ, ಗುಜರಾತ್ ಜೈಂಟ್ಸ್ ವಿರುದ್ದ ಬೆಂಗಳೂರು ಬುಲ್ಸ್ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ತಂಡವು ಸೆಮಿಫೈನಲ್​ಗೆ ಎಂಟ್ರಿ ಕೊಟ್ಟಿದೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಬೆಂಗಳೂರು ಬುಲ್ಸ್ ಹಾಗೂ ಗುಜರಾತ್ ಜೈಂಟ್ಸ್​ ನಡುವಣ ಪಂದ್ಯವು ಆರಂಭದಲ್ಲೇ ಒನ್​ಸೈಡ್ ಪಂದ್ಯವಾಗಿ ಮಾರ್ಪಟ್ಟಿತು. ಬೆಂಗಳೂರು ಬುಲ್ಸ್​ ಸ್ಟಾರ್ ರೈಡರ್ ಪವನ್ ಕುಮಾರ್ ಶೆಹ್ರಾವತ್ ಅವರ ಭರ್ಜರಿ ಪ್ರದರ್ಶನದ ಮುಂದೆ ಗುಜರಾತ್ ಆಟಗಾರರು ಮಂಕಾದಂತೆ ಕಂಡು ಬಂದರು.

ಆರಂಭಿಕ ರೈಡ್ ಮೂಲಕವೇ ಪವನ್ ಕುಮಾರ್ ಶೆಹ್ರಾವತ್ ಹಾಗೂ ಚಂದ್ರನ್ ರಂಜಿತ್ ಬೆಂಗಳೂರು ತಂಡಕ್ಕೆ ಬ್ಯಾಕ್ ಟು ಬ್ಯಾಕ್ ಪಾಯಿಂಟ್​ಗಳನ್ನು ತಂದುಕೊಟ್ಟರು. ಮತ್ತೊಂದೆಡೆ ರಾಕೇಶ್ ಉತ್ತಮ ರೈಡ್ ಮಾಡಿದ್ರೂ ಸೌರಭ್ ನಂದಾಲ್ ಹಾಗೂ ಮಹೇಂದ್ರ ಸಿಂಗ್ ಟ್ಯಾಕಲ್​ ಬಗ್ಗೆ ಎಚ್ಚರಿಕೆವಹಿಸಬೇಕಾಯಿತು. ಪರಿಣಾಮ ಮೊದಲಾರ್ಧ ಮುಕ್ತಾಯದ ವೇಳೆಗೆ ಬೆಂಗಳೂರು ಬುಲ್ಸ್ 24 ಅಂಕ ಪಡೆದರೆ, ಗುಜರಾತ್ ಜೈಂಟ್ಸ್ 17 ಅಂಕಗಳಿಸಲಷ್ಟೇ ಶಕ್ತರಾದರು.

ಇನ್ನು 6 ಅಂಕಗಳ ಮುನ್ನಡೆಯೊಂದಿಗೆ ದ್ವಿತಿಯಾರ್ಧ ಆರಂಭಿಸಿದ ಬೆಂಗಳೂರು ಬುಲ್ಸ್ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅದರಂತೆ ಗುಜರಾತ್ ತಂಡವು 28 ಅಂಕಗಳಿಸುವಷ್ಟರಲ್ಲಿ ಬೆಂಗಳೂರು ಬುಲ್ಸ್ ತಂಡದ ಪಾಯಿಂಟ್​ 40ರ ಗಡಿ ದಾಟಿತು. ಅಂತಿಮ 1 ನಿಮಿಷಗಳ ಆಟ ಬಾಕಿಯಿರುವಾಗ ಬೆಂಗಳೂರು ಬುಲ್ಸ್ ತಂಡವು 49 ಅಂಕ ಪಡೆಯುವ ಮೂಲಕ ಗೆಲುವನ್ನು ಖಚಿತಪಡಿಸಿಕೊಂಡಿತು.

ಅದರಂತೆ ಅಂತಿಮವಾಗಿ ಬೆಂಗಳೂರು ಬುಲ್ಸ್ ತಂಡವು 49 ಅಂಕಗಳಿಸಿದರೆ, ಗುಜರಾತ್ ಜೈಂಟ್ಸ್ ತಂಡವು 29 ಅಂಕಗಳಿಸುವ ಮೂಲಕ 20 ಅಂಕಗಳ ಅಂತರದಿಂದ ಸೋಲೋಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ತಂಡವು ಸೆಮಿಫೈನಲ್​ಗೆ ಎಂಟ್ರಿ ಕೊಟ್ಟಿದೆ. ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಶೆಹ್ರಾವತ್ 11 ಪಾಯಿಂಟ್ ಕಲೆಹಾಕಿದರೆ, ಚಂದ್ರನ್ ರಂಜಿತ್ 7 ರೈಡಿಂಗ್ ಪಾಯಿಂಟ್ ಪಡೆದುಕೊಂಡರು. ಇನ್ನು ಟ್ಯಾಕಲ್ ಮೂಲಕ ಮಹೇಂದ್ರ ಸಿಂಗ್ 5 ಪಾಯಿಂಟ್ ಕಲೆಹಾಕಿ ಗೆಲುವಿನ ರೂವಾರಿ ಎನಿಸಿಕೊಂಡರು. ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ (31) ವಿರುದ್ದ ಯುಪಿ ಯೋಧಾ 42 ಅಂಕ ಪಡೆಯುವ ಮೂಲಕ 11 ಅಂಕಗಳ ಅಂತರದಿಂದ ಗೆದ್ದು ಸೆಮಿಫೈನಲ್​ಗೆ ಎಂಟ್ರಿ ಕೊಟ್ಟಿದೆ.

ಬುಧವಾರ ನಡೆಯಲಿರುವ ಸೆಮಿಫೈನಲ್​ನಲ್ಲಿ ಪಟ್ನಾ ಪೈರೇಟ್ಸ್ ಹಾಗೂ ಯುಪಿ ಯೋಧಾ ಮುಖಾಮುಖಿಯಾಗಲಿದೆ. ಹಾಗೆಯೇ 2ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ಡೆಲ್ಲಿ ಸೆಣಸಲಿದೆ. ಫೈನಲ್ ಪಂದ್ಯವು ಫೆಬ್ರವರಿ 25 ರಂದು ನಡೆಯಲಿದೆ.

ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?

ಇದನ್ನೂ ಓದಿ: Rohit Sharma: ಬಾಬರ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ

ಇದನ್ನೂ ಓದಿ: Sunil narine: ಸಿಡಿಲಬ್ಬರದ ಅರ್ಧಶತಕ ಸಿಡಿಸಿ ದಾಖಲೆ ಬರೆದ ಸುನಿಲ್ ನರೈನ್

(Pro Kabaddi League Playoffs: Bengaluru Bulls Enters Semi Final)