ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. 16.3 ಓವರ್‌ಗಳಲ್ಲಿ ಒಂದೂ ವಿಕೆಟ್ ಕಳೆದುಕೊಳ್ಳದೆ 178 ರನ್ ಟಾರ್ಗೆಟ್ ತಲುಪಿದ್ದಾರೆ. ರಾಜಸ್ಥಾನ್ ರಾಯಲ್ಸ್ ಆರ್‌ಸಿಬಿ ವಿರುದ್ಧ ಹೀನಾಯ ಸೋಲು ಕಂಡಿದೆ. ರಾಯಲ್ ಚಾಲೆಂಜರ್ಸ್ ಪರ ದೇವದತ್ ಪಡಿಕ್ಕಲ್ ಆಕರ್ಷಕ ಶತಕ ದಾಖಲಿಸಿದ್ದಾರೆ. 52 ಬಾಲ್‌ಗೆ 101 ರನ್ ಪೇರಿಸಿದ್ದಾರೆ. ಮತ್ತೊಂದೆಡೆ ನಾಯಕ ಕೊಹ್ಲಿ 47 ಬಾಲ್‌ಗೆ 72 ರನ್ ದಾಖಲಿಸಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್‌ಗೆ 9 ವಿಕೆಟ್ ಕಳೆದುಕೊಂಡು 177 ರನ್ ದಾಖಲಿಸಿತ್ತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲಲು 178 ರನ್ ಟಾರ್ಗೆಟ್ ನೀಡಿತ್ತು. ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕ ಬ್ಯಾಟ್ಸ್‌ಮನ್‌ಗಳು ಅಲ್ಪಮೊತ್ತಕ್ಕೆ ಕುಸಿದಿದ್ದರು. ಆದರೆ, 4 ವಿಕೆಟ್‌ಗಳ ಬಳಿಕ ಜೊತೆಯಾದ ರಿಯಾನ್ ಪರಾಗ್ ಹಾಗೂ ಶಿವಂ ದುಬೆ ತಂಡಕ್ಕೆ ಆಸರೆಯಾಗಿದ್ದರು. ಶಿವಂ ದುಬೆ 32 ಬಾಲ್‌ಗೆ 46 ರನ್ ಗಳಿಸಿದರೆ, ತೆವಾಟಿಯಾ 23 ಬಾಲ್‌ಗೆ 40 ರನ್ ದಾಖಲಿಸಿದ್ದರು. ರಿಯಾನ್ ಪರಾಗ್ 25, ಹಾಗೂ ಸಂಜು ಸ್ಯಾಮ್ಸನ್ 21 ರನ್ ಪೇರಿಸಿ ತಂಡದ ಮೊತ್ತ ಹೆಚ್ಚಿಸಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮೊಹಮ್ಮದ್ ಸಿರಾಜ್ ಹಾಗೂ ಹರ್ಷಲ್ ಪಟೇಲ್ ತಲಾ 3 ವಿಕೆಟ್ ಕಬಳಿಸಿದ್ದರು. ಜಾಮಿಸನ್, ರಿಚರ್ಡ್‌ಸನ್ ಮತ್ತು ಸುಂದರ್ ತಲಾ 1 ವಿಕೆಟ್ ಪಡೆದಿದ್ದರು.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಟೂರ್ನಿಯ 16ನೇ ಪಂದ್ಯದಲ್ಲಿ ಆರ್ಸಿಬಿ 10 ವಿಕೆಟ್‌ಗಳ ಭರ್ಜರಿ ದಾಖಲಿಸಿದೆ.
A match-winning CENTURY from @devdpd07 as #RCB win by 10 wickets.
