AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನಸ್ವಾಮಿಯಲ್ಲಿ ಡಿವಿಲಿಯರ್ಸ್​ ಪುತ್ಥಳಿ ಸ್ಥಾಪಿಸಲು ಆಂದೋಲನ; ದಿಗ್ಗಜರಿಂದಲೇ ವಿರೋಧ

ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿಡಿ ಆರ್​ಸಿಬಿಯ ಪ್ರಮುಖ ಬ್ಯಾಟ್ಸ್​ಮನ್​. ಅನೇಕ ಸೋಲುವ ಪಂದ್ಯಗಳನ್ನು ಗೆಲುವಿನ ದಡ ಮುಟ್ಟಿಸಿದ ಖ್ಯಾತಿ ಎಬಿಡಿಗೆ ಇದೆ.

ಚಿನ್ನಸ್ವಾಮಿಯಲ್ಲಿ ಡಿವಿಲಿಯರ್ಸ್​ ಪುತ್ಥಳಿ ಸ್ಥಾಪಿಸಲು ಆಂದೋಲನ; ದಿಗ್ಗಜರಿಂದಲೇ ವಿರೋಧ
ಎಬಿ ಡಿವಿಲಿಯರ್ಸ್​
ರಾಜೇಶ್ ದುಗ್ಗುಮನೆ
|

Updated on:Apr 12, 2021 | 3:49 PM

Share

ಪುತ್ಥಳಿ ವಿಚಾರದಲ್ಲಿ ಆಗಾಗ ಗಲಾಟೆಗಳು ಏಳುತ್ತಲೇ ಇರುತ್ತವೆ. ಪುತ್ಥಳಿಗೆ ಕಲ್ಲು ಹೊಡೆದು ಭಂಗ ಮಾಡಿದ ವಿಚಾರದಲ್ಲಂತೂ ಸಾಕಷ್ಟು ಗಲಭೆಗಳು ಎದ್ದಿವೆ. ಇನ್ನು, ಆಯಾ ಕ್ಷೇತ್ರದ ಅಭಿವೃದ್ಧಿಗೆ ಹೋರಾಡಿದವರಿಗಾಗಿ ಸ್ಟ್ಯಾಚ್ಯೂ ನಿರ್ಮಾಣ ಮಾಡಬೇಕು ಎನ್ನುವ ಆಗ್ರಹ ಕೇಳಿ ಬರುತ್ತಲೇ ಇರುತ್ತದೆ. ಅದೇ ರೀತಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪ್ರಮುಖ ಬ್ಯಾಟ್ಸ್​​ಮನ್​ ಎ.ಬಿ. ಡಿವಿಲಿಯರ್ಸ್​ ಅವರ ಪುತ್ಥಳಿಯನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಎದುರು ಅನಾವರಣ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಇದಕ್ಕೆ ಸಾಕಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿಡಿ ಆರ್​ಸಿಬಿಯ ಪ್ರಮುಖ ಬ್ಯಾಟ್ಸ್​ಮನ್​. ಅನೇಕ ಸೋಲುವ ಪಂದ್ಯಗಳನ್ನು ಗೆಲುವಿನ ದಡ ಮುಟ್ಟಿಸಿದ ಖ್ಯಾತಿ ಎಬಿಡಿಗೆ ಇದೆ. ಕ್ರೂಷಿಯಲ್​ ಮ್ಯಾಚ್​ಗಳಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್​ ಪ್ರದರ್ಶನದ ಮೂಲಕ ಆರ್​ಸಿಬಿಗೆ ಗೆಲುವು ತಂದು ಕೊಟ್ಟಿದ್ದಾರೆ. ಹೀಗಾಗಿ, ಆರ್​ಸಿಬಿ ಪಾಲಿಗೆ ಎಬಿಡಿ ಆಪತ್​ಬಾಂಧವ. ಅನೇಕ ಅಭಿಮಾನಿಗಳು ಅವರನ್ನು ದೇವರಂತೆ ಕಾಣುತ್ತಾರೆ.

ಐಪಿಎಲ್​ 14ನೇ ಸೀಸನ್​ನ ಮೊದಲ ಪಂದ್ಯದಲ್ಲಿ ಆರ್​ಸಿಬಿ ಹಾಲಿ ಚಾಂಪಿಯನ್ಸ್​ ಮುಂಬೈ ತಂಡವನ್ನು ಎದುರಿಸಿತ್ತು. ಮುಂಬೈ ನೀಡಿದ 160ರನ್​ಗಳ ಟಾರ್ಗೆಟ್​ ಬೆನ್ನು ಹತ್ತಿದ ಆರ್​ಸಿಬಿ ಆರಂಭದಲ್ಲೇ ಆಘಾತ ಎದುರಿಸಿತ್ತು. ಆಗ ಬೆಂಗಳೂರು ತಂಡಕ್ಕೆ ಬೆನ್ನೆಲುಬಾಗಿ ನಿಂತವರು ಡಿವಿಲಿಯರ್ಸ್​. 27 ಬಾಲ್​ಗೆ 48 ರನ್​ ಸಿಡಿಸಿ ಆರ್​ಸಿಬಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಈ ಗೆಲುವಿನ ನಂತರದಲ್ಲಿ ಅಭಿಮಾನಿಗಳು ಸಾಕಷ್ಟು ಸಂತೋಷ ವ್ಯಕ್ತಪಡಿಸಿದ್ದವು. ಅಷ್ಟೇ ಅಲ್ಲ, ಆರ್​ಸಿಬಿಗೆ ಅವರು ನೀಡಿದ ಕೊಡುಗೆ ಗಮನಿಸಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಎದುರು ಎಬಿಡಿ ಅವರ ಒಂದು ಪುತ್ಥಳಿ ನಿರ್ಮಾಣ ಮಾಡಬೇಕು ಎನ್ನುವ ಆಗ್ರಹವನ್ನು ಅಭಿಮಾನಿಗಳು ಮಾಡಿದ್ದಾರೆ.

