India vs England Test Series: ಚೆನೈ ಟೆಸ್ಟ್​ನಲ್ಲಿ 114 ವರ್ಷ ಹಿಂದಿನ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್

|

Updated on: Feb 08, 2021 | 10:30 PM

ಸ್ಪಿನ್ನರ್​ ಒಬ್ಬ ಇನ್ನಿಂಗ್ಸ್​ನ ಮೊದಲ ಓವರ್​ನ ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವ ಘಟನೆ ಈ ಹಿಂದೆ 1907ರಲ್ಲಿ ನಡೆದಿತ್ತು. ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಬರ್ಟ್ ವೊಗ್ಲರ್, ಇಂಗ್ಲೆಂಡ್​ ವಿರುದ್ಧ ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆದಿದ್ದರು.

India vs England Test Series: ಚೆನೈ ಟೆಸ್ಟ್​ನಲ್ಲಿ 114 ವರ್ಷ ಹಿಂದಿನ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್
ಮೊದಲ ಎಸೆತದಲ್ಲೇ ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಬರ್ಟ್ ವೋಗ್ಸ್
Follow us on

ಚೆನೈ: ಭಾರತ ಮತ್ತು ಇಂಗ್ಲೆಂಡ್ ನಡುವೆ ಚೆನೈನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್​ ಪಂದ್ಯದ ನಾಲ್ಕನೇ ದಿನವಾದ ಸೋಮವಾರದಂದು ಭಾರತ ಮೊದಲ ಇನ್ನಿಂಗ್ಸ್​ನಲ್ಲಿ ಆಲೌಟ್​ ಆದ ನಂತರ ಪ್ರವಾಸಿ ತಂಡ ಅತಿಥೇಯರ ಮೇಲೆ ಫಾಲೋ-ಆನ್ ಹೇರದೆ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟ್ ಮಾಡಲು ಶುರುಮಾಡಿತು. ಭಾರತದ ಏಸ್ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 100 ವರ್ಷಗಳಿಗೂ ಮಿಗಿಲಾದ ಒಂದು ದಾಖಲೆಯನ್ನು ಸರಿಗಟ್ಟಿ ಅಪರೂಪದ ಸಾಧನೆ ಮಾಡಿದರು. ಪ್ರಾಯಶಃ ಬಹಳಷ್ಟು ಕ್ರಿಕೆಟ್ ಪ್ರೇಮಿಗಳ ಗಮನಕ್ಕೆ ಈ ವಿಷಯ ಬಂದಿರಲಿಕ್ಕಿಲ್ಲ.

ಟೆಸ್ಟ್ ಪಂದ್ಯವೊಂದರಲ್ಲಿ ಇನ್ನಿಂಗ್ಸ್​ನ ಮೊದಲ ಎಸೆತದಲ್ಲೇ ವಿಕೆಟ್ ಪತನಗೊಳ್ಳುವುದು ಅಪರೂಪದ ಸಂಗತಿಯೇನಲ್ಲ. ಆದರೆ, ಆರಂಭಿಕ ಓವರ್​ಗಳನ್ನು ಸಾಮಾನ್ಯವಾಗಿ ವೇಗದ ಬೌಲರ್​ಗಳು ಎಸೆಯುವುದರಿಂದ ಸ್ಪಿನ್ನರ್​ಗಳಿಗೆ ಅಂಥ ಸಾಧನೆ ಮಾಡುವ ಅವಕಾಶ ಇರುವುದಿಲ್ಲ.

ಈ ಹಿನ್ನೆಲೆಯಲ್ಲೇ ಅಶ್ವಿನ್ ಸಾಧನೆ ಅಪೂರ್ವ ಎನಿಸಿದೆ. ಇಂಗ್ಲೆಂಡ್​ ಎರಡನೇ ಇನ್ನಿಂಗ್ಸ್ ಶುರುಮಾಡಿದಾಗ ಲಂಚ್ ವಿರಾಮದ ಮೊದಲು ಒಂದು ಓವರ್ ಬೌಲ್ ಮಾಡುವ ಸಮಯ ಮಾತ್ರ ಇದ್ದುದ್ದರಿಂದ ಭಾರತದ ಕ್ಯಾಪ್ಟನ್ ಆ ಓವರ್​ ಅನ್ನು ಅಶ್ವಿನ್ ಅವರಿಂದ ಬೌಲ್ ಮಾಡಿಸಿದರು. ಅವರ ನಿರ್ಧಾರ ಸ್ಪಾಟ್-ಆನ್ ಆಗಿತ್ತು. ಸ್ಥಳೀಯ ಹುಡುಗ ಆಶ್ವಿನ್ ಮೊದಲ ಎಸೆತದಲ್ಲೇ ಆಂಗ್ಲರ ಓಪನಿಂಗ್ ಬ್ಯಾಟ್ಸ್​ಮನ್ ರೋರಿ ಬರ್ನ್ಸ್​ರನ್ನು ಔಟ್ ಮಾಡಿ 114 ವರ್ಷಗಳ ಹಿಂದಿನ ಸಾಧನೆಯನ್ನು ಸರಿಗಟ್ಟಿದರು.