Scorecard – https://t.co/ZB2JNOhWcL #VIVOIPL pic.twitter.com/sOIDIbRLch
— IndianPremierLeague (@IPL) April 22, 2021
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ದೇವದತ್ ಪಡಿಕ್ಕಲ್ ಆಕರ್ಷಕ ಶತಕ ದಾಖಲಿಸಿದ್ದಾರೆ. 51 ಬಾಲ್‌ಗೆ 6 ಸಿಕ್ಸರ್, 11 ಬೌಂಡರಿ ಸಹಿತ 101 ರನ್ ಬಾರಿಸಿದ್ದಾರೆ. ಆರ್ಸಿಬಿ ಗೆಲ್ಲಲು 23 ಬಾಲ್‌ಗೆ 4 ರನ್ ಗಳಿಸಬೇಕಿದೆ. ವಿರಾಟ್ ಕೊಹ್ಲಿ ಮತ್ತೊಂದೆಡೆ ಬ್ಯಾಟ್ ಬೀಸುತ್ತಿದ್ದು 71 ರನ್ ಗಳಿಸಿದ್ದಾರೆ.
That's a CENTURY for @devdpd07 ??
His maiden ? in #VIVOIPL
Live – https://t.co/qQv53pVLyV #RCBvRR #VIVOIPL pic.twitter.com/m2LG7t4zKO
— IndianPremierLeague (@IPL) April 22, 2021
15 ಓವರ್ಗಳ ಅಂತ್ಯಕ್ಕೆ ಆರ್ಸಿಬಿ ತಂಡ ವಿಕೆಟ್ ನಷ್ಟವಿಲ್ಲದೆ 162 ರನ್ ದಾಖಲಿಸಿದೆ. ತಂಡ ಗೆಲ್ಲಲು 30 ಬಾಲ್‌ಗೆ 16 ರನ್ ಬೇಕಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಓವರ್‌ಗೆ 159 ರನ್ ಗಳಿಸಿದೆ. ಗೆಲ್ಲಲು 36 ಬಾಲ್‌ಗೆ 19 ರನ್ ಬೇಕಾಗಿದೆ.
ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ಪೂರೈಸಿದ್ದಾರೆ. 36 ಬಾಲ್‌ಗೆ 55 ರನ್ ಗಳಿಸಿ ಆಡುತ್ತಿದ್ದಾರೆ. ಈ ನಡುವೆ ಐಪಿಎಲ್ನಲ್ಲಿ 6,000 ರನ್ ಪೂರೈಸಿದ ದಾಖಲೆಯನ್ನು ಕೂಡ ಕೊಹ್ಲಿ ಮಾಡಿದ್ದಾರೆ. 13 ಓವರ್ ಅಂತ್ಯಕ್ಕೆ ಆರ್ಸಿಬಿ 142 ರನ್ ಗಳಿಸಿದೆ. ವಿಕೆಟ್ ಕಳೆದುಕೊಂಡಿಲ್ಲ.
.@imVkohli joins the party with a fine FIFTY off 34 deliveries.
This is his 40th in #VIVOIPL
Live – https://t.co/qQv53pVLyV #RCBvRR #VIVOIPL pic.twitter.com/zXbCKbAMPg
— IndianPremierLeague (@IPL) April 22, 2021
Stat alert! : Captain Kohli becomes the first batsman in IPL history to reach 6⃣K runs ?
Just a gentle flick for 4️⃣ more to get there ?#PlayBold #WeAreChallengers #IPL2021 #RCBvRR #DareToDream
— Royal Challengers Bangalore (@RCBTweets) April 22, 2021
ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲಲು 54 ಬಾಲ್‌ಗೆ 61 ರನ್ ಬೇಕಾಗಿದೆ. ತಂಡದ ಪರ ಪಡಿಕ್ಕಲ್ ಅದ್ಭುತವಾದ ಆಟವಾಡಿದ್ದಾರೆ. ಕೊಹ್ಲಿ, ಪಡಿಕ್ಕಲ್ಗೆ ಉತ್ತಮ ಜೊತೆಯಾಗಿದ್ದಾರೆ. ಆರ್ಸಿಬಿ ಸ್ಕೋರ್ 11 ಓವರ್‌ಗೆ 117/0 ಆಗಿದೆ.
