ಆಂಗ್ಲರನ್ನು ಅವರ ನೆಲದಲ್ಲೇ ಮಣಿಸಲಿದೆ ಟೀಂ ಇಂಡಿಯಾ; ಭವಿಷ್ಯ ನುಡಿದ ರಾಹುಲ್ ದ್ರಾವಿಡ್

| Updated By: Skanda

Updated on: May 10, 2021 | 9:58 AM

ಈ ಸರಣಿಯಲ್ಲಿ ಕಠಿಣ ಸ್ಪರ್ಧೆ ನಡೆಯಲಿದೆ ಎಂದು ಹೇಳಿದ್ದಾರೆ, ಆದರೆ ಭಾರತ ಸರಣಿಯನ್ನು 3-2 ರಿಂದ ತಮ್ಮ ಪಾಲಾಗಿಸಲಿದೆ ಎಂದು ದ್ರಾವಿಡ್ ಭವಿಷ್ಯ ನುಡಿದಿದ್ದಾರೆ.

ಆಂಗ್ಲರನ್ನು ಅವರ ನೆಲದಲ್ಲೇ ಮಣಿಸಲಿದೆ ಟೀಂ ಇಂಡಿಯಾ; ಭವಿಷ್ಯ ನುಡಿದ ರಾಹುಲ್ ದ್ರಾವಿಡ್
ರಾಹುಲ್​ ದ್ರಾವಿಡ್​
Follow us on

ಭಾರತೀಯ ಕ್ರಿಕೆಟ್ ತಂಡವು ಈ ವರ್ಷ ಆಗಸ್ಟ್-ಸೆಪ್ಟೆಂಬರ್​ನಲ್ಲಿ ಇಂಗ್ಲೆಂಡ್​ಗೆ ಭೇಟಿ ನೀಡಬೇಕಿದೆ, ಅಲ್ಲಿ ತಂಡವು ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಭಾರತ ಮತ್ತು ಇಂಗ್ಲೆಂಡ್‌ನ ಪ್ರಸ್ತುತ ಸ್ವರೂಪವನ್ನು ಗಮನಿಸಿದರೆ, ಈ ಸರಣಿಯಲ್ಲಿ ತೀವ್ರ ಸ್ಪರ್ಧೆ ಎದುರಾಗುವ ನಿರೀಕ್ಷೆಯಿದೆ ಮತ್ತು ಸರಣಿಯು ಯಾರ ಪರವಾಗಿ ಹೋಗಬಹುದು ಎಂಬುದನ್ನು ಊಹಿಸುವುದು ಅಸಾಧ್ಯವಾಗಿದೆ. ಭಾರತ ತನ್ನ ನೆಲದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದೆ ಮತ್ತು ವಿದೇಶದಲ್ಲಿಯೂ ಗೆಲ್ಲುವ ಶಕ್ತಿ ತನ್ನಲ್ಲಿದೆ ಎಂದು ಸಾಬೀತು ಮಾಡಿದೆ. 2007 ರಲ್ಲಿ ಇಂಗ್ಲೆಂಡ್‌ನಲ್ಲಿ ಸರಣಿಯನ್ನು ಗೆದ್ದ ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್, ಈ ಸರಣಿಯಲ್ಲಿ ಕಠಿಣ ಸ್ಪರ್ಧೆ ನಡೆಯಲಿದೆ ಎಂದು ಹೇಳಿದ್ದಾರೆ, ಆದರೆ ಭಾರತ ಸರಣಿಯನ್ನು 3-2 ರಿಂದ ತಮ್ಮ ಪಾಲಾಗಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಎರಡೂ ತಂಡಗಳು ಅತ್ಯುತ್ತಮವಾಗಿರುವ ಕಾರಣ ಈ ಸರಣಿಯನ್ನು ನೋಡಲು ಕುತೂಹಲ ಹೆಚ್ಚಾಗಿದೆ ಎಂದು ರಾಹುಲ್ ಹೇಳಿದರು. ಈ ಬಾರಿ ಸರಣಿಯನ್ನು ಗೆಲ್ಲಲು ಭಾರತಕ್ಕೆ ಉತ್ತಮ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ. ಇಂಗ್ಲೆಂಡ್‌ನ ಬೌಲಿಂಗ್ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ. ಇಂಗ್ಲೆಂಡ್ ಯಾವುದೇ ಬೌಲಿಂಗ್ ದಾಳಿಯನ್ನು ತಂದರೂ, ವಿಶೇಷವಾಗಿ ಅವರ ವೇಗದ ಬೌಲಿಂಗ್ ದಾಳಿ, ಅದು ಅದ್ಭುತವಾಗಿದೆ. ಅವರು ಆಯ್ಕೆ ಮಾಡಲು ಉತ್ತಮ ಆಟಗಾರರನ್ನು ಹೊಂದಿದ್ದಾರೆ ಎಂದು ರಾಹುಲ್ ಇಂಗ್ಲೆಂಡ್ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಟಾಪ್ -7 ರಲ್ಲಿ ಕೇವಲ ಒಬ್ಬ ಉತ್ತಮ ಬ್ಯಾಟ್ಸ್‌ಮನ್
ಆದಾಗ್ಯೂ, ಇಂಗ್ಲೆಂಡ್ ಬ್ಯಾಟಿಂಗ್‌ನಲ್ಲಿ ಒಬ್ಬ ಶ್ರೇಷ್ಠ ಬ್ಯಾಟ್ಸ್‌ಮನ್ ಮಾತ್ರ ಇದ್ದಾನೆ ಎಂದು ರಾಹುಲ್ ಹೇಳಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ನೀವು ಅಗ್ರ ಆರು ಮತ್ತು ಏಳು ಬ್ಯಾಟ್ಸ್‌ಮನ್‌ಗಳನ್ನು ನೋಡಿದರೆ, ನೀವು ಒಬ್ಬ ಬ್ಯಾಟ್ಸ್‌ಮನ್‌ರನ್ನು ಮಾತ್ರ ನೋಡಲು ಸಾಧ್ಯ. ಆ ಆಟಗಾರನೆಂದರೆ ಅವರೇ ಬೆನ್ ಸ್ಟೋಕ್ಸ್. ಆದರೆ ರವಿಚಂದ್ರನ್ ಅಶ್ವಿನ್ ಎದುರು ಅವರು ಅಷ್ಟೊಂದು ಪರಿಣಾಮಕಾರಿಯಲ್ಲ ಎಂದರು.

