ಶಾರ್ಜಾಗೆ ವಾಪಸ್ಸಾಗಿರುವುದು ರಾಜಸ್ತಾನ ರಾಯಲ್ಸ್ಗೆ ನೆರವಾಗಲಿದೆಯೇ?
ಗೆಲ್ಲುವುದನ್ನು ಮರೆತಂತಿರುವ ರಾಜಸ್ತಾನ ರಾಯಲ್ಸ್ ಮತ್ತು ಗೆಲ್ಲುವುದನ್ನು ಅಭ್ಯಾಸ ಮಾಡಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಅವೃತಿಯ 23ನೇ ಪಂದ್ಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿಂದು ನಡೆಯಲಿದೆ. ರಾಯಲ್ಸ್ಗೆ ಇವತ್ತು ಅನುಕೂಲವಾಗಬಹುದಾದಸಂಗತಿಯೆಂದರೆ ಅದು ಶಾರ್ಜಾಗೆ ವಾಪಸ್ಸಾಗಿರುವುದು. ನಿಮಗೆ ಗೊತ್ತಿರುವ ಹಾಗೆ, ಈ ಮೈದಾನದಲ್ಲಿ ತಾನಾಡಿದ ಮೊದಲೆರಡು ಪಂದ್ಯಗಳನ್ನು ಸ್ಟಿವೆನ್ ಸ್ಮಿತ್ನ ಅವರ ತಂಡ ಸುಲಭವಾಗಿ ಗೆದ್ದಿತ್ತು. ಆದರೆ. ನಂತರ, ದುಬೈ ಮತ್ತು ಅಬು ಧಾಬಿಯಲ್ಲಿ ಆಡಿದ ಮೂರು ಪಂದ್ಯಗಳನ್ನು ಕೊಲ್ಕತಾ ನೈಟ್ರೈಡರ್ಸ್, ರಾಯಲ್ ಚಾಲೆಂಜರ್ಸ್ […]
ಗೆಲ್ಲುವುದನ್ನು ಮರೆತಂತಿರುವ ರಾಜಸ್ತಾನ ರಾಯಲ್ಸ್ ಮತ್ತು ಗೆಲ್ಲುವುದನ್ನು ಅಭ್ಯಾಸ ಮಾಡಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಅವೃತಿಯ 23ನೇ ಪಂದ್ಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿಂದು ನಡೆಯಲಿದೆ. ರಾಯಲ್ಸ್ಗೆ ಇವತ್ತು ಅನುಕೂಲವಾಗಬಹುದಾದಸಂಗತಿಯೆಂದರೆ ಅದು ಶಾರ್ಜಾಗೆ ವಾಪಸ್ಸಾಗಿರುವುದು. ನಿಮಗೆ ಗೊತ್ತಿರುವ ಹಾಗೆ, ಈ ಮೈದಾನದಲ್ಲಿ ತಾನಾಡಿದ ಮೊದಲೆರಡು ಪಂದ್ಯಗಳನ್ನು ಸ್ಟಿವೆನ್ ಸ್ಮಿತ್ನ ಅವರ ತಂಡ ಸುಲಭವಾಗಿ ಗೆದ್ದಿತ್ತು. ಆದರೆ. ನಂತರ, ದುಬೈ ಮತ್ತು ಅಬು ಧಾಬಿಯಲ್ಲಿ ಆಡಿದ ಮೂರು ಪಂದ್ಯಗಳನ್ನು ಕೊಲ್ಕತಾ ನೈಟ್ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳಿಗೆ ಸೋತು ಕಂಗಾಲಾಯಿತು.
[yop_poll id=”9″]
ಅತ್ತ, ದೆಹಲಿ ತಾನಾಡಿರುವ 5 ಪಂದ್ಯಗಳಲ್ಲಿ 4 ಗೆದ್ದು ಕೇವಲ ಒಂದರಲ್ಲಿ ಮಾತ್ರ ಸೋತು ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿದೆ. ಟೀಮಿನ ನಾಯಕ ಶ್ರೇಯಸ್ ಅಯ್ಯರ್, ವೈಯಕ್ತಿಕವಾಗಿ ರನ್ ಗಳಿಸುವದರೊಂದಿಗೆ ಟೀಮನ್ನು ಸಹ ಅದ್ಭುತವಾಗಿ ಲೀಡ್ ಮಾಡುತ್ತಿದ್ದಾರೆ. ಈ ಆವೃತಿಯಲ್ಲಿ ಇದುವರೆಗೆ 181 ರನ್ ಗಳಿಸಿರುವ ಶ್ರೇಯಸ್, ಟಾಪ್ ಸ್ಕೋರರ್ಗಳ ಪೈಕಿ ಆರನೇ ಸ್ಥಾನದಲ್ಲಿದ್ದಾರೆ.