ರಾಯಲ್ ಚಾಲೆಂಜರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಭರ್ಜರಿ ಜೊತೆಯಾಟ ನೀಡಿದ್ದಾರೆ. ಆರ್ಸಿಬಿ 10 ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 107 ರನ್ ದಾಖಲಿಸಿದೆ. ಪಡಿಕ್ಕಲ್ ಅಬ್ಬರದ ಆಟವಾಡುತ್ತಿದ್ದಾರೆ. 36 ಬಾಲ್‌ಗೆ 80 ರನ್ ನೀಡಿದ್ದಾರೆ. ಆರ್ಸಿಬಿ ಗೆಲ್ಲಲು 60 ಬಾಲ್‌ಗೆ 71 ರನ್ ಬೇಕಿದೆ.
A SIX from @devdpd07 and that's a brilliant 100-run partnership between the openers.
Live – https://t.co/dch5R4juzp #RCBvRR #VIVOIPL pic.twitter.com/Po1tv7hHEc
— IndianPremierLeague (@IPL) April 22, 2021
ರಾಹುಲ್ ತೆವಾಟಿಯಾ ಓವರ್‌ಗೆ ಪಡಿಕ್ಕಲ್ ಎರಡು ಸಿಕ್ಸರ್ ಸಿಡಿಸಿದ್ದಾರೆ. ಈ ಮೂಲಕ ತಂಡದ ಮೊತ್ತ 9 ಓವರ್‌ಗೆ 96 ಆಗಿದೆ. ಆರ್ಸಿಬಿ ವಿಕೆಟ್ ಕಳೆದುಕೊಂಡಿಲ್ಲ. ಘಟಾನುಘಟಿ ದಾಂಡಿಗರು ಇನ್ನೂ ವಿಕೆಟ್ ಉಳಿಸಿಕೊಂಡಿದ್ದಾರೆ. ಆರ್ಸಿಬಿ ಗೆಲ್ಲಲು 66 ಬಾಲ್‌ಗೆ 82 ರನ್ ಬೇಕಿದೆ.
ದೇವದತ್ ಪಡಿಕ್ಕಲ್ ರಾಯಲ್ ಚಾಲೆಂಜರ್ಸ್ ಪರ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ. 27 ಬಾಲ್‌ಗೆ 52 ರನ್ ಪೇರಿಸಿದ್ದಾರೆ. ಆರ್ಸಿಬಿ ಗೆಲ್ಲಲು 74 ಬಾಲ್‌ಗೆ 104 ರನ್ ಬೇಕಿದೆ.
Yeh hum hain, yeh Dev hain aur yahan PADI ho rahi hain.#TweetLikeOppositionAdmin #PlayBold #WeAreChallengers #IPL2021 #RCBvRR #DareToDream pic.twitter.com/ZIllwCCgSx
— Royal Challengers Bangalore (@RCBTweets) April 22, 2021
7 ಓವರ್ಗಳ ಅಂತ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 67 ರನ್ ದಾಖಲಿಸಿದೆ. ಆರ್ಸಿಬಿ ಪರ ಪಡಿಕ್ಕಲ್ 25 ಬಾಲ್‌ಗೆ 47 ರನ್ಗಳಿಸಿ ಅರ್ಧಶತಕದ ಅಂಚಿನಲ್ಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ 17 ಬಾಲ್‌ಗೆ 19 ರನ್ ಗಳಿಸಿ ಉತ್ತಮ ಜೊತೆಯಾಟ ನೀಡುತ್ತಿದ್ದಾರೆ.
A fine 50-run partnership comes up between @imVkohli & @devdpd07 ??
