ಚೆನ್ನೈನಲ್ಲೂ ನನಗೆ ಅವಕಾಶ ಕೊಡಲಿಲ್ಲ.. ಧೋನಿಯನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇನೆ; ಕುಲ್ದೀಪ್‌ ನೋವಿನ ನುಡಿ

ಕೆಲವೊಮ್ಮೆ ಎಂಎಸ್‌ ಧೋನಿಯನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇನೆ. ಏಕೆಂದರೆ ಅವರು ಅದ್ಭುತ ಅನುಭವಿ ಆಟಗಾರ. ಅವರು ವಿಕೆಟ್​ಗಳ ಹಿಂದೆ ನಮಗೆ ಉತ್ತಮ ಮಾರ್ಗದರ್ಶನ ನೀಡುತ್ತಾರೆ.

ಚೆನ್ನೈನಲ್ಲೂ ನನಗೆ ಅವಕಾಶ ಕೊಡಲಿಲ್ಲ.. ಧೋನಿಯನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇನೆ; ಕುಲ್ದೀಪ್‌ ನೋವಿನ ನುಡಿ
ಎಂ.ಎಸ್‌ ಧೋನಿ, ಕುಲ್ದೀಪ್ ಯಾದವ್
Follow us
ಪೃಥ್ವಿಶಂಕರ
|

Updated on: May 12, 2021 | 5:23 PM

ಕೆಲವು ವರ್ಷಗಳಿಂದ ಚೈನಾಮ್ಯಾನ್ ಸ್ಪಿನ್ನರ್ ಕುಲದೀಪ್ ಯಾದವ್ ಅವರ ಫಾರ್ಮ್ ಉತ್ತಮವಾಗಿಲ್ಲ. ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲ. ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಅವರು ಬೆಂಚ್ ಕಾಯುವುದಕ್ಕೆ ಮಾತ್ರ ಸೀಮಿತರಾದರು.ತವರು ನೆಲದಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಟೆಸ್ಟ್ ಸರಣಿಯಲ್ಲಿ, ಕೇವಲ ಒಂದು ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತು. ಕುಲ್ದೀಪ್ ಅವರ ಐಪಿಎಲ್ -2021 ಜರ್ನಿ ಕುಡ ಇನ್ನೂ ಕೆಟ್ಟದಾಗಿದೆ. ಕೋಲ್ಕತಾ ನೈಟ್ ರೈಡರ್ಸ್‌ನಲ್ಲಿ ತಂಡದಲ್ಲಿ ಅವರಿಗೆ ಈ ವರ್ಷ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಅವರಿಗೆ ಸಿಗಲಿಲ್ಲ.

ಇಂಗ್ಲಿಷ್ ಪತ್ರಿಕೆ ಇಂಡಿಯಾ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಕುಲದೀಪ್ ತಮ್ಮ ನಿಲುವಿನ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್‌ನೊಂದಿಗೆ ಈ ಋತುವಿನಲ್ಲಿ ಅವಕಾಶ ಸಿಗದಿರುವುದು ತನಗೆ ತುಂಬಾ ಕೆಟ್ಟದು ಎಂದು ಸಾಬೀತಾಗಿದೆ ಎಂದು ಕುಲದೀಪ್ ಹೇಳಿದ್ದಾರೆ. ಇದು ಕುಲ್​ದೀಪ್ ಅವರ ಮಾನಸಿಕತೆಯ ಮೇಲೆ ತೀರ ಪರಿಣಾಮ ಬೀರಿದೆ. ಕೋಲ್ಕತಾ ತಮ್ಮ ಕೆಲವು ಪಂದ್ಯಗಳನ್ನು ಚೆನ್ನೈನಲ್ಲಿ ಆಡಿದ್ದರು. ಚೆನ್ನೈ ಪಿಚ್​ ಸ್ಪಿನ್ನರ್​ಗಳಿಗೆ ನೆರವಾಗುತ್ತದೆ ಎಂದು ತಿಳಿದಿದ್ದರೂ ಆಡಳಿತ ಮಂಡಳಿ ಕುಲದೀಪ್ ಅವರಿಗೆ ಅವಕಾಶ ನೀಡದಿರುವುದು ತುಂಬಾ ಆಶ್ಚರ್ಯವಾಗಿದೆ.

