Ind vs Aus ಪಂದ್ಯದಲ್ಲಿ ಆಸಿಸ್ ಅಬ್ಬರ ಹೇಗಿತ್ತು? ಇಲ್ಲಿದೆ ಕ್ವಿಕ್ ಡಿಟೇಲ್ಸ್..

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು, 50 ಓವರ್​ಗಳಲ್ಲಿ, 4 ವಿಕೆಟ್ ನಷ್ಟಕ್ಕೆ 389 ರನ್ ಗಳಿಸಿತು. ಆಸ್ಟ್ರೇಲಿಯಾ ತಂಡದ ಪ್ರದರ್ಶನಕ್ಕೆ ಭಾರತೀಯ ಎಸೆತಗಾರರು ಬಸವಳಿಯುವಂತಾಯಿತು.

Ind vs Aus ಪಂದ್ಯದಲ್ಲಿ ಆಸಿಸ್ ಅಬ್ಬರ ಹೇಗಿತ್ತು? ಇಲ್ಲಿದೆ ಕ್ವಿಕ್ ಡಿಟೇಲ್ಸ್..
ಶತಕ ಸಿಡಿಸಿದ ಸಂಭ್ರಮದಲ್ಲಿ ಸ್ಟೀವನ್ ಸ್ಮಿತ್
Edited By:

Updated on: Apr 06, 2022 | 9:00 PM

ಆಸ್ಟ್ರೇಲಿಯಾದ ಸಿಡ್ನಿ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸಿಸ್ ಭರ್ಜರಿ ಜಯ ಸಾಧಿಸಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಈ ಮೂರೂ ವಿಭಾಗದಲ್ಲಿ ಪರಿಣಾಮಕಾರಿ ಪ್ರದರ್ಶನ ತೋರಿದ ತಂಡ ಸರಣಿಯನ್ನು ತನ್ನ ಪಾಲಾಗಿಸಿಕೊಂಡಿದೆ.

ಸಿಡ್ನಿಯ ಬ್ಯಾಟಿಂಗ್ ಪಿಚ್​ನಲ್ಲಿ ಆಸಿಸ್ ಹರಿಸಿತು ರನ್ ಹೊಳೆ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು, 50 ಓವರ್​ಗಳಲ್ಲಿ, 4 ವಿಕೆಟ್ ನಷ್ಟಕ್ಕೆ 389 ರನ್ ಗಳಿಸಿತು. ಆಸಿಸ್ ಪರವಾಗಿ ಬ್ಯಾಟಿಂಗ್​ಗೆ ಇಳಿದ ನಾಯಕ ಆರೊನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ತಲಾ 60 ಮತ್ತು 83 ರನ್ ಕಲೆಹಾಕಿದರು. ಉತ್ತಮ ಆರಂಭ ಕೊಟ್ಟ ಈ ಆಟಗಾರರು ತಂಡಕ್ಕೆ ಭದ್ರಬುನಾದಿ ಹಾಕಿದರು. ಎರಡೂ ಆಟಗಾರರು ಶತಕದ ಜೊತೆಯಾಟವಾಡಿದರು. ನಂತರ ಬಂದ ಸ್ಟೀವನ್ ಸ್ಮಿತ್ 104 ರನ್ ಕೂಡಿಸಿದರು. ಆಸ್ಟ್ರೇಲಿಯಾ ತಂಡವು 389 ರನ್​ಗಳ ದೊಡ್ಡ ಮೊತ್ತ ಕಲೆಹಾಕಲು ಸಹಕರಿಸಿದರು. ಸ್ಮಿತ್​ಗೆ ಜೊತೆಯಾದ ಮಾರ್ನಸ್ 70 ರನ್ ಹೊಡೆದರೆ ಗ್ಲೆನ್ ಮ್ಯಾಕ್ಸ್​ವೆಲ್ ವೇಗದ 63 ರನ್ ಕೂಡಿದರು. ಬ್ಯಾಟ್ ಬೀಸಿದ ಐದು ಆಟಗಾರರು 60ಕ್ಕಿಂತ ಹೆಚ್ಚು ರನ್ ಕಲೆಹಾಕಿ ತಂಡದ ಮೊತ್ತ ಹೆಚ್ಚಿಸಿದರು.

