Rafael Nadal: ವಿಂಬಲ್ಡನ್ ಮತ್ತು ಟೋಕಿಯೊ ಒಲಿಂಪಿಕ್ಸ್​ನಿಂದ ಹಿಂದೆ ಸರಿದ ರಾಫೆಲ್ ನಡಾಲ್! ಕಾರಣವೇನು ಗೊತ್ತಾ?

|

Updated on: Jun 17, 2021 | 7:07 PM

Rafael Nadal: ಸ್ಪ್ಯಾನಿಷ್ ಟೆನಿಸ್ ಸೂಪರ್ಸ್ಟಾರ್ ರಾಫೆಲ್ ನಡಾಲ್ ವರ್ಷದ ಮೂರನೇ ಗ್ರ್ಯಾಂಡ್ ಸ್ಲ್ಯಾಮ್ ವಿಂಬಲ್ಡನ್ ನಿಂದ ಹಿಂದೆ ಸರಿದಿದ್ದಾರೆ. ಜೊತೆಗೆ ಒಲಿಂಪಿಕ್ ಕ್ರೀಡಾಕೂಟದಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ.

Rafael Nadal: ವಿಂಬಲ್ಡನ್ ಮತ್ತು ಟೋಕಿಯೊ ಒಲಿಂಪಿಕ್ಸ್​ನಿಂದ ಹಿಂದೆ ಸರಿದ ರಾಫೆಲ್ ನಡಾಲ್! ಕಾರಣವೇನು ಗೊತ್ತಾ?
ರಾಫೆನ್ ನಡಾಲ್
Follow us on

ಸ್ಪ್ಯಾನಿಷ್ ಟೆನಿಸ್ ಸೂಪರ್ಸ್ಟಾರ್ ರಾಫೆಲ್ ನಡಾಲ್ ವರ್ಷದ ಮೂರನೇ ಗ್ರ್ಯಾಂಡ್ ಸ್ಲ್ಯಾಮ್ ವಿಂಬಲ್ಡನ್ ನಿಂದ ಹಿಂದೆ ಸರಿದಿದ್ದಾರೆ. 20 ಬಾರಿ ಗ್ರ್ಯಾಂಡ್‌ಸ್ಲಾಮ್ ವಿಜೇತ ನಡಾಲ್ ಪಂದ್ಯಾವಳಿ ಪ್ರಾರಂಭವಾಗುವ 11 ದಿನಗಳ ಮೊದಲು ಈ ನಿರ್ಧಾರ ಕೈಗೊಂಡಿದ್ದಾರೆ. ಅಷ್ಟೇ ಅಲ್ಲ, ಮಾಜಿ ಒಲಿಂಪಿಕ್ ಚಾಂಪಿಯನ್ ಜುಲೈ 23 ರಿಂದ ಟೋಕಿಯೊದಲ್ಲಿ ಪ್ರಾರಂಭವಾಗುವ ಒಲಿಂಪಿಕ್ ಕ್ರೀಡಾಕೂಟದಿಂದ (ಟೋಕಿಯೊ 2020) ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ. 35 ವರ್ಷದ ನಡಾಲ್ ಅವರು ತಮ್ಮ ಆರೋಗ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ವೃತ್ತಿಜೀವನವನ್ನು ಹೆಚ್ಚಿಸಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಕಳೆದ ವಾರ ನಡೆದ ತನ್ನ ನೆಚ್ಚಿನ ಗ್ರ್ಯಾಂಡ್‌ಸ್ಲಾಮ್ ಫ್ರೆಂಚ್ ಓಪನ್‌ನ ಸೆಮಿಫೈನಲ್‌ನಲ್ಲಿ ರಾಫೆನ್ ನಡಾಲ್ ಸೋಲನ್ನು ಎದುರಿಸಬೇಕಾಯಿತು.

ನಡಾಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಜೂನ್ 17 ರ ಗುರುವಾರ ತಮ್ಮ ನಿರ್ಧಾರವನ್ನು ಪ್ರಕಟಿಸಿ, ಈ ನಿರ್ಧಾರ ಎಂದಿಗೂ ಸುಲಭದ ನಿರ್ಧಾರವಲ್ಲ, ಆದರೆ ನನ್ನ ದೇಹವನ್ನು ಆಲಿಸಿ ಮತ್ತು ನನ್ನ ತಂಡದೊಂದಿಗೆ ಮಾತನಾಡಿದ ನಂತರ, ಇದು ಸರಿಯಾದ ನಿರ್ಧಾರ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. ನಡಾಲ್ ನಿರ್ಧಾರಕ್ಕೆ ಕಾರಣವನ್ನು ವಿವರಿಸುತ್ತಾ, ತನ್ನ ವೃತ್ತಿಜೀವನವನ್ನು ದೀರ್ಘಗೊಳಿಸುವುದು ಮತ್ತು ವೃತ್ತಿಪರ ಗುರಿಗಳನ್ನು ಸಾಧಿಸುವುದು ಮತ್ತು ಉನ್ನತ ಮಟ್ಟದಲ್ಲಿ ತನ್ನನ್ನು ತಾನು ತೋರಿಸಿಕೊಳ್ಳುವುದು ತನ್ನ ಗುರಿ ಎಂದು ಹೇಳಿಕೊಂಡಿದ್ದಾರೆ.

ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ನಡುವಿನ ಕೆಲವು ದಿನಗಳ ವ್ಯತ್ಯಾಸ
ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ನಡಾಲ್ ತನ್ನ ನಿರ್ಧಾರವನ್ನು ವಿವರಿಸುತ್ತಾ, ವಿಂಬಲ್ಡನ್ ಪ್ರಾರಂಭವಾಗಲು ಕೇವಲ 2 ವಾರಗಳ ಮೊದಲು ತುಂಬಾ ಕಠಿಣವಾದ ಮಣ್ಣಿನ ಕೋರ್ಟ್ ಪಂದ್ಯಾವಳಿಯ ನಂತರ ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದ್ದಾರೆ. ಫ್ರೆಂಚ್ ಓಪನ್ ಜೂನ್ 13 ರಂದು ಕೊನೆಗೊಂಡರೆ, ವರ್ಷದ ಅತ್ಯಂತ ಪ್ರತಿಷ್ಠಿತ ಗ್ರ್ಯಾಂಡ್ ಸ್ಲ್ಯಾಮ್ ವಿಂಬಲ್ಡನ್ ಜೂನ್ 28 ರಂದು ಪ್ರಾರಂಭವಾಗಲಿದೆ. ನಡಾಲ್ ಯುನೈಟೆಡ್ ಕಿಂಗ್‌ಡಮ್ ಮತ್ತು ಜಪಾನ್‌ನ ತಮ್ಮ ಅಭಿಮಾನಿಗಳನ್ನು ನೆನಪಿಸಿಕೊಂಡರು ಮತ್ತು ಅವರಿಗೆ ವಿಶೇಷ ಸಂದೇಶವನ್ನೂ ನೀಡಿದರು. ಅದೇ ಸಮಯದಲ್ಲಿ, ಒಲಿಂಪಿಕ್ಸ್ ಬಗ್ಗೆ ಮಾತನಾಡಿದ ಅವರು, ಮೂರು ಬಾರಿ ತಮ್ಮ ದೇಶದ ಸ್ಪೇನ್ ಅನ್ನು ಪ್ರತಿನಿಧಿಸುವ ಅದೃಷ್ಟಶಾಲಿ ನಾನಾಗಿರುವುದು ನನಗೆ ಹೆಮ್ಮೆ ತರಿಸಿದೆ ಎಂದು ಬರೆದುಕೊಂಡಿದ್ದಾರೆ.

2 ಬಾರಿ ವಿಂಬಲ್ಡನ್ ಮತ್ತು ಒಲಿಂಪಿಕ್ ಚಿನ್ನ ಗೆದ್ದಿದ್ದಾರೆ
20 ಬಾರಿ ಗ್ರ್ಯಾಂಡ್‌ಸ್ಲಾಮ್ ವಿಜೇತ ರಾಫೆಲ್ ನಡಾಲ್ ಎರಡು ಬಾರಿ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು 2008 ಮತ್ತು 2010 ರಲ್ಲಿ ಈ ಚಾಂಪಿಯನ್‌ಶಿಪ್ ಗೆದ್ದರು. ಇದಲ್ಲದೆ, ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಚಾಂಪಿಯನ್ ಆಗುವ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ನಡಾಲ್ 2008 ರಲ್ಲಿ ಸ್ಪೇನ್ ಪರ ಪುರುಷರ ಸಿಂಗಲ್ಸ್ ಚಿನ್ನದ ಪದಕ ಗೆದ್ದರೆ, 2016 ರ ರಿಯೊ ಒಲಿಂಪಿಕ್ಸ್‌ನಲ್ಲಿ ಡಬಲ್ಸ್ ಚಿನ್ನ ಗೆದ್ದರು.