ಟೀಮ್ ಇಂಡಿಯಾದ ಕೋಚ್ ಆಗಲು ರಾಹುಲ್ ದ್ರಾವಿಡ್ ಬಿಸಿಸಿಐ ಎದುರು ಸಂದರ್ಶನಕ್ಕೆ ಹಾಜರಾಗುವ ಅಗತ್ಯವಿಲ್ಲ: ಅಜಿತ್ ಅಗರ್ಕರ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 19, 2021 | 12:15 AM

ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ವರ್ಷಾಂತ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಂತರ ಸೀನಿಯರ್ ಟೀಮಿನ ಹೆಡ್​ ಕೋಚ್ ರವಿ ಶಾಸ್ತ್ರಿ ಅವರು ಅವಧಿ ಕೊನೆಗೊಳ್ಳಲಿರುವುದರಿಂದ ಮುಂದಿನ ಹೆಡ್ ಕೋಚ್ ದ್ರಾವಿಡ್​ ಆಗಲಿದ್ದಾರೆ ಎಂದು ಎಲ್ಲೆಡೆ ಚರ್ಚೆಗಳ ನಡೆದಿವೆ.

ಟೀಮ್ ಇಂಡಿಯಾದ ಕೋಚ್ ಆಗಲು ರಾಹುಲ್ ದ್ರಾವಿಡ್ ಬಿಸಿಸಿಐ ಎದುರು ಸಂದರ್ಶನಕ್ಕೆ ಹಾಜರಾಗುವ ಅಗತ್ಯವಿಲ್ಲ: ಅಜಿತ್ ಅಗರ್ಕರ್
ರಾಹುಲ್​ ದ್ರಾವಿಡ್​
Follow us on

ಭಾರತದ ಸರ್ವ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರೆನಿಸಿಕೊಂಡಿರುವ ಮತ್ತು ಈಗ ಶ್ರೀಲಂಕಾದಲ್ಲಿರುವ ಭಾರತದ ಇನ್ನೊಂದು ಟೀಮಿನ ಕೋಚ್ ಕರ್ನಾಟಕದ ರಾಹುಲ್ ದ್ರಾವಿಡ್​ ಅವರಿಗೆ ಟೀಮ್ ಇಂಡಿಯಾದ ಹೆಡ್​ ಕೋಚ್ ಆಗಬೇಕಾದರೆ, ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಎದುರು ಸಂದರ್ಶನಕ್ಕೆ ಹಾಜರಾಗುವ ಅಗತ್ಯವಿಲ್ಲ ಎಂದು ಭಾರತದ ಮಾಜಿ ವೇಗ್ ಬೌಲರ್ ಮತ್ತು ಈಗ ಕ್ರಿಕೆಟ್ ವಿಶ್ಲೇಷಕರಾಗಿ ಕೆಲಸ ಮಾಡುತ್ತಿರುವ ಅಜಿತ್ ಅಗರ್ಕರ್ ಹೇಳಿದ್ದಾರೆ.

ದ್ರಾವಿಡ್​ ಮಾರ್ಗದರ್ಶನ ಮತ್ತು ಶಿಖರ್ ಧವನ್ ನಾಯಕತ್ವದ ಯುವ ಭಾರತೀಯ ತಂಡ ರವಿವಾರದಂದು ಕೊಲಂಬೋದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಮೊದಲ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ ಅತಿಥೇಯರನ್ನು ಸುಲಭವಾಗಿ 7 ವಿಕೆಟ್​ಗಳಿಂದ ಸೋಲಿಸಿತು. ಭಾರತದ ಸೀನಿಯರ್ ಆಟಗಾರು ಇಂಗ್ಲೆಂಡ್​ ಪ್ರವಾಸದಲ್ಲಿರುವುದರಿಂದ ಧವನ್ ನಾಯಕತ್ವದಲ್ಲಿ ಯುವ ಪ್ರತಿಭಾವಂತರ ತಂಡವನ್ನು ಶ್ರೀಲಂಕಾಗೆ ಕಳಿಸಲಾಗಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ವರ್ಷಾಂತ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಂತರ ಸೀನಿಯರ್ ಟೀಮಿನ ಹೆಡ್​ ಕೋಚ್ ರವಿ ಶಾಸ್ತ್ರಿ ಅವರು ಅವಧಿ ಕೊನೆಗೊಳ್ಳಲಿರುವುದರಿಂದ ಮುಂದಿನ ಹೆಡ್ ಕೋಚ್ ದ್ರಾವಿಡ್​ ಆಗಲಿದ್ದಾರೆ ಎಂದು ಎಲ್ಲೆಡೆ ಚರ್ಚೆಗಳ ನಡೆದಿವೆ.

