RCB vs KKR, IPL 2021 Match 10 Result: ಹ್ಯಾಟ್ರಿಕ್ ಗೆಲುವು ದಾಖಲಿಸಿದ ಆರ್​ಸಿಬಿ, ಅಂಕಪಟ್ಟಿಯಲ್ಲಿ ಟಾಪ್!

| Updated By: ganapathi bhat

Updated on: Nov 30, 2021 | 12:18 PM

RCB vs KKR Result in Kannada: ಕೋಲ್ಕತ್ತಾ ನೈಟ್ ರೈಡರ್ಸ್​ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 2021 ಟೂರ್ನಿಯ 10ನೇ ಪಂದ್ಯದ ಸಂಪೂರ್ಣ ಮಾಹಿತಿ ಇಲ್ಲಿ ಸಿಗಲಿದೆ.

RCB vs KKR, IPL 2021 Match 10 Result: ಹ್ಯಾಟ್ರಿಕ್ ಗೆಲುವು ದಾಖಲಿಸಿದ ಆರ್​ಸಿಬಿ, ಅಂಕಪಟ್ಟಿಯಲ್ಲಿ ಟಾಪ್!
ಆರ್​ಸಿಬಿ

ಚೆನ್ನೈ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ 38 ರನ್​ಗಳ ಜಯ ಗಳಿಸಿದೆ. ರಾಯಲ್ ಚಾಲೆಂಜರ್ಸ್ ಪರ ಜಾಮಿಸನ್ 3, ಚಹಾಲ್ 2, ಹರ್ಷಲ್ ಪಟೇಲ್ ಹಾಗೂ ಸುಂದರ್ 1 ವಿಕೆಟ್ ಪಡೆದಿದ್ದಾರೆ. ಸಿರಾಜ್ 9ನೇ ಓವರ್​ನಲ್ಲಿ ಕೇವಲ 1 ರನ್ ಬಿಟ್ಟುಕೊಟ್ಟು ಪಂದ್ಯವನ್ನು ಸಂಪೂರ್ಣ ಆರ್​ಸಿಬಿ ಪಾಲಾಗಿಸಿದ್ದಾರೆ. ಕೆಕೆಆರ್ ಪರ ದಾಂಡಿಗರು ಗೆಲ್ಲುವ ಪ್ರದರ್ಶನ ತೋರಲಿಲ್ಲ.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್​ಗಳ ಅಂತ್ಯಕ್ಕೆ 4 ವಿಕೆಟ್​ಗಳನ್ನು ಕಳೆದುಕೊಂಡು ಭರ್ಜರಿ 204 ರನ್ ದಾಖಲಿಸಿತ್ತು. ಬೆಂಗಳೂರು ಪರ ಗ್ಲೆನ್ ಮ್ಯಾಕ್ಸ್​ವೆಲ್ 78 (49) ಹಾಗೂ ಎಬಿ ಡಿವಿಲಿಯರ್ಸ್ 76 (34)* ಆಕರ್ಷಕ ಅರ್ಧಶತಕದ ಕೊಡುಗೆ ನೀಡಿದ್ದರು. ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಹಾಗೂ ಪಾಟೀದಾರ್ ವರುಣ್ ಚಕ್ರವರ್ತಿಗೆ ಬಹುಬೇಗ ವಿಕೆಟ್ ಒಪ್ಪಿಸಿದರೂ ನಂತರ ಆರ್​ಸಿಬಿ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾಗಿತ್ತು. ಚಕ್ರವರ್ತಿ 2, ಕಮ್ಮಿನ್ಸ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದಿದ್ದರು.

ಪಂದ್ಯದ ಸಂಪೂರ್ಣ ವಿವರಗಳು ಈ ಕೆಳಗೆ ಲಭ್ಯವಿದೆ.

LIVE NEWS & UPDATES

The liveblog has ended.
  • 18 Apr 2021 07:16 PM (IST)

    38 ರನ್​ಗಳ ಭರ್ಜರಿ ಗೆಲುವು ದಾಖಲಿಸಿದ ಆರ್​ಸಿಬಿ

    ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 38 ರನ್​ಗಳ ಗೆಲುವು ದಾಖಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸತತ 3 ಗೆಲುವು ಪಡೆದುಕೊಂಡು ಅಂಕಪಟ್ಟಿಯಲ್ಲಿ ಟಾಪ್ ಸ್ಥಾನ ಗಿಟ್ಟಿಸಿಕೊಂಡಿದೆ.

  • 18 Apr 2021 07:09 PM (IST)

    ರಸ್ಸೆಲ್ ಬೌಲ್ಡ್

    ಹರ್ಷಲ್ ಪಟೇಲ್ ಬಾಲ್​ಗೆ ರಸ್ಸೆಲ್ ಕ್ಲೀನ್ ಬೌಲ್ಡ್ ಆಗಿದ್ದಾರೆ. 20 ಬಾಲ್​ಗೆ 31 ರನ್ ಗಳಿಸಿ ಅವರು ನಿರ್ಗಮಿಸಿದ್ದಾರೆ. ಪಂದ್ಯ ಆರ್​ಸಿಬಿ ಪಾಲಿಗೆ ಆಗಿದೆ.