Live – https://t.co/dch5R4juzp #RCBvRR #VIVOIPL pic.twitter.com/3DuJCnUFyE
— IndianPremierLeague (@IPL) April 22, 2021
ಆರಂಭಿಕರಾಗಿ ಕಣಕ್ಕಿಳಿದಿರುವ ಕೊಹ್ಲಿ ಹಾಗೂ ಪಡಿಕಲ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದಾರೆ. ಈಗಾಗಲೇ 4 ಓವರ್ ಆಡಿರುವ ಈ ಜೋಡಿ ಬರೋಬ್ಬರಿ 39 ರನ್ ಗಳಿಸಿದೆ. ಉಭಯ ಆಟಗಾರರು ಬೌಂಡರಿಗಳ ಅಬ್ಬರ ಶುರು ಮಾಡಿದ್ದಾರೆ. ಪಡಿಕಲ್ 24 ರನ್ ಗಳಿಸಿದ್ದರೆ, ಕೊಹ್ಲಿ 15 ರನ್ ಗಳಿಸಿ ಬ್ಯಾಟಿಂಗ್ನಲ್ಲಿದ್ದಾರೆ.
ರಾಜಸ್ಥಾನ್ ನೀಡಿರುವ ಬೃಹತ್ ಮೊತ್ತವನ್ನು ಬೆನ್ನತ್ತಿರುವ ಆರ್ಸಿಬಿಗೆ ಆರಂಭಿಕರಾಗಿ ಕೊಹ್ಲಿ ಹಾಗೂ ಪಡಿಕಲ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಮೊದಲ 2 ಓವರ್‌ಗಳಲ್ಲಿ ಕೊಹ್ಲಿಯ ಅಮೋಘ ಸಿಕ್ಸರ್ನೊಂದಿಗೆ ತಂಡ ಉತ್ತಮ ಅಡಿಪಾಯ ಹಾಕಿದೆ.
ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್ಗಳ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 177 ರನ್ ದಾಖಲಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿಗೆ 178 ರನ್ ಪೇರಸಿಬೇಕಿದೆ.
We end with 177/9.
How are we feeling? #HallaBol | #RoyalsFamily | #RCBvRR
— Rajasthan Royals (@rajasthanroyals) April 22, 2021
ತೆವಾಟಿಯಾ ಔಟ್ ಆದ ಬೆನ್ನಲ್ಲೇ ಕ್ರಿಸ್ ಮಾರಿಸ್ ಹಾಗೂ ಸಕರಿಯಾ ಹರ್ಷಲ್ ಪಟೇಲ್ಗೆ ವಿಕೆಟ್ ಒಪ್ಪಿಸಿದ್ದಾರೆ. ಮಾರಿಸ್ 10 ರನ್ ಗಳಿಸಿದರೆ ಸಕರಿಯಾ ಸೊನ್ನೆ ಸುತ್ತಿದ್ದಾರೆ. ಹರ್ಷಲ್ ಪಟೇಲ್ ವಿಕೆಟ್ ಗಳಿಕೆ ಇಂದು ಕೂಡ ಮುಮದುವರಿದಿದೆ. ರಾಜಸ್ಥಾನ್ ರಾಯಲ್ಸ್ ಪರ ಮುಸ್ತಫಿಜುರ್ ಹಾಗೂ ಶ್ರೇಯಸ್ ಗೋಪಾಲ್ ಆಡುತ್ತಿದ್ದಾರೆ.
And just like that, Harshal gets a 3⃣rd!
Slower one miscued by Sakariya, pouched by AB!#PlayBold #WeAreChallengers #IPL2021 #RCBvRR #DareToDream
— Royal Challengers Bangalore (@RCBTweets) April 22, 2021
ಕೊನೆಯ ಓವರ್ನಲ್ಲಿ ಸಿಕ್ಸರ್ ಸಿಡಿಸಲು ಮುಂದಾದ ರಾಹುಲ್ ತೆವಾಟಿಯಾ ಸಿರಾಜ್ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಹುಲ್ ತೆವಾಟಿಯಾ ಶಹಬಾಜ್ಗೆ ಕ್ಯಚ್ ನೀಡಿದ್ದಾರೆ. 40 ರನ್ಗಳಿಸಿ ನಿರ್ಗಮಿಸಿದ್ದಾರೆ.