ಈ ಟೂರ್ನಮೆಂಟ್ನಲ್ಲಿ ಡೆಲ್ಲಿ ಉಳಿದ ಟೀಮುಗಳಿಗಿಂತ ಹೆಚ್ಚು ಸಮತೋಲನ ಕೂಡಿದೆಯೆಂದರೆ ಉತ್ಪ್ರೇಕ್ಷೆಯೆನಿಸದು. ಬ್ಯಾಟಿಂಗ್ನಲ್ಲಿ ಟಾಪ್ ಆರ್ಡರ್ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ಓಪನರ್ ಶಿಖರ್ ಧವನ್ ಅವರಿಂದ ದೊಡ್ದ ಪ್ರಮಾಣದ ಕಾಂಟ್ರಿಬ್ಯೂಷನ್ಗಳು ಬರುತ್ತಿಲ್ಲವಾದರೂ ಉಪಯುಕ್ತ ಕಾಣಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಅವರ ಜೊತೆಗಾರ ಪೃಥ್ವಿಶಾ ಭರ್ಜರಿ ಫಾರ್ಮ್ನಲ್ಲಿದ್ದು ಈಗಾಗಲೇ ಎರಡು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ರಿಷಭ್ ಪಂತ್ ಫಾರ್ಮ್ ಕಂಡುಕೊಂಡಿರುವುದು ಶ್ರೇಯಸ್ ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ. ಶಿಮ್ರೊನ್ ಹೆಟ್ಮೆಯರ್ರಿಂದ ಬಹಳಷ್ಟು ನಿರೀಕ್ಷಿಸಲಾಗುತ್ತಿದೆ ಅದರೆ, ಕೆರೀಬಿಯನ್ ಆಟಗಾರ ಈ ಸೀಸನ್ನಲ್ಲಿ ಇನ್ನೂ ಟೇಕಾಫ್ ಆಗಿಲ್ಲ.
ಆಸ್ಟ್ರೇಲಿಯಾದ ಆಮದು ಮಾರ್ಕಸ್ ಸ್ಟಾಯ್ನಿಸ್ ತನ್ನ ಉಪಯುಕ್ತತೆಯನ್ನು ಪ್ರತಿ ಗೇಮ್ನಲ್ಲೂ ಸಾಬೀತು ಮಾಡುತ್ತಿದ್ದಾರೆ. ಸ್ಪಿನ್ನರ್ ಅಮಿತ್ ಮಿಶ್ರಾ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲವಾದ್ದರಿಂದ ಇವತ್ತಿನ ಪಂದ್ಯದಲ್ಲಿ ಅಕ್ಸರ್ ಪಟೇಲ್ ಆಡುವುದು ನಿಶ್ಚಿತ. ಟೀಮಿನ ಏಸ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಜೊತೆ ನೇಪಾಳದ ಸಂದೀಪ್ ಲಮಿಚಾನೆ ಅವರನ್ನು ಸಹ ಇವತ್ತು ಆಡಿಸಬಹುದು.
12 ವಿಕೆಟ್ಗಳೊಂದಿಗೆ ಸದ್ಯಕ್ಕೆ ಪರ್ಪಲ್ ಕ್ಯಾಪ್ನ ಒಡೆಯರಾಗಿರುವ ಕಗಿಸೊ ರಬಾಡ ಎಂದಿನಂತೆ ಡೆಲ್ಲಿಗೆ ವೇಗದ ಬೌಲಿಂಗ್ ಆಕ್ರಮಣದ ನೇತೃತ್ವವಹಿಲಿದ್ದಾರೆ. ಇಶಾಂತ್ ಶರ್ಮ ಲಯ ಕಳೆದುಕೊಂಡವರಂತೆ ಭಾಸವಾಗುತ್ತಿದೆಯಾದರೂ ಇಂದು ಆಡಬಹುದು.
