ಚೆನೈ: ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಾಡುವ 8 ಟೀಮುಗಳಲ್ಲಿ ಒಂದಾಗಿರುವ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅವರು ಏಪ್ರಿಲ್ 9ರಿಂದ ಆರಂಭವಾಗಲಿರುವ 14ನೇ ಸೀಸನಲ್ಲಿ ಭಾಗವಹಿಸಲು ಚೆನೈಗೆ ಆಗಮಿಸಿದ್ದು ಕ್ವಾರಂಟೈನ್ ಅವಧಿಯನ್ನು ಹೇಗೆ ಕಳೆಯುವುದು ಅಂತ ತೋಚದೆ ಪರಡುತ್ತಿದ್ದಾರೆ. ತಮಗೆ ಉಪಾಯಗಳನ್ನು ಸೂಚಿಸುವಂತೆ ತಮ್ಮ ಅಭಿಮಾನಿಗಳ ಮೊರೆ ಹೋಗಿದ್ದಾರೆ. ಶನಿವಾರದಂದು ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಪೋಸ್ಟೊಂದನ್ನು ಶೇರ್ ಮಾಡಿರುವ ಅವರು, ಈಗಷ್ಟೇ ಕುಂಭ ನಿದ್ರೆಯಿಂದ ಎಚ್ಚೆತ್ತು ಭಾರತಕ್ಕೆ ಆಗಮಿಸಿದ್ದು ಹೊಟೆಲ್ ರೂಮಿನಲ್ಲಿ ಒಬ್ಬನೇ ಕೂತು ಒಬ್ಬನೇ ಹೇಗೆ ಹೊತ್ತುಗಳೆಯುವುದು ಅಂತ ಗೊತ್ತಾಗುತ್ತಿಲ್ಲ ದಯವಿಟ್ಟು ಉಪಾಯಗಳನ್ನು ತಿಳಿಸಿ ಅಂತ ಅಭಿಮಾನಿಗಳನ್ನು ವಿನಂತಿಸಿಕೊಂಡಿದ್ದಾರೆ.
‘ಸುದೀರ್ಘವಾದ ನಿದ್ರೆಯಿಂದ ಎದ್ದು ಈಗಷ್ಟೇ ಚೆನೈಗೆ ಆಗಮಿಸಿದ್ದೇನೆ. ನಾನಂದುಕೊಳ್ಳುವಂತೆ 6ಇಲ್ಲವೇ 7 ದಿನಗಳ ಕಾಲ ನಾನು ಕ್ವಾರಂಟೈನ್ಗೆ ಒಳಗಾಗಬೇಕಿದೆ. ನಿಮ್ಮಿಂದ ಕೆಲ ಐಡಿಯಾಗಳು ನನಗೆ ಬೇಕಿದೆ. ನೀವಿಲ್ಲಿ ಕೆಳಗೆ ಕಾಮೆಂಟ್ ಮಾಡಿ. ಅದು ತಮಾಷೆ ಆಗಿರಬಹುದು, ಸಿಲ್ಲಿ ಅನಿಸುವಂಥಾಗಿರಬಹುದು ಇಲ್ಲವೆ ಬೇರೆ ಸ್ವರೂಪದ್ದೂ ಆಗಿರಬಹುದು. ಹೇಗಾದರೂ ಇರಲಿ, ದಯವಿಟ್ಟು ನಿನ್ನ ಕಾಮೆಂಟ್ಗಳನ್ನು ಬರೆಯಿರಿ. ನೆಟ್ಫ್ಲಿಕ್ಸ್ ಶೋಗಳ ಬಗ್ಗೆಯೂ ನೀವು ಬರೆಯಬಹುದು. ಒಟ್ಟಿನಲ್ಲಿ ಹೊತ್ತು ಹೇಗೆ ಕಳೆಯಬಹುದೆನ್ನುವುದಕ್ಕೆ ನಿಮ್ಮಿಂದ ಸಲಹೆ ಬೇಕು,’ ಎಂದು ವಾರ್ನರ್ ಹೇಳಿದ್ದಾರೆ.
