ರಾಯನಂತೆ ಮೆರೆದ ರಾಯುಡು ಚೆನೈಯನ್ನು ಗೆಲ್ಲಿಸಿದರು

ರಾಯನಂತೆ ಮೆರೆದ ರಾಯುಡು ಚೆನೈಯನ್ನು ಗೆಲ್ಲಿಸಿದರು

ಕೊವಿಡ್-19 ಪಿಡುಗುನಿಂದಾಗಿ ಮುಂದೂಡಲ್ಪಟ್ಟು ಶನಿವಾರದಂದು ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ಆರಂಭಗೊಂಡ ಇಂಡಿಯನ್ ಪ್ರಿಮೀಯರ್ ಲೀಗ್​ನ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ ಅಪ್ ಸಿಎಸ್​ಕೆ ತಂಡ ಹಾಲಿ ಚಾಒಪಿಯನ್ ಮುಂಬೈ ಇಂಡಿಯನ್ ತಂಡವನ್ನು 5 ವಿಕೆಟ್​ಗಳಿಂದ ಸೋಲಿಸಿತು. ಟಾಸ್ ಸೋತು ಬ್ಯಾಟಿಂಗ್​ಗೆ ಕಳಿಸಲ್ಪಟ್ಟ ರೋಹಿತ್ ಶರ್ಮ ಅವರ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತು. ಸೌರಭ್ ತಿವಾರಿ 31 ಎಸೆತಗಳಲ್ಲಿ 42 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು. ಓಪನರ್ […]

Arun Belly

|

Sep 19, 2020 | 11:41 PM

ಕೊವಿಡ್-19 ಪಿಡುಗುನಿಂದಾಗಿ ಮುಂದೂಡಲ್ಪಟ್ಟು ಶನಿವಾರದಂದು ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ಆರಂಭಗೊಂಡ ಇಂಡಿಯನ್ ಪ್ರಿಮೀಯರ್ ಲೀಗ್​ನ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ ಅಪ್ ಸಿಎಸ್​ಕೆ ತಂಡ ಹಾಲಿ ಚಾಒಪಿಯನ್ ಮುಂಬೈ ಇಂಡಿಯನ್ ತಂಡವನ್ನು 5 ವಿಕೆಟ್​ಗಳಿಂದ ಸೋಲಿಸಿತು.

ಟಾಸ್ ಸೋತು ಬ್ಯಾಟಿಂಗ್​ಗೆ ಕಳಿಸಲ್ಪಟ್ಟ ರೋಹಿತ್ ಶರ್ಮ ಅವರ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತು. ಸೌರಭ್ ತಿವಾರಿ 31 ಎಸೆತಗಳಲ್ಲಿ 42 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು. ಓಪನರ್ ಕ್ವಿಂಟನ್ ಡಿ ಕಾಕ್ 33 ರನ್​ಗಳ (20 ಎಸೆತ) ಕಾಣಿಕೆ ನೀಡಿದರು ಮತ್ತು ಕೈರನ್ ಪೊಲ್ಲಾರ್ಡ್ 14 ಎಸೆತಗಳಲ್ಲಿ 18 ರನ್ ಬಾರಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಚೆನೈ ಕೇವಲ 5 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ತೊಂದರೆಗೆ ಸಿಕ್ಕಿಕೊಂಡಿತ್ತು. ಆದರೆ ಮೂರನೇ ವಿಕೆಟ್ ಜೊತೆಯಾಟದಲ್ಲಿ ಅಂಬಟಿ ರಾಯುಡು (71, 48 ಎಸೆತ 6X4 3X6) ಮತ್ತು ಫಫ್ ಡು ಪ್ಲೆಸ್ಸಿ 116 ರನ್​ಗಳನ್ನು ಪೇರಿಸಿ ತಂಡಕ್ಕೆ ಗೆಲುವನ್ನು ಸುಲಭವಾಗಿಸಿದರು. ಪ್ಲೆಸ್ಸಿ ಆಜೇಯ 58 (44 ಎಸೆತ 6X4) ಬಾರಿಸಿದರು.

Follow us on

Related Stories

Most Read Stories

Click on your DTH Provider to Add TV9 Kannada