AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎ ದಿಲ್ ಮಾಂಗೆ ಮೋವರ್! ಲಾಕ್‌ಡೌನ್​ನಲ್ಲಿ ಫಿಟ್ನೆಸ್ ಕಾಯ್ದುಕೊಳ್ಳಲು ಪಂತ್ ಮಾಡಿದ ಕೆಲಸವೇನು ಗೊತ್ತಾ? ವಿಡಿಯೋ ನೋಡಿ

ಟ್ವಿಟ್ಟರ್​ನಲ್ಲಿ ವಿಡಿಯೋ ಹಂಚಿಕೊಂಡ ರಿಷಭ್ ಇಂಗ್ಲಿಷ್​ನಲ್ಲಿ ಎ ದಿಲ್ ಮಾಂಗೆ ಮೋವರ್. ಕಡ್ಡಾಯ ಕ್ವಾರಂಟೈನ್‌ ಬ್ರೇಕ್‌ನಲ್ಲಿದ್ದೇನೆ. ಆದರೂ ಇಂಡೋರ್‌ನಲ್ಲಿ ಏನೋ ಕೆಲಸದಲ್ಲಿ ಸಕ್ರಿಯನಾಗಿ ಖುಷಿಯಾಗಿದ್ದೇನೆ.

ಎ ದಿಲ್ ಮಾಂಗೆ ಮೋವರ್! ಲಾಕ್‌ಡೌನ್​ನಲ್ಲಿ ಫಿಟ್ನೆಸ್ ಕಾಯ್ದುಕೊಳ್ಳಲು ಪಂತ್ ಮಾಡಿದ ಕೆಲಸವೇನು ಗೊತ್ತಾ? ವಿಡಿಯೋ ನೋಡಿ
ರಿಷಭ್ ಪಂತ್
ಪೃಥ್ವಿಶಂಕರ
|

Updated on: May 12, 2021 | 7:26 PM

Share

ಈ ವರ್ಷ ಮತ್ತೊಮ್ಮೆ, ಕಳೆದ ವರ್ಷದಂತೆ ಪರಿಸ್ಥಿತಿ ಕೊರೊನಾದ ಕೈಗೊಂಬೆಯಾಗಿದೆ. ಕೊರೊನಾದಿಂದ ಉಂಟಾದ ಲಾಕ್‌ಡೌನ್‌ನಿಂದಾಗಿ, ಎಲ್ಲರೂ ತಮ್ಮ ಮನೆಗಳನ್ನೇ ಜೈಲಿನಂತೆ ಮಾಡಿಕೊಂಡು ಇರಬೇಕಾಯಿತು. ಸಾಮಾನ್ಯ ಮನುಷ್ಯನಿಂದ ನಟರು, ರಾಜಕಾರಣಿಗಳು ಮತ್ತು ಆಟಗಾರರವರೆಗೆ ಇದರ ಪ್ರಭಾವವು ಗೋಚರಿಸುತ್ತಿದೆ. ಕೊರೊನಾದ ನಡುವೆ, ಬಿಸಿಸಿಐ ಐಪಿಎಲ್ ಅನ್ನು ಆಯೋಜಿಸುತ್ತಿತ್ತು, ಆದರೆ ಕೊರೊನಾದ ಕಾರಣ ಅದನ್ನು ಸಹ ಮುಂದೂಡಬೇಕಾಯಿತು. ಭಾರತೀಯ ಆಟಗಾರರು ಪ್ರಸ್ತುತ ತಮ್ಮ ಮನೆಯಲ್ಲಿದ್ದಾರೆ ಮತ್ತು ಇಂಗ್ಲೆಂಡ್‌ಗೆ ತೆರಳುವ ಮೊದಲು ಅವರ ಫಿಟ್‌ನೆಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಏತನ್ಮಧ್ಯೆ, ಭಾರತದ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಮನೆಯೊಳಗೆ ಸದೃಢವಾಗಿರಲು ಒಂದು ಮಾರ್ಗವನ್ನು ಕಂಡುಕೊಂಡಿದ್ದಾರೆ. ವಾಸ್ತವವಾಗಿ, ಪಂತ್ ಅವರ ಫಿಟ್ನೆಸ್ ಮತ್ತು ತೂಕದ ಬಗ್ಗೆ ಅನೇಕ ಬಾರಿ ಟೀಕೆಗೆ ಗುರಿಯಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಈಗ ಅವರ ಗಮನವು ಯಾವಾಗಲೂ ತಮ್ಮನ್ನು ಸದೃಢವಾಗಿರಿಸಿಕೊಳ್ಳುವುದರ ಮೇಲೆ ಇರುತ್ತದೆ. ಅವರು ತಂಡದೊಂದಿಗೆ ಶೀಘ್ರದಲ್ಲೇ ಇಂಗ್ಲೆಂಡ್‌ಗೆ ತೆರಳಲಿದ್ದಾರೆ, ಅಲ್ಲಿ ಅವರು ಮೊದಲು ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಡಲಿದ್ದಾರೆ. ನಂತರ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಬೇಕಿದೆ

ರಿಷಭ್ ಪಂತ್ ವಿಡಿಯೋ ಪಂತ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಅವರು ತಮ್ಮನ್ನು ಹೇಗೆ ಸಕ್ರಿಯವಾಗಿರಿಸಿಕೊಳ್ಳುತ್ತಿದ್ದಾರೆಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ವೀಡಿಯೊದಲ್ಲಿ, ಅವರು ಉದ್ಯಾನವನದಲ್ಲಿ ಹುಲ್ಲು ಕತ್ತರಿಸುವ ಯಂತ್ರದೊಂದಿಗೆ ವ್ಯಾಯಾಮ ಮಾಡುವುದನ್ನು ಕಾಣಬಹುದು. ಈ ವೀಡಿಯೊವನ್ನು ಈಗ ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಶೇರ್​ ಮಾಡಲಾಗುತ್ತಿದೆ. ಟ್ವಿಟ್ಟರ್​ನಲ್ಲಿ ವಿಡಿಯೋ ಹಂಚಿಕೊಂಡ ರಿಷಭ್ ಇಂಗ್ಲಿಷ್​ನಲ್ಲಿ ಎ ದಿಲ್ ಮಾಂಗೆ ಮೋವರ್. ಕಡ್ಡಾಯ ಕ್ವಾರಂಟೈನ್‌ ಬ್ರೇಕ್‌ನಲ್ಲಿದ್ದೇನೆ. ಆದರೂ ಇಂಡೋರ್‌ನಲ್ಲಿ ಏನೋ ಕೆಲಸದಲ್ಲಿ ಸಕ್ರಿಯನಾಗಿ ಖುಷಿಯಾಗಿದ್ದೇನೆ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ’ ಎಂದು ಬರೆದುಕೊಂಡು ತಾನು ಹುಲ್ಲು ಮತ್ತು ಕಳೆ ಕತ್ತರಿಸುವ ಯಂತ್ರ ಚಲಾಯಿಸುತ್ತಿರುವ ವಿಡಿಯೋ ಹಾಕಿಕೊಂಡಿದ್ದಾರೆ.

ಈ ಪೋಸ್ಟ್ ಬಗ್ಗೆ ಅಭಿಮಾನಿಗಳು ತಮ್ಮ ಪ್ರತಿಕ್ರಿಯೆಗಳನ್ನು ತೀವ್ರವಾಗಿ ನೀಡುತ್ತಿದ್ದಾರೆ. ಕೆಲವರು, ನೀವು ಉತ್ತಮ ಮಾರ್ಗವನ್ನು ಅಳವಡಿಸಿಕೊಂಡಿದ್ದೀರಿ. ಯಾರಾದರೂ ಇದನ್ನು ಪ್ರಯತ್ನಿಸಬಹುದು ಎಂದಿದ್ದಾರೆ. ಇನ್ನೊಬ್ಬರು ಲಾಕ್‌ಡೌನ್‌ನ ಸರಿಯಾದ ಬಳಕೆ’ ಎಂದು ಬರೆದಿದ್ದಾರೆ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!