ಅತ್ಯಂತ ಶ್ರೀಮಂತ ಲೀಗ್ ಎಂದು ಕರೆಸಿಕೊಳ್ಳುವ ಐಪಿಎಲ್ನಲ್ಲಿ ವಾರ್ನರ್ ಅವರು ವಿದೇಶ ಅತ್ಯಂತ ಯಶಸ್ವೀ ಬ್ಯಾಟ್ಸಮನ್ ಎನಿಸಿಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 5,254 ರನ್ ಗಳಿಸಿರುವ ಅವರು 2016 ರಲ್ಲಿ ಹೈದರಾಬಾದ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟಿದ್ದರು.
ವಾರ್ನರ್, ಆಸ್ಟ್ರೇಲಿಯಗಾಗಿ ಟೆಸ್ಟ್ಗಳನ್ನಾಡುವಾಗ, ಸೀಮಿತ ಓವರ್ಗಳ ಪಂದ್ಯಗಳನ್ನಾಡುವಾಗ ಇಲ್ಲವೆ ಬಿಗ್ ಬ್ಯಾಶ್ ಲೀಗ್ನಲ್ಲಾಡುವಾಗ ವಾರ್ನರ್ ವಿಫಲರಾಗಬಹುದು ಆದರೆ, ಐಪಿಎಲ್ ಟೂರ್ನಿಯಲ್ಲಿ ಆಡುವಾಗ ಮಾತ್ರ ಅವರು ಅಪರೂಪಕ್ಕೊಮ್ಮೆ ವಿಫಲರಾಗುತ್ತಾರೆ. ಇದನ್ನು ಹಾಗೆ ಹೇಳುತ್ತಿಲ್ಲ, ಕಳೆದ ಆರು ಸೀಸನ್ಗಳಿಂದ ಅವರು ಪ್ರತಿ ಸೀಸನ್ನಲ್ಲಿ ಸತತವಾಗಿ 500 ಕ್ಕಿಂತ ಜಾಸ್ತಿ ರನ್ ಗಳಿಸಿದ್ದಾರೆ. ಈ ಟೂರ್ನಿಯಲ್ಲಿ ತಾನೊಬ್ಬ ಶ್ರೇಷ್ಠ ಸಾಧಕ ಎನ್ನುವುದನ್ನು ಅವರು ಅಂಕಿ-ಅಂಶಗಲ ಮೂಲಕ ಸಾಬೀತು ಮಾಡಿದ್ದಾರೆ. ವಾರ್ನರ್ ಕೇವಲ ಉತ್ತಮ ಬ್ಯಾಟ್ಸ್ಮನ್ ಮಾತ್ರ ಅಲ್ಲ, ತಾನೊಬ್ಬ ಉತ್ತಮ ಲೀಡರ್ ಅನ್ನುವುದನ್ನೂ ಪ್ರೂವ್ ಮಾಡಿದ್ದಾರೆ.
ಕಳೆದ ವರ್ಷ ಯುಎಈಯಲ್ಲಿ ನಡೆದ 13ನೇ ಸೀಸನಲ್ಲಿ ಅವರು ಶಾರ್ಜಾ, ಅಬು ಧಾಬಿ ಮತ್ತು ದುಬೈಯಲ್ಲಿನ ಪಿಚ್ಗಳಿಗೆ ಕುದುರಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡರು. ಆದರೆ, ಟೂರ್ನಿಯ ಎರಡನೇ ಲೆಗ್ನಲ್ಲಿ ಭರ್ಜರಿ ಪ್ರದರ್ಶನಗಳನ್ನು ನೀಡಿ ಸೀಸನನ್ನು 548 ರನ್ಗಳೊಂದಿಗೆ ಮುಗಿಸಿದರು. ಸತತ ಗೆಲುವುಗಳ ಮೂಲಕ ಹೈದರಾಬಾದ ತಂಡ ಪ್ಲೇ ಆಫ್ ಹಂತ ತಲುಪುವದನ್ನು ಅವರು ಖಾತ್ರಿಪಡಿಸಿದರು.
ಈ ಬಾರಿಯ ಅಭಿಯಾನವನ್ನು ವಾರ್ನರ್ ಅವರ ಎಸ್ಆರ್ಎಚ್ ತಂಡ ಎರಡು ಬಾರಿ ಚಾಂಪಿಯನ್ಶಿಪ್ ಗೆದ್ದಿರುವ ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧ ಚೆನೈಯಲ್ಲಿ ಏಪ್ರಿಲ್ 11 ರಂದು ಆಡುವ ಮೂಲಕ ಆರಂಭಿಸಲಿದೆ.
Published On - 10:39 pm, Sat, 3 April 21