ಇದಕ್ಕೆ ಕೆಲವರು ಆಕ್ರೋಶ ಹೊರ ಹಾಕಿದ್ದಾರೆ. ಎರಪಲ್ಲಿ ಪ್ರಸನ್ನರಿಗೆ ಇಲ್ಲ, ಗುಂಡಪ್ಪ ವಿಶ್ವನಾಥ್​ ಅವರಿಗೆ ಇಲ್ಲ, ಚಂದ್ರರಿಗೂ ಇಲ್ಲ. ಈಗ ಬೆಂಗಳೂರಲ್ಲಿ ಎಬಿಡಿ ಪುತ್ಥಳಿ ಬೇಕಂತೆ. ಮುಂದಿನ ವರ್ಷ ಕೊಡೋದು ತಗೋಳೋದು ವ್ಯತ್ಯಾಸ ಆದರೆ ಬೇರೆ ಟೀಮ್​ಗೆ ಹೋಗಿ ನಿಮ್ಮ ಆರ್​ಸಿಬಿಗೆ ಎಬಿಡಿ ಗುನ್ನ ಇಡ್ತಾರೆ. ಬೇಕಿದ್ರೆ ನಿಮ್ಮ ಮನೆ ಮುಂದೆ ಪ್ರತಿಮೆ ಮಾಡ್ಕೋಳಿ ಎಂದು ರಾಮಚಂದ್ರ ಎಂಬುವವರು ಬರೆದುಕೊಂಡಿದ್ದಾರೆ.

ಇನ್ನು, ಇದಕ್ಕೆ ಟೀಂ ಇಂಡಿಯಾ ಮಾಜಿ ಆಟಗಾರ ದೊಡ್ಡ ಗಣೇಶ್​ ಕೂಡ ಉತ್ತರ ನೀಡಿದ್ದಾರೆ. ನಮ್ಮ ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಯಾವುದಾದರೂ ಕ್ರಿಕೆಟಿಗರು ಪ್ರತಿಮೆಗೆ ಅರ್ಹರಾಗಿದ್ದರೆ ಎಂದರೆ ಅದು ಕರ್ನಾಟಕದ ಮಾಜಿ ನಾಯಕ ವಿ. ಸುಬ್ರಮಣ್ಯ. ರಾಜ್ಯವನ್ನು ಕ್ರಿಕೆಟ್​ನ ಶಕ್ತಿ ಕೇಂದ್ರವನ್ನಾಗಿ ಮಾಡಲು ಅವರು 60 ರ ದಶಕದಲ್ಲಿ ಶ್ರಮಿಸಿದ್ದರು ಎಂದಿದ್ದಾರೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಒಂದು ಪ್ರಾಂಚೈಸಿ ಅಷ್ಟೇ. ಇದಕ್ಕೂ ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆಗೂ ಯಾವುದೇ ನೇರ ಸಂಬಂಧವಿಲ್ಲ. ಕರ್ನಾಟಕದ ಆಟಗಾರರ ಸಂಖ್ಯೆ ಕೂಡ ಕಡಿಮೆ. ಹೀಗಾಗಿ, ಬೆಂಗಳೂರಲ್ಲಿ ಎಬಿಡಿ ಪ್ರತಿಮೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಕೆಲವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: IPL 2021: ಮಿಂಚಿದ ಹರ್ಷಲ್, ಡಿವಿಲಿಯರ್ಸ್​.. ವಾಡಿಕೆಯಂತೆ ಗೆದ್ದ ಆರ್​ಸಿಬಿ! ಮೊದಲ ಪಂದ್ಯದಲ್ಲಿ ಸೋತು ಸಂಪ್ರದಾಯ ಉಳಿಸಿಕೊಂಡ ಮುಂಬೈ

IPL 2021: ನಾನೀಗಲೂ ಅತೀ ವೇಗದ ಚಿರತೆ! ಆರ್​ಸಿಬಿ ಜರ್ಸಿ ತೊಟ್ಟು, ಕೊಹ್ಲಿ- ಎಬಿಡಿಗೆ ಚಾಲೆಂಜ್ ಹಾಕಿದ ಬೋಲ್ಟ್

Published On - 3:46 pm, Mon, 12 April 21

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್