IPL 2021: ತಂಡದ ಆಟಗಾರರು ಸುರಕ್ಷಿತವಾಗಿ ಮನೆಗೆ ತೆರಳಿದ ನಂತರವೇ ನಾನು ಮನೆಗೆ ಹೋಗೋದು: ಎಂ.ಎಸ್.ಧೋನಿ
IPL 2021 : ವಿದೇಶಿ ಆಟಗಾರರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸುವುದು ಮೊದಲ ಆದ್ಯತೆಯಾಗಿದೆ ಎಂದು ಧೋನಿ ಹೇಳಿದರು.
ಕೊರೊನಾದ ಕಾರಣದಿಂದಾಗಿ ಬಿಸಿಸಿಐ ಐಪಿಎಲ್ 2021 ಅನ್ನು ಮುಂದೂಡಿದೆ, ಹೀಗಾಗಿ ವಿದೇಶಿ ಆಟಗಾರರು ತಮ್ಮ ತಮ್ಮ ಮನೆಗೆ ಹಾಗೂ ದೇಶಿ ಆಟಗಾರರು ಕೂಡ ತಮ್ಮ ಗೂಡುಗಳಿಗೆ ವಾಪಾಸ್ಸಾಗುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಎಂ.ಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಲ್ಲಾ ಸಹ ಆಟಗಾರರು ಮನೆಗೆ ಹೋದ ನಂತರವೇ ನಾನು ವಿಮಾನವನ್ನು ಹಿಡಿಯುವ ಕೊನೆಯ ವ್ಯಕ್ತಿ ಎಂದು ಭರವಸೆ ನೀಡಿದ್ದಾರೆ. ಇದರರ್ಥ ಮೊದಲು ಅವರು ತಂಡದ ಪ್ರತಿಯೊಬ್ಬ ಸದಸ್ಯರನ್ನು ಮನೆಗೆ ಕಳುಹಿಸಿದ ನಂತರವೇ ರಾಂಚಿಯಲ್ಲಿರುವ ತಮ್ಮ ಮನೆಗೆ ತೆರಳುವುದಾಗಿ ತಿಳಿಸಿದ್ದಾರೆ.
ವಿದೇಶಿ ಆಟಗಾರರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸುವುದು ಮೊದಲ ಆದ್ಯತೆಯಾಗಿದೆ ಎಂದು ಧೋನಿ ಹೇಳಿದ್ದಾರೆ. ಅದರ ನಂತರ ಅವರು ಭಾರತೀಯ ಆಟಗಾರರನ್ನು ದೆಹಲಿಯಿಂದ ಮನೆಗೆ ಕಳುಹಿಸಲಿದ್ದಾರೆ. ಸಿಎಸ್‌ಕೆ ತಂಡ ಪ್ರಸ್ತುತ ದೆಹಲಿಯಲ್ಲಿದೆ. ಎಲ್ಲಾ ಸಿಎಸ್‌ಕೆ ಆಟಗಾರರೊಂದಿಗಿನ ವರ್ಚುವಲ್ ಸಭೆಯಲ್ಲಿ ಧೋನಿ ಈ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
ಆಟಗಾರರನ್ನು ಮನೆಗೆ ಕಳುಹಿಸುವ ಸಿಎಸ್‌ಕೆ ಯೋಜನೆ ಸಿಎಸ್‌ಕೆ ತನ್ನ ಆಟಗಾರರನ್ನು ಮತ್ತು ಸಿಬ್ಬಂದಿಯನ್ನು ಮನೆಗೆ ಕಳುಹಿಸಲು ದೆಹಲಿಯಿಂದ ಚಾರ್ಟರ್ ಫ್ಲೈಟ್ ವ್ಯವಸ್ಥೆ ಮಾಡಿದೆ. 10 ಆಸನಗಳ ಚಾರ್ಟರ್ ವಿಮಾನವು ಸಿಎಸ್‌ಕೆ ಆಟಗಾರರನ್ನು ಬೆಳಿಗ್ಗೆ ರಾಜ್‌ಕೋಟ್ ಮತ್ತು ಮುಂಬೈಗೆ ಕರೆದೊಯ್ಯಲಿದ್ದು, ಸಂಜೆ ಬೆಂಗಳೂರು ಮತ್ತು ಚೆನ್ನೈಗೆ ತಂದಿಳಿಸುತ್ತದೆ. ಧೋನಿ ಗುರುವಾರ ಸಂಜೆ ರಾಂಚಿಗೆ ಹಾರಬಹುದು. ಸಿಎಸ್‌ಕೆ ಅವರಂತೆ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಕೂಡ ತಮ್ಮ ಆಟಗಾರರನ್ನು ಮನೆಗೆ ಕಳುಹಿಸಲು ಚಾರ್ಟರ್ ವಿಮಾನವನ್ನು ವ್ಯವಸ್ಥೆ ಮಾಡಿವೆ. ಅದೇ ಸಮಯದಲ್ಲಿ, ರಾಜಸ್ಥಾನ್ ರಾಯಲ್ಸ್, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಆಟಗಾರರು ಬಿಸಿನೆಸ್ ಫ್ಲೈಟ್ ಮೂಲಕ ತಮ್ಮ ಗಮ್ಯಸ್ಥಾನವನ್ನು ತಲುಪಲಿದ್ದಾರೆ.
ಆಸ್ಟ್ರೇಲಿಯಾದ ಕ್ರಿಕೆಟಿಗರು ಮಾಲ್ಡೀವ್ಸ್‌ನಲ್ಲಿ ಉಳಿಯಲಿದ್ದಾರೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ದೊರೆತ ಮಾಹಿತಿಯ ಪ್ರಕಾರ, ಆಸ್ಟ್ರೇಲಿಯಾದ ಕ್ರಿಕೆಟಿಗರು, ಸಿಬ್ಬಂದಿ ಮತ್ತು ಅಂಪೈರ್‌ಗಳಿಗಾಗಿ ಸಂಯೋಜಿತ ಚಾರ್ಟರ್ ಫ್ಲೈಟ್ ಕಾಯ್ದಿರಿಸಲು ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳಿಗೆ ಸಹಾಯ ಮಾಡುತ್ತಿದೆ. ಆಸ್ಟ್ರೇಲಿಯಾಕ್ಕೆ ವಿಮಾನ ಸೇವೆ ಪುನಃಸ್ಥಾಪನೆಯಾಗುವವರೆಗೂ ಆಸ್ಟ್ರೇಲಿಯಾದ ಆಟಗಾರರು ಮಾಲ್ಡೀವ್ಸ್‌ನಲ್ಲಿ ಉಳಿಯಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಹಿಂಜರಿಯಬೇಡಿ, ಬೇಗ ಲಸಿಕೆ ಪಡೆಯಿರಿ; ಕೊವಿಡ್ ಲಸಿಕೆ ಪಡೆದ ಟೀಂ ಇಂಡಿಯಾದ ಮೊದಲ ಕ್ರಿಕೆಟಿಗ ಶಿಖರ್ ಧವನ್
Published On - 9:43 am, Fri, 7 May 21