AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನ ದೇಣಿಗೆ ಹಣದಲ್ಲಿ ಒಂದು ವೆಂಟಿಲೇಟರ್ ಸಹ ಬರುವುದಿಲ್ಲ; ದೇಣಿಗೆ ನೀಡಿ ಟ್ರೋಲ್ ಆದ ಯಜ್ವೇಂದ್ರ ಚಹಲ್

ಯುಜ್ವೇಂದ್ರ ಚಹಲ್ 95 ಸಾವಿರ ರೂಪಾಯಿಗಳನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಆದರೆ, ಚಹಲ್ ಅವರ ದೇಣಿಗೆ ಕಂಡ ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ನಿನ್ನ ದೇಣಿಗೆ ಹಣದಲ್ಲಿ ಒಂದು ವೆಂಟಿಲೇಟರ್ ಸಹ ಬರುವುದಿಲ್ಲ; ದೇಣಿಗೆ ನೀಡಿ ಟ್ರೋಲ್ ಆದ ಯಜ್ವೇಂದ್ರ ಚಹಲ್
ಯಜ್ವೇಂದ್ರ ಚಹಲ್
ಪೃಥ್ವಿಶಂಕರ
| Updated By: Skanda|

Updated on: May 10, 2021 | 9:45 AM

Share

ಕೊರೊನಾ ವಿರುದ್ಧದ ಯುದ್ಧದಲ್ಲಿ ಅನೇಕ ಕ್ರಿಕೆಟಿಗರು ಸಹಾಯಕ್ಕಾಗಿ ಬಂದಿದ್ದಾರೆ. ಸಂತ್ರಸ್ತರಿಗೆ ಸಹಾಯ ಮಾಡಲು ತಂಡಗಳು ಹಣವನ್ನು ದೇಣಿಗೆ ನೀಡಿವೆ, ಈಗ ಆಟಗಾರರು ವೈಯಕ್ತಿಕ ಮಟ್ಟದಲ್ಲಿ ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ. ಏತನ್ಮಧ್ಯೆ, ಕೊವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ದೇಶಕ್ಕೆ ಸಹಾಯ ಮಾಡಲು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಎರಡು ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ ಮತ್ತು ಜನರು ಸಹ ದೇಣಿಗೆ ನೀಡುವಂತೆ ಕೇಳಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಏಳು ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ಗುರಿ ಹೊಂದಿದ್ದಾರೆ. ಈ ಇಬ್ಬರು ಕೀಟೊ ಎಂಬ ಸಂಸ್ಥೆಯ ಮೂಲಕ ಸಾರ್ವಜನಿಕರಿಂದ ಈ ಹಣವನ್ನು ಸಂಗ್ರಹಿಸುತ್ತಿದ್ದಾರೆ. 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 3.6 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ವಿರಾಟ್ ಮಾಹಿತಿ ನೀಡಿದ್ದಾರೆ. ಭಾರತೀಯ ಸ್ಪಿನ್ ಬೌಲರ್ ಯುಜ್ವೇಂದ್ರ ಚಹಲ್ ಕೂಡ ಅದರಲ್ಲಿ ದೇಣಿಗೆ ನೀಡಲು ನಿರ್ಧರಿಸಿ, 95 ಸಾವಿರ ರೂಪಾಯಿಗಳನ್ನು ದೇಣಿಗೆ ರೂಪದಲ್ಲಿ ನೀಡಿದರು. ಆದರೆ, ಚಹಲ್ ಅವರ ದೇಣಿಗೆ ಕಂಡ ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ಟ್ರೋಲ್ ಆದ ಚಹಲ್ ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಕೊಹ್ಲಿಯ ಆಪ್ತರಾಗಿದ್ದಾರೆ. ಆದರೆ, ಅವರು 95 ಸಾವಿರ ದೇಣಿಗೆ ನೀಡಿದ್ದಾರೆ ಎಂದು ಅಭಿಮಾನಿಗಳು ತಿಳಿದ ಕೂಡಲೇ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲು ಪ್ರಾರಂಭಿಸಿದರು. ಕೋಟಿ ಸಂಪಾದಿಸುವವರು ಹೆಚ್ಚಿನ ಹಣವನ್ನು ದಾನ ನೀಡಬೇಕು ಎಂದು ಅಭಿಮಾನಿಗಳು ಹೇಳಿದರು. ಅದೇ ಸಮಯದಲ್ಲಿ ಇನ್ನೂ ಕೆಲವರು, ಚಹಲ್ ಐಪಿಎಲ್​ನಲ್ಲಿ ಇದಕ್ಕಿಂತ ಹೆಚ್ಚಾಗಿ ರನ್ ನೀಡುತ್ತಾರೆ ಎಂದು ಕಾಲೆಳೆದರು. ಇನ್ನೂ ಕೆಲವರು 95 ಸಾವಿರ ರೂಪಾಯಿಗಳಿಗೆ, 1 ವೆಂಟಿಲೇಟರ್ ಸಹ ಬರುವುದಿಲ್ಲ ಎಂದಿದ್ದಾರೆ. ಮತ್ತೊಬ್ಬ, ಅವರು ಕೋಟಿ ಸಂಪಾದಿಸುತ್ತಾರೆ ಆದರೆ ಕೇವಲ 95 ಸಾವಿರ ದೇಣಿಗೆ ನೀಡುತ್ತಿದ್ದಾರೆ. ಇದಕ್ಕಿತ ಏನನ್ನೂ ನೀಡದಿದ್ದರೆ ಚೆನ್ನಾಗಿತ್ತು ಎಂದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಸಹ ಸಹಾಯ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಈ ದಿಕ್ಕಿನಲ್ಲಿ ಪ್ರಮುಖ ಕೊಡುಗೆ ನೀಡಿದೆ. ಚೆನ್ನೈ ಫ್ರ್ಯಾಂಚೈಸ್, ಕೊವಿಡ್ -19 ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕೆ ಕೊಡುಗೆ ನೀಡಿದ್ದು, ತಮಿಳುನಾಡಿನಲ್ಲಿ ಕೊರೊನಾ ರೋಗಿಗಳಿಗೆ 450 ಆಕ್ಸಿಜನ್ ವ್ಯವಸ್ಥೆಗೊಳಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್ ನಿರ್ದೇಶಕ ಆರ್.ಶ್ರೀನಿವಾಸನ್ ಅವರು ಆಕ್ಸಿಜನ್ ಪರಿಕರಗಳನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಶನಿವಾರ ಹಸ್ತಾಂತರಿಸಿದರು.

ಇದನ್ನೂ ಓದಿ: ಅನುಷ್ಕಾ ಶರ್ಮಾ- ವಿರಾಟ್ ಕೊಹ್ಲಿ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಒಂದೇ ದಿನದಲ್ಲಿ ಹರಿದು ಬಂದ ಮೊತ್ತವೆಷ್ಟು ಗೊತ್ತಾ?