ನಾನು ಅಷ್ಟು ಕೆಟ್ಟವನಾ? ತಂಡದಲ್ಲಿ ಅವಕಾಶ ಸಿಗದ ಬಗ್ಗೆ ಮಾತಾನಾಡಿದ ಕುಲ್​ದೀಪ್, ಕೋಲ್ಕತಾ ನೈಟ್‌ ರೈಡರ್ಸ್ ತಂಡದ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಸ್ಥಾನ ಪಡೆಯದೇ ಇದ್ದಾಗ ಆ ರೀತಿ ನನಗೆ ಆಗುತ್ತಿತ್ತು. ನಾನು ಅಷ್ಟು ಕೆಟ್ಟವನಾ? ಎಂದು ನನಗೆ ಅಚ್ಚರಿಯಾಗುತ್ತಿತ್ತು. ಇದು ತಂಡದ ನಿರ್ವಹಣೆಯ ನಿರ್ಧಾರವಾಗುತ್ತಿತ್ತು. ಆದರೆ, ನಾನೇ ಹೋಗಿ ಅವರನ್ನು ನನಗೆ ಅವಕಾಶ ಕೊಡಿ ಎಂದು ಕೇಳುವುದು ತಪ್ಪಾಗುತ್ತದೆ. ಚೆನ್ನೈ ಟರ್ನಿಂಗ್‌ ಪಿಚ್‌ ಆಗಿದ್ದರೂ ಐಪಿಎಲ್‌ ಟೂರ್ನಿಯಲ್ಲಿ ಕೆಕೆಆರ್‌ ಪರ ಕಣಕ್ಕೆ ಇಳಿದಿರಲಿಲ್ಲ. ನನ್ನಿಂದ ಏನೂ ಮಾಡಲೂ ಸಾಧ್ಯವಾಗಲಿಲ್ಲವಲ್ಲ ಎಂಬುದು ನನಗೆ ಆಘಾತ ನೀಡಿತು, ಎಂದು ಕುಲ್ದೀಪ್‌ ಯಾದವ್‌ ತಿಳಿಸಿದರು.

ಒತ್ತಡದ ಭಾವನೆ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಆಡಿದಾಗ ಅವರ ಮೇಲೆ ಸಾಕಷ್ಟು ಒತ್ತಡವಿತ್ತು ಎಂದು ಕುಲದೀಪ್ ಹೇಳಿದ್ದಾರೆ. ನೀವು ನಿರಂತರವಾಗಿ ಆಡುವಾಗ, ಆಟಗಾರರು ತಮ್ಮಲ್ಲಿ ಆತ್ಮವಿಶ್ವಾಸವನ್ನು ಇಟ್ಟಿರುತ್ತಾರೆ. ಒಮ್ಮೆ ಆಟಗಾರನು ಹೊರಗೆ ಕುಳಿತರೆ ಅದು ಅವನಿಗೆ ಕಷ್ಟವಾಗುತ್ತದೆ. ಈ ವರ್ಷ ಫೆಬ್ರವರಿಯಲ್ಲಿ ಚೆನ್ನೈನಲ್ಲಿ ನಾನು ಟೆಸ್ಟ್ ಪಂದ್ಯವನ್ನು ಆಡಿದಾಗ, ನಾನು ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದೆ. ಅದಲ್ಲದೆ, ಕಳೆದ ವರ್ಷ ಕೊರೊನಾದಿಂದ ಏನೂ ಮಾಡಲು ಸಾಧ್ಯವಾಗಿರಲಿಲ್ಲ. ಇದೆಲ್ಲ ಅಂಶಗಳು ನನಗೆ ತುಂಬಾ ಹಿನ್ನಡೆ ತಂದುಕೊಟ್ಟಿದ್ದವು, ಎಂದು ಕುಲ್ದೀಪ್‌ ಹೆಳಿದರು.