  • 18 Apr 2021 07:08 PM (IST)

    ಕೆಕೆಆರ್ ಗೆಲ್ಲಲು 6 ಬಾಲ್​ಗೆ 43 ಬೇಕು

    ಆರ್​ಸಿಬಿ ಪರ 19ನೇ ಓವರ್ ಬೌಲ್ ಮಾಡಿದ ಸಿರಾಜ್ ಕೇವಲ 1 ರನ್ ಬಿಟ್ಟುಕೊಟ್ಟು ಪಂದ್ಯವನ್ನು ಗೆಲುವಿನತ್ತ ತಂದಿದ್ದಾರೆ.

  • 18 Apr 2021 07:04 PM (IST)

    ಕಮ್ಮಿನ್ಸ್ ಔಟ್

    ಕೋಲ್ಕತ್ತಾ ಬ್ಯಾಟ್ಸ್​ಮನ್ ಕಮ್ಮಿನ್ಸ್ ಜಾಮಿಸನ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೋಲ್ಕತ್ತಾ ಗೆಲ್ಲಲು 12 ಬಾಲ್​ಗೆ 48 ರನ್ ಬೇಕಿದೆ.

  • 18 Apr 2021 07:01 PM (IST)

    ಶಕೀಬ್ ವಿಕೆಟ್ ಪತನ

    ಜಾಮಿಸನ್ ಬಾಲ್​ಗೆ ಶಕೀಬ್ ಅಲ್ ಹಸನ್ ಕ್ಲೀನ್ ಬೌಲ್ಡ್ ಆಗಿದ್ದಾರೆ. ಶಕೀಬ್ 25 ಬಾಲ್​ಗೆ 26 ರನ್ ಗಳಿಸಿ ನಿರ್ಗಮಿಸಿದ್ದಾರೆ.

  • 18 Apr 2021 06:56 PM (IST)

    ಕೆಕೆಆರ್ ಗೆಲ್ಲಲು 18 ಬಾಲ್​ಗೆ 59 ರನ್ ಬೇಕು

    ಕೋಲ್ಕತ್ತಾ ನೈಟ್ ರೈಡರ್ಸ್ ಗೆಲ್ಲಲು 18 ಬಾಲ್​ಗೆ 59 ರನ್ ಬೇಕಾಗಿದೆ. ಕೋಲ್ಕತ್ತಾ 17 ಓವರ್ ಅಂತ್ಯಕ್ಕೆ 146 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದ್ದಾರೆ.

  • 18 Apr 2021 06:54 PM (IST)

    ರಸ್ಸೆಲ್ ವೇಗದ ಆಟ

    ರಾಯಲ್ ಚಾಲೆಂಜರ್ಸ್ ವಿರುದ್ಧ ವೆಸ್ಟ್ ಇಂಡೀಸ್ ದೈತ್ಯ ರಸ್ಸೆಲ್ ಸ್ಫೋಟಕ ಆಟವಾಡುತ್ತಿದ್ದಾರೆ. ಚಹಾಲ್ ಬಾಲ್​ಗೆ ರಸ್ಸೆಲ್ 1 ಸಿಕ್ಸರ್ ಹಾಗೂ 3 ಬೌಂಡರಿ ಸಿಡಿಸಿ ಆಟವನ್ನು ರೋಚಕ ಹಂತದತ್ತ ಕೊಂಡೊಯ್ಯುತ್ತಿದ್ದಾರೆ.

  • 18 Apr 2021 06:52 PM (IST)

    ನೈಟ್ ರೈಡರ್ಸ್ 125/5 (16 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ ಗೆಲ್ಲಲು 24 ಬಾಲ್​ಗೆ 79 ರನ್ ಬೇಕಾಗಿದೆ. ತಂಡದ ಪರ ರಸ್ಸೆಲ್ ಹಾಗೂ ಶಕೀಬ್ ಬ್ಯಾಟಿಂಗ್ ಮಾಡುತ್ತಿರುವುದರಿಂದ ಕೋಲ್ಕತ್ತಾಗೆ ಗೆಲ್ಲುವ ಆಸೆ ಉಳಿದುಕೊಂಡಿದೆ. ಆರ್​ಸಿಬಿ ಬೌಲರ್ ವಿಕೆಟ್ ಕಿತ್ತರೆ ರಾಯಲ್ ಚಾಲೆಂಜರ್ಸ್ ಗೆಲ್ಲುವ ಸಾಧ್ಯತೆ ಇದೆ. ರನ್ ಗತಿ ಇಳಿಕೆ ಮಾಡುವುದು ಆರ್​ಸಿಬಿಗೆ ಅನಿವಾರ್ಯವಾಗಿದೆ.