ಭಾರತೀಯ ಬೌಲರ್​ಗಳು ಬಸವಳಿದರು
ಆಸ್ಟ್ರೇಲಿಯಾ ತಂಡದ ಪ್ರದರ್ಶನಕ್ಕೆ ಭಾರತೀಯ ಎಸೆತಗಾರರು ಬಸವಳಿಯುವಂತಾಯಿತು. ನವದೀಪ್ ಸೈನಿ, ಮೊಹಮ್ಮದ್ ಶಮಿ, ಬುಮ್ರಾ, ಚಹಾಲ್ ತಲಾ 70ಕ್ಕಿಂತ ಹೆಚ್ಚು ರನ್ ಬಿಟ್ಟುಕೊಟ್ಟರು. ಮೊದಲ ವಿಕೆಟ್ ಕಬಳಿಸುವಷ್ಟರಲ್ಲಿ ಸುಸ್ತಾಗಿದ್ದ ಭಾರತೀಯ ಬೌಲರ್​ಗಳು ಚೇತರಿಸಿಕೊಳ್ಳಲೇ ಇಲ್ಲ. ಆಸಿಸ್ ಬ್ಯಾಟಿಂಗ್ ಬಿರುಸಿಗೆ ಭಾರತ ಕಂಗಾಲಾಯಿತು.

150 ರನ್​ಗಳ ಆರಂಭಿಕ ಜೊತೆಯಾಟ
ನಾಯಕ ಆರೊನ್ ಫಿಂಚ್ 69 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 60 ರನ್ ಗಳಿಸಿದರೆ, ಡೇವಿಡ್ ವಾರ್ನರ್ 77 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಿತ 83ರನ್ ಕಲೆಹಾಕಿದರು. ಇದು ತಂಡದ ಆತ್ಮವಿಶ್ವಾಸ ಹೆಚ್ಚಿಸತು.

ಸ್ಮಿತ್ ಸತತ ಎರಡನೇ ಸೆಂಚುರಿ!
ಕಳೆದ ಏಕದಿನ ಪಂದ್ಯದಲ್ಲಿ 105 ರನ್​ಗಳಿಸಿ ಮಿಂಚಿದ್ದ ಸ್ಟೀವನ್ ಸ್ಮಿತ್, ಇಂದು 104 ರನ್ ಪಡೆದರು. ಈ ಮೂಲಕ ಸತತ ಎರಡು ಪಂದ್ಯಗಳಲ್ಲಿ ಸೆಂಚುರಿ ಬಾರಿಸಿ, ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು.

ಮ್ಯಾಕ್ಸ್​ವೆಲ್ ವೇಗದ ಆಟ
ಇನ್ನಿಂಗ್ಸ್ ಕೊನೆಗೆ ಮ್ಯಾಕ್ಸ್​ವೆಲ್ ಆಡಿದ ಆಟ, ಆಸಿಸ್ ತಂಡಕ್ಕೆ ದೊಡ್ಡ ಕೊಡುಗೆಯಾಯಿತು. ಫಿಂಚ್-ವಾರ್ನರ್ ಬುನಾದಿಯ ಮೇಲೆ ಮ್ಯಾಕ್ಸ್​ವೆಲ್ ರನ್ ಗೋಪುರ ಭರ್ಜರಿಯಾಗಿ ಬೆಳೆಯಿತು. ಮ್ಯಾಕ್ಸ್​ವೆಲ್ 29 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಿತ 63 ರನ್ ನೀಡಿದರು.

 

ಇದನ್ನೂ ಓದಿ:  ಭಾರತ ತಂಡದ ಬ್ಯಾಟಿಂಗ್ ಹೇಗಿತ್ತು? ಮ್ಯಾಚ್​ ನೋಡೋದು ಮಿಸ್ ಆಗಿದ್ರೆ ಡೋಂಟ್​ವರಿ.. ಇಲ್ಲಿದೆ ಕ್ವಿಕ್ ಡಿಟೇಲ್ಸ್

Published On - 7:53 pm, Sun, 29 November 20