ಅಂತಿಮ ಓವರ್‌ಗಳಲ್ಲಿ ರಾಹುಲ್ ತೆವಾಟಿಯಾ ಉತ್ತಮ ಆಟವಾಡುತ್ತಿದ್ದಾರೆ. 23 ಬಾಲ್‌ಗೆ 2 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 40 ರನ್ ಗಳಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ 170 ರನ್ಗೆ 7 ವಿಕೆಟ್ ಕಳೆದುಕೊಂಡಿದೆ.
ರಾಜಸ್ಥಾನ್ ರಾಯಲ್ಸ್ 18 ಓವರ್ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 157 ರನ್ ದಾಖಲಿಸಿದೆ. 18ನೇ ಓವರ್ ಕೊನೆಯ ಬಾಲ್‌ಗೆ ಕ್ರಿಸ್ ಮಾರಿಸ್ ಸಿಕ್ಸರ್ ಸಿಡಿಸಿದ್ದಾರೆ. ಮಾರಿಸ್ 6 ಬಾಲ್ 10 ಹಾಗೂ ರಾಹುಲ್ ತೆವಾಟಿಯಾ 18 ಬಾಲ್‌ಗೆ 28 ರನ್ ಪೇರಿಸಿ ಆಡುತ್ತಿದ್ದಾರೆ.
ಕೈಲ್ ರಿಚರ್ಡ್‌ಸನ್ ಬಾಲ್ನ್ನು ಬೌಂಡರಿಯತ್ತ ಬಾರಿಸಿದ ಶಿವಂ ದುಬೆ ಗ್ಲೆನ್ ಮ್ಯಾಕ್ಸ್ವೆಲ್ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ರಾಹುಲ್ ತೆವಾಟಿಯಾಗೆ ಕ್ರಿಸ್ ಮಾರಿಸ್ ಜೊತೆಯಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ 16 ಓವರ್ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 136 ರನ್ ಗಳಿಸಿದೆ.
Kane Richardson gets his revenge and his 1⃣st wicket of the season!
Shivam Dube miscues the slower one to a diving Maxwell at long-on!?#PlayBold #WeAreChallengers #IPL2021 #RCBvRR #DareToDream
— Royal Challengers Bangalore (@RCBTweets) April 22, 2021
ಶಿವಂ ದುಬೆ ಹಾಗೂ ರಾಹುಲ್ ತೆವಾಟಿಯಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್ಗಳನ್ನು ದಂಡಿಸುತ್ತಿದ್ದಾರೆ. 15 ಓವರ್ಗಳ ಅಂತ್ಯಕ್ಕೆ 128 ರನ್ಗೆ 5 ವಿಕೆಟ್ ಕಳೆದುಕೊಂಡು ರಾಜಸ್ಥಾನ್ ರಾಯಲ್ಸ್ ಆಟಗಾರರು ಇನ್ನಿಂಗ್ಸ್ ಕಟ್ಟುತ್ತಿದ್ದಾರೆ.
14 ಓವರ್ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡ ರಾಜಸ್ಥಾನ್ ರಾಯಲ್ಸ್ ತಂಡ 120 ರನ್ ದಾಖಲಿಸಿದೆ. ಶಿವಂ ದುಬೆ ಹಾಗೂ ರಾಹುಲ್ ತೆವಾಟಿಯಾ ಕ್ರೀಸ್ನಲ್ಲಿದ್ದಾರೆ.
ಶಿವಂ ದುಬೆ ಕ್ಯಾಚ್ ಡ್ರಾಪ್ ಆದ ಬೆನ್ನಲ್ಲೇ ರಿಯಾನ್ ಪರಾಗ್ ಔಟ್ ಆಗಿದ್ದಾರೆ. 16 ಬಾಲ್‌ಗೆ 25 ರನ್ ಗಳಿಸಿ ಆಡುತ್ತಿ್ದ್ದ ಪರಾಗ್ ಹರ್ಷಲ್ ಪಟೇಲ್ ಬೌಲಿಂಗ್ಗೆ ಚಹಾಲ್ಗೆ ಕ್ಯಾಚ್ ನೀಡಿದ್ದಾರೆ. ರಾಜಸ್ಥಾನ್ ರಾಯಲ್ಸ್ 13.3 ಓವರ್‌ಗೆ 5 ವಿಕೆಟ್ ಕಳೆದುಕೊಂಡು 109 ರನ್ ಗಳಿಸಿದೆ.