  • 18 Apr 2021 06:45 PM (IST)

    ನೈಟ್ ರೈಡರ್ಸ್ ಗೆಲ್ಲಲು 30 ಬಾಲ್​ಗೆ 84 ರನ್ ಬೇಕು

    ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿಗೆ 30 ಬಾಲ್​ಗೆ 84 ರನ್ ಬೇಕಾಗಿದೆ. ಕೆಕೆಆರ್ ತಂಡ 15 ಓವರ್​ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 121 ರನ್ ಕಲೆಹಾಕಿದೆ. ಶಕೀಬ್ ಅಲ್ ಹಸನ್ 22 (20) ಹಾಗೂ ಆಂಡ್ರ್ಯೂ ರಸ್ಸೆಲ್ 1 (2) ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 18 Apr 2021 06:39 PM (IST)

    ಮಾರ್ಗನ್ ಔಟ್

    ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್​ಮನ್ ಇಯಾನ್ ಮಾರ್ಗನ್ ವಿರಾಟ್ ಕೊಹ್ಲಿಗೆ ಕ್ಯಾಚ್ ಒಪ್ಪಿಸಿ ಔಟ್ ಆಗಿದ್ದಾರೆ. ಮಾರ್ಗನ್ 23 ಬಾಲ್​ಗೆ 29 ರನ್ ಗಳಿಸಿ ನಿರ್ಗಮಿಸಿದ್ದು, ಹರ್ಷಲ್ ಪಟೇಲ್ ಮುಖ್ಯ ವಿಕೆಟ್ ಪಡೆದಿದ್ದಾರೆ. 14 ಓವರ್ ಅಂತ್ಯಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ 5 ವಿಕೆಟ್ ಕಳೆದುಕೊಂಡು 115 ರನ್ ಕಲೆಹಾಕಿದೆ. ಗೆಲ್ಲಲು 36 ಬಾಲ್​ಗೆ 90 ರನ್ ಬೇಕಿದೆ. ತಂಡದ ಪರ ಶಕೀಬ್ ಅಲ್ ಹಸನ್ ಹಾಗೂ ರಸ್ಸೆಲ್ ಬ್ಯಾಟ್ ಬೀಸುತ್ತಿದ್ದಾರೆ.

  • 18 Apr 2021 06:30 PM (IST)

    ಕೆಕೆಆರ್ ಗೆಲ್ಲಲು 48 ಬಾಲ್​ಗೆ 107 ರನ್ ಬೇಕು

    ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿಗೆ 48 ಬಾಲ್​ಗೆ 107 ರನ್ ಬೇಕಾಗಿದೆ. ಕೆಕೆಆರ್ 12 ಓವರ್ ಅಂತ್ಯಕ್ಕೆ 98 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ.

  • 18 Apr 2021 06:27 PM (IST)

    ನೈಟ್ ರೈಡರ್ಸ್ 93/4 (11 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ ಗೆಲ್ಲಲು 54 ಬಾಲ್​ಗೆ 112 ರನ್ ಬೇಕಿದೆ. 11 ಓವರ್ ಅಂತ್ಯಕ್ಕೆ ಕೆಕೆಆರ್ ತಂಡ 4 ವಿಕೆಟ್ ಕಳೆದುಕೊಂಡು 93 ರನ್ ಗಳಿಸಿದೆ. ಶಕೀಬ್ ಅಲ್ ಹಸನ್ 6 (8) ಹಾಗೂ ಮಾರ್ಗನ್ 20 (16) ಆಟವಾಡುತ್ತಿದ್ದಾರೆ.

  • 18 Apr 2021 06:23 PM (IST)

    ನೈಟ್ ರೈಡರ್ಸ್ 83/4 (10 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ 10 ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 83 ರನ್ ಕಲೆಹಾಕಿದೆ. ತಂಡದ ಪರ ಶಕೀಬ್ ಅಲ್ ಹಸನ್ ಹಾಗೂ ನಾಯಕ ಇಯಾನ್ ಮಾರ್ಗನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 18 Apr 2021 06:19 PM (IST)

    ನೈಡ್ ರೈಡರ್ಸ್ 75/4 (9 ಓವರ್)

    9 ಓವರ್ ಅಂತ್ಯಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ 4 ವಿಕೆಟ್ ಕಳೆದುಕೊಂಡು 75 ರನ್ ಕಲೆಹಾಕಿದ್ದಾರೆ.

  • 18 Apr 2021 06:17 PM (IST)

    ದಿನೇಶ್ ಕಾರ್ತಿಕ್ ಔಟ್

    ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತೊಂದು ವಿಕೆಟ್ ಕಳೆದುಕೊಂಡಿದೆ. ದಿನೇಶ್ ಕಾರ್ತಿಕ್ ಚಹಲ್​ಗೆ ಎಲ್​ಬಿಡಬ್ಲ್ಯು ಆಗಿದ್ದಾರೆ. 5 ಬಾಲ್​ಗೆ 2 ರನ್ ಗಳಿಸಿ ನಿರ್ಗಮಿಸಿದ್ದಾರೆ. ಶಕೀಬ್ ಅಲ್ ಹಸನ್ ಹಾಗೂ ಮಾರ್ಗನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 18 Apr 2021 06:13 PM (IST)