ಸ್ಪಿನ್ನರ್​ನ್ನೊಬ್ಬ ಇನ್ನಿಂಗ್ಸ್ ಒಂದರ ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವ ಘಟನೆ ಈ ಹಿಂದೆ 1907 ರಲ್ಲಿ ಸಂಭವಿಸಿತ್ತು.  ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಬರ್ಟ್ ವೊಗ್ಲರ್ ಇನ್ನಿಂಗ್ಸ್ ಶುರುವಾದಾಗ ದಾಳಿ ಆರಂಭಿಸಿ ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆದಿದ್ದರು. ಹಾಗೆ ನೋಡಿದರೆ, ಇಂಗ್ಲೆಂಡ್ ಬಾಬ್ಬಿ ಪೀಲ್ ಇಂಥ ಸಾಧನೆ ಮಾಡಿದ ವಿಶ್ವದ ಮೊದಲ ಸ್ಪಿನ್ನರ್ ಆಗಿದ್ದಾರೆ, ಆ ಟೆಸ್ಟ್ ನಡೆದಿದ್ದು 133 ವರ್ಷಗಳ ಹಿಂದೆ, 1888ರಲ್ಲಿ!

ಇನ್ನಿಂಗ್ಸ್​ನ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಅಶ್ವಿನ್​​ರನ್ನು ಅಭಿನಂದಿಸುತ್ತಿರುವ ನಾಯಕ ವಿರಾಟ್ ಕೊಹ್ಲಿ

ಓದುಗರಿಗೆ ಗೊತ್ತಿರುವಂತೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​ನಲ್ಲಿ ಅಶ್ವಿನ್ 146 ರನ್ ನೀಡಿ ಬರ್ನ್ಸ್, ಒಲ್ಲೀ ಪೊಪ್ ಮತ್ತು ಜೇಮ್ಸ್ ಆ್ಯಂಡರ್ಸನ್ ಅವರ ವಿಕೆಟ್​ಗಳನ್ನು ಪಡೆದಿದ್ದರು. ತಮ್ಮ 55 ಓವರ್​ಗಳ ಸ್ಪೆಲ್​ನಲ್ಲಿ ಅಶ್ವಿನ್ ತಮ್ಮ ಕರೀಯರ್​ನಲ್ಲಿ ಮೊದಲ ಬಾರಿಗೆ ನೋ ಬಾಲ್​ಗಳನ್ನು ಎಸೆದರು. ಟೆಸ್ಟ್​ ಕ್ರಿಕೆಟ್ ಆವೃತ್ತಿಯಲ್ಲಿ 20,600 ಎಸೆತಗಳನ್ನು ಬೌಲ್ ಮಾಡಿದ ನಂತರ (ಇಂಗ್ಲೆಂಡ್ ಇನ್ನಿಂಗ್ಸ್​ನ 137ನೇ ಓವರ್) ಅಶ್ವಿನ್ ಮೊದಲ ನೋಬಾಲ್ ಎಸೆದರು! ಸೋಜಿಗದ ಸಂಗತಿಯೆಂದರೆ ಅದಾದ 40 ಓವರ್​ಗಳ ನಂತರ ಅಶ್ವಿನ್ ಮತ್ತೊಂದು ನೋಬಾಲ್ ಬೌಲ್ ಮಾಡಿದರು. ಈ ಇನ್ನಿಂಗ್ಸ್​ನಲ್ಲಿ ಅವರು ಸತತವಾಗಿ 55.1 ಓವರ್​ಳನ್ನು ಬೌಲ್ ಮಾಡಿ ತಾವು ಹಿಂದೆ ಸ್ಥಾಪಿಸಿದ್ದ ಸತತ 53 ಓವರ್​ಗಳ (ಆಸ್ಟ್ರೇಲಿಯಾ ವಿರುದ್ಧ 2011-12ಸರಣಿಯ ಅಡಿಲೇಡ್ ಟೆಸ್ಟ್​) ಸಾಧನೆಯನ್ನು ಉತ್ತಮಪಡಿಸಿದರು.

ಇಂಗ್ಲೆಂಡ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಉತ್ಕೃಷ್ಟ ಬೌಲಿಂಗ್ ಪ್ರದರ್ಶನ ನೀಡಿದ ಆಶ್ವಿನ್ 61ರನ್​ಗಳಿಗೆ 6 ವಿಕೆಟ್​ ಪಡೆದರು. ಮೊದಲ ಟೆಸ್ಟ್​ ಗೆಲ್ಲಲು ಭಾರತಕ್ಕೆ 419ರನ್​ಗಳ ಅವಶ್ಯಕತೆಯಿದೆ.

India vs England Test Series: ಕುಲ್ದೀಪ್​ರನ್ನು ಟೀಮಿನಿಂದ ಹೊರಗಿಟ್ಟಿರುವುದು ನನ್ನಲ್ಲಿ ದಿಗ್ಭ್ರಮೆ ಮೂಡಿಸಿದೆ: ಹರ್ಭಜನ್ ಸಿಂಗ್

 

 

Published On - 5:16 pm, Mon, 8 February 21