David Boon moustache ಮೀಸೆ ಹೊತ್ತ ಕ್ರಿಕೆಟಿಗನ ನೆನಪಿಸಿದ ICC: ವಿಮಾನ ಹತ್ತಿ ಇಳಿಯುವುದರೊಳಗೆ 52 ಬಿಯರ್ ಕುಡಿದಿದ್ದ ಮೀಸೆ ಹೊತ್ತ ದಾಂಡಿಗನ Interesting Story..!
David Boon moustache 1989 ರಲ್ಲಿ ಸಿಡ್ನಿಯಿಂದ ಲಂಡನ್‌ಗೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಬೂನ್, 52 ಕ್ಯಾನ್ ಬಿಯರ್ ಸೇವಿಸಿದ್ದರೆದು ಹೇಳಲಾಗುತ್ತದೆ. ಆದರೆ ಇದರ ಬಗ್ಗೆ ಬೂನ್ ಎಲ್ಲೂ ಸ್ಪಷ್ಟನೇ ನೀಡಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿರುವ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತನ್ನ ಫೇಸ್ಬುಕ್ ಖಾತೆಯಲ್ಲಿ ಕ್ರಿಕೆಟ್ಗೆ ಸಂಬಂಧಿಸಿದ ಕೆಲವು ಕುತೂಹಲಕಾರಿ ಮಾಹಿತಿಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತದೆ. ಈಗ ಇಂತಹುದೇ ಪೋಸ್ಟ್ ಹಾಕಿರುವ ಐಸಿಸಿ, ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಬೌಲರ್ ಮರ್ವ್ ಹ್ಯೂಸ್ ಅವರ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿ ಅವರ ಬಗೆಗಿನ ಕೆಲವು ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದೆ.
ಇತ್ತೀಚೆಗೆ ಕ್ರಿಕೆಟ್ ಆಟಗಾರ ಮರ್ವ್ ಹ್ಯೂಸ್, ಆಸ್ಟ್ರೇಲಿಯಾದ ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಮಾಜಿ ವೇಗದ ಬೌಲರ್ ಮರ್ವ್ ಹ್ಯೂಸ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಐಸಿಸಿ, ಮರ್ವ್ ಹ್ಯೂಸ್ ಅವರ ಕ್ರಿಕೆಟ್ ಸಾಧನೆ ಹಾಗೂ ಅವರ ಆಕರ್ಷಕ ಮೀಸೆಯ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಮರ್ವ್ ಹ್ಯೂಸ್ ಬಗ್ಗೆ ಪೋಸ್ಟ್ ಹಾಕಿರುವ ಐಸಿಸಿ, 53 ಟೆಸ್ಟ್ನಲ್ಲಿ 212 ವಿಕೆಟ್ ಪಡೆದಿರುವ ಜೊತೆಗೆ ಕ್ರಿಕೆಟ್ ಜಗತ್ತಿನಲ್ಲಿ ಅಪೂರ್ವ ವಿನ್ಯಾಸದ ಮೀಸೆಯ ಮಾಲೀಕರಾದ ಮರ್ವ್ ಹ್ಯೂಸ್ಗೆ ಅಭಿನಂದನೆಗಳು ಎಂದು ಬರೆದುಕೊಂಡಿದೆ. ಆದರೆ ಹಳೆಯದ್ದನ್ನು ಮೆಲುಕು ಕಾಕುವುದಾದರೆ ಇಂತಹ ಮೀಸೆಹೊತ್ತ ಕ್ರಿಕೆಟ್ಟಿಗ ಈತನೇ ಮೊದಲಲ್ಲ; ಆತನೊಬ್ಬನಿದ್ದ ಡೇವಿಡ್ ಬೂನ್ ಅಂತಾ! ಆತನೂ ಆಸ್ಟ್ರೇಲಿಯಾದವನೇ! ಆ ಕಾಲದ ಕ್ರಿಕೆಟ್ ಪ್ರೇಮಿಗಳ ಅಚ್ಚುಮೆಚ್ಚಿನ ದಾಂಡಿಗ ಆತ.