    ನೈಟ್ ರೈಡರ್ಸ್ 73/3 (8 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ 8 ಓವರ್​ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 73 ರನ್ ದಾಖಲಿಸಿದೆ. ತಂಡದ ಪರ ಮಾರ್ಗನ್ 4 (5) ಹಾಗೂ ದಿನೇಶ್ ಕಾರ್ತಿಕ್ 2 (3) ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 18 Apr 2021 06:07 PM (IST)

    ನಿತೀಶ್ ರಾಣಾ ಔಟ್

    ಕೋಲ್ಕತ್ತಾ ನೈಟ್ ರೈಡರ್ಸ್ ಆಟಗಾರ ನಿತೀಶ್ ರಾಣಾ 11 ಬಾಲ್​ಗೆ 18 ರನ್ ಗಳಿಸಿ ಔಟ್ ಆಗಿದ್ದಾರೆ. ಚಹಾಲ್ ಬೌಲಿಂಗ್​ಗೆ ದೇವದತ್ ಪಡಿಕ್ಕಲ್ ಕ್ಯಾಚ್ ಹಿಡಿದಿದ್ದಾರೆ. ನೈಟ್ ರೈಡರ್ಸ್ ನಾಯಕ ಇಯಾನ್ ಮೋರ್ಗನ್ ಹಾಗೂ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಮಾಡುತ್ತಿದ್ದಾರೆ. 7 ಓವರ್ ಅಂತ್ಯಕ್ಕೆ ಕೆಕೆಆರ್ ತಂಡದ ಸ್ಕೋರ್ 69/3 ಆಗಿದೆ.

  • 18 Apr 2021 06:02 PM (IST)

    ಪವರ್​ಪ್ಲೇ ಅಂತ್ಯಕ್ಕೆ ಕೆಕೆಆರ್ 57/2

    6 ಓವರ್​ಗಳ ಕೊನೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ರನ್ 2 ವಿಕೆಟ್ ಕಳೆದುಕೊಂಡು 57 ಆಗಿದೆ. ನೈಟ್ ರೈಡರ್ಸ್ ಪರ ರಾಹುಲ್ ತ್ರಿಪಾಠಿ 20 ಬಾಲ್​ಗೆ 25 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ವಾಷಿಂಗ್ಟನ್ ಸುಂದರ್ ಬಾಲ್​ನ್ನು ಸಿರಾಜ್ ಕ್ಯಾಚ್ ಪಡೆದಿದ್ದಾರೆ.

  • 18 Apr 2021 05:57 PM (IST)

    ನಿತೀಶ್ ರಾಣಾ ಸಿಕ್ಸರ್

    ವಾಷಿಂಗ್ಟನ್ ಸುಂದರ್ ಬಾಲ್​ನ್ನು ನಿತೀಶ್ ರಾಣಾ ಸಿಕ್ಸರ್ ಬಾರಿಸಿದ್ದಾರೆ. ಕೋಲ್ಕತ್ತಾ ತಂಡದ ಮೊತ್ತ 5.3 ಓವರ್​ಗೆ 53/1 ಆಗಿದೆ.

  • 18 Apr 2021 05:52 PM (IST)

    ಕ್ರಿಶ್ಚಿಯನ್ ಕ್ಯಾಚ್ ಹೀಗಿತ್ತು

    ಕೆಕೆಆರ್ ಪರ ಸ್ಫೋಟಕ ಆಡವಾಡುತ್ತಿದ್ದ ಶುಬ್​ಮನ್ ಗಿಲ್ ಔಟ್ ಆದದ್ದು ಹೀಗೆ..

    ಜಾಮಿಸನ್ ಬಾಲ್, ಕ್ರಿಶ್ಚಿಯನ್ ಕ್ಯಾಚ್

  • 18 Apr 2021 05:51 PM (IST)

    ನೈಟ್ ರೈಡರ್ಸ್ 36/1 (4 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 4 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 36 ರನ್ ದಾಖಲಿಸಿದೆ. ಆರ್​ಸಿಬಿ ಪರ ಕೈಲ್ ಜಾಮಿಸನ್ 1 ವಿಕೆಟ್ ಕಬಳಿಸಿದ್ದರೂ 1 ಓವರ್​ಗೆ 20 ರನ್ ನೀಡಿ ದುಬಾರಿ ಬೌಲರ್ ಅನಿಸಿಕೊಂಡಿದ್ದಾರೆ. ಚಹಾಲ್ 1 ಓವರ್​ಗೆ ಕೇವಲ 2 ರನ್ ನೀಡಿ ಬೌಲಿಂಗ್ ಮಾಡುತ್ತಿದ್ದಾರೆ.