ಈಗ ಆ ಕುಲದೀಪ್ ಇರದಿರಬಹುದು ಕುಲದೀಪ್ ತನ್ನ ಮಾನಸಿಕ ಸ್ಥಿತಿಯನ್ನು ಹೇಳುತ್ತಾ, ಕೆಲವೊಮ್ಮೆ ಏನು ನಡೆಯುತ್ತಿದೆ ಎಂದು ನಾನು ಆಶ್ಚರ್ಯ ಪಡುತ್ತೇನೆ. ಇದು ಕಷ್ಟದ ಸಮಯವಾಗಿತ್ತು. ಈಗ ಕುಲದೀಪ್ ಇಲ್ಲದಿರಬಹುದು ಎಂದು ನನ್ನ ಮನಸ್ಸು ಅನೇಕ ಬಾರಿ ಹೇಳುತ್ತದೆ. ನೀರು ಕೊಡುವುದು ಮತ್ತು ಬೆಂಚ್‌ನಲ್ಲಿರುವುದು ಉತ್ತಮ ಎಂದು ನಾನು ಭಾವಿಸಿದ ದಿನಗಳು ಇದ್ದವು. ನಂತರ ಆ ಸ್ಥಳದಲ್ಲಿರಲು ಇಷ್ಟಪಡದ ದಿನಗಳೂ ಇವೆ ಎಂದು ಅವರು ಹೇಳಿದರು.

ಧೋನಿಯನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇನೆ ಕೆಲವೊಮ್ಮೆ ಎಂಎಸ್‌ ಧೋನಿಯನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇನೆ. ಏಕೆಂದರೆ ಅವರು ಅದ್ಭುತ ಅನುಭವಿ ಆಟಗಾರ. ಅವರು ವಿಕೆಟ್​ಗಳ ಹಿಂದೆ ನಮಗೆ ಉತ್ತಮ ಮಾರ್ಗದರ್ಶನ ನೀಡುತ್ತಾರೆ. ಪ್ರತಿಯೊಂದು ವಿಷಯಗಳ ಬಗ್ಗೆಯೂ ಅವರು ಕೂಗಿ ಹೇಳುತ್ತಿರುತ್ತಾರೆ. ಈ ಅನುಭವದಿಂದ ನಾವು ಇದೀಗ ವಂಚಿತರಾಗುತ್ತಿದ್ದೇವೆ. ಇದೀಗ ರಿಷಭ್‌ ಪಂತ್‌ ಇದ್ದಾರೆ. ಆದರೆ ರಿಷಭ್​ಗೆ ಅನುಭವ ಇನ್ನೂ ಬೇಕು. ಭವಿಷ್ಯದಲ್ಲಿ ಇವರು ಬೌಲರ್‌ಗಳಿಗೆ ನೆರವಾಗುತ್ತಾರೆ. ಮತ್ತೊಂದು ತುದಿಯಲ್ಲಿ ಅತ್ಯುತ್ತಮವಾಗಿ ಪ್ರತಿಕ್ರಿಯೆ ನೀಡುವ ಒಬ್ಬರು ಬೌಲರ್‌ಗಳಿಗೆ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ ಎಂದರು.

ಇದನ್ನೂ ಓದಿ:IPL 2021: ತಂಡದ ಆಟಗಾರರು ಸುರಕ್ಷಿತವಾಗಿ ಮನೆಗೆ ತೆರಳಿದ ನಂತರವೇ ನಾನು ಮನೆಗೆ ಹೋಗೋದು: ಎಂ.ಎಸ್.ಧೋನಿ

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್