ಡೇವಿಡ್ ಬೂನ್ ಸ್ಕ್ರೀಸ್ನಲ್ಲಿ ನಿಂತ ಎಂದ್ರೆ ಎದುರಾಳಿ ಬೌಲರ್ ಎದೆಯಲ್ಲಿ ಭತ್ತ ಕುಟ್ಟುವ ಅನುಭವ. ಬೂನ್ ವಿಕೆಟ್ ಎದುರು ನಿಂತರೆ ಎದುರಾಳಿಗೆ ಆತ ಯಮ ಸ್ವರೂಪಿಯಾಗುತ್ತಿದ್ದ. ಆದರೆ ಆತನೊಬ್ಬ ಅಪ್ಪಟ ಬ್ಯಾಟ್ಸ್ಮನ್; ಕಲಾತ್ಮಕ ಸ್ಕ್ವೇರ್ ಕಟ್, ಅಷ್ಟೇ ಸದೃಢ ಕವರ್ ಡ್ರೈವ್ಗನ್ನು ಬಾರುಸುತ್ತಿದ್ದರೆ ಅದು ನಿಜಕ್ಕೂ ಕಣ್ಣಿಗೆ ಹಬ್ಬ. ಮರ್ವ್ ಹ್ಯೂಸ್ನಂತೆಯೇ ಭರ್ಜರಿ ಮೀಸೆ ಬೆಳೆಸಿದ್ದ ಇತರ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾದ ಡೇವಿಡ್ ಬೂನ್ ಬಗೆಗಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಬೂನ್ ಆರಂಭದ ದಿನಗಳು.. ಡೇವಿಡ್ ಕ್ಲಾರೆನ್ಸ್ ಬೂನ್ ಅವರು ಡಿಸೆಂಬರ್ 29, 1960 ರಂದು ತಾಸ್ಮೇನಿಯಾದ ಲಾನ್ಸೆಸ್ಟನ್ ಪಟ್ಟಣದಲ್ಲಿ ಜನಿಸಿದವ. ಆತನಿಗೆ ಬೂನಿ ಎಂಬ ಅಡ್ಡಹೆಸರು ಇದೆ. ತನ್ನ 17 ನೇ ವಯಸ್ಸಿನಲ್ಲಿ, 1978-79ರಲ್ಲಿ ಶೆಫೀಲ್ಡ್ ಶೀಲ್ಡ್ ಕ್ರಿಕೆಟ್‌ನ ಎರಡನೇ ಆವೃತ್ತಿಯಲ್ಲಿ ಬೂನ್, ತಾಸ್ಮೇನಿಯಾ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದವ. 18 ವರ್ಷದವನಾಗಿದ್ದಾಗ, 1978-79ರ ಜಿಲೆಟ್ ಕಪ್ ಗೆಲುವಿನಲ್ಲಿ ಬೂನ್ ಪ್ರಮುಖ ಪಾತ್ರ ವಹಿಸಿದರು. ಇದು ರಾಜ್ಯದ ಮೊದಲ ಅಂತರರಾಜ್ಯ ಏಕದಿನ ಪ್ರಶಸ್ತಿಯಾಗಿತ್ತು.
ಅಂತರರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ.. 1983- 84ರಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ವಿಶ್ವಕಪ್‌ನ ಮೂರನೇ ಫೈನಲ್‌ನಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಚೊಚ್ಚಲ ಪ್ರವೇಶ ಮಾಡಿದರು. ಆ ಪಂದ್ಯದಲ್ಲಿ ಅವರು 71 ಎಸೆತಗಳಲ್ಲಿ 39 ರನ್ ಗಳಿಸಿದರು.