  • 18 Apr 2021 05:49 PM (IST)

    ನೈಟ್ ರೈಡರ್ಸ್ 29/1 (3 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 3 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 29 ರನ್ ದಾಖಲಿಸಿದೆ. ನಿತೀಶ್ ರಾಣಾ ಹಾಗೂ ರಾಹುಲ್ ತ್ರಿಪಾಠಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 18 Apr 2021 05:41 PM (IST)

    ಶುಬ್​ಮನ್ ಗಿಲ್ ಔಟ್

    2 ಸಿಕ್ಸರ್ ಹಾಗೂ 2 ಬೌಂಡರಿ ಸಿಡಿಸಿ ಭರ್ಜರಿ ಆಟಕ್ಕೆ ಮುಂದಾಗಿದ್ದ ಶುಬ್​ಮನ್ ಗಿಲ್ ಜಾಮಿಸನ್​ಗೆ ವಿಕೆಟ್ ಒಪ್ಪಿಸಿದ್ದಾರೆ. 9 ಬಾಲ್​ಗೆ 21 ರನ್ ಗಳಿಸಿ ನಿರ್ಗಮಿಸಿದ್ದಾರೆ. ಕೋಲ್ಕತ್ತಾ ತಂಡ 2 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 27 ರನ್ ದಾಖಲಿಸಿದೆ.

  • 18 Apr 2021 05:38 PM (IST)

    ಗಿಲ್ ಸ್ಫೋಟಕ ಆಟ

    ಕೋಲ್ಕತ್ತಾ ತಂಡದ ಬ್ಯಾಟ್ಸ್​ಮನ್ ಶುಬ್​ಮನ್ ಗಿಲ್ 2ನೇ ಓವರ್​ಗೆ ಸ್ಫೋಟಕ ಆಟ ಆರಂಭಿಸಿದ್ದಾರೆ. ಜಾಮಿಸನ್ ಬಾಲ್​ಗೆ 1 ಬೌಂಡರಿ, 2 ಸಿಕ್ಸರ್ ಸಿಡಿಸಿದ್ದಾರೆ.

  • 18 Apr 2021 05:37 PM (IST)

    ನೈಟ್ ರೈಡರ್ಸ್ 7/0 (1 ಓವರ್)

    ಕೋಲ್ಕತ್ತಾ ನೈಟ್​ ರೈಡರ್ಸ್ 1 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 7 ರನ್ ದಾಖಲಿಸಿದೆ. ತಂಡದ ಪರ ಶುಬ್​ಮನ್ ಗಿಲ್ ಹಾಗೂ ನಿತೀಶ್ ರಾಣಾ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆರ್​ಸಿಬಿ ಪರ ಸಿರಾಜ್ ಮೊದಲ ಓವರ್ ಬೌಲ್ ಮಾಡಿದ್ದಾರೆ.

  • 18 Apr 2021 05:16 PM (IST)

    ರಾಯಲ್ ಚಾಲೆಂಜರ್ಸ್ 204/4 (20 ಓವರ್)

    ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 204 ರನ್ ದಾಖಲಿಸಿದೆ. ಡಿವಿಲಿಯರ್ಸ್ 34 ಬಾಲ್​ಗೆ 76 ರನ್ ದಾಖಲಿಸಿ ನಾಟ್ ಔಟ್ ಆಗಿ ಉಳಿದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಗೆಲ್ಲಲು 205 ರನ್ ಗುರಿ ತಲುಪಬೇಕಾಗಿದೆ.

  • 18 Apr 2021 05:11 PM (IST)

    ಡಿವಿಲಿಯರ್ಸ್ ಅರ್ಧಶತಕ

    ರಾಯಲ್ ಚಾಲೆಂಜರ್ಸ್ ಪರ ಎಬಿ ಡಿವಿಲಿಯರ್ಸ್ ಅರ್ಧಶತಕ ದಾಖಲಿಸಿದ್ದಾರೆ. 27 ಬಾಲ್​ಗೆ 6 ಬೌಂಡರಿ, 2 ಸಿಕ್ಸರ್ ಸಹಿತ 55 ರನ್ ಬಾರಿಸಿದ್ದಾರೆ. ಆರ್​ಸಿಬಿ ಮೊತ್ತ 19.2 ಓವರ್​ಗೆ 193/4 ಆಗಿದೆ.

  • 18 Apr 2021 05:05 PM (IST)

    ಡಿವಿಲಿಯರ್ಸ್ ಬೌಂಡರಿ- ಸಿಕ್ಸರ್

    ಆರ್​ಸಿಬಿ ಪರ ಎಬಿ ಡಿವಿಲಿಯರ್ಸ್ ಬೌಂಡರಿ- ಸಿಕ್ಸರ್​ಗಳ ಆಟ ಆಡುತ್ತಿದ್ದಾರೆ. ರಸ್ಸೆಲ್ ಬಾಲ್​ಗೆ ಡಿವಿಲಿಯರ್ಸ್ 2 ಬೌಂಡರಿ, 1 ಸಿಕ್ಸರ್ ಸಿಡಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊತ್ತ 18 ಓವರ್ ಅಂತ್ಯಕ್ಕೆ 165 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ. ಡಿವಿಲಿಯರ್ಸ್ 26 ಬಾಲ್​ಗೆ 49 ರನ್ ಪೇರಿಸಿ ಅರ್ಧಶತಕದ ಅಂಚಿನಲ್ಲಿದ್ದಾರೆ.

