ಟೀಂ ಇಂಡಿಯಾದ ಆಲ್ ರೌಂಡರ್ ಅಶ್ವಿನ್ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿದ್ದಾರೆ. ಕೇವಲ 135 ಬಾಲ್ಗಳಲ್ಲಿ ಶತಕ ಬಾರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಜೊತೆಗೆ, ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಹಾಗಾದರೆ, ಅಶ್ವಿನ್ ಶತಕದ ಹಿಂದಿನ ರಹಸ್ಯವೇನು? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಸ್ಪಿನ್ನರ್ಗಳು ಮೋಡಿ ಮಾಡಿದ್ದಾರೆ. ಜಾಕ್ ಲೀಚ್ ಹಾಗೂ ಮೋಯಿನ್ ಅಲಿ ತಲಾ ನಾಲ್ಕು ವಿಕೆಟ್ ಕಿತ್ತಿದ್ದಾರೆ. ಸ್ಪಿನ್ನರ್ ದಾಳಿಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ಅನುಭವಿ ಆಟಗಾರರು ತತ್ತರಿಸಿ, ವಿಕೆಟ್ ಒಪ್ಪಿಸಿ ಶರಣಾಗಿದ್ದಾರೆ. ಆದರೆ, ಅಶ್ವಿನ್ ಮಾತ್ರ ಇವರ ಬೌಲಿಂಗ್ ದಾಳಿಗೆ ತತ್ತರಿಸದೆ ಆಟವಾಡಿದ್ದಾರೆ. ಅಶ್ವಿನ್ ಈ ಸಾಧನೆ ಮಾಡಿರುವುದಕ್ಕೂ ಒಂದು ಕಾರಣವಿದೆ.
ಅಶ್ವಿನ್ ಓರ್ವ ಅದ್ಭುತ ಸ್ಪಿನ್ನರ್. ಹೀಗಾಗಿ, ಎದುರಾಳಿ ಮಾಡುವ ಬೌಲಿಂಗ್ ಯಾವ ರೀತಿ ಟರ್ನ್ ಆಗುತ್ತದೆ ಎಂಬುದನ್ನು ಗಮನಿಸುವ ಕಲೆ ಅಶ್ವಿನ್ಗೆ ಕರಗತವಾಗಿದೆ. ಇದೇ ಕಾರಣಕ್ಕೆ ಇಂಗ್ಲೆಂಡ್ ಸ್ಪಿನ್ನರ್ಗಳ ಲಯವನ್ನು ಕರಾರುವಕ್ಕಾಗಿ ಗಮನಿಸಿ, ಆ ಲಯಕ್ಕೆ ತಕ್ಕಂತೆ ಆಡಿದ್ದರು ಅಶ್ವಿನ್. ಅವರು ಸೆಂಚುರಿ ಬಾರಿಸಿದ ಹಿಂದಿನ ಕಾರಣ ಇದುವೇ ಎನ್ನಲಾಗುತ್ತಿದೆ.
A moment to cherish forever! @ashwinravi99 gets his Test? in Chennai and Md. Siraj erupts in joy. The dressing room stands up to applaud.?? #TeamIndia #INDvENG @paytm pic.twitter.com/ykrBhsiTbl
— BCCI (@BCCI) February 15, 2021
ಇದನ್ನೂ ಓದಿ: ಮೂರನೇ ದಿನ ಭಾರತದ ಸಂಪೂರ್ಣ ಮೇಲುಗೈ, ಅಶ್ವಿನ್ ಶತಕ
ಇನ್ನು, ಚೆನ್ನೈ ಮೈದಾನ ಅಶ್ವಿನ್ಗೆ ಹೋಂ ಪಿಚ್. ಹೋಂ ಪಿಚ್ನಲ್ಲಿ ಸಾಮಾನ್ಯವಾಗಿ ಎಲ್ಲಾ ಆಟಗಾರರು ಅದ್ಭುತವಾಗಿ ಆಡುತ್ತಾರೆ. ಪಿಚ್ ಹೇಗೆ ವರ್ತಿಸುತ್ತದೆ ಎಂಬುದು ಅವರಿಗೆ ಕರಗತವಾಗಿರುತ್ತದೆ. ಇದೇ ಕಾರಣಕ್ಕೆ ಅಶ್ವಿನ್ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.