Queen’s Baton Relay: ಇದೇ ತಿಂಗಳು ಬೆಂಗಳೂರಿಗೆ ತಲುಪಲಿರುವ ಕಾಮನ್ ವೆಲ್ತ್ ಗೇಮ್ಸ್ ಕ್ವೀನ್ಸ್ ಬ್ಯಾಟನ್ ರಿಲೇ

Queen's Baton Relay: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಭಾರತೀಯ ಒಲಂಪಿಕ್ ಸಂಘದ ಕರ್ನಾಟಕ ಶಾಖೆ ಸಂಯುಕ್ತವಾಗಿ ಕ್ವೀನ್ಸ್ ಬ್ಯಾಟನ್ ರಿಲೇ ಸಮಾರಂಭವನ್ನು ಆಯೋಜಿಸಲಿದೆ.

Queens Baton Relay: ಇದೇ ತಿಂಗಳು ಬೆಂಗಳೂರಿಗೆ ತಲುಪಲಿರುವ ಕಾಮನ್ ವೆಲ್ತ್ ಗೇಮ್ಸ್ ಕ್ವೀನ್ಸ್ ಬ್ಯಾಟನ್ ರಿಲೇ
Queen's Baton Relay
Edited By:

Updated on: Jan 01, 2022 | 5:55 PM

ಯುನೈಟೆಡ್ ಕಿಂಗ್‍ಡಮ್‍ನ ಬರ್ನಿಂಗ್ ಹ್ಯಾಮ್‍ನಲ್ಲಿ ಜುಲೈ 28 ರಿಂದ ಆಗಸ್ಟ್ 08 ರ ವರೆಗೆ ನಡೆಯಲಿರುವ 22 ನೇ ಕಾಮನ್‍ವೆಲ್ತ್ ಕ್ರೀಡಾಕೂಟದ ಕ್ವೀನ್ಸ್ ಬ್ಯಾಟನ್ ರಿಲೇ (Queen’s Baton Relay) ಜನವರಿ 13 ರಂದು ಬೆಂಗಳೂರಿಗೆ ತಲುಪಲಿದೆ. 72 ಕಾಮನ್‍ವೆಲ್ತ್ ರಾಷ್ಟ್ರಗಳು ಹಾಗೂ ಭೌಗೋಳಿಕ ಪ್ರದೇಶಗಳಲ್ಲಿ 90 ಸಾವಿರ ಮೈಲಿ ಕ್ರಮಿಸಲಿರುವ ಈ ಕ್ವೀನ್ಸ್ ಬ್ಯಾಟನ್ ರಿಲೇ ಭಾರತದಲ್ಲಿ ಅಹಮದಾಬಾದ್, ಬೆಂಗಳೂರು ಮತ್ತು ಭುವನೇಶ್ವರದಲ್ಲಿ ಮಾತ್ರ ಸಂಚರಿಸಲಿದೆ.

ಜನವರಿ 13 ರಂದು ಅಹಮದಾಬಾದ್‍ನಿಂದ ಬೆಂಗಳೂರಿಗೆ ಆಗಮಿಸಲಿರುವ ಕ್ವೀನ್ಸ್ ಬ್ಯಾಟನ್ ರಿಲೇ ಜನವರಿ 14 ರಂದು ಬೆಳಿಗ್ಗೆ 9.30 ಗಂಟೆಗೆ ವಿಧಾನಸೌಧದ ವೈಭವೋಪೇತ ಮೆಟ್ಟಲಿನ ಮೇಲೆ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ ಎಂ.ಸಿ. ನಾರಾಯಣಗೌಡ ಅವರ ಸಮ್ಮುಖದಲ್ಲಿ ಹೆಸರಾಂತ ಕ್ರೀಡಾಪಟುಗಳಿಗೆ ಹಸ್ತಾಂತರಿಸಲಿದ್ದಾರೆ.

ನಂತರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಭಾರತೀಯ ಒಲಂಪಿಕ್ ಸಂಘದ ಕರ್ನಾಟಕ ಶಾಖೆ ಸಂಯುಕ್ತವಾಗಿ ಕ್ವೀನ್ಸ್ ಬ್ಯಾಟನ್ ರಿಲೇ ಸಮಾರಂಭವನ್ನು ಆಯೋಜಿಸಲಿದೆ. ಕ್ವೀನ್ಸ್ ಬ್ಯಾಟನ್ ರಿಲೇ ಹೊತ್ತ ಕ್ರೀಡಾಪಟುಗಳು ಕಬ್ಬನ್‍ಪಾರ್ಕ್ ಮಾರ್ಗವಾಗಿ ಕಂಠೀರವ ಕ್ರೀಡಾಂಗಣಕ್ಕೆ ಹೊತ್ತೊಯ್ಯಲಿದ್ದಾರೆ. ತದನಂತರ, ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೆ ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾ ಪಟುಗಳು, ಕ್ರೀಡಾ ಉತ್ಸಾಹಿಗಳು ಹಾಗೂ ಸಾರ್ವಜನಿಕರಿಗೆ ಕ್ವೀನ್ಸ್ ಬ್ಯಾಟನ್ ರಿಲೇ ದರ್ಶನ ಮತ್ತು ಅದರೊಂದಿಗೆ ಛಾಯಾಚಿತ್ರ ತೆಗೆಸಿಕೊಳ್ಳಲು ಅವಕಾಶ ಇರುತ್ತದೆ. ಅದೇ ದಿನ ಸಂಜೆ ಕ್ವೀನ್ಸ್ ಬ್ಯಾಟನ್ ರಿಲೇ ಭುವನೇಶ್ವರಕ್ಕೆ ತೆರಳಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:  Cricket Records: ಕಳೆದ ವರ್ಷ ಟೆಸ್ಟ್​ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಆಟಗಾರ ಯಾರು ಗೊತ್ತಾ?

ಇದನ್ನೂ ಓದಿ:  Ravindra Jadeja: ಸ್ಟಾರ್ ಆಲ್​ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!

ಇದನ್ನೂ ಓದಿ: Rohit Sharma: ಫಿಟ್​ನೆಸ್​ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?

ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

(Queen’s Baton Relay reach bangalore on jan 13)

TV9 Web

TV9 Kannada

Read More
Loading...
Unable to load recommendations.
Follow Us