  • 18 Apr 2021 05:02 PM (IST)

    ಮ್ಯಾಕ್ಸ್​ವೆಲ್ ಔಟ್

    ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಆರ್​ಸಿಬಿ ಇನ್ನಿಂಗ್ಸ್ ಕಟ್ಟಿದ ಗ್ಲೆನ್ ಮ್ಯಾಕ್ಸ್​ವೆಲ್ ವಿಕೆಟ್ ಪತನವಾಗಿದೆ. 49 ಬಾಲ್​ಗೆ 78 ರನ್ ಗಳಿಸಿದ ಮ್ಯಾಕ್ಸ್​ವೆಲ್ ಕಮ್ಮಿನ್ಸ್​ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ತಂಡ 17 ಓವರ್​ಗಳ ಅಂತ್ಯಕ್ಕೆ 148 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ.

  • 18 Apr 2021 04:56 PM (IST)

    ರಾಯಲ್ ಚಾಲೆಂಜರ್ಸ್ 145/3 (16 ಓವರ್)

    ರಾಯಲ್ ಚಾಲೆಂಜರ್ಸ್ ಬೆಂಗಳೂರು 16 ಓವರ್​ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 145 ರನ್ ದಾಖಲಿಸಿದೆ. ತಂಡದ ಪರ ಮ್ಯಾಕ್ಸ್​ವೆಲ್ 45 ಬಾಲ್ 77 ಹಾಗೂ ಡಿವಿಲಿಯರ್ಸ್ 18 ಬಾಲ್ 31 ರನ್ ನೀಡಿ ಆಡುತ್ತಿದ್ದಾರೆ.

  • 18 Apr 2021 04:37 PM (IST)

    ರಾಯಲ್ ಚಾಲೆಂಜರ್ಸ್ 106/3 (13 ಓವರ್)

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 13 ಓವರ್​ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 106 ರನ್ ಕಲೆಹಾಕಿದೆ. ಮ್ಯಾಕ್ಸ್​ವೆಲ್ 40 ಬಾಲ್​ಗೆ 63 ರನ್ ಗಳಿಸಿ ಕಣದಲ್ಲಿದ್ದಾರೆ. ಡಿವಿಲಿಯರ್ಸ್ 5 ಬಾಲ್​ಗೆ 8 ರನ್ ಪೇರಿಸಿದ್ದಾರೆ. ಮೊದಲೆರಡು ವಿಕೆಟ್ ಬಳಿಕ ಆರ್​ಸಿಬಿ ರನ್ ಗತಿ ಕಟ್ಟಿಹಾಕಲು ಕೋಲ್ಕತ್ತಾ ಬೌಲರ್​ಗಳು ಸಫಲವಾಗಿಲ್ಲ.

  • 18 Apr 2021 04:33 PM (IST)

    ಶತಕ ಪೂರೈಸಿದ ಆರ್​ಸಿಬಿ

    ರಾಯಲ್ ಚಾಲೆಂಜರ್ಸ್ ಬೆಂಗಳೂರು 12 ಓವರ್​ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 101 ರನ್ ಪೇರಿಸಿದೆ. ತಂಡದ ಪರ ಮ್ಯಾಕ್ಸ್​ವೆಲ್ ಉತ್ತಮ ಆಟ ಆಡುತ್ತಿದ್ದಾರೆ. ಮಿಸ್ಟರ್ 360 ಎಬಿಡಿ ಕಣದಲ್ಲಿದ್ದಾರೆ.

  • 18 Apr 2021 04:29 PM (IST)

    ದೇವದತ್ ಪಡಿಕ್ಕಲ್ ಔಟ್

    ದೇವದತ್ ಪಡಿಕ್ಕಲ್ 28 ಬಾಲ್​ಗೆ 25 ರನ್ ಗಳಿಸಿ ನಿರ್ಗಮಿಸಿದ್ದಾರೆ. ಪ್ರಸಿದ್ಧ್ ಕೃಷ್ಣ ಬಾಲ್​ನ್ನು ಸಿಕ್ಸರ್​ಗೆ ಎತ್ತಿದ ಪಡಿಕ್ಕಲ್ ತ್ರಿಪಾಠಿಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ಮ್ಯಾಕ್ಸ್​ವೆಲ್ 34 ಬಾಲ್​ಗೆ 60 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಡಿವಿಲಿಯರ್ಸ್ ಮ್ಯಾಕ್ಸ್​ವೆಲ್ ಜೊತೆಯಾಗಿದ್ದಾರೆ.