Who else but the purple cap holder to break a dangerous partnership! ?♂️
Riyan Parag edges to third-man, and that's Harshal into the double digits for the season ? #PlayBold #WeAreChallengers #IPL2021 #RCBvRR #DareToDream
— Royal Challengers Bangalore (@RCBTweets) April 22, 2021
13ನೇ ಓವರ್ ಅಂತ್ಯದಲ್ಲಿ ಜಾಮಿಸನ್ ಕೊನೆಯ ಬಾಲ್‌ಗೆ ಶಿವಂ ದುಬೆ ಹೊಡೆತವನ್ನು ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಕೈಚೆಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ ಶಿವಂ ದುಬೆ 28 ಬಾಲ್‌ಗೆ 41 ರನ್ ಗಳಿಸಿ ಅರ್ಧಶತಕದ ಅಂಚಿನಲ್ಲಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡ 12 ಓವರ್ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 96 ರನ್ ದಾಖಲಿಸಿದೆ. ಶಿವಂ ದುಬೆ 25 ಬಾಲ್‌ಗೆ 37 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ರಿಯಾನ್ ಪರಾಗ್ 11 ಬಾಲ್‌ಗೆ 16 ರನ್ ಗಳಿಸಿ ಆಡುತ್ತಿದ್ದಾರೆ.
10 ಓವರ್ಗಳ ಅಂತ್ಯಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ 4 ವಿಕೆಟ್ ಕಳೆದುಕೊಂಡು 70 ರನ್ ಗಳಿಸಿದೆ. ಶಿವಂ ದುಬೆ ಹಾಗೂ ರಿಯಾನ್ ಪರಾಗ್ ಉತ್ತಮ ಜೊತೆಯಾಟ ನೀಡುತ್ತಿದ್ದಾರೆ. 4 ವಿಕೆಟ್‌ಗಳ ಬಳಿಕವೂ ರಾಜಸ್ಥಾನ್ ಬ್ಯಾಟಿಂಗ್ ಚೇತರಿಸಿಕೊಂಡಿದೆ.
ರಾಜಸ್ಥಾನ್ ರಾಯಲ್ಸ್ ಆಟಗಾರ ಶಿವಂ ದುಬೆ ಚಹಲ್ ಓವರ್ನಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಸಿದ್ದಾರೆ. ಉತ್ತಮ ರನ್ ಕಲೆಹಾಕಿದ್ದಾರೆ. ಆರ್ಆರ್ ತಂಡ 9 ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 64 ರನ್ ದಾಖಲಿಸಿದೆ.
ರಾಜಸ್ಥಾನ್ ರಾಯಲ್ಸ್ 8 ಓವರ್ ಅಂತ್ಯಕ್ಕೆ 4 ವಿಕೆಟ ಕಳೆದುಕೊಂಡು 47 ರನ್ ಗಳಿಸಿದೆ. ಶಿವಂ ದುಬೆ ಹಾಗೂ ರಿಯಾನ್ ಪರಾಗ್ ಕ್ರಿಸ್ನಲ್ಲಿದ್ದಾರೆ.
ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ವಾಷಿಂಗ್ಟನ್ ಸುಂದರ್ಗೆ ವಿಕೆಟ್ ಒಪ್ಪಿಸಿದ್ದಾರೆ. 18 ಬಾಲ್‌ಗೆ 21 ರನ್ ಗಳಿಸಿ ಮ್ಯಾಕ್ಸ್ವೆಲ್ಗೆ ಕ್ಯಾಚ್ ನೀಡಿದ್ದಾರೆ. ರಾಜಸ್ಥಾನ್ ರಾಯಲ್ಸ್ 7.2 ಓವರ್‌ಗೆ 4 ವಿಕೆಟ್ ಕಳೆದುಕೊಂಡು 43 ರನ್ ಗಳಿಸಿದೆ.
