AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಸಿಬಿಗೆ ಸಿಎಸ್​ಕೆಯ ಹಳದಿ ಜರ್ಸಿ ನೀಡಿ ಎಡವಟ್ಟು; ಟ್ವಿಟರ್​ನಲ್ಲಿ ಫುಲ್​ ಟ್ರೋಲ್​

ಆರ್​ಸಿಬಿಗೆ ವಿರಾಟ್​ ಕೊಹ್ಲಿ ನಾಯಕ. ಸಿಎಸ್​ಕೆಗೆ ಧೋನಿ. ಧೋನಿ ಅಭಿಮಾನಿಗಳು ಎಂದಿಗೂ ಕೊಹ್ಲಿಯನ್ನು ಒಪ್ಪಿಕೊಂಡಿಲ್ಲ. ಕೊಹ್ಲಿ ಅಭಿಮಾನಿಗಳು ಕೂಡ ಅದೇ ರೀತಿ.

ಆರ್​ಸಿಬಿಗೆ ಸಿಎಸ್​ಕೆಯ ಹಳದಿ ಜರ್ಸಿ ನೀಡಿ ಎಡವಟ್ಟು; ಟ್ವಿಟರ್​ನಲ್ಲಿ ಫುಲ್​ ಟ್ರೋಲ್​
ಆರ್​ಸಿಬಿಗೆ ಹಳದಿ ಎಮೋಜಿ ನೀಡಿರುವುದು
ರಾಜೇಶ್ ದುಗ್ಗುಮನೆ
|

Updated on:Apr 03, 2021 | 11:17 PM

Share

ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ಮ್ಯಾಚ್​ ಎಂದರೆ ತುಂಬಾನೇ ಹೈ ವೋಲ್ಟೇಜ್​ನಿಂದ ಕೂಡಿರುತ್ತದೆ. ಇದಕ್ಕೆ ನಾನಾ ಕಾರಣಗಳಿವೆ. ಸಿಎಸ್​ಕೆ ಹಾಗೂ ಆರ್​​​​​​​​​​​​​​ಸಿಬಿ ಅಭಿಮಾನಿಗಳ ನಡುವೆ ಹೊಂದಾಣಿಕೆ ಆದ ದಾಖಲೆಯೇ ಇಲ್ಲ. ಹೀಗಿರುವಾಗಲೇ ಒಂದು ಎಡವಟ್ಟು ನಡೆದು ಹೋಗಿದೆ! ಆರ್​ಸಿಬಿಯವರಿಗೆ ಹಳದಿ ಬಣ್ಣದ ಜರ್ಸಿ ನೀಡಲಾಗಿದೆ. ಸದ್ಯ ಈ ವಿಚಾರ ಸಾಕಷ್ಟು ಟ್ರೋಲ್​ ಆಗಿದೆ. ಆರ್​ಸಿಬಿಗೆ ವಿರಾಟ್​ ಕೊಹ್ಲಿ ನಾಯಕ. ಸಿಎಸ್​ಕೆಗೆ ಧೋನಿ. ಧೋನಿ ಅಭಿಮಾನಿಗಳು ಎಂದಿಗೂ ಕೊಹ್ಲಿಯನ್ನು ಒಪ್ಪಿಕೊಂಡಿಲ್ಲ. ಕೊಹ್ಲಿ ಅಭಿಮಾನಿಗಳು ಕೂಡ ಅದೇ ರೀತಿ. ಇದಕ್ಕಾಗಿಯೇ ಎರಡೂ ತಂಡಗಳ ನಡುವಿನ ಮ್ಯಾಚ್​ ಹೈ ವೋಲ್ಟೇಜ್​ ಎನಿಸಿಕೊಳ್ಳುತ್ತದೆ. ಆದರೆ, ಈಗ ಟ್ವಿಟರ್ ಮಾಡಿದ ತಪ್ಪೊಂದು ಭಾರೀ ಚರ್ಚೆಗೆ ಕಾರಣವಾಗಿದೆ.

ಏಪ್ರಿಲ್​ 9ರಿಂದ ಐಪಿಎಲ್​ ಮ್ಯಾಚ್​ ಆರಂಭವಾಗಲಿದೆ. ಪ್ರತಿ ಬಾರಿ ಐಪಿಎಲ್​ ನಡೆಯುವುದಕ್ಕೂ ಮೊದಲು ಟ್ವಿಟರ್​ ಪ್ರತಿ ತಂಡದ ಹ್ಯಾಶ್​ಟ್ಯಾಗ್ ಎದುರು ಆಯಾ ತಂಡದ ಟೀಶರ್ಟ್​ ಎಮೋಜಿ ನೀಡುತ್ತದೆ. ಈ ಬಾರಿ ಆರ್​ಸಿಬಿಗೆ ಕೆಂಪು ಬಣ್ಣದ ಟೀ ಶರ್ಟ್​ ನೀಡುವ ಬದಲು ಹಳದಿ ಬಣ್ಣದ ಟಿ-ಶರ್ಟ್​ ಎಮೋಜಿ ನೀಡಿರುವುದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

ಈ ಬಗ್ಗೆ ಚೆನ್ನೈ ಸೂಪರ್​ ಕಿಂಗ್ಸ್ ಕೂಡ ಟ್ವೀಟ್​ ಮಾಡಿದೆ. ರಜನಿಕಾಂತ್​ ಹಳೆಯ ಸಿನಿಮಾವೊಂದರ ಫೋಟೋ ಪೋಸ್ಟ್​ ಮಾಡಿದ್ದು, ಅದರಲ್ಲಿ ರಜನಿಕಾಂತ್ ಕೆಂಪು ಬಣ್ಣದ ಸೀರೆ ಮೇಲೆ ಹಳದಿ ಬಣ್ಣ ಚಲ್ಲುತ್ತಿದ್ದಾರೆ.

ಆರ್​ಸಿಬಿ ಕೂಡ ಈ ಬಗ್ಗೆ ಅಸಮಾಧಾನ ಹೊರ ಹಾಕಿದೆ.

ಇದನ್ನೂ ಓದಿ: IPL 2021: ಕೊರೊನಾ ಕಪಿಮುಷ್ಠಿಯಲ್ಲಿ ಐಪಿಎಲ್​.. ಕೊಲ್ಕತ್ತಾ, ಡೆಲ್ಲಿ ನಂತರ ಚೆನ್ನೈ ಮೇಲೆ ದಾಳಿ ನಡೆಸಿದ ಮಹಾಮಾರಿ!

Published On - 11:12 pm, Sat, 3 April 21

ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