  • 18 Apr 2021 04:26 PM (IST)

    ರಾಯಲ್ ಚಾಲೆಂಜರ್ಸ್ 95/2 (11 ಓವರ್)

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 11 ಓವರ್​ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 95 ರನ್ ಕಲೆಹಾಕಿದೆ. ವಿರಾಟ್ ಕೊಹ್ಲಿ ಹಾಗೂ ಪಾಟೀದಾರ್ ನಂತರ ಬಂದ ಮ್ಯಾಕ್ಸ್​ವೆಲ್ ಮತ್ತು ಪಡಿಕ್ಕಲ್ ಉತ್ತಮ ಆಟ ಆಡುತ್ತಿದ್ದಾರೆ.

  • 18 Apr 2021 04:23 PM (IST)

    ಮ್ಯಾಕ್ಸ್​ವೆಲ್ ಅರ್ಧಶತಕ

    ರಾಯಲ್ ಚಾಲೆಂಜರ್ಸ್ ಪರ ಗ್ಲೆನ್ ಮ್ಯಾಕ್ಸ್​ವೆಲ್ ಅರ್ಧಶತಕ ಸಿಡಿಸಿದ್ದಾರೆ. ಇದು ಅವರ 8ನೇ ಐಪಿಎಲ್ 50 ಆಗಿದ್ದು, 30 ಬಾಲ್​ಗೆ 51 ರನ್ ತಲುಪಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ಓವರ್ ಅಂತ್ಯಕ್ಕೆ 84 ರನ್ ಗಳಿಸಿ 2 ರನ್ ಕಳೆದುಕೊಂಡಿದ್ದಾರೆ.

  • 18 Apr 2021 04:12 PM (IST)

    ರಾಯಲ್ ಚಾಲೆಂಜರ್ಸ್ 67/2 (8 ಓವರ್)

    8 ಓವರ್​ಗಳ ಅಂತ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ವಿಕೆಟ್ ಕಳೆದುಕೊಂಡು 67 ರನ್ ದಾಖಲಿಸಿದೆ. ಗ್ಲೆನ್ ಮ್ಯಾಕ್ಸ್​ವೆಲ್ 42 (24) ಅರ್ಧಶತಕದ ಹೊಸ್ತಿಲಲ್ಲಿ ಬ್ಯಾಟ್ ಬೀಸುತ್ತಿದ್ದಾರೆ.

  • 18 Apr 2021 04:05 PM (IST)

    ರಾಯಲ್ ಚಾಲೆಂಜರ್ಸ್ 53/2 (7 ಓವರ್)

    ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 53 ರನ್ ಗಳಿಸಿದೆ. ಆರಂಭಿಕವಾಗಿ 2 ವಿಕೆಟ್ ಕಳೆದುಕೊಂಡರೂ ಈಗ ಸುಸ್ಥಿತಿ ಕಾಯ್ದುಕೊಂಡು ಆಡುತ್ತಿದೆ.

  • 18 Apr 2021 03:59 PM (IST)

    ಪವರ್​ಪ್ಲೇ ಅಂತ್ಯಕ್ಕೆ ಆರ್​ಸಿಬಿ 45/2

    6 ಓವರ್​ಗಳ ಅಂತ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ವಿಕೆಟ್ ಕಳೆದುಕೊಂಡು 45 ರನ್ ದಾಖಲಿಸಿದೆ. ತಂಡದ ಪರ ಮ್ಯಾಕ್ಸ್​ವೆಲ್ 13 ಬಾಲ್​ಗೆ 24 ಹಾಗೂ ಪಡಿಕ್ಕಲ್ 16 ಬಾಲ್​ಗೆ 13 ರನ್ ಗಳಿಸಿ ಆಡುತ್ತಿದ್ದಾರೆ.

  • 18 Apr 2021 03:55 PM (IST)

    ಮ್ಯಾಕ್ಸ್​ವೆಲ್ ಸಿಕ್ಸರ್

    ರಾಯಲ್ ಚಾಲೆಂಜರ್ಸ್ ಬ್ಯಾಟ್ಸ್​ಮನ್ ಗ್ಲೆನ್ ಮ್ಯಾಕ್ಸ್​ವೆಲ್ ಪಂದ್ಯದ ಮೊದಲ ಸಿಕ್ಸ್ ಸಿಡಿಸಿದ್ದಾರೆ. ಶಕೀಬ್ ಅಲ್ ಹಸನ್ ಬೌಲಿಂಗ್​ನ 5.1ನೇ ಬಾಲ್​ನ್ನು ಮ್ಯಾಕ್ಸ್​ವೆಲ್ ಸಿಕ್ಸರ್ ಎತ್ತಿದ್ದಾರೆ. 5.1 ಓವರ್​ಗೆ ಆರ್​ಸಿಬಿ 34/2 ರನ್ ಗಳಿಸಿದೆ.

  • 18 Apr 2021 03:49 PM (IST)

    ರಾಯಲ್ ಚಾಲೆಂಜರ್ಸ್ 19/2 (4 ಓವರ್)

    4 ಓವರ್ ಅಂತ್ಯಕ್ಕೆ ಆರ್​ಸಿಬಿ 19 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ.