Oh yessss! What a comeback by Washi!
Hit for a 6⃣ off his first ball!
Comes back to dismiss Samson off the very next!RR are 4️⃣ down!#PlayBold #WeAreChallengers #IPL2021 #RCBvRR #DareToDream pic.twitter.com/RF24swbdyi
— Royal Challengers Bangalore (@RCBTweets) April 22, 2021
6 ಓವರ್ಗಳ ಅಂತ್ಯಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ 3 ವಿಕೆಟ್ ಕಳೆದುಕೊಂಡು 32 ರನ್ ಕಲೆಹಾಕಿದೆ. ತಂಡದ ಪರ ಸ್ಯಾಮ್ಸನ್ 12 ಬಾಲ್‌ಗೆ 12 ಹಾಗೂ ದುಬೆ 5 ಬಾಲ್ 4 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಆರ್ಸಿಬಿ ಪರ ಸಿರಾಜ್ 2 ಹಾಗೂ ಜಾಮಿಸನ್ 1 ವಿಕೆಟ್ ಪಡೆದಿದ್ದಾರೆ.
ರಾಜಸ್ಥಾನ್ ರಾಯಲಸ್ ದಾಂಡಿಗ ಡೇವಿಡ್ ಮಿಲ್ಲರ್ ಸೊನ್ನೆ ಸುತ್ತಿದ್ದಾರೆ. ಆರ್ಸಿಬಿ ಪರ ಸಿರಾಜ್ಗೆ ಮತ್ತೊಂದು ವಿಕೆಟ್ ಲಭ್ಯವಾಗಿದೆ. ಸಂಜು ಸ್ಯಾಮ್ಸನ್ ಜೊತೆಗೆ ಶಿವಂ ದುಬೆ ಕ್ರಿಸ್ನಲ್ಲಿ ಇದ್ದಾರೆ. 5 ಓವರ್ಗಳ ಅಂತ್ಯಕ್ಕೆ ರಾಜಸ್ಥಾನ್ ತಂಡ 3 ವಿಕೆಟ್ ಕಳೆದುಕೊಂಡು 25 ರನ್ ಗಳಿಸಿದೆ.
A brilliant review from #RCB and David Miller departs for a duck.
Wicket No.2 for @mdsirajofficial ?
Live – https://t.co/qQv53pVLyV #RCBvRR #VIVOIPL pic.twitter.com/vArSKpzWCZ
— IndianPremierLeague (@IPL) April 22, 2021
ಮನನ್ ವೋಹ್ರಾ 9 ಬಾಲ್‌ಗೆ 7 ರನ್ ಗಳಿಸಿ ಔಟ್ ಆಗಿದ್ದಾರೆ. ಜಾಮಿಸನ್ ಬಾಲ್‌ಗೆ ರಿಚರ್ಡ್ಸನ್ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ದಾರೆ. ನಾಯಕ ಸಂಜು ಸ್ಯಾಮ್ಸನ್ಗೆ ಡೇವಿಡ್ ಮಿಲ್ಲರ್ ಜೊತೆಯಾಗಿದ್ದಾರೆ. 4 ಓವರ್ಗಳ ಅಂತ್ಯಕ್ಕೆ ರಾಜಸ್ಥಾನ್ ತಂಡ 2 ವಿಕೆಟ್ ಕಳೆದುಕೊಂಡು 17 ರನ್ ಕಲೆಹಾಕಿದೆ.
WICKET!
