ಮುಂಬೈ: ಪಂಜಾಬ್ ಕಿಂಗ್ಸ್ ತಂಡದ ನಾಯಕ ಕರ್ನಾಟಕದ ಕೆ.ಎಲ್.ರಾಹುಲ್ ಅವರು ತಾನು ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ (ಐಪಿಎಲ್) ಕಿಂಗ್ಸ್ ತಂಡದ ಕಿಂಗ್ ಅನ್ನುವುದನ್ನು ಸೋಮವಾರದಂದು ಪುನಃ ಸಾಬೀತು ಮಾಡಿದರು. ಸೀಸನ್ನ ಚೊಚ್ಚಿಲ ಪಂದ್ಯ ಆಡುತ್ತಿರುವ ಪಂಜಾಬ್ ತಂಡ ಮತ್ತು ರಾಹುಲ್ ಮುಂಬೈನ ವಾಂಖೆಡೆ ಮೈದಾನದಲ್ಲಿ ತಮ್ಮ ಅಧಿಪತ್ಯ ಮೆರೆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಆಹ್ವಾನವನ್ನು ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರಿಂದ ಪಡೆದ ಪಂಜಾಬ್ ತಂಡಕ್ಕೆ ಎಂದಿನಂತೆ ಮತ್ತೊಬ್ಬ ಕನ್ನಡಿಗ ಮಾಯಾಂಕ್ ಅಗರವಾಲ್ ಜೊತೆ ಆರಂಭಿಕನಾಗಿ ಅಡಲು ಬಂದ ರಾಹುಲ್ ಮೊದಲ ಓವರ್ನಲ್ಲೇ ತಾನು ಅತ್ಯುತ್ತಮ ಫಾರ್ಮ್ನಲ್ಲಿರುವುದನ್ನು ಸಾಬೀತು ಮಾಡಿದರು. ಅಗರ್ವಾಲ್ ಅವರನ್ನು ಬೇಗ ಕಳೆದುಕೊಂಡರೂ, ವಿಂಡಿಸ್ ದೈತ್ಯ ಕ್ರಿಸ್ ಗೇಲ್ (40, 28 ಎಸೆತ 4 ಬೌಂಡರಿ 2 ಸಿಕ್ಸ್ ), ಮತ್ತು ದೀಪಕ್ ಹೂಡಾ (64, 28 ಎಸೆತ 4 ಬೌಂಡರಿ 6 ಸಿಕ್ಸ್) ಅವರೊಂದಿಗೆ ಉತ್ತಮ ಜೊತೆಯಾಟಗಳಲ್ಲಿ ಪಾಲ್ಗೊಂಡು ಶಕತದಂಚಿನಲ್ಲಿ ಔಟಾದರು.
50 ಎಸೆತಗಳಲ್ಲಿ 91 ರನ್ ಬಾರಿಸಿದ ರಾಹುಲ್ ತಮ್ಮ ಇನ್ನಿಂಗ್ಸನಲ್ಲಿ 7 ಬೌಂಡರಿ ಮತ್ತು 5 ಸಿಕ್ಸ್ಗಳನ್ನು ಬಾರಿಸಿದರು. ಅವರ ಸ್ಟ್ರೈಕ್ ರೇಟ್ 182.00. ಬೌಂಡರಿ ಗೆರೆ ಬಳಿ ತೆವಾಟಿಯಾ ಹಿಡಿದ ಅತ್ಯಮೋಘ ಕ್ಯಾಚ್ಗೆ ರಾಹುಲ್ ಔಟಾದರು. ರಾಜಸ್ಥಾನ ತಂಡಕ್ಕೆ ತೆವಾಟಿಯಾ ಕ್ಯಾಚ್ ಮಾತ್ರ ಸಮಾಧಾನಕರ ಅಂಶವಾಗಿತ್ತು
ರಾಹುಲ್ ಮತ್ತು ಹೂಡಾ ಅವರ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಪಂಜಾಬ್ ಕಿಂಗ್ಸ್ 221/6 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. ರಾಜಸ್ಥಾನ ಪರ ಯಾವುದೇ ಬೌಲರ್ ಹೇಳಿಕೊಳ್ಳುವ ಪ್ರದರ್ಶನ ತೋರಲಿಲ್ಲ. ಸಂಜು ಸ್ಯಾಮ್ಸನ್ ತಂಡಕ್ಕೆ ಗೆಲ್ಲಲು 222 ರನ್ಗಳು ಬೇಕಿದೆ.
ಇದನ್ನೂ ಓದಿ: Sanju Samson IPL 2021 RR team player: ಐಪಿಎಲ್ನಲ್ಲಿ ಅಬ್ಬರದ ಆಟವೇ ಸಂಜು ಸ್ಯಾಮ್ಸನ್ ಅವರನ್ನು ತಂಡದ ನಾಯಕನಾಗಿ ಮಾಡಿದೆ!