
ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಪ್ಲೇಯರ್. ಎಡಗೈ ಆಲ್‌ರೌಂಡರ್ 2008 ರಿಂದ ಐಪಿಎಲ್ ಆಡುತ್ತಿದ್ದಾರೆ. ರವೀಂದ್ರ ಜಡೇಜಾ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ನಂತರ ಅವರು ಕೊಚ್ಚಿ ಟಸ್ಕರ್ಸ್ ಕೇರಳದ ಮೂಲಕ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರಿದರು. ಐಪಿಎಲ್ 2012 ರ ಮೊದಲು ನಡೆದ ಹರಾಜಿನಲ್ಲಿ ಸಿಎಸ್‌ಕೆ ಅವರನ್ನು 9.80 ಕೋಟಿ ರೂ. ನೀಡಿ ಕೊಂಡುಕೊಂಡಿತು. ಆ ಹರಾಜಿನಲ್ಲಿ ಅವರು ಅತ್ಯಂತ ದುಬಾರಿ ಆಟಗಾರರಾದರು. ಅಂದಿನಿಂದ ಅವರು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈನಲ್ಲಿ ಆಡುತ್ತಿದ್ದಾರೆ. ಆದರೆ, 2015 ರಲ್ಲಿ ಎರಡು ವರ್ಷದ ಸಿಎಸ್‌ಕೆ ತಂಡವನ್ನು ನಿಷೇಧಿಸಿದಾಗ, ಜಡೇಜಾ ಗುಜರಾತ್ ಲಯನ್ಸ್ ತಂಡದಲ್ಲಿ ಆಡಿದ್ದರು. ಇಲ್ಲಿ ಅವರ ನಾಯಕ ಸುರೇಶ್ ರೈನಾ. ಇದೀಗ ಸಿಎಸ್ಕೆ ಯಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಅತ್ಯಂತ ವಿಶ್ವಾಸಾರ್ಹ ಮತ್ತು ವಿಶೇಷ ಆಟಗಾರರಲ್ಲಿ ಜಡೇಜಾ ಕೂಡ ಇದ್ದಾರೆ.
ವಿಶ್ವದ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರಾದ ರವೀಂದ್ರ ಜಡೇಜಾ ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಅವರ ಸಾಮರ್ಥ್ಯ ಏನು ಎಂಬುದನ್ನು ತೋರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ಗೆಲುವಿಗೆ ಅವರು ಪ್ರಮುಖ ಕೊಡುಗೆ ನೀಡಿದ್ದರು. ಈ ಸಮಯದಲ್ಲಿ, ಶೇನ್ ವಾರ್ನ್ ಅವರನ್ನು ರಾಕ್ಸ್ಟಾರ್ ಎಂದು ಕರೆದರು. ಇದರ ನಂತರ, ರಾಕ್ಸ್ಟಾರ್ ಅವರ ಅಡ್ಡಹೆಸರು ಆಯಿತು. ಮೊದಲ ಆವೃತ್ತಿಯಲ್ಲಿ, ಜಡೇಜಾ 135 ರನ್ ಗಳಿಸಿದರು ಮತ್ತು ಏಳು ಕ್ಯಾಚ್ಗಳನ್ನು ಪಡೆದರು. ಈ ಆವೃತ್ತಿಯಲ್ಲಿ ಅವರು ಹೆಚ್ಚು ಬೌಲಿಂಗ್ ಮಾಡಲು ಸಿಗಲಿಲ್ಲ. ಆದರೆ 2009 ರಲ್ಲಿ ಅವರಿಗೆ ಬೌಲಿಂಗ್ ಮಾಡಲು ಅವಕಾಶ ಸಿಕ್ಕಿತು. ನಂತರ ಜಡೇಜಾ 13 ಪಂದ್ಯಗಳಲ್ಲಿ ಆರು ವಿಕೆಟ್ ಕಬಳಿಸಿ 295 ರನ್ ಗಳಿಸಿದರು. ರನ್ಗಳ ವಿಷಯದಲ್ಲಿ, ಆ ಆವೃತ್ತಿಯಲ್ಲಿ ಇದು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಅಷ್ಟೊತ್ತಿಗೆ ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಛಾಪು ಮೂಡಿಸುತ್ತಿದ್ದರು.
ರವೀಂದ್ರ ಜಡೇಜಾಗೆ 1 ವರ್ಷ ನಿಷೇದ
ರವೀಂದ್ರ ಜಡೇಜಾ 2009 ರ ಐಪಿಎಲ್ ನಂತರ ಇತರ ತಂಡಗಳೊಂದಿಗೆ ಮಾತುಕತೆ ಆರಂಭಿಸಿದರು. ಇದು ಐಪಿಎಲ್ ನಿಯಮಗಳ ಉಲ್ಲಂಘನೆಯಾಗಿದೆ. ಈ ವಿಷಯ ಬೆಳಕಿಗೆ ಬಂದಾಗ, ಜಡೇಜಾ ಅವರನ್ನು ಐಪಿಎಲ್ 2010 ರಲ್ಲಿ ಆಡುವುದನ್ನು ನಿರ್ಬಂಧಿಸಲಾಯಿತು. ಅವರು ತಮ್ಮನ್ನು ಮುಂಬೈ ಇಂಡಿಯನ್ಸ್ ಖರೀದಿಸಲು ಕೇಳುತ್ತಿದ್ದರು ಎಂದು ಹೇಳಿಕೊಂಡಿದ್ದರು. ಆದರಿಂದ ಜಡೇಜಾಗೆ 1 ವರ್ಷ ನಿಷೇದಿಸಲಾಗಿತ್ತು. 2011 ರಲ್ಲಿ ಜಡೇಜಾ ಅವರನ್ನು ಕೊಚ್ಚಿ ಟಸ್ಕರ್ಸ್ ಖರೀದಿಸಿದರು. ಇಲ್ಲಿ ಅವರು ಒಂದು ಆವೃತ್ತಿಯಲ್ಲಿ ಆಡಿದರು. ಮುಂದಿನ ವರ್ಷ ಸಿಎಸ್ಕೆ ಸೇರಿದರು. ಅಂದಿನಿಂದ, ಅವರು ನಿರಂತರವಾಗಿ ಮುನ್ನೆಲೆಯಲ್ಲಿದ್ದಾರೆ ಮತ್ತು ಭಾರತೀಯ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. 2008 ರಲ್ಲಿ ಅಂಡರ್ 19 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಜಡೇಜಾ ಅವರನ್ನು ಐಪಿಎಲ್ 2018 ರಲ್ಲಿ ಸಿಎಸ್ಕೆ ಮೂರನೇ ಕ್ರಮಾಂಕದ ಆಟಗಾರನಾಗಿ ಉಳಿಸಿಕೊಂಡಿದೆ.