ಜೆಫ್ ಮಾರ್ಷ್ ಜೊತೆಗೆ ವಿಶ್ವ ದಾಖಲೆ..! 1986 ರಲ್ಲಿ ಜೈಪುರದಲ್ಲಿ ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ಬೂನ್ ಮತ್ತು ಜೆಫ್ ಮಾರ್ಷ್ ಮೊದಲ ವಿಕೆಟ್‌ಗೆ 212 ರನ್‌ಗಳ ಜೊತೆಯಾಟ ಆಡಿದರು. ಜೊತೆಗೆ ಇಬ್ಬರೂ ಶತಕಗಳನ್ನು ಬಾರಿಸಿದರು. ಏಕದಿನ ಪಂದ್ಯದಲ್ಲಿ ಎರಡೂ ಆರಂಭಿಕ ಆಟಗಾರರು ಶತಕ ಬಾರಿಸಿದ್ದು ಇದೇ ಮೊದಲು. ಹಾಗೆಯೇ ಆರಂಭಿಕ ಜೊತೆಯಾಟದಲ್ಲಿ ಡಬಲ್ ಸೆಂಚುರಿ ಬಾರಿಸಿದ್ದು ಸಹ ಇದೆ ಮೊದಲನೇಯಾದಾಗಿತ್ತು.
1987 ರ ವಿಶ್ವಕಪ್‌ನಾದ್ಯಂತ ಬೂನ್ ಪ್ರಮುಖ ಪಾತ್ರ ವಹಿಸಿದರು. ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಪಾಕಿಸ್ತಾನವನ್ನು ಸೋಲಿಸಿತು. ಈಡನ್ ಗಾರ್ಡನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಫೈನಲ್‌ನಲ್ಲಿ ಬೂನ್ 75 ರನ್‌ಗಳ ನಿರ್ಣಾಯಕ ಕೊಡುಗೆ ನೀಡಿದರು. ಅಂತಿಮವಾಗಿ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಿತು ಮತ್ತು ಬೂನ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಲಾರ್ಡ್ಸ್, ನಾಟಿಂಗ್ಹ್ಯಾಮ್ ಮತ್ತು ಲೀಡ್ಸ್ನಲ್ಲಿ ಸತತ 3 ಶತಕಗಳನ್ನು ಗಳಿಸಿ 1993 ರಲ್ಲಿ ಆಸ್ಟ್ರೇಲಿಯಾವು ಆಶಸ್ ಗೆಲ್ಲಲು ಸಹಾಯ ಮಾಡುವಲ್ಲಿ ಡೇವಿಡ್ ಬೂನ್ ಪ್ರಮುಖ ಪಾತ್ರ ವಹಿಸಿದರು.
ನಿವೃತ್ತಿ ಜೀವನ.. ಆಟದ ನಿವೃತ್ತಿಯ ನಂತರ ಬೂನ್, ಈ ಹಿಂದೆ ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಮಂಡಳಿಯ ಸದಸ್ಯರಾಗಿದ್ದರು. ಮೇ 2011 ರಲ್ಲಿ ಆಯ್ಕೆ ಮಂಡಳಿಯ ಸ್ಥಾನದಿಂದ ಕೆಳಗಿಳಿದ ಬೂನ್, ಕ್ರಿಕೆಟ್ ತಾಸ್ಮೇನಿಯಾದ ಜನರಲ್ ಮ್ಯಾನೇಜರ್ ಆಗಿ, ಹಾಗೂ ಐಸಿಸಿ ಮ್ಯಾಚ್ ರೆಫರಿಯಾಗಿ ನೇಮಕಗೊಂಡರು. 1 ಸೆಪ್ಟೆಂಬರ್ 2011 ರಂದು ಬುಲವಾಯೊದಲ್ಲಿ ನಡೆದ ಜಿಂಬಾಬ್ವೆ ಮತ್ತು ಪಾಕಿಸ್ತಾನ ನಡುವಿನ ಏಕದಿನ ಟೆಸ್ಟ್ ಪಂದ್ಯದ ತೀರ್ಪುಗಾರರಾಗಿ ಅವರು ಟೆಸ್ಟ್ ಅಂಪೈರಿಂಗ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು.