ಏತನ್ಮಧ್ಯೆ, ಅಗರ್ಕರ್ ಅವರು, 2018ರಲ್ಲಿ ದ್ರಾವಿಡ್ ಮಾರ್ಗದರ್ಶನದಲ್ಲಿ ಪೃಥ್ವಿ ಶಾ ಅವರ ನೇತೃತ್ವದ ಭಾರತದ ಅಂಡರ್-19 ತಂಡ ವಿಶಕಪ್ ಗೆದ್ದ ಸಂದರ್ಭವನ್ನು ಮೆಲಕು ಹಾಕಿದ್ದಾರೆ. ಸೋನಿ ಲಿವ್ ಚ್ಯಾನೆಲ್​ನಲ್ಲಿ ರವಿವಾರದಂದು ಪಂದ್ಯ-ಪೂರ್ವ ಕಾರ್ಯಕ್ರಮವೊಂದರಲ್ಲಿ ಅಗರ್ಕರ್ ಅವರು, ದ್ರಾವಿಡ್ ಟೀಮ್ ಇಂಡಿಯಾ ಹೆಡ್​ ಕೋಚ್ ಹುದ್ದೆಗೆ ಸಂದರ್ಶನ ನೀಡುವ ಅಗತ್ಯವಿಲ್ಲ ಅಂತ ಹೇಳಿದರು.

‘ನಾನಂದುಕೊಳ್ಳುವ ಹಾಗೆ ದ್ರಾವಿಡ್ ಸಂದರ್ಶನಕ್ಕೆ ಹಾಜರಾಗುವ ಅವಶ್ಯಕತೆಯಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಬಿಟ್ಟರೆ ರವಿ ಶಾಸ್ತ್ರಿಯ ದಾಖಲೆ ಚೆನ್ನಾಗಿದೆ. ದ್ರಾವಿಡ್​ ಅವರಿಂದ ಅಂಡರ್-19 ಟೀಮ್ ಪ್ರಯೋಜನ ಪಡೆದಿದೆ. ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿರುವ ಇತರ ಕೋಚ್​ಗಳು ಸಹ ದ್ರಾವಿಡ್​ ಅವರಿಂದ ಬಹಳಷ್ಟನ್ನು ಕಲಿತಿದ್ದಾರೆ,’ ಎಂದು ಅಗರ್ಕರ್ ಹೇಳಿದರು.

ಗಮನಿಸಬೇಕಿರುವ ಸಂಗತಿಯೆಂದರೆ, ಭಾರತದ ಟೀಮುಗಳಲ್ಲಿರುವ ಬಾರತದ ಯುವ ಆಟಗಾರರೆಲ್ಲ ದ್ರಾವಿಡ್​ ಗರಡಿಯಲ್ಲಿ ಪಳಗಿದವರಾಗಿದ್ದಾರೆ. ಭಾರತ ಹೊಂದಿರುವ ಬಲಿಷ್ಠ ಬೆಂಚ್ ಬಲದ ಶ್ರೇಯಸ್ಸನ್ನೆಲ್ಲ ದ್ರಾವಿಡ್​ ಅವರಿಗೆ ನೀಡಲಾಗುತ್ತದೆ. ಈ ಪ್ರತಿಭಾವಂತ ಯುವಕರು ಸಹ ದ್ರಾವಿಡ್​ ಅವರಿಂದ ತುಂಬಾ ಕಲಿತಿರುವುದಾಗಿ ಹೇಳುತ್ತಾರೆ.

ಇದನ್ನೂ ಓದಿ: Rahul Dravid: ಟೀಂ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚ್; ಶ್ರೀಲಂಕಾ ಪ್ರವಾಸದಲ್ಲಿ ‘ದಿ ವಾಲ್’ ಶಿಷ್ಯರದ್ದೇ ಹವಾ