ಆಸ್ಟ್ರೇಲಿಯಾದಲ್ಲಿ ಗೆಲ್ಲುವ ಮೂಲಕ ವಿಶ್ವಾಸ ಗಳಿಸಿದೆ
ಭಾರತವು ಆಸ್ಟ್ರೇಲಿಯಾವನ್ನು ಅವರ ನೆಲದಲ್ಲೇ ಸೋಲಿಸಿದೆ ಮತ್ತು ಈ ಗೆಲುವು ಅವರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ರಾಹುಲ್ ಹೇಳಿದ್ದಾರೆ. ಜೊತೆಗೆ ಭಾರತವು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ನಾನು ಭಾವಿಸುತ್ತೇನೆ. ಆಸ್ಟ್ರೇಲಿಯಾದಲ್ಲಿ ಗೆಲ್ಲುವ ವಿಶ್ವಾಸ ಅವರಿಗೆ ಇದೆ. ತಂಡದ ಕೆಲವು ಆಟಗಾರರು ಈ ಮೊದಲು ಇಂಗ್ಲೆಂಡ್‌ನಲ್ಲೂ ಆಡಿದ್ದಾರೆ. ತಂಡದ ಬ್ಯಾಟಿಂಗ್ ವಲಯ ಬಹಳ ಅನುಭವಿ ಆಟಗಾರರನ್ನು ಹೊಂದಿದೆ. ಹಾಗಾಗಿ ಈ ಬಾರಿ ಭಾರತಕ್ಕೆ ಇಂಗ್ಲೆಂಡ್‌ನಲ್ಲಿ ಗೆಲ್ಲುವ ಉತ್ತಮ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ. ಬಹುಶಃ ಭಾರತ 3-2ರಲ್ಲಿ ಜಯಗಳಿಸಬಹುದು ಎಂದರು.

ತಂಡದ ಕಾರ್ಯಕ್ರಮದ ರೀತಿ, ಇದು ಇಂಗ್ಲೆಂಡ್‌ನ ಪರಿಸ್ಥಿತಿಗಳಿಗೆ ಅನುಗುಣವಾಗಿರಲು ತಂಡಕ್ಕೆ ಸಹಾಯ ಮಾಡುತ್ತದೆ ಎಂದು ರಾಹುಲ್ ಹೇಳಿದ್ದಾರೆ. ಭಾರತ ಈ ಬಾರಿ ಇಂಗ್ಲೆಂಡ್‌ನಲ್ಲಿ ಉತ್ತಮ ಸಾಧನೆ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ನಂತರ ಭಾರತ ಟೆಸ್ಟ್ ಸರಣಿಯ ಒಂದು ತಿಂಗಳ ಮೊದಲು ಇಂಗ್ಲೆಂಡ್‌ನಲ್ಲಿ ಉಳಿಯಲಿದೆ. ಬೇರೆ ಯಾವುದೇ ತಂಡಕ್ಕೆ ಇಷ್ಟು ಸಮಯ ಸಿಕ್ಕಿದೆ ಎಂದು ನಾನು ಭಾವಿಸುವುದಿಲ್ಲ. ಇದು ಖಂಡಿತವಾಗಿಯೂ ಪ್ರಯೋಜನಕ್ಕೆ ಬರುತ್ತದೆ ಎಂದರು.

ಇದನ್ನೂ ಓದಿ:
ಟೀಂ ಇಂಡಿಯಾದ ಸುದೀರ್ಘ ಇಂಗ್ಲೆಂಡ್ ಪ್ರವಾಸ; ಕೇವಲ 6 ಪಂದ್ಯಗಳಿಗಾಗಿ 87 ದಿನ ಆಂಗ್ಲರ ನಾಡಿನಲ್ಲಿರಬೇಕು ಕೊಹ್ಲಿ ಬಳಗ