52 ಬಿಯರ್ ಕುಡಿದ ಸಾಧನೆ.. 1989 ರಲ್ಲಿ ಸಿಡ್ನಿಯಿಂದ ಲಂಡನ್‌ಗೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಬೂನ್, 52 ಕ್ಯಾನ್ ಬಿಯರ್ ಸೇವಿಸಿದ್ದರೆದು ಹೇಳಲಾಗುತ್ತದೆ. ಆದರೆ ಇದರ ಬಗ್ಗೆ ಬೂನ್ ಎಲ್ಲೂ ಸ್ಪಷ್ಟನೆ ನೀಡಿಲ್ಲ. ಆದರೂ ಈ ಸಾಧನೆಯನ್ನು ಅವರ ತಂಡದ ಆಟಗಾರ ಜೆಫ್ ಲಾಸನ್ ಖಚಿತಪಡಿಸಿದ್ದಾರೆ. ಈ ಪ್ರಸಿದ್ಧ ಕಥೆಯನ್ನು ಆಸ್ಟ್ರೇಲಿಯಾದ ಕ್ರೀಡಾ ಜನಪದದ ಒಂದು ಭಾಗವೆಂದು ಪರಿಗಣಿಸಲಾಗಿದೆ. ಈತ ಆಸ್ಟ್ರೇಲಿಯಾದ ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಯೂ ಆಗಿದ್ದರು.
ಕಂಬಳಿ ಹುಳಿವನಂತ ಮೀಸೆ.. 52 ಬಿಯರ್ ಕುಡಿದ ಸಾಧನೆಯೊಂದಿಗೆ ಡೇವಿಡ್ ಬೂನ್ ತಮ್ಮ ಮುಖದಲ್ಲಿ ಕಂಬಳಿ ಹುಳುವಿನ ಆಕಾರದ ದಪ್ಪವಾದ ಮೀಸೆ ಹೊಂದಿದ್ದರು. ಅಂದಿನ ಕಾಲದಲ್ಲಿ ಡೇವಿಡ್ ಬೂನ್ ಅವರ ಮೀಸೆ ಭಾರಿ ಪ್ರಖ್ಯಾತಿ ಪಡೆದಿತ್ತು. ಕೆಂಪನೆ ಮೈಬಣ್ಣದ ಬೂನ್ ಮುಖಕ್ಕೆ ಅವರ ಮೀಸೆ ಬಾರಿ ಮೆರಗು ತಂದುಕೊಟ್ಟಿತ್ತು.
ಡೇವಿಡ್ ಬೂನ್ ಅವರನ್ನು 1989 ರಲ್ಲಿ ಆರ್ಡರ್ ಆಫ್ ದಿ ಬ್ರಿಟಿಷ್ ಸಾಮ್ರಾಜ್ಯದ ಸದಸ್ಯರನ್ನಾಗಿ ಮಾಡಲಾಯಿತು. 2005 ರಲ್ಲಿ ಅವರನ್ನು ಸ್ಪೋರ್ಟ್ ಆಸ್ಟ್ರೇಲಿಯಾ ಹಾಲ್ ಆಫ್ ಫೇಮ್‌ಗೆ ಸೇರಿಸಲಾಯಿತು. ಪ್ರಥಮ ದರ್ಜೆ ಕ್ರಿಕೆಟ್ಗೆ ಅವರು ವಿದಾಯ ಹೇಳಿದಾಗ, ತಾಸ್ಮೇನಿಯಾದ ಕ್ರಿಕೆಟ್ ಅಸೋಸಿಯೇಷನ್ ಡೇವಿಡ್ ಬೂನ್ ದಿನವನ್ನು ಘೋಷಿಸಿತು.
Published On - 12:15 pm, Mon, 8 February 21