Buttler is beaten and clean bowled by a straight one from Siraj. Great start for #RCB
Live – https://t.co/qQv53pVLyV #RCBvRR #VIVOIPL pic.twitter.com/AlQNzJHqI9
— IndianPremierLeague (@IPL) April 22, 2021
ವೇಗದ ಆಟಕ್ಕೆ ಮುಂದಾಗಿದ್ದ ಜಾಸ್ ಬಟ್ಲರ್ ಸಿರಾಜ್ಗೆ ವಿಕೆಟ್ ಒಪ್ಪಿಸಿದ್ದಾರೆ. 8 ಬಾಲ್‌ಗೆ 8 ರನ್ಗಳಿಸಿ ಬೌಲ್ಡ್ ಆಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ಮೊದಲ ವಿಕೆಟ್ ಕಳೆದುಕೊಂಡಿದೆ. 3 ಓವರ್ನ ಅಂತ್ಯಕ್ಕೆ ಆರ್ಆರ್ 14 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ಸಂಜು ಸ್ಯಾಮ್ಸನ್ ಕ್ರೀಸ್ಗೆ ಇಳಿದಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ರಾಜಸ್ಥಾನ್ ರಾಯಲ್ಸ್ ವೇಗದ ಆಟಕ್ಕೆ ಮುಂದಾಗಿದೆ. 2 ಓವರ್ನಲ್ಲಿ ವಿಕೆಟ್ ನಷ್ಟವಿಲ್ಲದೆ 13 ರನ್ ಕಲೆಹಾಕಿದೆ. ತಂಡದ ಪರ ವೋಹ್ರಾ ಹಾಗೂ ಬಟ್ಲರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕೈಲ್ ಜಾಮಿಸನ್ ಎರಡನೇ ಓವರ್ ಬೌಲಿಂಗ್ ಮಾಡಿದ್ದಾರೆ.
ಮೊಹಮ್ಮದ್ ಸಿರಾಜ್ ಮೊದಲ ಓವರ್ನಲ್ಲಿ 8 ರನ್ ಬಿಟ್ಟುಕೊಟ್ಟಿದ್ದಾರೆ. ಬಟ್ಲರ್ ಹಾಗೂ ಮನನ್ ವೋಹ್ರಾ ಬ್ಯಾಟಿಂಗ್ಗೆ ಇಳಿದಿದ್ದಾರೆ. ಬಟ್ಲರ್ ಮೊದಲ ಓವರ್ನ್ಲೇ ಎರಡು ಬೌಂಡರಿ ಸಿಡಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ ಇಲೆವೆನ್ ಹೀಗಿದೆ..
Shreyas Gopal returns. ?
Happy with the XI?#RCBvRR | #HallaBol | #RoyalsFamily | @Dream11 pic.twitter.com/yiZQeben6U
— Rajasthan Royals (@rajasthanroyals) April 22, 2021
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ ಇಲೆವೆನ್ ಹೀಗಿದೆ..
ಕೇನ್ ರಿಚರ್ಡ್‌ಸನ್ ಈ ಸೀಸನ್ನ ಮೊದಲ ಪಂದ್ಯ ಆಡುತ್ತಿದ್ದಾರೆ. ರಜತ್ ಪಾಟಿದಾರ್ ಬದಲು ಕೇನ್ ರಿಚರ್ಡ್‌ಸನ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
Captain Kohli has won the toss and we will be bowling first. ?
Kane Richardson makes his first appearance of the season in place of Rajat Patidar. #PlayBold #WeAreChallengers #IPL2021 #RCBvRR #DareToDream pic.twitter.com/Kdk4ix5bZ2
— Royal Challengers Bangalore (@RCBTweets) April 22, 2021
ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೌಲಿಂಗ್ ಆಯ್ದುಕೊಂಡಿದೆ. ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಮಾಡಲಿದೆ.
Match 16. Royal Challengers Bangalore win the toss and elect to field https://t.co/qQv53qdmXv #RCBvRR #VIVOIPL #IPL2021
— IndianPremierLeague (@IPL) April 22, 2021
Published On - 11:04 pm, Thu, 22 April 21