  • 18 Apr 2021 03:46 PM (IST)

    ರಾಯಲ್ ಚಾಲೆಂಜರ್ಸ್ 12/2 (3 ಓವರ್)

    ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 12 ರನ್ ಕಲೆಹಾಕಿದೆ. ರಾಯಲ್ ಚಾಲೆಂಜರ್ಸ್ ಪರ ಮ್ಯಾಕ್ಸ್​ವೆಲ್ ಹಾಗೂ ಪಡಿಕ್ಕಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ 2 ವಿಕೆಟ್ ಪಡೆದಿದ್ದಾರೆ. ಹರ್ಭಜನ್ ಸಿಂಗ್ ಹಾಗೂ ಶಕೀಬ್ ಅಲ್ ಹಸನ್ ಬೌಲಿಂಗ್ ಮಾಡಿದ್ದಾರೆ. ಕೋಲ್ಕತ್ತಾ ಪರ ಆರಂಭಿಕ ಓವರ್​ಗಳನ್ನು ಸ್ಪಿನ್ನರ್​ಗಳು ನಿರ್ವಹಿಸುತ್ತಿದ್ದಾರೆ.

  • 18 Apr 2021 03:42 PM (IST)

    ರಜತ್ ಪಾಟೀದಾರ್ ವಿಕೆಟ್ ಪತನ

    ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬಳಿಕ ರಜತ್ ಪಾಟೀದಾರ್ ಕೂಡ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದ್ದಾರೆ. ಸ್ಪಿನ್ ಬಾಲ್​ಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ. ಮ್ಯಾಕ್ಸ್​ವೆಲ್ ಹಾಗೂ ಪಡಿಕ್ಕಲ್ ಕ್ರೀಸ್​ನಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ಓವರ್ ಅಂತ್ಯಕ್ಕೆ 9 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ.

  • 18 Apr 2021 03:40 PM (IST)

    ವಿರಾಟ್ ಕೊಹ್ಲಿ ಔಟ್

    ರಾಯಲ್ ಚಾಲೆಂಜರ್ಸ್​ಗೆ ಆರಂಭಿಕ ಆಘಾತ ಎದುರಾಗಿದೆ. ವಿರಾಟ್ ಕೊಹ್ಲಿ 6 ಬಾಲ್​ಗೆ 5 ರನ್ ಗಳಿಸಿ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದ್ದಾರೆ. ತ್ರಿಪಾಠಿ ಕಠಿಣ ಕ್ಯಾಚ್ ಹಿಡಿದು ಕೊಹ್ಲಿ ಔಟ್ ಮಾಡಿದ್ದಾರೆ. ದೇವದತ್ ಪಡಿಕ್ಕಲ್ ಹಾಗೂ ರಜತ್ ಪಾಟೀದಾರ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 18 Apr 2021 03:10 PM (IST)

    ಕೆಕೆಆರ್ ಪ್ಲೇಯಿಂಗ್ ಇಲೆವೆನ್

    ನಿತೀಶ್ ರಾಣಾ, ಶುಬ್​ಮನ್ ಗಿಲ್, ರಾಹುಲ್ ತ್ರಿಪಾಠಿ, ಇಯೊನ್ ಮೋರ್ಗಾನ್ (ನಾಯಕ), ಶಕೀಬ್ ಅಲ್ ಹಸನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಹರ್ಭಜನ್ ಸಿಂಗ್, ಪ್ರಸಾದ್ ಕೃಷ್ಣ, ವರುಣ್ ಚಕ್ರವರ್ತಿ

  • 18 Apr 2021 03:09 PM (IST)

    ಆರ್​ಸಿಬಿ ಪ್ಲೇಯಿಂಗ್ ಇಲೆವೆನ್

    ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್ವೆಲ್, ಎಬಿ ಡಿವಿಲಿಯರ್ಸ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಕೈಲ್ ಜಾಮಿಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್

  • 18 Apr 2021 03:07 PM (IST)

    ಹ್ಯಾಟ್ರಿಕ್ ಗೆಲುವು ಕಾಣುತ್ತಾ ಆರ್​ಸಿಬಿ?

    ಅಭಿಮಾನಿಗಳ ಫೇವರಿಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದಿನ ಪಂದ್ಯದಲ್ಲೂ ಗೆಲುವು ಸಾಧಿಸುತ್ತಾ ಎಂಬ ಕುತೂಹಲದಲ್ಲಿ ಕ್ರಿಕೆಟ್ ಅಭಿಮಾನಿಗಳಿದ್ದಾರೆ.

  • 18 Apr 2021 03:03 PM (IST)

    ಆರ್​​ಸಿಬಿ ಟಾಸ್ ವಿನ್

    ಚೆನ್ನೈ ಎಮ್.ಎ. ಚಿದಂಬರಂ ಮೈದಾನದಲ್ಲಿ ನಡೆಯುವ ರಾಯಲ್ ಚಾಲೆಂಜರ್ಸ್- ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬ್ಯಾಟಿಂಗ್ ಆಯ್ದುಕೊಂಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಬೌಲಿಂಗ್ ಮಾಡಲಿದೆ.

Published On - 7:16 pm, Sun, 18 April 21

Follow us on