ಜಡೇಜಾ ವಿಶೇಷ ದಾಖಲೆ
ಜಡೇಜಾ ಇದುವರೆಗೆ ಐಪಿಎಲ್‌ನಲ್ಲಿ 184 ಪಂದ್ಯಗಳನ್ನು ಆಡಿದ್ದು 2159 ರನ್ ಗಳಿಸಿದ್ದಾರೆ. ಇದರ ಜೊತೆಗೆ 114 ವಿಕೆಟ್‌ಗಳೂ ಅವರ ಹೆಸರಿನಲ್ಲಿದೆ. ಐಪಿಎಲ್‌ನಲ್ಲಿ 2000 ಕ್ಕೂ ಹೆಚ್ಚು ರನ್ ಗಳಿಸಿದ 100 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಏಕೈಕ ಆಟಗಾರ. ಜಡೇಜಾ ಐಪಿಎಲ್‌ನಲ್ಲಿ 68 ಕ್ಯಾಚ್‌ಗಳನ್ನು ಹೊಂದಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಜಡೇಜಾ ಇದುವರೆಗೆ ಐಪಿಎಲ್‌ನಲ್ಲಿ ಕೇವಲ ಒಂದೇ ಒಂದು ಅರ್ಧಶತಕ ಗಳಿಸಿದ್ದಾರೆ.
ಐಪಿಎಲ್‌ನಲ್ಲಿ ಜಡೇಜಾ ಬ್ಯಾಟಿಂಗ್
| ವರ್ಷ | ಪಂದ್ಯ | ರನ್ | ಅತ್ಯಧಿಕ ರನ್ | ಸರಾಸರಿ | ಶತಕ | ಅರ್ಧ ಶತಕ |
| 2020 | 14 | 232 | 50 | 46.4 | 0 | 1 |
| 2019 | 16 | 106 | 31* | 35.33 | 0 | 0 |
| 2018 | 16 | 89 | 27* | 17.8 | 0 | 0 |
| 2017 | 12 | 158 | 28 | 39.5 | 0 | 0 |
| 2016 | 15 | 191 | 36* | 21.22 | 0 | 0 |
| 2015 | 17 | 132 | 24 | 18.85 | 0 | 0 |
| 2014 | 16 | 146 | 36* | 29.2 | 0 | 0 |
| 2013 | 18 | 201 | 38* | 25.12 | 0 | 0 |
| 2012 | 19 | 191 | 48 | 15.91 | 0 | 0 |
| 2011 | 14 | 283 | 47 | 31.44 | 0 | 0 |
| 2009 | 13 | 295 | 42 | 26.81 | 0 | 0 |
| 2008 | 14 | 135 | 36* | 19.28 | 0 | 0 |
ಐಪಿಎಲ್‌ನಲ್ಲಿ ಜಡೇಜಾ ಬೌಲಿಂಗ್
| ವರ್ಷ | ಪಂದ್ಯ | ಎಸೆತಗಳು | ನೀಡಿರುವ ರನ್ | ವಿಕೆಟ್ | ಬೆಸ್ಟ್ ಬೌಲಿಂಗ್ | ಸರಾಸರಿ | 4 ವಿಕೆಟ್ | 5 ವಿಕೆಟ್ |
| 2020 | 14 | 218 | 318 | 6 | 2/42 | 53 | 0 | 0 |
| 2019 | 16 | 324 | 343 | 15 | 3/9 | 22.86 | 0 | 0 |
| 2018 | 16 | 246 | 303 | 11 | 3/18 | 27.54 | 0 | 0 |
| 2017 | 12 | 228 | 349 | 5 | 2/28 | 69.80 | 0 | 0 |
| 2016 | 15 | 241 | 311 | 8 | 2/21 | 38.87 | 0 | 0 |
| 2015 | 17 | 256 | 330 | 11 | 4/11 | 30.00 | 1 | 0 |
| 2014 | 16 | 326 | 443 | 19 | 3/21 | 23.31 | 2 | 0 |
| 2013 | 18 | 259 | 323 | 13 | 3/20 | 24.84 | 0 | 0 |
| 2012 | 19 | 210 | 273 | 12 | 5/16 | 22.75 | 0 | 1 |
| 2011 | 14 | 252 | 305 | 8 | 2/25 | 38.12 | 0 | 0 |
| 2009 | 13 | 140 | 151 | 6 | 3/15 | 25.16 | 0 | 0 |
| 2008 | 14 | 13 | 21 | 0 | 0/0 | – | 0 | 0 |