ಮತ್ತೊಂದೆಡೆ, ಬ್ಯಾಟಿಂಗ್ ವೈಫಲ್ಯಗಳು ಹಾಗೂ ಸತತ ಮೂರು ಸೋಲುಗಳಿಂದ ಕಂಗೆಟ್ಟಿರುವ ರಾಜಸ್ತಾನಗೆ ಇವತ್ತು ಸೋಲಿನ ಸರಪಳಿಯಿಂದ ಕಳಚಿಕೊಳ್ಳಲೇಬೇಕಿದೆ. ಆರಂಭ ಆಟಗಾರ ಸಂಜು ಸ್ಯಾಮ್ಸನ್ ಶಾರ್ಜಾದಲ್ಲಾಡಿದ ಪಂದ್ಯಗಳಲ್ಲಿ ತೋರಿದ ಅಸಾಮಾನ್ಯ ಸ್ಟ್ರೋಕ್ ಪ್ಲೇಯನ್ನು ಪುನರಾವರ್ತಿಸುವಲ್ಲಿ ವಿಫಲರಾಗಿದ್ದಾರೆ. ಅದೇ ಮಾತು ನಾಯಕ ಸ್ಮಿತ್ಗೂ ಅನ್ವಯಿಸುತ್ತದೆ. ಶಾರ್ಜಾಗೆ ಹೊರತಾದ ಪಿಚ್ಗಳಲ್ಲಿ ಕೇವಲ ಜೊಸ್ ಬಟ್ಲರ್ ಮಾತ್ರ ತಮ್ಮ ಖ್ಯಾತಿಗೆ ತಕ್ಕ ಆಟವಾಡುತ್ತಿದ್ದಾರೆ.
ಸತತವಾಗಿ ನೀರಸ ಬ್ಯಾಟಿಂಗ್ ಪ್ರದರ್ಶನಗಳನ್ನು ನೀಡುತ್ತಿರುವ ರಾಬಿನ್ ಉತ್ತಪ್ಪ ಸ್ಥಾನಕ್ಕೆ ಇಂದು ಡೇವಿಡ್ ಮಿಲ್ಲರ್ ಬರಬಹುದು. ಯುವ ಆಟಗಾರ ಯಶಸ್ಚೀ ಜೈಸ್ವಾಲ್ ಇನ್ನೂ ಫೈರ್ ಮಾಡುತ್ತಿಲ್ಲ. ಮಧ್ಯಮ ಕ್ರಮಾಂಕದಲ್ಲಿ ರಿಯಾನ್ ಪರಾಗ್ ಭರವಸೆ ಮೂಡಿಸುತ್ತಿದ್ದಾರೆ. ರಾಹುಲ್ ತೆವಾಟಿಯ ಕಿಂಗ್ಸ್ ಎಲೆವೆನ್ ಪಂಜಾಬ್ ತಂಡದ ಶೆಲ್ಡನ್ ಕಾಟ್ರೆಲ್ ಅವರ ಒಂದು ಓವರ್ನಲ್ಲಿ 5 ಸಿಕ್ಸರ್ಗಳನ್ನು ಚಚ್ಚಿದ್ದು ಒಂದು ಫ್ಲೂಕ್ವೆನ್ನುವ ರೀತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರು ಬೌಲಿಂಗ್ ಆಲ್ರೌಂಡರ್ ಎನ್ನುವುದು ನಿಜವೇ; ಆದರೆ, ರಾಯಲ್ಸ್ ಟೀಮು ಅವರಿಂದ ಬ್ಯಾಟಿಂಗ್ನಲ್ಲೂ ಚಿಕ್ಕಪುಟ್ಟ ಕಾಣಿಕೆಗಳನ್ನು ನಿರೀಕ್ಷಿಸುತ್ತಿದೆ. ಕನ್ನಡಿಗ ಶ್ರೇಯಸ್ ಗೋಪಾಲ್ ಸಹ ಕಳಪೆ ಪ್ರದರ್ಶನಗಳನ್ನು ನೀಡುತ್ತಿದ್ದಾರೆ.
ಜೊಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ ಮತ್ತು ಜಯದೇವ್ ಉನಾಡ್ಕಟ್ ಅವರನ್ನೊಳಗೊಂಡ ರಾಯಲ್ಸ್ ವೇಗದ ದಾಳಿ ಫಾರ್ಮೈಡೆಬಲ್ ಅನಿಸುತ್ತದಾದರೂ, ಒಂದು ಯುನಿಟ್ ಆಗಿ ಕ್ಲಿಕ್ಕಾಗುತ್ತಿಲ್ಲ.
ಸ್ಯಾಮ್ಸನ್ ಮತ್ತು ಸ್ಮಿತ್ ಇಂದು ಸಿಡಿದೆದ್ದರೆ ಮಾತ್ರ ರಾಯಲ್ಸ್ ಟೀಮಿನ ದಿಶೆ ಬದಲಾಗಬಹುದು.
Published On - 5:24 pm, Fri, 9 October 20